Asianet Suvarna News Asianet Suvarna News

ಈ ಸಲ ಕಪ್ ನಹಿ, ಪಂದ್ಯಕ್ಕೂ ಮೊದಲೇ ಡುಪ್ಲಿಸಿಸ್ ಹೇಳಿಕೆಗೆ ಅಭಿಮಾನಿಗಳು ಶಾಕ್, ನಕ್ಕು ನೀರಾದ ಕೊಹ್ಲಿ!

ಈ ಸಲ ಕಪ್ ನಮ್ದೆ. ಈ ಮಾತು ಆರ್‌ಸಿಬಿ ಅಭಿಮಾನಿಗಳು ಪ್ರತಿ ಆವೃತ್ತಿಯಲ್ಲಿ ಹೇಳುತ್ತಲೇ ಬಂದಿದ್ದಾರೆ. ಆದರೆ ಕಪ್ ಮಾತ್ರ ಬರಲಿಲ್ಲ. ಹಾಗಂತ ಆತ್ಮವಿಶ್ವಾಸ ಕಡಿಮೆಯಾಗಿಲ್ಲ. ಈ ಬಾರಿಯೂ ಕಪ್ ನಮ್ದೆ ಅಭಿಯಾನ ಮತ್ತೆ ಶುರುವಾಗಿದೆ. ಆದರೆ ಆರ್‌ಸಿಬಿ ತನ್ನ ಮೊದಲ ಹೋರಾಟಕ್ಕೂ ಮೊದಲು ನಾಯಕ ಫಾಫ್ ಡುಪ್ಲಸಿಸ್, ಈ ಸಲ ಕಪ್ ನಹಿ ಎಂದಿದ್ದಾರೆ

IPL 2023 Faf du plessis misquote RCB Fans Campaign E sala Cup nahi instead of E sala Cup namde Virat kohli cant control laugh ckm
Author
First Published Apr 1, 2023, 8:48 PM IST

ಬೆಂಗಳೂರು(ಏ.01): ಐಪಿಎಲ್ 2023 ಟೂರ್ನಿ ಆರಂಭಗೊಂಡಿದೆ. ಆದರೆ ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಎಪ್ರಿಲ್ 2 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಈ ಬಾರಿಯೂ ಅಭಿಮಾನಿಗಳು ಈ ಸಲ ಕಪ್ ನಮ್ದೆ ಅಭಿಯಾನ ಆರಂಭಿಸಿದ್ದಾರೆ. ಈ ಹಿಂದಿನ ಆವೃತ್ತಿಗಳಲ್ಲಿ ಈ ಸಲ ಕಪ್ ನಮ್ದೆಅಭಿಯಾನ ಮಾಡಿದರೂ ಕಪ್ ಮಾತ್ರ ಕೈಗೆಟುಕಲಿಲ್ಲ. ಇದೀಗ ಮೊದಲ ಪಂದ್ಯಕ್ಕೆ ಆರ್‌ಸಿಬಿ ಭಾರಿ ಸಿದ್ಧತೆ ನಡೆಸಿದೆ. ಆದರೆ ನಾಯಕ ಪಾಫ್ ಡುಪ್ಲಸಿಸ್ ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಸಲ ಕಪ್ ನಹಿ ಎಂದಿದ್ದಾರೆ. ಈ ವಿಡಿಯೋ ಇದೀಗ ಬಾರಿ ವೈರಲ್ ಆಗಿದೆ. ನೀವು ಶಾಕ್ ಆಗಬೇಡಿ. ಡುಪ್ಲಸಿಸ್ ಈ ಸಲ ಕಪ್ ನಮ್ದೆ ಎಂದು ಹೇಳುವ ಬದಲು ಈ ಸಲ ಕಪ್ ನಹಿ ಎಂದಿದ್ದಾರೆ. ಡುಪ್ಲಸಿಸ್ ಈ ಮಾತು ಹೇಳುತ್ತಿದ್ದಂತೆ ಪಕ್ಕದಲ್ಲಿದ್ದ ವಿರಾಟ್ ಕೊಹ್ಲಿ ನಕ್ಕು ನೀರಾಗಿದ್ದಾರೆ.

ಬೆಂಗಳೂರಿನಲ್ಲಿರುವ ಆರ್‌ಸಿಬಿ ತಂಡ ಅಭ್ಯಾಸ, ಕಾರ್ಯಕ್ರಮದಲ್ಲಿ ಬ್ಯೂಸಿಯಾಗಿದೆ. ಹೀಗೆ ಕಾರ್ಯಕ್ರಮವ ಒಂದರಲ್ಲಿ ಸಂವಾದ ಆಯೋಜಿಸಲಾಗಿತ್ತು. ಈ ವೇಳೆ ಆರ್‌ಸಿಬಿಯ ಜನಪ್ರಿಯ ಆಂದೋಲನ ಈ ಸಲ ಕಪ್ ನಮ್ದೆ ಪ್ರಶ್ನೆ ಗೂಗ್ಲಿ ರೀತಿಯಲ್ಲಿ ಬಂದಿತ್ತು. ಇತ್ತ ವಿರಾಟ್ ಕೊಹ್ಲಿ ಈ ಸಲ ಕಪ್ ನಮ್ದೆ ಎಂದು ಮೆಲ್ಲನೇ ಡುಪ್ಲಸಿಸ್ ಕಿವಿಯಲ್ಲಿ ಹೇಳಿದ್ದಾರೆ. ಇದನ್ನೇ ಪುನರುಚ್ಚರಿಸಲು ಹೇಳಿದ್ದಾರೆ. ಆದರೆ ಕನ್ನಡ ಶಬ್ದದ ಕುರಿತು ಹೆಚ್ಚು ಕೇಳದ ಡುಪ್ಲಸಿಸ್‌ಗೆ ನಮ್ದೆ ಶಬ್ದ ನಹಿ ಎಂದು ಕೇಳಿಸಿದೆ. ಹೀಗಾಗಿ ಮೈಕ್ ಪಡೆದು ಈ ಸಲ ಕಪ್ ನಹಿ ಎಂದಿದ್ದಾರೆ.

