ಜೈಪುರದಲ್ಲಿ ಆರ್‍‌ಸಿಬಿಗೆ ರಾಜಸ್ಥಾನ ರಾಯಲ್ಸ್ ಸವಾಲುಟಾಸ್ ಗೆದ್ದ ಆರ್‍‌ಸಿಬಿ ಮೊದಲು ಬ್ಯಾಟಿಂಗ್ ಆಯ್ಕೆಬೆಂಗಳೂರು ತಂಡದಲ್ಲಿ ಎರಡು ಮಹತ್ವದ ಬದಲಾವಣೆ

ಜೈಪುರ(ಮೇ.14): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 60ನೇ ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆರ್‍‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್‌ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಆರ್‍‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಪ್ಲೇ ಆಫ್ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವವೆನಿಸಿದೆ. ಆರ್‍‌ಸಿಬಿ ತಂಡದಲ್ಲಿ ಎರಡು ಮಹತ್ವದ ಬದಲಾವಣೆ ಮಾಡಲಾಗಿದ್ದು, ಜೋಶ್ ಹೇಜಲ್‌ವುಡ್‌ ಬದಲಿಗೆ ವೇಯ್ನ್ ಪಾರ್ನೇಲ್‌ ಹಾಗೂ ವನಿಂದು ಹಸರಂಗ ಬದಲಿಗೆ ಮಿಚೆಲ್‌ ಬ್ರಾಸವೆಲ್‌ ತಂಡ ಕೂಡಿದ್ದಾರೆ.

ಇನ್ನು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಟ್ರೆಂಟ್ ಬೌಲ್ಟ್‌ ಬದಲಿಗೆ ಆಡಂ ಜಂಪಾ ತಂಡ ಕೂಡಿಕೊಂಡಿದ್ದಾರೆ. ಇನ್ನುಳಿದಂತೆ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಇಂಟ್ರೆಸ್ಟಿಂಗ್ ಅಂಕಿ-ಅಂಶ:
ಆರ್‍‌ಸಿಬಿ ನಾಯಕ ಫಾಫ್‌ ಡು ಪ್ಲೆಸಿಸ್‌ ಇನ್ನು ಕೇವಲ 21 ರನ್‌ ಗಳಿಸಿದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 4000 ರನ್ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಇದಷ್ಟೇ ಅಲ್ಲದೇ ಇನ್ನು ಕೇವಲ 5 ಬೌಂಡರಿ ಬಾರಿಸಿದರೆ, ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 50 ಬೌಂಡರಿ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ರಾಜಸ್ಥಾನ ರಾಯಲ್ಸ್‌ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಇನ್ನು ಕೇವಲ 2 ರನ್‌ ಬಾರಿಸಿದರೆ, ಫಾಫ್ ಡು ಪ್ಲೆಸಿಸ್ ಹಿಂದಿಕ್ಕಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳಲಿದ್ದಾರೆ.

ರಾಜಸ್ಥಾನ ರಾಯಲ್ಸ್ ಮತ್ತೋರ್ವ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಇನ್ನು ಕೇವಲ 8 ರನ್ ಬಾರಿಸಿದರೆ, ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 400 ರನ್ ಬಾರಿಸಿದ ಬ್ಯಾಟರ್‍‌ಗಳ ಕ್ಲಬ್ ಸೇರಲಿದ್ದಾರೆ.

ತಂಡಗಳು ಹೀಗಿವೆ:

ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಫಾಫ್ ಡು ಪ್ಲೆಸಿಸ್‌(ನಾಯಕ), ವಿರಾಟ್ ಕೊಹ್ಲಿ, ಅನೂಜ್ ರಾವತ್, ಗ್ಲೆನ್‌ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮ್ರಾರ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಮಿಚೆಲ್ ಬ್ರಾಸ್‌ವೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ವೇಯ್ನ್ ಪಾರ್ನೇಲ್‌, ಕರ್ಣ್ ಶರ್ಮಾ.

ರಾಜಸ್ಥಾನ ರಾಯಲ್ಸ್:

ಯಶಸ್ವಿ ಜೈಸ್ವಾಲ್‌, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ಕ್ಯಾಪ್ಟನ್&ವಿಕೆಟ್ ಕೀಪರ್), ಜೋ ರೂಟ್, ಧೃವ್ ಜ್ವರೇಲ್, ಶಿಮ್ರೊನ್ ಹೆಟ್ಮೇಯರ್, ರವಿಚಂದ್ರನ್ ಅಶ್ವಿನ್‌,ಆಡಂ ಜಂಪಾ, ಸಂದೀಪ್ ಶರ್ಮಾ, ಕೆ ಎಂ ಆಸಿಫ್, ಯುಜುವೇಂದ್ರ ಚಹಲ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