Asianet Suvarna News Asianet Suvarna News

IPL 2023 ತವರಿನಲ್ಲಿ ಧೋನಿ ನೋಡಲು ಮುಗಿಬಿದ್ದ ಫ್ಯಾನ್ಸ್, ಅಗ್ರಸ್ಥಾನಕ್ಕೆ ಸಿಎಸ್‌ಕೆ, ರಾಯಲ್ಸ್ ಫೈಟ್!

ಪಂದ್ಯ ರಾಜಸ್ಥಾನದಲ್ಲಿ ನಡೆಯುತ್ತಿದ್ದರೂ ಧೋನಿ ನೋಡಲು ಅಭಿಮಾನಿಗಳು ಕಾತರಗೊಂಡಿದ್ದಾರೆ.ಜೈಪುರ ಮೈದಾನದ ಹೊರಡಗೆ ಟಿಕೆಟ್‌ಗಾಗಿ ಅಭಿಮಾನಿಗಳು ಇನ್ನೂ ಕಾಯುತ್ತಿದ್ದಾರೆ. ಅಗ್ರಸ್ಥಾನದಲ್ಲಿರುವ ಚೆನ್ನೈ ಹಾಗೂ 3ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ಇಂದು ಹೋರಾಟ ನಡೆಸಲಿದೆ. ಕ್ರೀಡಾಂಗಣ ಸುತ್ತ ಧೋನಿ ಧೋನಿ ಘೋಷಣೆಗಳು ಈಗಲೇ ಮೊಳಗುತ್ತಿದೆ. ಈ ಪಂದ್ಯ ಸೇಡಿನ ಸಮರವೂ ಹೌದು.

IPL 2023 RR vs CSK curtain raiser MS Dhoni led team confident to maintain table top spot ckm
Author
First Published Apr 27, 2023, 3:00 PM IST

ಜೈಪು​ರ(ಏ.27): 16ನೇ ಆವೃ​ತ್ತಿ ಐಪಿ​ಎ​ಲ್‌ನ ಮೊದ​ಲಾ​ರ್ಧದ ಪಂದ್ಯ​ಗಳು ಮುಕ್ತಾ​ಯ​ಗೊಂಡಿದ್ದು, ಪ್ಲೇ-ಆಫ್‌ ಸ್ಥಾನ​ಕ್ಕಾಗಿ ಪೈಪೋಟಿ ಹೆಚ್ಚಾ​ಗು​ತ್ತಿದೆ. ಆರಂಭಿಕ ಹಂತ​ದಲ್ಲಿ ಟೂರ್ನಿಯ ಬಲಿಷ್ಠ ತಂಡ​ಗಳು ಎನಿ​ಸಿ​ಕೊಂಡಿ​ರುವ, ಸ್ಫೋಟಕ ಬ್ಯಾಟ​ರ್‌​ಗಳು ಹಾಗೂ ಗುಣ​ಮ​ಟ್ಟ​ದ ಸ್ಪಿನ್ನ​ರ್‌​ಗ​ಳನ್ನು ಹೊಂದಿ​ರುವ ಚೆನ್ನೈ ಹಾಗೂ ರಾಜ​ಸ್ಥಾನ ಗುರು​ವಾರ ಪರಸ್ಪರ ಸೆಣ​ಸಾ​ಡ​ಲಿದ್ದು, ಅಗ್ರ​ಸ್ಥಾ​ನ​ಕ್ಕೇ​ರಲು ಕಾಯು​ತ್ತಿವೆ. ಒಂದೆಡೆ ಮೊದಲ ಮುಖಾ​ಮುಖಿ​ಯ ಸೋಲಿಗೆ ಸೇಡು ತೀರಿ​ಸಿ​ಕೊ​ಳ್ಳಲು ಚೆನ್ನೈ ಕಾಯು​ತ್ತಿ​ದ್ದರೆ, ಸತತ 2 ಸೋಲಿ​ನಿಂದ ಹೊರ​ಬಂದು ತವ​ರಿ​ನಲ್ಲಿ ಜಯದ ಹಾದಿಗೆ ಮರ​ಳಲು ರಾಜ​ಸ್ಥಾನ ಕಾತ​ರಿ​ಸು​ತ್ತಿ​ದೆ.

