ಐಪಿಎಲ್ ಟೂರ್ನಿಯಲ್ಲಿ ಕಳೆದ 15 ವರ್ಷ ಕಪ್ ಗೆಲ್ಲದ್ದಿಲ್ಲ, ಪ್ರತಿ ವರ್ಷ ಹಲವು ಪಂದ್ಯ ಸೋತಿದೆ. ಆದರೆ ವರ್ಷದಿಂದ ವರ್ಷಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗಿದೆ. ಇದೀಗ ಕೆಕೆಆರ್ ವಿರುದ್ಧದ ಸೋಲಿನ ಬಳಿಕ ಆರ್‌ಸಿಬಿ ಅಭಿಮಾನಿಗಳ ಹಿಡಿದ ಪ್ಲೇಕಾರ್ಡ್, ಘೋಷಣೆಗಳು ವೈರಲ್ ಆಗಿದೆ. ಆರ್‌ಸಿಬಿ ಅಭಿಮಾನಿಗಳ 4 ಮೊಡ್‌ಗಳು, ಪುಟಾಣಿ ಹಿಡಿದ ಪ್ಲಕಾರ್ಡ್ ವೈರಲ್ ಆಗಿದೆ. 

ಬೆಂಗಳೂರು(ಏ.27): ಐಪಿಎಲ್ 2023 ಟೂರ್ನಿಯಲ್ಲಿ ಆರ್‌ಸಿಬಿ ಮತ್ತೊಂದು ಸೋಲು ಕಂಡಿದೆ. ಸೋಲಿನ ಬಳಿಕ ಆರ್‌ಸಿಬಿ ಅಭಿಮಾನಿಗಳ ವಿಶ್ವಾಸಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಒಂದೆರಡು ಪಂದ್ಯ ಸೋಲಬಹುದು, ಆದರೆ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲಿದೆ ಅನ್ನೋ ವಿಶ್ವಾಸ ಹಾಗೇ ಇದೆ. ಕೆಕಆರ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 21 ರನ್ ಸೋಲು ಕಂಡಿದೆ. ಈ ಸೋಲಿನ ಬಳಿಕ ಪುಟಾಣಿ ಹಿಡಿದ ಪ್ಲಕಾರ್ಡ್ ವೈರಲ್ ಆಗಿದೆ. ಆರ್‌ಸಿಬಿ ಐಪಿಎಲ್ ಟೂರ್ನಿ ಗೆಲ್ಲೋವರೆಗೆ ಶಾಲೆ ಸೇರಲ್ಲ ಅನ್ನೋ ಪ್ಲಕಾರ್ಡ್ ಇದೀಗ ವೈರಲ್ ಆಗಿದೆ.ಈ ಪ್ಲಕಾರ್ಡ್ ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದೆ.

ಐಪಿಎಲ್ ಪ್ರತಿ ಪಂದ್ಯದಲ್ಲಿ ಅಭಿಮಾನಿಗಳು ವಿಶೇಷ ಪ್ಲಕಾರ್ಡ್, ವಿಶೇಷ ಉಡುಪು ಧರಿಸಿ ತಂಡಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಇದರಲ್ಲಿ ಪುಟಾಣಿಗಳು ಹಿಡಿದ ಪ್ಲಕಾರ್ಡ್ ಭಾರಿ ಸದ್ದು ಮಾಡಿದೆ. ಆರ್‌ಸಿಬಿ ಗೆಲ್ಲೋವರೆಗೆ ಶಾಲೆ ಸೇರಲ್ಲ ಅನ್ನೋ ಪ್ಲಕಾರ್ಡ್ ಹಿಡಿದ ಪುಟಾಣಿ ಫೋಟೋ ಭಾರಿ ಲೈಕ್ಸ್ ಹಾಗೂ ಕಮೆಂಟ್ ಪಡೆದಿದೆ. ಈ ವರ್ಷವೇ ಆರ್‌ಸಿಬಿ ಕಪ್ ಗೆಲ್ಲುತ್ತೆ, ಈಗಲೇ ಅಡ್ಮಿಷನ್ ಮಾಡಿಸಿಕೊಳ್ಳಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಕೆಲವರೂ ಶಾಲೆ ಸೇರುವುದೇ ಅನುಮಾನ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

IPL 2023: ಕೆಕೆಆರ್‌ ಸ್ಪಿನ್‌ಗೆ ಆರ್‌ಸಿಬಿ ಸ್ಟನ್‌!

ಇದರ ನಡುವೆ ಈ ರೀತಿಯ ಪ್ಲಕಾರ್ಡ್ ಹಿಡಿಸಿ ರಾತ್ರೋ ರಾತ್ರೋ ಜನಪ್ರಿಯರಾಗುವ ಪೋಷಕರ ಮನಸ್ಥಿತಿಯನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಮಕ್ಕಳ ವ್ಯಾಪ್ತಿ ಮೀರಿದ ಪ್ಲಕಾರ್ಡ್ ಹಿಡಿಸಿ ಫೋಟೋ ವೈರಲ್ ಮಾಡುವ ಪೋಷಕರೇ ಈ ಕೆಟ್ಟ ನಡೆಯಿಂದ ದೂರವಿರಿ. ನಿಮ್ಮ ಗೀಳಿಗೆ ಮಕ್ಕಳನ್ನು ಬಳಸಿಕೊಳ್ಳಬೇಡಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. 

