ಆರ್‌ಸಿಬಿ ವಿರುದ್ಧದ ಗೆಲುವಿನ ಬಳಿಕ ರಿಂಕು ಸಿಂಗ್ ನಡೆಯೊಂದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಆರ್‌ಸಿಬಿ ಆಟಗಾರರ ಜೊತೆಗಿನ ಹ್ಯಾಂಡ್‌ಶೇಕ್ ವೇಳೆ ರಿಂಕು ಸಿಂಗ್, ಕೊಹ್ಲಿ ಪಾದಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ. 

ಬೆಂಗಳೂರು(ಏ.27): ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಹಲವು ಯುವ ಕ್ರಿಕೆಟಿಗರು ಮಿಂಚಿನ ಪ್ರದರ್ಶನದ ಮೂಲಕ ಸದ್ದು ಮಾಡುತ್ತಿದ್ದಾರೆ. ಇದರಲ್ಲಿ ರಿಂಕು ಸಿಂಗ್ ಭಾರಿ ಸುದ್ದಿಯಲ್ಲಿದ್ದಾರೆ. ಕೆಕೆಆರ್ ತಂಡದ ಮ್ಯಾಚ್ ವಿನ್ನರ್ ಎಂದೇ ಗುರುತಿಸಿಕೊಂಡಿರುವ ರಿಂಕು ಸಿಂಗ್ ಸ್ಟಾರ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಅಂತಿಮ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸಿದ ಕೀರ್ತಿ ರಿಂಕು ಸಿಂಗ್ ಬೆನ್ನಿಗಿದೆ. ರಿಂಕು ಸಿಂಗ್ ರೋಲ್ ಮಾಡೆಲ್ ಬೇರೆ ಯಾರು ಅಲ್ಲ ವಿರಾಟ್ ಕೊಹ್ಲಿ. ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಗೆಲುವು ದಾಖಲಿಸಿತ್ತು. ಈ ಪಂದ್ಯದ ಬಳಿಕ ರಿಂಕು ಸಿಂಗ್ ಆರ್‌ಸಿಬಿ ಆಟಗಾರರ ಜೊತೆ ಹ್ಯಾಂಡ್‌ಶೇಕ್ ಮಾಡಿದ್ದಾರೆ. ಆದರೆ ಕೊಹ್ಲಿಗೆ ಹ್ಯಾಂಡ್‌ಶೇಕ್ ಮಾಡದೆ, ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ರಿಂಕು ಸಿಂಗ್ ಈ ನಡೆದೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ ಬೆಂಗಳೂರು ತಂಡ 21 ರನ್ ಸೋಲು ಕಂಡಿತ್ತು. ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿದರೂ 201 ರನ್ ಚೇಸ್ ಮಾಡಲು ವಿಫಲವಾಗಿತ್ತು. 21 ರನ್ ಗೆಲುವು ದಾಖಲಿಸಿದ ಕೆಕೆಆರ್ ಗೆಲುವಿನ ಸಂಭ್ರಮ ಆಚರಿಸಿತು. ಬಳಿಕ ತಂಡದ ಸದಸ್ಯರು ಪರಸ್ಪರ ಹಸ್ತಲಾಘವ ಮಾಡಿಕೊಂಡಿದದ್ದರು. ಈ ವೇಳೆ ರಿಂಕು ಸಿಂಗ್, ತನ್ನ ರೋಲ್ ಮಾಡೆಲ್ ವಿರಾಟ್ ಕೊಹ್ಲಿ ನೋಡುತ್ತಿದ್ದಂತೆ ನೇರವಾಗಿ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ.

ಆರ್‌ಸಿಬಿ ಕಪ್ ಗೆಲ್ಲೋವರೆಗೂ ಶಾಲೆ ಸೇರಲ್ಲ, ಪುಟಾಣಿ ಹಿಡಿದ ಪ್ಲಕಾರ್ಡ್ ವೈರಲ್!

