ಸನ್‌ರೈಸರ್ಸ್ ಹೈದರಾಬಾದ್ ಮತ್ತೆ ಸೋಲಿಗೆ ಜಾರಿದರೆ, ಇತ್ತ ಲಖನೌ ಸೂಪರ್ ಜೈಂಟ್ಸ್ ಸೋಲಿನಿಂದ ಗೆಲುವಿನ ಹಳಿಗೆ ಮರಲಿದೆ. ಇಂದು ನಡೆದ ಪಂದ್ಯದಲ್ಲಿ ಲಖನೌ  5 ವಿಕೆಟ್‌ಗಳಿಂದ ಹೈದರಾಬಾದ್ ತಂಡವನ್ನು ಮಣಸಿ, ಅಂಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಲಖನೌ(ಏ.07): ಐಪಿಎಲ್ 2023 ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಸೋಲಿನಿಂದ ಹೊರಬಂದಿದೆ. ಕಳೆದ ಪಂದ್ಯದಲ್ಲಿ ಮುಗ್ಗರಿಸಿದ್ದ ಲಖನೌ, ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಸುಲಭ ಗುರಿ ಬೆನ್ನಟ್ಟಿದ ಲಖನೌ ತಂಡಕ್ಕೂ ಆತಂಕ ಎದುರಾಗಿತ್ತು. ಆದರೆ ನಾಯಕ ಕೆಎಲ್ ರಾಹುಲ್ ಹಾಗೂ ಕ್ರುನಾಲ್ ಪಾಂಡ್ಯ ಹೋರಾಟದಿಂದ ಲಖನೌ ಗೆಲುವಿನ ದಡ ಸೇರಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್‌ನಲ್ಲಿ ಎಡವಿತು. ಹೀಗಾಗಿ ಲಖನೌ ತಂಡಕ್ಕೆ 122 ರನ್ ಟಾರ್ಗೆಟ್ ನೀಡಿತ್ತು. ಸುಲಭ ಗುರಿ ಪಡೆದ ಲಖನೌ ಡೀಸೆಂಟ್ ಆರಂಭ ಪಡೆಯಿತು. ಆದರೆ ಕೈಲ್ ಮೇಯರ್ಸ್ 13 ರನ್ ಸಿಡಿಸಿ ಔಟಾದರು. 35 ರನ್‌ಗೆ ಲಖನೌ ಸೂಪರ್ ಜೈಂಟ್ಸ್ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಕೆಎಲ್ ರಾಹುಲ್ ತಂಡಕ್ಕೆ ಆಸರೆಯಾಗಿ ನಿಂತರು. ದೀಪಕ್ ಹೂಡ ಉತ್ತಮ ಸಾಥ್ ನೀಡಲಿಲ್ಲ. ಹೂಡ ಕೇವಲ 7 ರನ್ ಸಿಡಿಸಿ ನಿರ್ಗಮಿಸಿದರು.

IPL ಪಾದಾರ್ಪಣೆ ಪಂದ್ಯದಲ್ಲೇ RCB ಬ್ಯಾಟರ್‌ಗಳನ್ನು ಕಾಡಿದ ಮಾಂತ್ರಿಕ ಸ್ಪಿನ್ನರ್ ಸುಯಾಶ್ ಶರ್ಮಾ ಯಾರು..?

ಬಹುಬೇಗನೆ 2 ವಿಕೆಟ್ ಪತನ, ಲಖನೌ ಪಿಚ್ ರಾಹುಲ್ ಪಡೆಗೆ ಆತಂಕ ತಂದಿಟ್ಟಿತು. ಆದರೆ ಕೆಎಲ್ ರಾಹುಲ್ ಹಾಗೂ ಕ್ರುನಾಲ್ ಪಾಂಡ್ಯ ಜೊತೆಯಾಟದಿಂದ ಲಖನೌ ಸೂಪರ್ ಜೈಂಟ್ಸ್ ಚೇತರಿಸಿಕೊಂಡಿತು. ಈ ಮೂಲಕ ಗೆಲುವಿನತ್ತ ಸಾಗಿತು. ಕ್ರುನಾಲ್ ಪಾಂಡ್ಯ 23 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು. ಮಾರ್ಕಸ್ ಸ್ಟೊಯ್ನಿಸ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್ ಲಖನೌ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿತು. ಲಖನೌ ಗೆಲುವಿಗೆ 34 ಎಸೆತದಲ್ಲಿ 8 ರನ್ ಅವಶ್ಯಕತೆ ಇತ್ತು. ಆದರೆ 15 ಓವರ್‌ನಲ್ಲಿ ಆದಿಲ್ ರಶೀದ್ ಕೆಎಲ್ ರಾಹುಲ್ ಹಾಗೂ ರೋಮಿಯೋ ಶಫರ್ಡ್ ವಿಕೆಟ್ ಕಬಳಿಸಿದರು. 

ಮಾರ್ಕಸ್ ಸ್ಟೊಯ್ನಿಸ್ ಹಾಗೂ ನಿಕೋಲಸ್ ಪೂರನ್ ಜೊತೆಯಾಟ ಲಖನೌ ಗೆಲುವು ಖಚಿತಪಡಿಸಿತು. ಸ್ಟೊಯ್ನಿಸ್ ಅಜೇಯ 10 ರನ್ ಸಿಡಿಸಿದರೆ, ಪೂರನ್ ಅಜೇಯ 11 ರನ್ ಸಿಡಿಸಿದರು. ಈ ಮೂಲಕ ಲಖನೌ ಸೂಪರ್ ಜೈಂಟ್ಸ್ 16 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.