Asianet Suvarna News Asianet Suvarna News

IPL Auction 2022: ಮಿನಿ ಹರಾಜಿಗೆ 405 ಆಟಗಾರರು ಫೈನಲ್‌

ಐಪಿಎಲ್‌ ಆಟಗಾರರ ಮಿನಿ ಹರಾಜಿಗೆ ಕ್ಷಣಗಣನೆ
405 ಆಟಗಾರರು ಮಿನಿ ಹರಾಜಿನಲ್ಲಿ ಭಾಗಿ
ಭಾರತ 273 ಆಟಗಾರರ ಜೊತೆ 132 ವಿದೇಶಿ ಆಟಗಾರರೂ ಪಟ್ಟಿಯಲ್ಲಿ ಸ್ಥಾನ

IPL 2023 Player Auction list announced 405 cricketers to go under the hammer on December 23 in Kochi kvn
Author
First Published Dec 14, 2022, 10:26 AM IST

ನವದೆಹಲಿ(ಡಿ.14): 2023ರ ಐಪಿಎಲ್‌ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಆಟಗಾರರ ಪಟ್ಟಿಯನ್ನು ಮಂಗಳವಾರ ಐಪಿಎಲ್‌ ಆಡಳಿತ ಮಂಡಳಿ ಪ್ರಕಟಿಸಿದ್ದು, 405 ಆಟಗಾರರು ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಖಾಲಿ ಇರುವ 87 ಸ್ಥಾನಗಳಿಗೆ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಭಾರತ 273 ಆಟಗಾರರ ಜೊತೆ 132 ವಿದೇಶಿ ಆಟಗಾರರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 119 ಅಂತಾರಾಷ್ಟ್ರೀಯ ಆಟಗಾರರು, 282 ಅನ್‌ಕ್ಯಾಪ್ಡ್‌ ಆಟಗಾರರು ಪಟ್ಟಿಯಲ್ಲಿದ್ದಾರೆ. ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌, ಸ್ಯಾಮ್‌ ಕರ್ರನ್‌, ಹ್ಯಾರಿ ಬ್ರೂಕ್‌, ಆಸ್ಪ್ರೇಲಿಯಾದ ಕ್ಯಾಮರೋನ್‌ ಗ್ರೀನ್‌ ಸೇರಿದಂತೆ ಪ್ರಮುಖ ಆಟಗಾರರ ಬಂಪರ್‌ ನಿರೀಕ್ಷೆಯಲ್ಲಿದ್ದಾರೆ.

ಕರ್ನಾಟಕದ 16 ಆಟಗಾರರು

ಹರಾಜು ಪಟ್ಟಿಯಲ್ಲಿ ಕರ್ನಾಟಕ 16 ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಮಯಾಂಕ್‌, ಮನೀಶ್‌, ಕರುಣ್‌ ನಾಯರ್‌, ಸುಚಿತ್‌, ಶ್ರೇಯಸ್‌ ಜೊತೆ ಯುವ ತಾರೆಗಳಾದ ರೋಹನ್‌ ಪಾಟೀಲ್‌, ಚೇತನ್‌, ಮನೋಜ್‌, ಶರತ್‌, ವೈಶಾಕ್‌, ಲುವ್‌ನಿತ್‌, ವಿದ್ವತ್‌ ಕಾವೇರಪ್ಪ, ವೆಂಕಟೇಶ್‌, ಕೌಶಿಕ್‌, ಶುಭಾಂಗ್‌, ಸಂಜಿತ್‌ ಕೂಡಾ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ರೋಹಿತ್‌ ಟಿ20 ನಾಯಕತ್ವ ಬಗ್ಗೆ ಬಿಸಿಸಿಐ ಚರ್ಚೆ: ವರದಿ

ನವದೆಹಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಅಪೆಕ್ಸ್‌ ಕೌನ್ಸಿಲ್‌ ಸಭೆ ಡಿ.21ಕ್ಕೆ ನಡೆಯಲಿದ್ದು, ಭಾರತದ ಟಿ20 ವಿಶ್ವಕಪ್‌ನ ಆಘಾತಕಾರಿ ಸೋಲು ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ 12 ವಿಷಯಗಳ ಬಗ್ಗೆ ಚರ್ಚೆ ನಡೆಯಲಿದ್ದು, ಇದರಲ್ಲಿ ರೋಹಿತ್‌ ಶರ್ಮಾ ಟಿ20 ನಾಯಕತ್ವವೂ ಒಳಗೊಂಡಿದೆ ಎಂದು ಗೊತ್ತಾಗಿದೆ. 

ಇಂದು ಭಾರತ-ಆಸ್ಪ್ರೇಲಿಯಾ ಮೂರನೇ ಮಹಿಳಾ ಟಿ20 ಕದನ..!

2024ರ ಟಿ20 ವಿಶ್ವಕಪ್‌ ದೃಷ್ಟಿಯಲ್ಲಿಟ್ಟುಕೊಂಡು ಹಾರ್ದಿಕ್‌ ಪಾಂಡ್ಯಗೆ ಟಿ20 ನಾಯಕತ್ವ ವಹಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದ್ದು, ಟೆಸ್ಟ್‌ ಹಾಗೂ ಏಕದಿನಕ್ಕೆ ರೋಹಿತ್‌ರನ್ನೇ ಮುಂದುವರೆಸಿ ಟಿ20 ನಾಯಕತ್ವದಿಂದ ಬಿಡುಗಡೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

ಸ್ಯಾಮ್ಸನ್‌ಗೆ ಐರ್ಲೆಂಡ್‌ ಕ್ರಿಕೆಟ್‌ನಿಂದ ಆಫರ್‌?

ನವದೆಹಲಿ: ಪದೇ ಪದೇ ಭಾರತ ತಂಡದಲ್ಲಿ ಅವಕಾಶ ವಂಚಿತರಾಗುತ್ತಿರುವ ಸಂಜು ಸ್ಯಾಮ್ಸನ್‌ಗೆ ತಮ್ಮ ತಂಡದ ಪರ ಆಡುವಂತೆ ಐರ್ಲೆಂಡ್‌ ಕ್ರಿಕೆಟ್‌ ಸಂಸ್ಥೆ ಆಹ್ವಾನ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಎಲ್ಲಾ ಪಂದ್ಯಗಳಲ್ಲೂ ಆಡಿಸುವುದಾಗಿ ಐರ್ಲೆಂಡ್‌ ಭರವಸೆ ನೀಡಿದೆ ಎನ್ನಲಾಗಿದೆ. 2015ರಲ್ಲಿ ಅಂ.ರಾ.ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸ್ಯಾಮ್ಸನ್‌ ಈ ವರೆಗೂ ಕೇವಲ 27 ಪಂದ್ಯಗಳನ್ನಷ್ಟೇ ಆಡಿದ್ದಾರೆ. ವರದಿಗಳ ಪ್ರಕಾರ ಸ್ಯಾಮ್ಸನ್‌ ಐರ್ಲೆಂಡ್‌ನ ಪ್ರಸ್ತಾಪವನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios