ವಿರಾಟ್ ಕೊಹ್ಲಿಯ SSLC ಮಾರ್ಕ್ಸ್‌ಕಾರ್ಡ್‌ ಫೋಟೋ ವೈರಲ್‌ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡ ಕೊಹ್ಲಿ ವಿರಾಟ್‌ 10ನೇ ತರಗತಿಯ ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು

ಬೆಂಗಳೂರು(ಮಾ.31): ಶಾಲೆಗಳಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎನ್ನುವ ಕುರಿತು ಅಭಿಯಾನವೊಂದನ್ನು ನಡೆಸುತ್ತಿರುವ ಪ್ರತಿಷ್ಠಿತ ಸಂಸ್ಥೆಯೊಂದರ ಜೊತೆ ಕೈಜೋಡಿಸಿರುವ ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ, ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡು, ಆ ಮೂಲಕ ಕ್ರೀಡೆಯ ಮಹತ್ವದ ಕುರಿತು ಸಂದೇಶ ಸಾರಿದ್ದಾರೆ. 

‘ಅಂಕಪಟ್ಟಿಯಲ್ಲಿ ಕನಿಷ್ಠ ಮಹತ್ವ ಪಡೆದಿರುವ ವಿಷಯವು(ಕ್ರೀಡೆ) ನನ್ನ ಜೀವನದಲ್ಲಿ ಎಷ್ಟೊಂದು ಮಹತ್ವದೆನಿಸಿದೆ ಎನ್ನುವ ಅಂಶವು ನಗು ತರಿಸುತ್ತದೆ’ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ. ವಿರಾಟ್‌ 10ನೇ ತರಗತಿಯ ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆಯಲ್ಲಿ ಇಂಗ್ಲಿಷ್‌ ವಿಷಯದಲ್ಲಿ 83, ಹಿಂದಿಯಲ್ಲಿ 75, ಗಣಿತದಲ್ಲಿ 51, ವಿಜ್ಞಾನದಲ್ಲಿ 55, ಸಮಾಜ ವಿಜ್ಞಾನದಲ್ಲಿ 81 ಹಾಗೂ ಮಾಹಿತಿ ತಂತ್ರಜ್ಞಾನ ಪರಿಚಯ ವಿಷಯದಲ್ಲಿ 74 ಅಂಕ ಗಳಿಸಿದ್ದರು ಎನ್ನುವುದು ತಿಳಿದುಬಂದಿದೆ.

Scroll to load tweet…

16ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಜ್ಜಾದ ಆರ್‌ಸಿಬಿಗೆ ಬಿಗ್‌ ಶಾಕ್‌:

ಬಹುನಿರೀಕ್ಷಿತ 2023ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಗೆ ಇಂದು ಅಧಿಕೃತ ಚಾಲನೆ ಸಿಗಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಜರಾತ್ ಟೈಟಾನ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಕಾದಾಡಲಿವೆ. 

ಇನ್ನು ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಫಾಫ್ ಡು ಪ್ಲೆಸಿಸ್‌ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಏಪ್ರಿಲ್ 02ರಂದು ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಮೊದಲ ಐಪಿಎಲ್ ಪಂದ್ಯಕ್ಕೆ ಕಣಕ್ಕಿಳಿಯುವ ಮುನ್ನವೇ ಆರ್‌ಸಿಬಿ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ.

ಬಾಬರ್ ಅಜಂ ವಾರ್ಷಿಕ ಸಂಭಾವನೆ ಕೊಹ್ಲಿಗಿಂತ 12 ಪಟ್ಟು ಕಮ್ಮಿ..! ಪಾಕ್ ನಾಯಕನಿಗಿಂತ ಡಬಲ್ ಸಂಬಳ ಸಂಜುಗೆ..!

ಹೌದು, ಆಸ್ಪ್ರೇಲಿಯಾದ ವೇಗದ ಬೌಲರ್‌ ಜೋಶ್‌ ಹೇಜಲ್‌ವುಡ್‌ ಹಿಮ್ಮಡಿ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಐಪಿಎಲ್‌ನ ಮೊದಲಾರ್ಧದ ಕೆಲ ಪಂದ್ಯಗಳಿಗೆ ಗೈರಾಗಲಿದ್ದಾರೆ. ಹೇಜಲ್‌ವುಡ್‌ ಅನುಪಸ್ಥಿತಿಯು ಆರ್‌ಸಿಬಿಗೆ ಹಿನ್ನಡೆ ಉಂಟು ಮಾಡಬಹುದು. ಇದೇ ವೇಳೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಹ ಗಾಯದಿಂದ ಇನ್ನೂ ಚೇತರಿಕೆ ಕಾಣದ ಕಾರಣ ಮೊದಲ ಪಂದ್ಯವನ್ನು ಆಡುವುದು ಅನುಮಾನವೆನಿಸಿದೆ.

ಐಪಿಎಲ್‌ನಿಂದ ಮುಕೇಶ್‌ ಔಟ್‌: ಚೆನ್ನೈಗೆ ಆಕಾಶ್‌

ಅಹಮದಾಬಾದ್‌: ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ 16 ವಿಕೆಟ್‌ ಕಿತ್ತಿದ್ದ ಎಡಗೈ ವೇಗಿ ಮುಕೇಶ್‌ ಚೌಧರಿ ಗಾಯದ ಸಮಸ್ಯೆಯಿಂದಾಗಿ 16ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರ ಬದಲು ರಾಜಸ್ಥಾನದ ಯುವ ವೇಗಿ ಆಕಾಶ್‌ ಸಿಂಗ್‌ ಚೆನ್ನೈ ಸೂಪರ್‌ಕಿಂಗ್‌್ಸ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. 2020ರಲ್ಲಿ ಅಂಡರ್‌-19 ವಿಶ್ವಕಪ್‌ ಆಡಿದ್ದ ಆಕಾಶ್‌, ಈ ಹಿಂದೆ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿದ್ದರೂ ಆಡುವ ಅವಕಾಶ ಪಡೆದಿರಲಿಲ್ಲ. ಆಕಾಶ್‌ರನ್ನು ಚೆನ್ನೈ 20 ಲಕ್ಷ ರುಪಾಯಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.