Asianet Suvarna News Asianet Suvarna News

IPL 2023 ಆರ್‌ಸಿಬಿ ಕನಸು ಛಿದ್ರ, ಗುಜರಾತ್ ಗೆಲುವಿನಿಂದ ಮುಂಬೈಗೆ ಖುಲಾಯಿಸಿದ ಪ್ಲೇಆಫ್ ಅದೃಷ್ಠ!

ಆರ್‌ಸಿಬಿ ಪ್ಲೇ ಆಫ್ ಕನಸು ನುಚ್ಚು ನೂರಾಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಮುಗ್ಗರಿಸಿದ ಆರ್‌ಸಿಬಿ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಆರ್‌ಸಿಬಿ ಸೋಲು ಮುಂಬೈ ಇಂಡಿಯನ್ಸ್ ಅದೃಷ್ಠ ಖುಲಾಯಿಸಿದೆ. ಮುಂಬೈ ಪ್ಲೇ ಆಫ್ ಸ್ಥಾನಕ್ಕೆ ಎಂಟ್ರಿಕೊಟ್ಟಿದೆ.

IPL 2023 RCB miss playoff chance after lose against Gujarat tiatans Mumbai confirms spot ckm
Author
First Published May 22, 2023, 12:10 AM IST

ಬೆಂಗಳೂರು(ಮೇ.21): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಚಾನ್ಸ್ ಮಿಸ್ ಆಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಅನುಭವಿಸಿದ ಆರ್‌ಸಿಬಿ ಟೂರ್ನಿಯಿಂದ ಹೊರಬಿದ್ದಿದೆ. ಗುಜರಾತ್ ಗೆಲುವಿನಿಂದ ಮುಂಬೈ ಇಂಡಿಯನ್ಸ್ ತಂಡದ ಅದೃಷ್ಠದ ಬಾಗಿಲು ತೆರೆದಿದೆ. ಮುಂಬೈ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ. 

ಭಾರಿ ಮಳೆಯಿಂದ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಯ ಸೆಂಚುರಿ ಸಿಡಿಸಿದರು. 60 ಎಸೆತದಲ್ಲಿ ಕೊಹ್ಲಿ ಶತಕ ಪೂರೈಸಿದರು. ಸತತ 2ನೇ ಶತಕ ದಾಖಲಿಸಿದ ಹೆಗ್ಗಳಿಕಗೆ ಪಾತ್ರರಾದ ಕೊಹ್ಲಿ, ಐಪಿಎಲ್ ಟೂರ್ನಿಯಲ್ಲಿ 7ನೇ ಸೆಂಚುರಿ ಸಾಧನೆ ಮಾಡಿದರು. ಗುಜರಾತ್ ತಂಡಕ್ಕೆ  198 ರನ್ ಟಾರ್ಗೆಟ್ ನೀಡಲಾಗಿತ್ತು. ಬೃಹತ್ ಗುರಿ ಚೇಸ್ ಮಾಡಲು ಕಣಕ್ಕಿಳಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಆರ್‌ಸಿಬಿ ಶಾಕ್ ನೀಡಿತು. ಗುಜರಾತ್ ಟೈಟಾನ್ಸ್ 25 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ವೃದ್ಧಿಮಾನ್ ಸಾಹ 12 ರನ್ ಸಿಡಿಸಿ ಔಟಾದರು.

'ನಮ್ಮಿಬ್ಬರಲ್ಲಿ ಯಾರು ಬೆಸ್ಟ್'?: ಜಡೇಜಾ ಸ್ಟೈಲ್ ಅನುಕರಿಸಿದ ವಾರ್ನರ್..! ವಿಡಿಯೋ ವೈರಲ್

ಶುಭಮನ್ ಗಿಲ್ ಹಾಗೂ ವಿಜಯಶಂಕರ್ ಜೊತೆಯಾಟ ಗುಜರಾತ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಇತ್ತ ಆರ್‌ಸಿಬಿ ಪಾಳಯದಲ್ಲಿ ಆತಂಕ ಮೂಡಿಸಿತು. ಶಭಮನ್ ಗಿಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ವಿಜಯ್ ಶಂಕರ್ ಸ್ಫೋಟಕ ಬ್ಯಾಟಿಂಗ್ ಮೂಲಕ 34 ಎಸೆತದಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಗಿಲ್ ಹಾಗೂ ಶಂಕರ್ ಜೊತೆಯಾಟದಿಂದ ಗುಜರಾತ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು. 

