Asianet Suvarna News Asianet Suvarna News

IPL 2023 ಕೈಲ್ ಮೇಯರ್ಸ್ ಅಬ್ಬರ, ಡೆಲ್ಲಿಗೆ 194 ರನ್ ಟಾರ್ಗೆಟ್ ನೀಡಿದ ಲಖನೌ!

ಕೈಲ್ ಮೇಯರ್ಸ್, ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಲಖನೌ ಸೂಪರ್ ಜೈಂಟ್ಸ್ 193 ರನ್ ಸಿಡಿಸಿದೆ.
 

IPL 2023 Kyle Mayers help Lucknow Super Giants to set 194 run taget to Delhi Capitals ckm
Author
First Published Apr 1, 2023, 9:26 PM IST

ಲಖನೌ(ಏ.01): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ  ಕೈಲ್ ಮೇಯರ್ಸ್, ನಿಕೋಲಸ್ ಪೂರನ್ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಲಖನೌ ಸೂಪರ್ ಜೈಂಟ್ಸ್  6 ವಿಕೆಟ್ ನಷ್ಟಕ್ಕೆ 193 ರನ್ ಸಿಡಿಸಿದೆ. ಮೇಯರ್ಸ್ 38 ಎಸೆತದಲ್ಲಿ ಬರೋಬ್ಬರಿ 7 ಸಿಕ್ಸರ್ ಹಾಗೂ 2 ಬೌಂಡರಿ ಮೂಲಕ 73 ರನ್ ಚಚ್ಚಿದರೆ, ಇತ್ತ ಪೂರನ್ 36 ರನ್ ಸಿಡಿಸಿದರು. ಇದರ ಪರಿಣಾಮ ಲಖನೌ ಸೂಪರ್ ಜೈಂಟ್ಸ್ ಬೃಹತ್ ಮೊತ್ತ ಟಾರ್ಗೆಟ್ ನೀಡಿದೆ. 

ಮೊದಲು ಬ್ಯಾಟಿಂಗ್ ಇಳಿದ ಲಖನೌ ಸೂಪರ್ ಜೈಂಟ್ಸ್ ಆರಂಭದಲ್ಲೇ ನಾಯಕ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ ಕೇವಲ 8 ರನ್ ಸಿಡಿಸಿ ಔಟಾದರು. ಆದರೆ ಕೈಲ್ ಮೇಯರ್ಸ್ ಲಖನೌ ತಂಡಕ್ಕೆ ಸಿಕ್ಸರ್ ಮೂಲಕವೇ ಆಸರೆಯಾದರು. ಪವರ್‌ಫುಲ್ ಶಾಟ್ ಮೂಲಕ ಚೆಂಡನ್ನು ಮೈದಾನದಿಂದಲೇ ಹೊರಗಟ್ಟುವ ಪ್ರಯತ್ನ ಮಾಡಿದರು. ಆದರೆ ಮೇಯರ್ಸ್ ಇತತರಿಂದ ಉತ್ತಮ ಸಾಥ್ ಸಿಗಲಿಲ್ಲ. ದೀಪಕ್ ಹೂಡ 17 ರನ್ ಸಿಡಿಸಿ ಔಟಾದರು.

ಈ ಸಲ ಕಪ್ ನಹಿ, ಪಂದ್ಯಕ್ಕೂ ಮೊದಲೇ ಡುಪ್ಲಿಸಿಸ್ ಹೇಳಿಕೆಗೆ ಅಭಿಮಾನಿಗಳು ಶಾಕ್, ನಕ್ಕು ನೀರಾದ ಕೊಹ್ಲಿ!

ಮೇಯರ್ಸ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಮೇಯರ್ಸ್ 38 ಎಸೆತದಲ್ಲಿ 73 ರನ್ ಸಿಡಿಸಿ ಔಟಾದರು. ಮೇಯರ್ಸ್ ಹೋರಾಟ ಲಖನೌ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಬೃಹತ್ ಮೊತ್ತಕ್ಕೆ ವೇದಿಕೆ ಸಜ್ಜುಗೊಳಿಸಿತು. ಮಾರ್ಕಸ್ ಸ್ಟೋಯ್ನಿಸ್ 12 ರನ್ ಸಿಡಿಸಿ ನಿರ್ಗಮಿಸಿದರು. ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಪೂರನ್ 21 ಎಸೆತದಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 36 ರನ್ ಸಿಡಿಸಿ ಔಟಾದರು.

ಆಯಷ್ ಬದೋನಿ 18 ರನ್ ಸಿಡಿಸಿದರು. ಕೊನೆಯ ಎಸೆತ ಇರುವಾಗ ಕ್ರೀಸ್‌ಗೆ ಬಂದ ಕೃಷ್ಣಪ್ಪ ಗೌತಮ್, ಸಿಕ್ಕ ಒಂದು ಎಸೆತವನ್ನು ಸಿಕ್ಸರ್ ಸಿಡಿಸಿದರು. ಇತ್ತ ಕ್ರುನಾಲ್ ಪಾಂಡ್ಯ ಅಡೇಯ 15 ರನ್ ಸಿಡಿಸಿದರೆ, ಗೌತಮ್ ಅಜೇಯ 6 ರನ್ ಸಿಡಿಸಿದರು. ಇದರೊಂದಿಗೆ ಲಖನೌ ಸೂಪರ್ ಜೈಂಟ್ಸ್ 6 ವಿಕೆಟ್ ನಷ್ಟಕ್ಕೆ 193 ರನ್ ಸಿಡಿಸಿತು.

ಶುಭಾರಂಭ ಮಾಡಿದ ಗುಜರಾತ್ ಟೈಟಾನ್ಸ್‌ಗೆ ಶಾಕ್, ಐಪಿಎಲ್ ಟೂರ್ನಿಯಿಂದ ವಿಲಿಯಮ್ಸನ್ ಔಟ್!

ಲಖನೌ ತಂಡದಲ್ಲಿ ವೆಸ್ಟ್ ಇಂಡೀಸ್ ಪ್ಲೇಯರ್ಸ್ ಅಬ್ಬರ ಶುರುವಾಗಿದೆ. ಐಪಿಎಲ್ ಟೂರ್ನಿಯಲ್ಲಿ ವಿಂಡೀಸ್ ಆಟಗಾರರು ಅತ್ಯಂತ ಮಹತ್ವದ ಕೂಡುಗೆ ನೀಡಿದ್ದಾರೆ. ಪ್ರತಿ ತಂಡದಲ್ಲಿ ವಿಂಡೀಸ್ ಆಟಗಾರರು ಮ್ಯಾಚ್ ವಿನ್ನರ್ಸ್ ಪಾತ್ರ ನಿರ್ವಹಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಕೈಲ್ ಮೇಯರ್ಸ್ ಹಾಗೂ ನಿಕೋಲಸ್ ಪೂರನ್ ಇಬ್ಬರು ಉತ್ತಮ ಫಾರ್ಮ್‌ನಲ್ಲಿರುವ ಸೂಚನೆ ನೀಡಿದ್ದಾರೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಮೇಯರ್ಸ್ ಹಾಗೂ ಪೂರನ್ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಲಖನೌ ಅತ್ಯಂತ ಬಲಿಷ್ಠ ತಂಡವಾಗಿ ಹೊರಹೊಮ್ಮು ಎಲ್ಲಾ ಸಾಧ್ಯತೆಗಳಿವೆ.

ಲಖನೌ ಸೂಪರ್ ಜೈಂಟ್ಸ್ ತಂಡ ಬಹುತೇಕ ಆಟಗಾರರು ದಿಟ್ಟ ಹೋರಾಟ ನೀಡಿದ್ದಾರೆ. ಆದರೆ ನಾಯಕರ ಕೆಎಲ್ ರಾಹುಲ್ ನಿರಾಸೆ ಮೂಡಿಸಿದ್ದಾರೆ. 12 ಎಸೆತದಲ್ಲಿ ರಾಹುಲ್ 8 ರನ್ ಸಿಡಿಸಿ ನಿರ್ಗಮಿಸಿದ್ದಾರೆ.

Follow Us:
Download App:
  • android
  • ios