ತವ​ರಿ​ನ​ಲ್ಲಿ ಸೋತ ಆರ್‌​ಸಿ​ಬಿಗೆ ತವ​ರಿ​ನಾಚೆ ಜಯದ ಹಳಿಗೆ ಮರ​ಳುವ ಸವಾ​ಲು8ನೇ ಸ್ಥಾನಕ್ಕೆ ಕುಸಿದಿರುವ ಆರ್‌ಸಿಬಿಗೆ ಗೆಲು​ವು ಅನಿ​ವಾ​ರ‍್ಯಬೌಲಿಂಗ್‌ ವೈಫ​ಲ್ಯಕ್ಕೆ ಪರಿ​ಹಾರ ಹುಡುಕಬೇಕಾದ ಒತ್ತಡದಲ್ಲಿ ಫಾಫ್‌ ಪಡೆಪಂಜಾ​ಬ್‌ಗೆ ಶಿಖರ್‌ ಧವನ್‌, ಲಿವಿಂಗ್‌​ಸ್ಟೋನ್‌ ಮತ್ತೆ ಅಲ​ಭ್ಯ?

ಮೊಹಾ​ಲಿ(ಏ.20): 7 ದಿನ​ಗಳ ಅಂತ​ರ​ದಲ್ಲಿ ತವ​ರಿನ ಚಿನ್ನ​ಸ್ವಾಮಿ ಕ್ರೀಡಾಂಗ​ಣ​ದಲ್ಲೇ ಎರಡು ಬಾರಿ ಸೋಲಿನ ಆಘಾ​ತಕ್ಕೆ ಒಳ​ಗಾ​ಗಿ​ರುವ ಆರ್‌​ಸಿ​ಬಿಗೆ ಈಗ ತವ​ರಿ​ನಾ​ಚೆ​ಯ ಅಗ್ನಿ​ಪ​ರೀಕ್ಷೆ ಎದು​ರಾ​ಗ​ಲಿದೆ. 5 ಪಂದ್ಯ​ಗ​ಳಲ್ಲಿ ಮೂರ​ರಲ್ಲಿ ಸೋತು ಅಂಕ​ಪ​ಟ್ಟಿ​ಯಲ್ಲಿ 8ನೇ ಸ್ಥಾನಕ್ಕೆ ಜಾರಿ​ರುವ ಆರ್‌​ಸಿಬಿ ಗುರು​ವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣ​ಸಾ​ಡ​ಲಿದ್ದು, ಗೆಲು​ವಿನ ಹಳಿಗೆ ಮರ​ಳಲು ಕಾಯು​ತ್ತಿದೆ. ಅತ್ತ ಕಳೆದ ಪಂದ್ಯದ ಮೂಲಕ ಜಯದ ಹಳಿಗೆ ಮರಳಿರುವ ಪಂಜಾಬ್‌ ತವ​ರಿನ ಲಾಭ​ವೆತ್ತಿ ಆರ್‌​ಸಿ​ಬಿ​ಯನ್ನು ಮಣಿ​ಸಲು ಎದುರು ನೋಡು​ತ್ತಿ​ದೆ.

ಆರ್‌​ಸಿ​ಬಿ ಈವ​ರೆಗೆ ಕೇವಲ ಒಂದು ಪಂದ್ಯ ಮಾತ್ರ ತವ​ರಿ​ನಾಚೆ ಆಡಿದ್ದು, ಕೋಲ್ಕತಾ ವಿರುದ್ಧ ಹೀನಾಯ ಸೋಲು ಕಂಡಿತ್ತು. ಮಧ್ಯಮ ಕ್ರಮಾಂಕದ ವೈಫಲ್ಯ ಹಾಗೂ ದುಬಾ​ರಿ​ಯಾ​ಗು​ತ್ತಿ​ರುವ ಬೌಲಿಂಗ್‌ ವಿಭಾ​ಗ ತಂಡ​ವನ್ನು ಇಕ್ಕ​ಟ್ಟಿಗೆ ಸಿಲು​ಕಿ​ಸುತ್ತಿದೆ. ತಂಡ ಕಾಗದ ಮೇಲಷ್ಟೇ ಬಲಿಷ್ಠವಾಗಿ ಕಾಣುತ್ತಿದೆ. ಆದರೆ ಈ ಸಲವೂ ಕೆಲವೇ ಆಟ​ಗಾ​ರರು ತಂಡದ ಇಡೀ ಭಾರ ಹೊರುತ್ತಿದ್ದು, ನಿರ್ಣಾಯಕ ಹಂತಗಳಲ್ಲಿ ಕುಸಿಯುವುದನ್ನು ಆರ್‌ಸಿಬಿ ಮುಂದುವರಿಸಿದೆ.

