IPL 2023 ಫೈನಲ್ ಹೋರಾಟಕ್ಕೆ ಮಳೆರಾಯನ ಗ್ರೀನ್ ಸಿಗ್ನಲ್, ಟಾಸ್ ಗೆದ್ದ ಸಿಎಸ್‌ಕೆಗೆ ಆರಂಭದಲ್ಲೇ ಮೇಲುಗೈ!
ಮಳೆಯಿಂದ ಮೀಸಲು ದಿನಕ್ಕೆ ಮುಂದೂಡಲ್ಪ ಫೈನಲ್ ಪಂದ್ಯ ಕೊನೆಗೂ ಆರಂಭಗೊಂಡಿದೆ. ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಅಹಮ್ಮದಾಬಾದ್(ಮೇ.28): ಕಳೆದೆರಡು ತಿಂಗಳಿನಿಂದ ಭರ್ಜರಿ ಮನರಂಜನೆ ನೀಡಿದ ಐಪಿಎಲ್ 2023 ಟೂರ್ನಿ ಇದೀಗ ಅಂತಿಮ ಘಟ್ಟ ತಲುಪಿದೆ. ನಿನ್ನೆ(ಮೇ.28) ನಡೆಯಬೇಕಿದ್ದ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಮೀಸಲು ದಿನಕ್ಕೆ ಪಂದ್ಯ ಮುಂದೂಡಲಾಗಿತ್ತು. ಇಂದು ಮಳೆರಾಯ ಅನುವು ಮಾಡಿಕೊಟ್ಟಿದ್ದಾನೆ. ಇದೀಗ ಪ್ರಶಸ್ತಿಗಾಗಿ ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಚೆನ್ನೈ ಹಾಗೂ ಗುಜರಾತ್ ಟೈಟಾನ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್, ಡೇವೋನ್ ಕಾನ್ವೋ, ಅಜಿಂಕ್ಯ ರಹಾನೆ, ಅಂಬಾಟಿ ರಾಯುಡು, ಶಿವಂ ದುಬೆ, ಮೊಯಿನ್ ಆಲಿ, ರವೀಂದ್ರ ಜಡೇಜಾ, ಎಂ.ಎಸ್ ಧೋನಿ(ನಾಯಕ), ತುಷಾರ್ ದೇಶಪಾಂಡೆ, ಮಹೀಶಾ ತೀಕ್ಷಾನ, ದೀಪಕ್ ಚಹಾರ್
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11
ವೃದ್ದಿಮಾನ್ ಸಾಹ, ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ಟಿವಾಟಿಯಾ, ರಶೀದ್ ಖಾನ್, ಮೊಹಿತ್ ಶರ್ಮಾ, ನೂರ್ ಅಹಮ್ಮದ್, ಮೊಹಮ್ಮದ್ ಶಮಿ
ಭಾನುವಾರ ಐಪಿಎಲ್ 2023 ಟೂರ್ನಿಯ ಫೈನಲ್ ಪಂದ್ಯ ನಿಗದಿಯಾಗಿತ್ತು. ಆದರೆ ಅಹಮ್ಮದಾಬಾದ್ ಸೇರಿದಂತೆ ಗುಜರಾತ್‌ನಲ್ಲಿ ಸುರಿದ ಭಾರಿ ಮಳೆಯಿಂದ ಪಂದ್ಯ ಆರಂಭಿಸಲು ಸಾಧ್ಯವಾಗಲೇ ಇಲ್ಲ. ಬಿಟ್ಟು ಬಿಡದೆ ಸುರಿದ ಮಳೆಯಿಂದ ರಾತ್ರಿ ಇಡೀ ಕಾದರೂ ಪಂದ್ಯ ಆರಂಭಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ರಿಸರ್ವ್‌ಡೇಗೆ ಪಂದ್ಯ ಮುಂದೂಡಲಾಯಿತು. ಮೀಸಲು ದಿನವಾದ ಇಂದು ಸಂಪೂರ್ಣ ಪಂದ್ಯ ನಡೆಯುವ ಸಾಧ್ಯತೆ ದಟ್ಟವಾಗಿದೆ.