ಈ ಫೋಟೋ ವೈರಲ್ ಆಗಿದೆ. ರಿಂಕು ಸಿಂಗ್ ಈ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಆದರೆ ರಿಂಕು ಅದೇ ಸರಳತೆಯನ್ನು ಮುಂದುವರಿಸಿದ್ದಾರೆ. ಕೊಹ್ಲಿ ಬ್ಯಾಟಿಂಗ್, ಕೊಹ್ಲಿ ಅಭ್ಯಾಸ ಪ್ರತಿಯೊಂದನ್ನು ಗಮನಿಸುವ ರಿಂಕು ಸಿಂಗ್, ಕೊಹ್ಲಿಯಂತೆ ಟೀಂ ಇಂಡಿಯಾದ ಗೆಲುವಿನ ರೂವಾರಿಯಾಗಬೇಕು ಅನ್ನೋ ಗುರಿ ಇಟ್ಟುಕೊಂಡಿದ್ದಾರೆ. ಕೊಹ್ಲಿಯನ್ನು ಹೆಚ್ಚಾಗಿ ಫಾಲೋ ಮಾಡುವ ರಿಂಕು ಸಿಂಕ್, ಕೊಹ್ಲಿ ಯಾವ ರೀತಿ ಬ್ಯಾಟಿಂಗ್ ಮಾಡುತ್ತಾರೆ ಅನ್ನೋದನ್ನು ಅನುಕರಣೆ ಮಾಡುತ್ತಾರೆ.

Scroll to load tweet…

ಆರ್‌ಸಿಬಿ ವಿರುದ್ಧ ರಿಂಕು ಸಿಂಗ್ ಸೇರಿದಂತೆ ಕೆಕೆಆರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಕೆಕೆಆರ್‌ ಸಾಧಾರಣ ಆರಂಭ ಪಡೆದರೂ ಶಾಬಾಜ್‌ ಎಸೆದ 6ನೇ ಓವರಲ್ಲಿ ರಾಯ್‌ ಹ್ಯಾಟ್ರಿಕ್‌ ಸೇರಿ 4 ಸಿಕ್ಸರ್‌ ಚಚ್ಚಿದರು. ಆದರೆ ಪವರ್‌-ಪ್ಲೇ ಬಳಿಕ ರನ್‌ ವೇಗ ಕಡಿಮೆಯಾಯಿತು. ಜಗದೀಶನ್‌(29) ಹಾಗೂ 22 ಎಸೆತದಲ್ಲಿ ಫಿಫ್ಟಿಬಾರಿಸಿದ ರಾಯ್‌(56)ರನ್ನು 10ನೇ ಓವರಲ್ಲಿ ಪೆವಿಲಿಯನ್‌ಗಟ್ಟಿದ ವೈಶಾಖ್‌ ಕೆಕೆಆರ್‌ಗೆ ಡಬಲ್‌ ಶಾಕ್‌ ನೀಡಿದರು. ಆದರೆ ಸಿರಾಜ್‌, ಹರ್ಷಲ್‌ ಬಿಟ್ಟಕ್ಯಾಚ್‌ಗಳ ಲಾಭ ಪಡೆದ ರಾಣಾ 21 ಎಸೆತಗಳಲ್ಲಿ 48 ರನ್‌ ಸಿಡಿಸಿ ಆರ್‌ಸಿಪಿ ಪಾಲಿಕೆ ಕಂಟಕವಾದರು. ಕೊನೆಯಲ್ಲಿ ರಿಂಕು(18*), ವೀಸಾ(12*)ರ ಆಟ ತಂಡವನ್ನು 200ರ ಗಡಿ ತಲುಪಿಸಿತು. ಕೊನೆ 5 ಓವರಲ್ಲಿ ತಂಡ 69 ರನ್‌ ದೋಚಿತು. ಹಸರಂಗ 24ಕ್ಕೆ 2, ವೈಶಾಖ್‌ 41ಕ್ಕೆ 2 ವಿಕೆಟ್‌ ಪಡೆದರು.

IPL 2023: ಕೆಕೆಆರ್‌ ಸ್ಪಿನ್‌ಗೆ ಆರ್‌ಸಿಬಿ ಸ್ಟನ್‌!

Scroll to load tweet…