ಅಂಕಪಟ್ಟಿಯಲ್ಲಿ 6 ಮತ್ತು 7ನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದೆ. ಮಹತ್ವ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಮೊಹಾಲಿ(ಮೇ.03): ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ರೋಚಕ ಹೋರಾಟಕ್ಕೆ ವೇದಿಕೆ ರೆಡಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈ ತಂಡದಲ್ಲಿ 1 ಬದಲಾವಣೆ ಮಾಡಲಾಗಿದೆ. ಮೆರಿಡಿತ್ ಇಂಜುರಿಯಾಗಿರುವ ಕಾರಣ ಆಕಾಶ್ ತಂಡ ಸೇರಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವು ದಾಖಲಿಸಿ ಸೋಲಿನಿಂದ ಹೊರಬಂದಿದೆ. ಇದೀಗ ಗೆಲುವಿನ ಲಯ ಮುಂದುವರಿಸಲು ಮುಂಬೈ ತಯಾರಿ ನಡೆಸಿದೆ. ಮುಂಬೈ ಇಂಡಿಯನ್ಸ್ 8 ಪಂದ್ಯದಲ್ಲಿ 4 ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಇತ್ತ ಪಂಜಾಬ್ 9ರಲ್ಲಿ 5 ಗೆಲುವು 5 ಸೋಲು ಕಂಡಿದೆ. ಈ ಮೂಲಕ ಪಂಜಾಬ್ 6ನೇ ಸ್ಥಾನದಲ್ಲಿದ್ದರೆ, ಪಂಜಾಬ್ 7ನೇ ಸ್ಥಾನದಲ್ಲಿದೆ.
ಕಳೆದ ಪಂದ್ಯದಲ್ಲಿ 200+ ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಪಂಜಾಬ್ ಕಿಂಗ್‌್ಸ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಬುಧವಾರ ಮುಖಾಮುಖಿಯಾಗಲಿವೆ. ಸ್ಫೋಟಕ ಬ್ಯಾಟರ್‌ಗಳ ನಡುವೆ ರೋಚಕ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದ್ದು, ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಪಂಜಾಬ್ 9 ಪಂದ್ಯಗಳಲ್ಲಿ 5 ಜಯದೊಂದಿಗೆ 10 ಅಂಕ ಹೊಂದಿದ್ದರೆ, ಮುಂಬೈ 8 ಪಂದ್ಯದಲ್ಲಿ 4 ಜಯದೊಂದಿಗೆ 8 ಅಂಕ ಗಳಿಸಿದೆ. ಪ್ಲೇ-ಆಫ್‌ಗೇರಲು ಪೈಪೋಟಿ ಇನ್ನಷ್ಟುಹೆಚ್ಚಾಗಲಿರುವ ಕಾರಣ ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದೆನಿಸಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ 2ನೇ ಮುಖಾಮುಖಿ ಇದು. ಮೊದಲ ಭೇಟಿಯಲ್ಲಿ ಪಂಜಾಬ್ ನೀಡಿದ್ದ 215 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುವ ನಿರೀಕ್ಷೆಯಲ್ಲಿದ್ದ ಮುಂಬೈ ಸ್ವಲ್ಪದರಲ್ಲೇ ಎಡವಿತ್ತು. ಈ ಪಂದ್ಯದಲ್ಲಿ ತನ್ನ ಗುರಿಯನ್ನು ಪೂರ್ತಿಗೊಳಿಸಲು ಮುಂಬೈ ಕಾಯುತ್ತಿದೆ.
ಒಟ್ಟು ಮುಖಾಮುಖಿ: 30
ಪಂಜಾಬ್: 15
ಮುಂಬೈ: 15
ಸಂಭವನೀಯ ಆಟಗಾರರ ಪಟ್ಟಿ
ಪಂಜಾಬ್: ಪ್ರಭ್‌ಸಿಮ್ರನ್, ಧವನ್(ನಾಯಕ), ಅಥರ್ವ, ಲಿವಿಂಗ್‌ಸ್ಟೋನ್, ಕರ್ರನ್, ಜಿತೇಶ್, ಶಾರುಖ್, ಸಿಕಂದರ್, ಹಪ್ರೀರ್‍ತ್, ರಬಾಡ, ಚಹರ್, ಅಶ್‌ರ್‍ದೀಪ್.
ಮುಂಬೈ: ರೋಹಿತ್(ನಾಯಕ), ಕಿಶನ್, ಗ್ರೀನ್, ಸೂರ್ಯ, ತಿಲಕ್, ಡೇವಿಡ್, ನೇಹಲ್, ಪೀಯುಷ್, ಆರ್ಚರ್, ಶೋಕೀನ್/ಕಾರ್ತಿಕೇಯ, ಮೆರೆಡಿತ್, ಅರ್ಷದ್.
ಪಂದ್ಯ ಆರಂಭ: ಸಂಜೆ 7.30ಕ್ಕೆ
ಪಿಚ್ ರಿಪೋರ್ಚ್
ಇಲ್ಲಿನ ಪಿಸಿಎ ಕ್ರೀಡಾಂಗಣದಲ್ಲಿ ನಡೆದಿರುವ 4 ಪಂದ್ಯಗಳಲ್ಲಿ 3ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದ್ದರೂ, ಮಳೆ ಭೀತಿ ಇರುವ ಕಾರಣ ಈ ಪಂದ್ಯದಲ್ಲಿ ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು.