ಎರಡೂ ತಂಡ​ಗಳು ಟೂರ್ನಿ​ಯಲ್ಲಿ ಅಬ್ಬ​ರದ ಬ್ಯಾಟಿಂಗ್‌​ನಿಂದಾ​ಗಿಯೇ ಹೆಚ್ಚಾಗಿ ಗಮನ ಸೆಳೆ​ದಿದ್ದರೂ ಈ ಪಂದ್ಯ ಜೈಪು​ರ​ದಲ್ಲಿ ನಡೆ​ಯ​ಲಿ​ರುವ ಕಾರಣ ಸ್ಪಿನ್ನ​ರ್‌​ಗಳ ನಡುವೆ ಕದನ ಏರ್ಪ​ಡುವುದು ಬಹುತೇಕ ಖಚಿತ. ಚೆನ್ನೈ ಪಾಲಿಗೆ ಜಡೇಜಾ, ಮೊಯೀನ್‌ ಅಲಿ, ತೀಕ್ಷಣ ಆಧಾ​ರ​ಸ್ತಂಭ ಎನಿ​ಸಿ​ಕೊಂಡಿದ್ದು, ಆರ್‌.ಅಶ್ವಿನ್‌, ಚಹಲ್‌, ಆ್ಯಡಂ ಜಂಪಾ ಅವ​ರ​ನ್ನೊ​ಳ​ಗೊಂಡ ರಾಜ​ಸ್ಥಾನ, ತವ​ರಿನ ಲಾಭ​ವೆ​ತ್ತುವ ವಿಶ್ವಾಸದಲ್ಲಿದೆ. ಆದರೆ ಎರಡೂ ತಂಡ​ಗ​ಳಲ್ಲಿ ಯಾವುದೇ ಕ್ಷಣ​ದಲ್ಲಿ ಸಿಡಿ​ಯ​ಬಲ್ಲ ಬ್ಯಾಟ​ರ್‌​ಗ​ಳಿ​ದ್ದಾರೆ. ಹೀಗಾಗಿ ನಿಧಾ​ನ​ಗತಿ ಪಿಚ್‌​ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುವ ತಂಡಕ್ಕೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚು.

ಆರ್‌ಸಿಬಿ ಕಪ್ ಗೆಲ್ಲೋವರೆಗೂ ಶಾಲೆ ಸೇರಲ್ಲ, ಪುಟಾಣಿ ಹಿಡಿದ ಪ್ಲಕಾರ್ಡ್ ವೈರಲ್!

ರಾಜ​ಸ್ಥಾ​ನ​ದಲ್ಲಿ ಜೈಸ್ವಾಲ್‌, ಬಟ್ಲರ್‌, ಸ್ಯಾಮ್ಸನ್‌ ಹಾಗೂ ಹೆಟ್ಮೇಯರ್‌ರಂತಹ ಸ್ಫೋಟಕ ಬ್ಯಾಟರ್‌ಗಳಿದ್ದಾರೆ. ಇನ್ನೊಂದೆಡೆ ಗಾಯಕ್ವಾಡ್‌, ಕಾನ್‌ವೇ, ರಹಾನೆ, ದುಬೆ ಪ್ರಚಂಡ ಲಯದಲ್ಲಿದ್ದಾರೆ. ರಾಜ​ಸ್ಥಾನ 7 ಪಂದ್ಯ​ಗ​ಳಲ್ಲಿ ಒಂದು ಬಾರಿ ಮಾತ್ರ 170ಕ್ಕಿಂತ ಕಡಿಮೆ ಮೊತ್ತ ಕಲೆ​ಹಾ​ಕಿದ್ದು, ಚೆನ್ನೈ ಮೊದಲು ಬ್ಯಾಟ್‌ ಮಾಡಿದ 4 ಪಂದ್ಯ​ಗಳ ಪೈಕಿ 3ರಲ್ಲಿ 200+ ಮೊತ್ತ ಗಳಿ​ಸಿದೆ. ಆದರೆ ಜೈಪುರದ ಪಿಚ್‌​ನಲ್ಲಿ ಎರಡೂ ತಂಡಗಳ ಬ್ಯಾಟ​ರ್‌​ಗ​ಳು ಎಷ್ಟರ ಮಟ್ಟಿಗೆ ಸಿಡಿ​ಯ​ಬ​ಲ್ಲರು ಎನ್ನುವ ಕುತೂ​ಹಲ ಎಲ್ಲ​ರ​ಲ್ಲಿ​ದೆ.