Scroll to load tweet…

ಇತ್ತೀಚೆಗೆ ಆರ್‌ಸಿಬಿ ಪಂದ್ಯದ ನಡುವೆ ಪುಟಾಣಿ ಹಿಡಿದ ಪ್ಲಕಾರ್ಡ್ ಭಾರಿ ವಿವಾದ ಸೃಷ್ಟಿಸಿತ್ತು. ಕೊಹ್ಲಿ ಅಂಕಲ್ ವಮಿಕಾನ ಡೇಟ್‌ಗೆ ಕಳುಹಿಸುತ್ತೀರಾ ಅನ್ನೋ ಪ್ಲಕಾರ್ಡ್‌ನ್ನು ಪುಟಾಣಿ ಹಿಡಿದಿತ್ತು. ಈ ಫೋಟೋ ವೈರಲ್ ಆಗಿತ್ತು. ಪೋಷಕರ ಕೀಳು ಪ್ರಚಾರಕ್ಕೆ ಮಕ್ಕಳನ್ನು ಯಾಕ ಬಳಸಿಕೊಳ್ಳುತ್ತೀರಿ ಎಂದು ನೆಟ್ಟಿಗರು ಗರಂ ಆಗಿದ್ದರು.

ಇನ್ನು ಪಂದ್ಯಕ್ಕೂ ಮೊದಲು ಆರ್‌ಸಿಬಿ ಅಭಿಮಾನಿಗಳು ಕಪ್ ನಮ್ದೆ ಅಂತಾರೆ, ಪಂದ್ಯ ಗೆದ್ದ ಬಳಿಕ ಸಂಭ್ರಮ, ಪಂದ್ಯ ಸೋತರೆ, ಇನ್ನೇನು ಗೆಲ್ಲೋ ಮ್ಯಾಚ್ ಕೈಬಿಟ್ವಿ ಎಂದು ಸಮಾಧಾನ ಮಾಡಿಕೊಳ್ಳುತ್ತಾರೆ ಅನ್ನೋ ಟ್ವೀಟ್ ವೈರಲ್ ಆಗಿದೆ.

ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ಆರ್‌ಸಿಬಿಗೆ ಬುಧವಾರ ತವರಿನ ಅಂಗಳದಲ್ಲೇ ಕೋಲ್ಕತಾ ವಿರುದ್ಧ ಎದುರಾಗಿದ್ದು 21 ರನ್‌ ಸೋಲು. ಮೊದಲ ಮುಖಾಮುಖಿಯಲ್ಲಿ 81 ರನ್‌ಗಳಿಂದ ಶರಣಾಗಿ ನೆಟ್‌ ರನ್‌ರೇಟ್‌ನಲ್ಲಿ ಪಾತಾಳಕ್ಕಿಳಿದಿದ್ದ ಆರ್‌ಸಿಬಿಗೆ ಈ ಸೋಲು ಮತ್ತಷ್ಟುಆಘಾತ ನೀಡಿದರೆ, ಸತತ 4 ಪಂದ್ಯ ಸೋತು ಕುಗ್ಗಿ ಹೋಗಿದ್ದ ಕೆಕೆಆರ್‌ ತನ್ನ ಸ್ಪಿನ್ನರ್‌ಗಳನ್ನು ಬಳಸಿ ಜಯದ ಲಯಕ್ಕೆ ಮರಳಿತು. ತವರಿನಲ್ಲಿದು ಆರ್‌ಸಿಬಿಗೆ 3ನೇ ಸೋಲು.

ಐಪಿಎಲ್‌ ಪಂದ್ಯದಿಂದ 2 ಕೋಟಿ ರೂ ಜಾಕ್‌ಪಾಟ್, ರಾತ್ರೋರಾತ್ರಿ ಕೋಟ್ಯಾಧೀಶನಾದ ಕೂಲಿ ಕಾರ್ಮಿಕ!

ಬ್ಯಾಟರ್‌ಗಳ ಸ್ವರ್ಗ ಎನಿಸಿಕೊಂಡಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಕೆಆರ್‌ಗೂ ಯಶಸ್ಸು ಸಿಕ್ಕಿತು. ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟರಾಣಾ ಪಡೆ 5 ವಿಕೆಟ್‌ಗೆ ಗಳಿಸಿದ್ದು ಭರ್ತಿ 200 ರನ್‌. ಆದರೆ ಈ ಗುರಿಯನ್ನು ಆರ್‌ಸಿಬಿ ಬೆನ್ನತ್ತಲಿದೆ ಎಂಬ ಅಭಿಮಾನಿಗಳ ನಂಬಿಕೆಯನ್ನು ಕೊಹ್ಲಿ-ಡು ಪ್ಲೆಸಿ ಆರಂಭದಲ್ಲಿ ಉಳಿಸಿಕೊಂಡರೂ ಉಳಿದವರು ಕೈಕೊಟ್ಟರು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಂದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಂದಾಗಿ ತಂಡ 8 ವಿಕೆಟ್‌ಗೆ 179 ರನ್‌ ಗಳಿಸಿ ಮಂಡಿಯೂರಿತು.