ಗಿಲ್ ಹಾಗೂ ಶಂಕರ್ ಜೊತೆಯಾಟಕ್ಕೆ ವೈಶಾಕ್ ಬ್ರೇಕ್ ಹಾಕಿದರು. ವಿಜಯಶಂಕರ್ 53 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ದಸೂನ ಶನಕ ವಿಕೆಟ್ ಪತನಗೊಂಡಿತು. ಸತತ 2 ವಿಕೆಟ್ ಕಬಳಿಸಿದ ಆರ್‌ಸಿಬಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆದರೆ ಗಿಲ್ ಹೋರಾಟ ಮುಂದುವರಿಯಿತು. ಇತ್ತ ಡೇವಿಡ್ ಮಿಲ್ಲರ್ ಕೇವಲ 6 ರನ್ ಸಿಡಿಸಿ ಔಟಾದರು.

ಅಂತಿಮ 12 ಎಸೆತದಲ್ಲಿ ಗುಜರಾತ್ ಟೈಟಾನ್ಸ್ ಗೆಲುವಿಗೆ 19 ರನ್ ಅವಶ್ಯಕತೆ ಇತ್ತು. ಗಿಲ್ ಸಿಕ್ಸರ್ ಅಬ್ಬರದಿಂದ ಗುಜರಾತ್ ಟೈಟಾನ್ಸ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ 8 ರನ್ ಬೇಕಿತ್ತು.  ವೇಯ್ನೆ ಪಾರ್ನೆಲ್ ಕೈಯಿಂದ ಜಾರಿದ ಬಾಲ್ ನೋಬಾಲ್ ಆಗಿ ದುಬಾರಿಯಾಯಿತು. ಮರು ಎಸೆತ ವೈಡ್. ಫ್ರೀ ಹಿಟ್ ಅವಕಾಶದಲ್ಲಿ ಗಿಲ್ ಸಿಕ್ಸರ್ ಸಿಡಿಸಿ ಗುಜರಾತ್ ಟೈಟಾನ್ಸ್‌ಗೆ 6 ಗೆಲುವು ತಂದುಕೊಟ್ಟರು. ಸಿಕ್ಸರ್ ಮೂಲಕ ಗಿಲ್ ಸೆಂಚುರಿ ಪೂರೈಸಿದರು. ಸೋಲಿನ ಆಘಾತ ಅನುಭವಿಸಿದ ಆರ್‌ಸಿಬಿ ಟೂರ್ನಿಯಿಂದ ಹೊರಬಿತ್ತು. ಇತ್ತ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶಿಸಿತು. 

"ಅತ್ಯದ್ಭುತ ಪ್ರತಿಭೆ": ರಿಂಕು ಸಿಂಗ್ ಗುಣಗಾನ ಮಾಡಿದ ಗೌತಮ್ ಗಂಭೀರ್

ಪ್ಲೇ ಆಫ್ ಸುತ್ತಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೋರಾಟ ನಡೆಸಲಿದೆ. ಮೇ.23ಕ್ಕೆ ಈ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡಕ್ಕೆ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶವಿದೆ. ಮೇ.24ರಂದು ನಡೆಯಲಿರುವ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್  ಹೋರಾಟ ನಡೆಸಲಿದೆ. ಇಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬಿದ್ದರೆ, ಗೆದ್ದ ತಂಡ ಮೇ.26 ರಂದು ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ. ಮೇ.29 ರಂದು ಅಹಮ್ಮದಾಬಾದ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. 

Follow Us:
Download App:
  • android
  • ios