ಒಟ್ಟು ಮುಖಾಮುಖಿ: 27
ಚೆನ್ನೈ: 15
ರಾಜ​ಸ್ಥಾ​ನ: 12

ಪಿಚ್‌ ರಿಪೋ​ರ್ಚ್‌
ಸವಾಯ್‌ ಮಾನ್‌​ಸಿಂಗ್‌ ಕ್ರೀಡಾಂಗ​ಣ ಸ್ಪರ್ಧಾ​ತ್ಮಕ ಕ್ರಿಕೆ​ಟ್‌ಗೆ ಹೆಸ​ರು​ವಾಸಿ. ಇಲ್ಲಿ ದೊಡ್ಡ ಮೊತ್ತ ದಾಖ​ಲಾದ ಉದಾ​ಹ​ರಣೆ ಕಡಿಮೆ. ಟೂರ್ನಿಯ ಮೊದಲ ಪಂದ್ಯ​ದಲ್ಲಿ ಇತ್ತಂಡ​ಗಳ ಒಟ್ಟು ರನ್‌ 300 ದಾಟಿ​ರ​ಲಿಲ್ಲ. ಬೌಲ​ರ್‌​ಗ​ಳಿಗೆ ಹೆಚ್ಚಿನ ಅನು​ಕೂ​ಲ​ವಾ​ಗ​ಲಿದ್ದು, ಟಾಸ್‌ ನಿರ್ಣಾಯಕ ಎನಿ​ಸ​ಬ​ಹುದು.

IPL 2023: ಕೆಕೆಆರ್‌ ಸ್ಪಿನ್‌ಗೆ ಆರ್‌ಸಿಬಿ ಸ್ಟನ್‌!

ಅಂಕಪಟ್ಟಿ:
ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನದಲ್ಲಿದೆ. ಚೆನ್ನೈ 7ರಲ್ಲಿ 5 ಗೆಲುವು ದಾಖಲಿಸಿದೆ. ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ 7ರಲ್ಲಿ 5 ಗೆಲುವು ದಾಖಲಿಸಿ 2ನೇ ಸ್ಥಾನದಲ್ಲಿದೆ. ಇನ್ನು 3ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ 7 ಪಂದ್ಯದಲ್ಲಿ 4 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. ಲಖನೌ ಸೂಪರ್ ಜೈಂಟ್ಸ್ 4ನೇ ಸ್ಥಾನದಲ್ಲಿದೆ.  ಕಳೆದ ಪಂದ್ಯದಲ್ಲಿ  ಕೆಕೆಆರ್ ವಿರುದ್ಧ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು 5ನೇ ಸ್ಥಾನದಲ್ಲಿದೆ. ಆರ್‌ಸಿಬಿ 8 ಪಂದ್ಯದಲ್ಲಿ 4 ಗೆಲುವು 4 ಸೋಲು ಕಂಡಿದೆ. ಪಂಜಾಬ್ ಕಿಂಗ್ಸ್ 6, ಕೋಲ್ಕತಾ ನೈಟ್ ರೈಡರ್ಸ್ 7, ಮುಂಬೈ ಇಂಡಿಯನ್ಸ್ 8, ಸನ್‌ರೈಸರ್ಸ್ ಹೈದರಾಬಾದ್ 9 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 10ನೇ ಸ್ಥಾನದಲ್ಲಿದೆ.

Follow Us:
Download App:
  • android
  • ios