10ನೇ ಕ್ಲಾಸ್‌ ಅಂಕಪಟ್ಟಿ ಹಂಚಿಕೊಂಡ ಕೊಹ್ಲಿ! ವಿರಾಟ್‌ SSLC ಯಲ್ಲಿ ಪಡೆದ ಸ್ಕೋರ್ ಎಷ್ಟು?

ಡುಪ್ಲೆಸಿಸ್ ಈ ಸಲ ಕಪ್ ನಹಿ ಎಂದು ಹೇಳುತ್ತಿದ್ದಂತೆ ವಿರಾಟ್ ಕೊಹ್ಲಿಗೆ ನಗು ತಡೆಯಲು ಸಾಧ್ಯವಾಗಲಿಲ್ಲ. ಎದ್ದು ಬಿದ್ದು ಕೊಹ್ಲಿ ನಕ್ಕಿದ್ದಾರೆ. ಇತ್ತ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಒಂದೇ ಸಮನೆ ನಕ್ಕಿದ್ದಾರೆ. ಇದೇ ವೇಳೆ ಈ ಸಲ ಕಮ್ ನಮ್ದೆ ಎಂದು ತಿಳಿ ಹೇಳಲಾಗಿದೆ. ಸ್ವತಃ ಡುಪ್ಲಸಿಸ್‌ಗೂ ನಗು ತಡೆಯಲು ಸಾಧ್ಯವಾಗಲಿಲ್ಲ.

 

 

ಡುಪ್ಲೆಸಿಸ್ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವು ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ವರ್ಷ ಈ ಸಲ ಕಪ್ ನಮ್ದೆ ಎಂದು ಅಭಿಮಾನಿಗಳು ಹೇಳುತ್ತಿದ್ದರು. ಈ ಬಾರಿ ಆರ್‌ಸಿಬಿ ನಾಯಕನೇ ಕಪ್ ನಹಿ ಎಂದಿದ್ದಾರೆ. ಹೀಗಾಗಿ ಈಗಲೇ ರಿಸಲ್ಟ್ ಊಹಿಸಬಹುದು ಎಂದಿದ್ದಾರೆ. ಇಷ್ಟು ಆತ್ಮವಿಶ್ವಾಸದಿಂದ ಯಾವ ನಾಯಕನೂ ಹೇಳಿಲ್ಲ. ಅದು ತಪ್ಪಿ ಹೇಳಿದ್ದಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಡುಪ್ಲಸಿಸ್ ಹೃದಯದಿಂದ ಮಾತನಾಡಿದ್ದಾರೆ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. 

ನಮಸ್ಕಾರ ಬೆಂಗಳೂರು, ಎಂಜಾಯ್ ಮಾಡಿ, ಓಡು ಗುರು: ವಿರಾಟ್ ಕೊಹ್ಲಿ ಕನ್ನಡ ಪ್ರೀತಿಗೆ ಫ್ಯಾನ್ಸ್ ಫಿದಾ..!

ಇತ್ತ ಆರ್‌ಸಿಬಿ ಅಭಿಮಾನಿಗಳು, ನಾಯಕನ ಕಪ್ ನಹಿ ಎಂದಿದ್ದಾರೆ. ಕನ್ನಡ ಶಬ್ದ ಗೊತ್ತಿಲ್ಲದ ಕಾರಣ ತಪ್ಪಾಗಿ ಹೇಳಿದ್ದಾರೆ. ಆದರೆ ಈ ಸಲ ಕಪ್ ನಮ್ದೆ ಎಂದಿದ್ದಾರೆ. ಇಷ್ಟೇ ಅಲ್ಲ ಗೆಲ್ಲಲಿ ಸೋಲಲಿ, ನಾವು ಆರ್‌ಸಿಬಿ ಅಭಿಮಾನಿಗಳು, ಟ್ರೋಫಿ ಇಲ್ಲದಿದ್ದರೂ ನಮ್ಮ ತಂಡ ನಮ್ಮ ಹೆಮ್ಮೆ ಎಂದು ಕಮೆಂಟ್ ಮಾಡಿದ್ದಾರೆ. 

ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕಾರಣ ಬೆಂಗಳೂರಿನ ಕ್ರೀಡಾಂಗಣ ರೋಹಿತ್ ಶರ್ಮಾ ಅಚ್ಚು ಮೆಚ್ಚಿನ ಕ್ರೀಡಾಂಗಣ. ಹೀಗಾಗಿ ರೋಚಕ ಹೋರಾಟಕ್ಕೆ ಸಾಕ್ಷಿಯಾಗಲಿದೆ.

Follow Us:
Download App:
  • android
  • ios