Asianet Suvarna News Asianet Suvarna News

IPL 2023 ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್, ತಂಡದ ಬದಲಾವಣೆ ಏನು?

ಐಪಿಎಲ್ 2023 ಟೂರ್ನಿಯ 8ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

IPL 2023 Rajasthan Royals wins toss and chose field first against Punjab Kings ckm
Author
First Published Apr 5, 2023, 7:17 PM IST | Last Updated Apr 6, 2023, 4:38 PM IST

ಗುವ್ಹಾಟಿ(ಏ.05): ಗೆಲುವಿನೊಂದಿಗೆ ಐಪಿಎಲ್ 2023 ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಇದೀಗ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಗೆಲುವಿನ ಕಾಂಬಿನೇಷ್ ಕಣಕ್ಕಿಳಿಸಿದೆ. ಇಂದಿನ ಪಂದ್ಯಕ್ಕೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ದೇವದತ್ ಪಡಿಕ್ಕಲ್, ರಿಯಾನ ಪರಾಗ್, ಶಿಮ್ರೋನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೋಲ್ಟ್, ಕೆಎಂ ಆಸೀಫ್, ಯುಜುವೇಂದ್ರ ಚಹಾಲ್ 

ಡೆಲ್ಲಿ-ಗುಜರಾತ್ ನಡುವಿನ ಪಂದ್ಯಕ್ಕೆ ರಿಷಬ್ ಪಂತ್ ಪ್ರತ್ಯಕ್ಷ, ವಾಕ್ ಸ್ಟಿಕ್ ಹಿಡಿದು ಕ್ರೀಡಾಂಗಣಕ್ಕೆ ಆಗಮನ!

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಶಿಖರ್ ಧವನ್(ನಾಯಕ), ಪ್ರಭಾಸಿಮ್ರನ್ ಸಿಂಗ್, ಭಾನುಕಾ ರಾಜಪಕ್ಸ, ಜಿತೇಶ್ ಶರ್ಮಾ, ಶಾರುಖ್ ಖಾನ್, ಸ್ಯಾಮ ಕುರನ್, ಸಿಕಂದರ್ ರಾಜಾ, ನತನ್ ಎಲ್ಲಿಸ್, ಹರ್ಪ್ರೀತ್ ಸಿಂಗ್ ಬ್ರಾರ್, ರಾಹುಲ್ ಚಹಾರ್, ಅರ್ಶದೀಪ್ ಸಿಂಗ್

ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವು ದಾಖಲಿಸಿತ್ತು. ಬ್ಯಾಟ​ರ್‌​ಗಳ ಸ್ಫೋಟಕ ಆಟ, ಯಜು​ವೇಂದ್ರ ಚಹಲ್‌ ಸೇರಿ​ದಂತೆ ಬೌಲ​ರ್‌​ಗಳ ಮಾರಕ ದಾಳಿ ನೆರ​ವಿ​ನಿಂದ ಸನ್‌​ರೈ​ಸ​ರ್‍ಸ್ ಹೈದ​ರಾ​ಬಾದ್‌ ವಿರು​ದ್ಧ ರಾಯಲ್ಸ್‌ 72 ರನ್‌ ಗೆಲುವು ಸಾಧಿ​ಸಿತ್ತು. ಮೊದಲು ಬ್ಯಾಟ್‌ ಮಾಡಿದ ರಾಜ​ಸ್ಥಾನ ಬಟ್ಲರ್‌, ಯಶಸ್ವಿ ಜೈಸ್ವಾಲ್‌ ಹಾಗೂ ಸಂಜು ಸ್ಯಾಮ್ಸನ್‌ ಅಬ್ಬರದ ಅರ್ಧ​ಶ​ತ​ಕ​ಗಳ ನೆರ​ವಿ​ನಿಂದ 20 ಓವ​ರಲ್ಲಿ 5 ವಿಕೆ​ಟ್‌ಗೆ 203 ರನ್‌ ಕಲೆ​ಹಾ​ಕಿತು. ಆದರೆ ಯಾವುದೇ ಹೋರಾಟ ಪ್ರದ​ರ್ಶಿ​ಸದ ಹೈದ್ರಾ​ಬಾದ್‌ 20 ಓವ​ರಲ್ಲಿ 8 ವಿಕೆ​ಟ್‌ಗೆ 131 ರನ್‌ ಗಳಿಸಿ ಸೋಲೊ​ಪ್ಪಿ​ಕೊಂಡಿ​ತು.

