ಪಂಜಾಬ್ ಕಿಂಗ್ಸ್‌ ಎದುರು ರೋಚಕ ಜಯ ಸಾಧಿಸಿದ ಗುಜರಾತ್ ಟೈಟಾನ್ಸ್ಮತ್ತೊಮ್ಮೆ ಯಶಸ್ವಿಯಾಗಿ ಮ್ಯಾಚ್ ಫಿನಿಶ್ ಮಾಡಿದ ರಾಹುಲ್ ತೆವಾಟಿಯಾತಮ್ಮ ಮ್ಯಾಚ್ ಫಿನಿಶ್ ಸೀಕ್ರೇಟ್ಸ್‌ ಬಿಚ್ಚಿಟ್ಟ ತೆವಾಟಿಯಾ

ಮೊಹಾಲಿ(ಏ.14): 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್ ಎದುರು ಗುಜರಾತ್ ಟೈಟಾನ್ಸ್ ಎದುರು ಗೆಲುವು ಸಾಧಿಸುವಲ್ಲಿ ರಾಹುಲ್ ತೆವಾಟಿಯಾ ಮತ್ತೊಮ್ಮೆ ಕಾರಣೀಕರ್ತರಾಗಿದ್ದಾರೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಕೊನೆಯ ಎರೆಡು ಎಸೆತಗಳಲ್ಲಿ 4 ರನ್ ಅಗತ್ಯವಿದ್ದಾಗ ರಾಹುಲ್ ತೆವಾಟಿಯಾ, ಆಕರ್ಷಕ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ 29 ವರ್ಷದ ತೆವಾಟಿಯಾ, ಫೈನ್‌ಲೆಗ್‌ನತ್ತ ಸ್ಕೂಪ್ ಮಾಡುವ ಮೂಲಕ ಟೈಟಾನ್ಸ್ ತಂಡವು 6 ವಿಕೆಟ್ ಜಯ ಸಾಧಿಸುವಂತೆ ಮಾಡಿದ್ದರು. ಇನ್ನು ಇದೇ ವೇಳೆ ತಾವು ಮ್ಯಾಚ್ ಫಿನೀಶ್ ಮಾಡುವ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ. 

ಇನ್ನು ಪ್ರಾಕ್ಟೀಸ್‌ ಸೆಷನ್‌ ಕುರಿತಂತೆ ಮಾತನಾಡಿರುವ ತೆವಾಟಿಯಾ, ತಾವು ಯಾವಾಗ 6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲಿಳಿಯಲಾರಂಭಿಸಿದೆನೋ, ಆಗ ನನಗೆ ನಾನೇ ಒಂದಷ್ಟು ಗುರಿ ಸೆಟ್ ಮಾಡಿಕೊಂಡು ಅದನ್ನು ಸಾಧಿಸಲು ಪ್ರಯತ್ನಿಸಲಾರಂಭಿಸಿದೆ. ಓರ್ವ ಕ್ರಿಕೆಟಿಗನಿಗೆ ತನ್ನ ಪಾತ್ರ ಏನು ಎನ್ನುವುದರ ಸ್ಪಷ್ಟ ಕಲ್ಪನೆ ಸಿಕ್ಕಿದರೆ, ಆತನಿಂದ ಅತ್ಯುತ್ತಮವಾದ ಕ್ರಿಕೆಟ್ ಹೊರಹೊಮ್ಮಲು ಸಾಧ್ಯ ಎಂದು ತೆವಾಟಿಯಾ ಅಭಿಪ್ರಾಯಪಟ್ಟಿದ್ದಾರೆ.

"ರಾತ್ರೋರಾತ್ರಿ ಏನೂ ಸಂಭವಿಸುವುದಿಲ್ಲ, ನನಗೆ ಮ್ಯಾಚ್ ಫಿನಿಶ್ ಮಾಡುವ ಪಾತ್ರವನ್ನು 2020ರಲ್ಲೇ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿದ್ದಾಗ ನೀಡಿತ್ತು. ಯಾವಾಗ ತಮ್ಮ ಪಾತ್ರವೇನು ಎನ್ನುವುದು ಖಚಿತವಾಗುತ್ತದೋ, ಆಗ ತಾವೇನು ಮಾಡಬಹುದು ಎನ್ನುವ ಸ್ಪಷ್ಟ ಕಲ್ಪನೆ ಇರುತ್ತದೆ. 14 ಪಂದ್ಯಗಳ ಲೀಗ್ ಹಂತದಲ್ಲಿ ಏನಿಲ್ಲವೆಂದರೂ ಇಂತಹ ಕಠಿಣ ಪರಿಸ್ಥಿತಿಯಲ್ಲಿ 6 ಅಥವಾ 7ನೇ ಕ್ರಮಾಂಕದಲ್ಲಿ ಎಂಟರಿಂದ ಒಂಬತ್ತು ಬಾರಿ ಕಣಕ್ಕಿಳಿಯುವ ಪರಿಸ್ಥಿತಿ ಬರಬಹುದು. ಅದಕ್ಕೆ ನಾವು ಸಜ್ಜಾಗಬೇಕಿರುತ್ತದೆ ಎಂದು ತೆವಾಟಿಯಾ ಹೇಳಿದ್ದಾರೆ.