ವಿರಾಟ್‌ ಕೊಹ್ಲಿ, ಫಾಫ್‌ ಡು ಪ್ಲೆಸಿ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌. ಈ ಮೂವರನ್ನು ಔಟ್‌ ಮಾಡಿದರೆ ಮುಕ್ಕಾಲು ಭಾಗ ಪಂದ್ಯ ಗೆದ್ದಂತೆ ಎನ್ನುವುದು ಪ್ರತಿ ಎದುರಾಳಿಗೂ ತಿಳಿದಿದ್ದು, ಈ ಮೂರವನ್ನೇ ಗುರಿಯಾಗಿಸಿ ರಣತಂತ್ರ ರೂಪಿಸಲಾಗುತ್ತಿದೆ. ಈ ಮೂವರು ಒಟ್ಟಾಗಿ ಸಿಡಿದರೂ ಉಳಿದವರ ವೈಫಲ್ಯ ತಂಡಕ್ಕೆ ಹಿನ್ನಡೆ ಉಂಟು ಮಾಡುತ್ತಿದೆ. ಆರ್‌ಸಿಬಿಯ ಮಧ್ಯಮ ಕ್ರಮಾಂಕ, ಬೌಲಿಂಗ್‌ ಪಡೆ ಎರಡೂ ದುರ್ಬಲವಾಗಿದೆ.

IPL 2023 ಅಂತಿಮ ಓವರ್‌ನಲ್ಲಿ ಲೆಕ್ಕಾಚಾರ ಬದಲು, ರಾಜಸ್ಥಾನ ಮಣಿಸಿದ ಲಖನೌ ಸೂಪರ್ ಜೈಂಟ್ಸ್!

ರಬಾಡ ಭೀತಿ: ಆರ್‌ಸಿಬಿಯ ಅಗ್ರ ಬ್ಯಾಟರ್‌ಗಳ ಮೇಲೆ ಪಂಜಾಬ್‌ ವೇಗಿ ಕಗಿಸೋ ರಬಾಡ ಉತ್ತಮ ದಾಖಲೆ ಹೊಂದಿದ್ದಾರೆ. ಟಿ20ಯಲ್ಲಿ ಕೊಹ್ಲಿ​, ಕಾರ್ತಿ​ಕ್‌​ರನ್ನು ತಲಾ 4, ಮ್ಯಾಕ್ಸ್‌​ವೆಲ್‌, ಡು ಪ್ಲೆಸಿ​ಯನ್ನು ತಲಾ 3 ಬಾರಿ ಔಟ್‌ ಮಾಡಿ​ದ್ದಾರೆ. ಈ ಪಂದ್ಯದಲ್ಲಿ ಪಂಜಾಬ್‌ ಕಿಂಗ್‌್ಸಗೆ ರಬಾಡ ಅವರೇ ಟ್ರಂಪ್‌ ಕಾರ್ಡ್‌ ಆಗಬಹುದು. ಇನ್ನು ಮೊಹಮದ್‌ ಸಿರಾಜ್‌ ಹೊರತುಪಡಿಸಿ ಉಳಿದ ಬೌಲರ್‌ಗಳು ದುಬಾರಿಯಾಗುತ್ತಿದ್ದಾರೆ. ಬೌಲರ್‌ಗಳಿಂದ ಸಂಘಟಿತ ಪ್ರದರ್ಶನ ಮೂಡಿಬಂದರಷ್ಟೇ ಗೆಲುವು ಒಲಿಯಲಿದೆ.