IPL 2023 ಟೂರ್ನಿಗೆ ಕೋವಿಡ್ ಭೀತಿ, ಕಮೆಂಟೇಟರ್ ಆಕಾಶ್ ಚೋಪ್ರಾಗೆ ಕೊರೋನಾ ಪಾಸಿಟಿವ್‌!

ಮತ್ತೊಂದೆಡೆ ಶಿಖರ್‌ ಧವನ್‌ ನಾಯ​ಕ​ತ್ವ​ದಲ್ಲಿ ಆಡು​ತ್ತಿ​ರುವ ಪಂಜಾ​ಬ್‌ಗೆ ಅನು​ಭ​ವಿ​ಗಳ ಕೊರತೆ ಎದು​ರಾ​ಗುವ ಸಾಧ್ಯತೆ ಹೆಚ್ಚು. ಜಾನಿ ಬೇರ್‌ಸ್ಟೋವ್‌ ಅನುಪಸ್ಥಿತಿ ತಂಡಕ್ಕೆ ಕಾಡ​ಲಿದ್ದು, ಲಿವಿಂಗ್‌​ಸ್ಟೋನ್‌ ಕೂಡಾ ಆಡಲು ಫಿಟ್‌ ಆಗಿಲ್ಲ. ಹೀಗಾಗಿ ಪ್ರಭ್‌​ಸಿಮ್ರನ್‌ ಸಿಂಗ್‌, ಜಿತೇಶ್‌ ಶರ್ಮಾ, ಶಾರುಕ್‌ ಖಾನ್‌ರಂತಹ ದೇಸಿ ಆಟಗಾರರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಭನುಕಾ ರಾಜ​ಪಕ್ಸೆ, ಸಿಕಂದರ್‌ ರಾಜಾ ಅವರ ಪ್ರದರ್ಶನ ಪಂಜಾಬ್‌ಗೆ ನಿರ್ಣಾ​ಯಕ ಎನಿ​ಸಿದ್ದು, ಸ್ಯಾಮ್‌ ಕರ್ರನ್‌ರ ಆಟ ತಂಡದ ಸೋಲು-ಗೆಲು​ವನ್ನು ನಿರ್ಧ​ರಿ​ಸ​ಬಲ್ಲದು. ದ.ಆಫ್ರಿಕಾದ ತಾರಾ ವೇಗಿ ಕಗಿಸೋ ರಬಾಡ ಸೇರ್ಪಡೆಯಿಂದ ಬೌಲಿಂಗ್‌ ವಿಭಾಕ್ಕೆ ಮತ್ತಷ್ಟುಬಲ ಬಂದಿದ್ದು, ಅಶ್‌ರ್‍​ದೀಪ್‌ ಸಿಂಗ್‌ ಹೆಗಲ ಮೇಲಿರುವ ಹೊರೆ ಕಡಿಮೆಯಾಗಬಹುದು. ಇದೇ ವೇಳೆ ತಂಡದಲ್ಲಿರುವ ಕರ್ನಾಟ​ಕದ ವೇಗಿ ವಿದ್ವತ್‌ ಕಾವೇ​ರಪ್ಪ ಅವ​ಕಾ​ಶದ ನಿರೀ​ಕ್ಷೆ​ಯ​ಲ್ಲಿ​ದ್ದಾರೆ.

IPL 2023 Rajasthan Royals wins toss and chose field first against Punjab Kings ckm

Latest Videos
Follow Us:
Download App:
  • android
  • ios