ಈ ಕಾರಣಕ್ಕಾಗಿಯೇ ನಾನು ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಮ್ಯಾಚ್ ಫಿನಿಶ್‌ ಮಾಡುವ ಬಗ್ಗೆ ಅಭ್ಯಾಸ ನಡೆಸುತ್ತಾ ಬಂದಿದ್ದೇನೆ. ಇದಕ್ಕಾಗಿ ನನಗೆ ನಾನೇ ಒಂದಷ್ಟು ಗುರಿಯನ್ನು ನಿಗದಿ ಮಾಡಿಕೊಂಡು, ಆ ಗುರಿ ತಲುಪಲು ಅಭ್ಯಾಸ ನಡೆಸುತ್ತಾ ಬಂದಿದ್ದೇನೆ. ಇದರಿಂದ ಮ್ಯಾಚ್ ಫಿನಿಶ್ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಒಂದಷ್ಟು ಐಡಿಯಾಗಳು ಸಿಗುತ್ತವೆ ಎಂದು ಪಂಜಾಬ್ ಕಿಂಗ್ಸ್‌ ಎದುರಿನ ಪಂದ್ಯ ಮುಕ್ತಾಯದ ಬಳಿಕ ತೆವಾಟಿಯಾ ಹೇಳಿದ್ದಾರೆ.

ಇದಕ್ಕಿಂತ ಕೆಳಹಂತ ತಲುಪಲು ಸಾಧ್ಯವಿಲ್ಲ: ಯಶ್‌ ದಯಾಳ್ ಜತೆಗಿನ ಮಾತುಕಥೆ ಬಿಚ್ಚಿಟ್ಟ ತೆವಾಟಿಯಾ

ಕೊನೆಯ ಎರಡು ಎಸೆತಗಳಲ್ಲಿ 4 ರನ್‌ ಅಗತ್ಯವಿದ್ದಾಗ ನಿಮ್ಮ ಮನಸ್ಸಿನಲ್ಲಿ ಏನು ಓಡುತ್ತಿತ್ತು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ರಾಹುಲ್ ತೆವಾಟಿಯಾ, "ಸಾಕಷ್ಟು ದೊಡ್ಡದಿರುವ ಲೆಗ್ ಸೈಡ್‌ ಕಡೆ ಬಾರಿಸಿ ಎರಡು ಓಡಬೇಕು ಎಂದುಕೊಂಡಿದ್ದೆ. ಆದರೆ ಅದು ಕೊಂಚ ಅಪಾಯಕಾರಿ ಎನಿಸತೊಡಗಿತು. ಇನ್ನೂ ಎರಡು ಎಸೆತಗಳಿದ್ದಿದ್ದರಿಂದ ಸ್ಕೂಪ್ ಮಾಡುವುದು ಒಳ್ಳೆಯ ಆಯ್ಕೆ ಎಂದು ತೀರ್ಮಾನಿಸಿದೆ. ಬಾಲ್ ಕೂಡಾ ಕೊಂಚ ರಿವರ್‌ಸ್ವಿಂಗ್ ಆಗುತ್ತಿದ್ದರಿಂದ ನಾನು ನನ್ನ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ಸ್ಕೂಪ್‌ ಮಾಡಿದೆ ಎಂದು ತೆವಾಟಿಯಾ ಹೇಳಿದ್ದಾರೆ.

ಹಾಲಿ ಚಾಂಪಿಯನ್ಸ್‌ ಗುಜರಾತ್‌ ಟೈಟಾನ್ಸ್‌ ಚೇಸಿಂಗ್‌ನಲ್ಲಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿದ್ದು, ಈ ಆವೃತ್ತಿಯಲ್ಲಿ ಸತತ 3ನೇ ಬಾರಿಗೆ ಯಶಸ್ವಿಯಾಗಿ ಗುರಿ ಬೆನ್ನತ್ತಿದೆ. ಪಂಜಾಬ್‌ ಕಿಂಗ್‌್ಸ ವಿರುದ್ಧ ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್‌ ಜಯ ಸಾಧಿಸಿದ ಗುಜರಾತ್‌, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.