ಧವನ್‌ ಆಡ್ತಾರಾ?: ಮತ್ತೊಂದೆಡೆ ಪಂಜಾಬ್‌ ಗಾಯದ ಸಮ​ಸ್ಯೆ​ಯಿಂದ ಬಳ​ಲು​ತ್ತಿದ್ದು, ಭುಜದ ಗಾಯ​ದಿಂದ ಚೇತ​ರಿ​ಸಿ​ಕೊ​ಳ್ಳದ ಧವನ್‌ ಈ ಪಂದ್ಯ​ದಲ್ಲೂ ಆಡುವ ಸಾಧ್ಯತೆ ಕಡಿಮೆ. ಸ್ಯಾಮ್‌ ಕರ್ರನ್‌ ಈ ಪಂದ್ಯದಲ್ಲೂ ನಾಯಕತ್ವ ವಹಿಸುವುದು ಬಹುತೇಕ ಖಚಿತ. ಲಿವಿಂಗ್‌​ಸ್ಟೋನ್‌ ತಂಡ ಸೇರಿ​ದ್ದರೂ ಇನ್ನಷ್ಟೇ ಫಿಟ್‌ ಆಗ​ಬೇ​ಕಿದ್ದು, ಈ ಪಂದ್ಯ​ದಲ್ಲೂ ಆಡುವ ಬಗ್ಗೆ ಖಚಿ​ತತೆ ಇಲ್ಲ.

ಒಟ್ಟು ಮುಖಾಮುಖಿ: 30

ಆರ್‌​ಸಿ​ಬಿ: 13

ಪಂಜಾ​ಬ್‌: 17

ಸಂಭವನೀಯ ಆಟಗಾರರ ಪಟ್ಟಿ

ಆರ್‌​ಸಿ​ಬಿ: ಫಾಫ್‌ ಡು ಪ್ಲೆಸಿಸ್​(​ನಾ​ಯ​ಕ), ವಿರಾಟ್‌ ಕೊಹ್ಲಿ, ಮಹಿಪಾಲ್ ಲೊಮ್ರೊರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ದಿನೇಶ್ ಕಾರ್ತಿಕ್‌, ಶಾಬಾಜ್‌ ಅಹಮ್ಮದ್, ವನಿಂದು ಹಸ​ರಂಗ, ವೇಯ್ನ್ ಪಾರ್ನೆಲ್‌, ಹರ್ಷಲ್‌ ಪಟೇಲ್, ಮೊಹಮ್ಮದ್ ಸಿರಾಜ್‌, ವೈಶಾ​ಖ್‌ ವಿಜಯ್‌ಕುಮಾರ್.

ಪಂಜಾಬ್‌: ಪ್ರಭ್‌ಸಿಮ್ರನ್‌ ಸಿಂಗ್, ಮ್ಯಾಥ್ಯೂ ಶಾರ್ಟ್‌, ಹಪ್ರೀರ್ತ್‌ ಬ್ರಾರ್, ಶಿಖರ್ ಧವನ್(ನಾಯಕ), ಸಿಕಂದರ್ ರಾಜಾ, ಕರ್ರ​ನ್‌, ಜಿತೇಶ್‌ ಶರ್ಮಾ, ಶಾರೂಖ್‌ ಖಾನ್, ರಿಷಿ ಧವನ್, ರಾಹುಲ್‌ ಚಹಲ್, ಅಶ್‌ರ್‍ದೀಪ್‌ ಸಿಂಗ್, ಕಗಿಸೋ ರಬಾ​ಡ

ಪಂದ್ಯ: ಮ 3.30ಕ್ಕೆ 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಚ್‌

ಮೊಹಾಲಿಯಲ್ಲಿ 2018ರ ಬಳಿಕ ಐಪಿಎಲ್‌ನಲ್ಲಿ ಮೊದಲ ಇನ್ನಿಂಗ್‌್ಸನ ಸರಾಸರಿ ಮೊತ್ತ 175 ರನ್‌. ಆದರೆ ಮೊದಲ ಇನ್ನಿಂಗ್‌್ಸನ ಗೆಲುವಿನ ಸರಾಸರಿ ಮೊತ್ತ 186 ರನ್‌ ಆಗಿದೆ. ಈ ವರ್ಷ ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ 191 ರನ್‌ ಗಳಿಸಿ ಪಂಜಾಬ್‌ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲೂ ಬ್ಯಾಟರ್‌ಗಳೇ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚು.