ಕೋಲ್ಕತಾದಲ್ಲಿ ಸೇಡಿನ ಸಮರ ನಡೆಯಲಿದೆ. ಕೆಕೆಆರ್ ವಿರುದ್ಧ ಮೊದಲ ಸೋಲಿಗೆ ಸೇಡು ತೀರಿಸಲು ಸಜ್ಜಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಪ್ಲಾನ್ ಹಾಕಿಕೊಂಡಿದೆ. ಇಂದಿನ ಪಂದ್ಯಕ್ಕೆ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ.
ಕೋಲ್ಕತಾ(ಏ.29): ಸತತ 4 ಸೋಲುಗಳ ಬಳಿಕ ಆರ್ಸಿಬಿ ವಿರುದ್ಧ ಗೆದ್ದು ಆತ್ಮವಿಶ್ವಾಸ ಮರಳಿ ಪಡೆದಿರುವ ಕೋಲ್ಕತಾ ಮತ್ತೊಂದು ಜಯದ ಮೂಲಕ ಅಂಕಪಟ್ಟಿಯಲ್ಲಿ ಮೇಲೇರಲು ಕಾಯುತ್ತಿದ್ದು, ಶನಿವಾರ ಗುಜರಾತ್ ವಿರುದ್ಧ ಸೆಣಸಾಡಲಿದೆ. ಮತ್ತೊಂದೆಡೆ ಮೊದಲ ಮುಖಾಮುಖಿಯ ಸೋಲಿಗೆ ಸೇಡು ತೀರಿಸಿಕೊಂಡು ಮತ್ತೆ ಅಗ್ರಸ್ಥಾನಕ್ಕೇರಲು ಹಾರ್ದಿಕ್ ಬಳಗ ಕಾತರಿಸುತ್ತಿದೆ.
ಎರಡೂ ತಂಡದಲ್ಲಿ ಸ್ಫೋಟಕ ಬ್ಯಾಟರ್ಗಳಿದ್ದು, ಈಡನ್ ಗಾರ್ಡನ್ಸ್‌ನಲ್ಲಿ ಮತ್ತೊಮ್ಮೆ ರನ್ ಹೊಳೆ ನಿರೀಕ್ಷಿಸಬಹುದು. ಇಲ್ಲಿ ನಡೆದ 3 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳ ಸ್ಕೋರ್ 204, 228 ಹಾಗೂ 235. ಆದರೆ ಸ್ಪಿನ್ನರ್ಗಳಿಗೂ ನೆರವು ನೀಡಬಲ್ಲ ಪಿಚ್ನಲ್ಲಿ ಎರಡೂ ತಂಡದ ಬ್ಯಾಟರ್ಗಳಿಗೆ ಸವಾಲು ಎದುರಾಗಬಹುದು. ಕೆಕೆಆರ್ ಪರ ರಿಂಕು, ನಿತೀಶ್ ರಾಣಾ, ರಾಯ್ ಮಾತ್ರ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದು, ಇವರನ್ನು ಕಟ್ಟಿಹಾಕಲು ರಶೀದ್, ನೂರ್ ಅಹ್ಮದ್ ಕಾಯುತ್ತಿದ್ದಾರೆ. ಮತ್ತೊಂದೆಡೆ ಸ್ಪಿನ್ನರ್ಗಳಾದ ವರುಣ್, ಸುಯಶ್‌ರನ್ನು ಎದುರಿಸುವಲ್ಲಿ ಗುಜರಾತ್ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದರ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗಬಹುದು.
IPL 2023: ಬರೋಬ್ಬರಿ 458 ರನ್ ದಾಖಲಾದ ಪಂದ್ಯದಲ್ಲಿ ಲಕ್ನೋ ಸೂಪರ್ ವಿನ್!
ಒಟ್ಟು ಮುಖಾಮುಖಿ: 02
ಕೆಕೆಆರ್: 02
ಗುಜರಾತ್: 00
ಸಂಭವನೀಯ ಆಟಗಾರರ ಪಟ್ಟಿ
ಕೆಕೆಆರ್: ರಾಯ್, ಜಗದೀಶನ್, ವೆಂಕಿ, ರಾಣಾ(ನಾಯಕ), ರಿಂಕು, ರಸೆಲ್, ನರೇನ್, ವೀಸಾ, ವೈಭವ್, ಉಮೇಶ್, ವರುಣ್, ಸುಯಾಶ್.
ಗುಜರಾತ್: ಸಾಹ, ಗಿಲ್, ಹಾರ್ದಿಕ್(ನಾಯಕ), ವಿಜಯ್, ಮಿಲ್ಲರ್, ಅಭಿನವ್, ತೆವಾಟಿಯಾ, ರಶೀದ್, ಲಿಟ್‌್ಲ, ಶಮಿ, ನೂರ್, ಮೋಹಿತ್,
ಪಂದ್ಯ: ಮಧ್ಯಾಹ್ನ 3.30ಕ್ಕೆ,
ಪಿಚ್ ರಿಪೋರ್ಚ್
ಈ ವರ್ಷ ಈಡನ್ ಗಾರ್ಡನ್ಸ್‌ನಲ್ಲಿ ಮೂರು ಪಂದ್ಯದಲ್ಲೂ ಮೊದಲು ಬ್ಯಾಟ್ ಮಾಡಿದ ತಂಡ 200+ ರನ್ ಗಳಿಸಿದೆ ಮತ್ತು ಯಾವ ಪಂದ್ಯದಲ್ಲೂ ಚೇಸಿಂಗ್ ತಂಡ ಗೆದ್ದಿಲ್ಲ. ಹೀಗಾಗಿ ಟಾಸ್ ಜಯಿಸಿದ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬಹುದು.
