ಐಪಿಎಲ್ ಮೊದಲ ಕ್ವಾಲಿಫೈಯರ್‌ಗೆ ಕ್ಷಣಗಣನೆಗುಜರಾತ್ ಎದುರು ಅಬ್ಬರಿಸಲು ಕ್ಯಾಪ್ಟನ್ ಕೂಲ್ ರೆಡಿಮೊದಲ ಕ್ವಾಲಿಫೈಯರ್‌ಗೂ ಮುನ್ನ ಧೋನಿ ಭರ್ಜರಿ ಅಭ್ಯಾಸ

ಚೆನ್ನೈ(ಮೇ.23): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಂದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಚೆಪಾಕ್ ಮೈದಾನ ಆತಿಥ್ಯವನ್ನು ವಹಿಸಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ನಡುವಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು, ಚಾಂಪಿಯನ್‌ ತಂಡದ ರೀತಿಯಲ್ಲಿಯೇ ಪ್ರದರ್ಶನ ತೋರಿ, ಲೀಗ್ ಹಂತ ಮುಕ್ತಾಯದ ವೇಳೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಮೊದಲ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ 5ನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು, ಇದೀಗ ತವರಿನಲ್ಲಿ ಗುಜರಾತ್ ತಂಡವನ್ನು ಮಣಿಸಿ ಫೈನಲ್‌ಗೇರುವ ಲೆಕ್ಕಾಚಾರದಲ್ಲಿದೆ.

ಇನ್ನು ಇವೆಲ್ಲದರ ನಡುವೆ ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ, ಮೊದಲ ಕ್ವಾಲಿಫೈಯರ್ ಪಂದ್ಯಕ್ಕಾಗಿ ಭರ್ಜರಿಯಾಗಿಯೇ ತಾಲೀಮು ನಡೆಸಿದ್ದಾರೆ. ತವರಿನ ಅಭಿಮಾನಿಗಳ ಎದುರು ಮಿಂಚಲು ಧೋನಿ, ನೆಟ್ಸ್‌ನಲ್ಲಿ ದೊಡ್ಡ ಸಿಕ್ಸರ್ ಬಾರಿಸುವ ಅಭ್ಯಾಸ ನಡೆಸಿದ್ದು, ಸೈಲೆಂಟ್ ಆಗಿಯೇ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

IPL 2023: ಚೆನ್ನೈ-ಗುಜರಾತ್ ನಡುವಿನ ಕ್ವಾಲಿಫೈಯರ್‌ ಪಂದ್ಯ ಮಳೆಯಿಂದ ರದ್ದಾದ್ರೆ ಏನಾಗುತ್ತೆ?

ಮಹೇಂದ್ರ ಸಿಂಗ್ ಧೋನಿ, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದೊಡ್ಡ ಇನಿಂಗ್ಸ್‌ ಆಡದಿದ್ದರೂ, ತಾವೆದುರಿಸಿದ ಕೆಲವೇ ಕೆಲವು ಎಸೆತಗಳನ್ನು ಸಿಕ್ಸರ್, ಬೌಂಡರಿಗಟ್ಟುವ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದಾರೆ. ಇದೀಗ ಧೋನಿ, ಗುಜರಾತ್ ಟೈಟಾನ್ಸ್ ಎದುರು ಅಬ್ಬರಿಸಲು ನೆಟ್ಸ್‌ನಲ್ಲಿ ಭರ್ಜರಿ ತಯಾರಿ ನಡೆಸಿದ್ದು, ವಿಡಿಯೋ ವೈರಲ್ ಆಗಿವೆ.

Scroll to load tweet…
Scroll to load tweet…

ದಾಖ​ಲೆಯ 12ನೇ ಬಾರಿ ಪ್ಲೇ-ಆಫ್‌ ಆಡು​ತ್ತಿ​ರುವ ಎಂ ಎಸ್ ಧೋನಿ ನಾಯ​ಕ​ತ್ವದ ಚೆನ್ನೈ 10ನೇ ಬಾರಿ ಫೈನ​ಲ್‌​ಗೇ​ರುವ ನಿರೀ​ಕ್ಷೆ​ಯ​ಲ್ಲಿದ್ದರೆ, ಹಾರ್ದಿಕ್‌ ನೇತೃ​ತ್ವದ ಗುಜ​ರಾತ್‌ ಟೈಟಾನ್ಸ್ ಸತತ 2ನೇ ಬಾರಿ ಪ್ರಶಸ್ತಿ ಸುತ್ತು ಪ್ರವೇ​ಶಿ​ಸುವ ಕಾತ​ರ​ಲ್ಲಿ​ದೆ. ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ವಿರು​ದ್ಧ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಗುಜ​ರಾತ್‌ ಲೀಗ್‌ ಹಂತ​ದಲ್ಲಿ ಆಡಿದ 14 ಪಂದ್ಯ​ಗ​ಳಲ್ಲಿ 10ರಲ್ಲಿ ಗೆದ್ದು ಅಗ್ರ​ಸ್ಥಾನ ಪಡೆ​ದರೆ, 8 ಪಂದ್ಯ​ಗ​ಳಲ್ಲಿ ಗೆದ್ದಿರುವ ಚೆನ್ನೈ 17 ಅಂಕ​ದೊಂದಿಗೆ 2ನೇ ಸ್ಥಾನ ಪಡೆ​ದಿದೆ.

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದು, ಮೂರೂ ಪಂದ್ಯಗಳಲ್ಲೂ ಚೆನ್ನೈ ಎದುರು ಗುಜರಾತ್ ಟೈಟಾನ್ಸ್ ಗೆಲುವಿನ ನಗೆ ಬೀರಿದೆ. ಈ ಮೊದಲು ಐಪಿಎಲ್ ಉದ್ಘಾಟನಾ ಪಂದ್ಯದಲ್ಲೂ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಇದೀಗ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಎದುರು ಅನುಭವಿಸಿದ್ದ ಸೋಲಿಗೆ ಧೋನಿ ಪಡೆ ಸೇಡು ತೀರಿಸಿಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.