ಐಪಿಎಲ್ 2023ರ ಉದ್ಘಟನಾ ಪಂದ್ಯದಲ್ಲೇ ರುತುರಾಜ್ ಗಾಯಕ್ವಾಡ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ದಿಢೀರ್ ಕುಸಿದ ಕಂಡ ಚೆನ್ನೈ ತಂಡಕ್ಕೆ ಆಸರೆಯಾದ ಗಾಯಕ್ವಾಡ್ ಕೇವಲ 8 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡಿದ್ದಾರೆ. ಅಂತಿಮ ಹಂತದಲ್ಲಿ ಧೋನಿ ಹಳೇ ಖದರ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಅಹಮ್ಮದಾಬಾದ್(ಮಾ.31): IPL 2023ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಅಭಿಮಾನಿಗಳಗೆ ಭರಪೂರ ಮನರಂಜನೆ ಸಿಕ್ಕಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಗುಜರಾತ್ ಟೈಟಾನ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮೂಲಕ ಮೊದಲ ಪಂದ್ಯದಲ್ಲೇ ಮಿಂಚಿದ್ದಾರೆ. ಆದರೆ ಕೇವಲ 8 ಎಸೆತದಿಂದ ರುತುರಾತ್ ಗಾಯಕ್ವಾಡ್ ಶತಕ ಮಿಸ್ ಮಾಡಿಕೊಂಡಿದ್ದಾರೆ. ರುತುರಾಜ್ ಗಾಯಕ್ವಾಡ್ ಸಿಡಿಸಿದ 92 ರನ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ನಷ್ಟಕ್ಕೆ 178 ರನ್ ಸಿಡಿಸಿದೆ.

ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನೇರವಾಗಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭ ಅಭಿಮಾನಿಗಳಿಗೆ ಆತಂಕ ತಂದಿತ್ತು. ಡಿವೋನ್ ಕಾನ್ವೇ ಕೇವಲ 1 ರನ್ ಸಿಡಿಸಿ ಔಟಾದರು. ರುತುರಾಜ್ ಗಾಯಕ್ವಾಡ್ ಸ್ಫೋಟಕ ಬ್ಯಾಟಿಂಗ್ ಚೆನ್ನೈ ತಂಡಕ್ಕೆ ನೆರವಾಯಿತು. ಒಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದರೂ ರುತುರಾಜ್ ಗಾಯಕ್ವಾಡ್ ಹೋರಾಟ ಚೆನ್ನೈ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು.

ಐಪಿಎಲ್ 2023 ಅದ್ಧೂರಿ ಚಾಲನೆ, ಅರ್ಜಿತ್, ರಶ್ಮಿಕಾ, ತಮನ್ನ ಮೋಡಿಗೆ ಫ್ಯಾನ್ಸ್ ಫಿದಾ!

ಕೆಲ ಹೊತು ಹೋರಾಟ ನೀಡಿದ ಮೊಯಿನ್ ಆಲಿ 23 ರನ್ ಸಿಡಿಸಿ ನಿರ್ಗಮಿಸಿದರು. ಭಾರಿ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಬೆನ್ ಸ್ಟೋಕ್ಸ್ ಕೇವಲ 7 ರನ್ ಸಿಡಿಸಿ ಔಟಾದರು. ಆದರೆ ರುತುರಾಜ್ ಯಾವುದೇ ಅಡೆತಡೆ ಇಲ್ಲದೆ ಹೋರಾಟ ಮುಂದುವರಿಸಿದರು. ಇತ್ತ ಅಂಬಾಟಿ ರಾಯುಡು ಹೋರಾಟ 12 ರನ್‌ಗೆ ಅಂತ್ಯಗೊಂಡಿತು. 

ಇತ್ತ ರುಜುರಾತ್ ಗಾಯಕ್ವಾಡ್ ಕೇವಲ 50 ಎಸೆತದಲ್ಲಿ 4 ಬೌಂಡರಿ ಹಾಗೂ 9 ಸಿಕ್ಸರ್ ಮೂಲಕ 92 ರನ್ ಸಿಡಿಸಿ ಔಟಾದರು.ಐಪಿಎಲ್ 2023ರ ಆರಂಭಿಕ ಪಂದ್ಯದಲ್ಲೇ ಅಬ್ಬರಿಸಿ ದಿಗ್ಗಜರ ಸಾರಿಗೆ ರುತುರಾಜ್ ಸೇರಿಕೊಂಡಿದ್ದಾರೆ. ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಲ್ಲಿ ಗರಿಷ್ಠ ರನ್ ಸಿಡಿಸಿದ 3ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ರುತುರಾಜ್ ಪಾತ್ರರಾಗಿದ್ದಾರೆ.

10ನೇ ಕ್ಲಾಸ್‌ ಅಂಕಪಟ್ಟಿ ಹಂಚಿಕೊಂಡ ಕೊಹ್ಲಿ! ವಿರಾಟ್‌ SSLC ಯಲ್ಲಿ ಪಡೆದ ಸ್ಕೋರ್ ಎಷ್ಟು?

ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಲ್ಲಿ ವೈಯುಕ್ತಿಕ ಗರಿಷ್ಠ ಸ್ಕೋರ್ ಸಾಧಕರು
ಬ್ರೆಂಡನ್ ಮೆಕಲಂ: ಅಜೇಯ 158 ರನ್ , KKR vs RCB (ಬೆಂಗಳೂರು) 2008
ರೋಹಿತ್ ಶರ್ಮಾ: ಅಜೇಯ 98 ರನ್, MI vs KKR ( ಕೋಲ್ಕತಾ) 2015
ರುತುರಾಜ್ ಗಾಯಕ್ವಾಡ್: 92 ರನ್, CSK vs GT(ಅಹಮ್ಮದಾಬಾದ್) 2023)

ರುತುರಾಜ್ ಬೆನ್ನಲ್ಲೇ ರವೀಂದ್ರ ಜಡೇಜಾ ವಿಕೆಟ್ ಪತನಗೊಂಡಿತು. ಜಡೇಜಾ 1 ರನ್ ಸಿಡಿಸಿ ಔಟಾದರು. ಇತ್ತ ಶಿವಂ ದುಬೆ 19 ರನ್ ಸಿಡಿಸಿ ನಿರ್ಗಮಿಸಿದರು. ಅಂತಿಮ ಓವರ್‌ನಲ್ಲಿ ನಾಯಕ ಎಂ.ಎಸ್.ಧೋನಿ ಅಬ್ಬರ ಆರಂಭಗೊಂಡಿತು. ಹಳೇ ಖದರ್ ಮೂಲಕ ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಧೋನಿ ಅಜೇಯ 14 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ನಷ್ಟಕ್ಕೆ 178 ರನ್ ಸಿಡಿಸಿತು.