ಚೆನ್ನೈನಲ್ಲಿಂದು ಸಿಎಸ್‌ಕೆಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲುಧೋನಿ ನೇತೃತ್ವದ ಚೆನ್ನೈಗೆ ಜಯ ಅನಿವಾರ್ಯಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಡೆಲ್ಲಿ ಕ್ಯಾಪಿಟಲ್ಸ್

ಚೆನ್ನೈ(ಮೇ.10): 16ನೇ ಆವೃತ್ತಿ ಐಪಿ​ಎ​ಲ್‌ನ ಪ್ಲೇ-ಆಫ್‌ ಸ್ಥಾನಕ್ಕೆ ಮತ್ತಷ್ಟುಹತ್ತಿ​ರ​ವಾ​ಗಲು ಎದುರು ನೋಡು​ತ್ತಿ​ರು​ವ 4 ಬಾರಿ ಚಾಂಪಿ​ಯನ್‌ ಚೆನ್ನೈ, ನಿರ್ಣಾಯಕ ಪಂದ್ಯ​ದಲ್ಲಿ ಬುಧ​ವಾರ ಡೆಲ್ಲಿ ಕ್ಯಾಪಿ​ಟಲ್ಸ್‌ ವಿರು​ದ್ಧ ಸೆಣ​ಸಾ​ಡ​ಲಿ​ದೆ. ಲಖನೌ ಸೂಪರ್ ಜೈಂಟ್ಸ್‌ ವಿರು​ದ್ಧದ ಪಂದ್ಯ ಮಳೆ​ಯಿಂದಾಗಿ ರದ್ದು​ಗೊಂಡು ಅಂಕ ಹಂಚಿ​ಕೆ​ಯಾ​ಗಿರುವ ಕಾರಣ ಚೆನ್ನೈಗೆ ಈ ಪಂದ್ಯ​ದಲ್ಲಿ ಗೆಲ್ಲ​ಲೇ​ಬೇ​ಕಿದ್ದು, ಸೋತರೆ ಪ್ಲೇ-ಆಫ್‌ ಹಾದಿ ಕಠಿ​ಣ​ಗೊ​ಳ್ಳ​ಲಿದೆ. ಅತ್ತ ಡೆಲ್ಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿ​ಸಿದ್ದು, ಸೋತರೆ ತಂಡ​ದ ನಾಕೌಟ್‌ ಹಾದಿ ಬಂದ್‌ ಆಗು​ವುದು ಖಚಿ​ತ.

ಸದ್ಯ ಚೆನ್ನೈ ಆಡಿದ 11 ಪಂದ್ಯ​ಗ​ಳಲ್ಲಿ 6ರಲ್ಲಿ ಗೆದ್ದಿದ್ದು, 13 ಅಂಕ​ದೊಂದಿಗೆ 2ನೇ ಸ್ಥಾನ​ದ​ಲ್ಲಿದೆ. ಬುಧ​ವಾ​ರದ ಪಂದ್ಯ ಸೇರಿ​ದಂತೆ ಉಳಿದ ಮೂರು ಪಂದ್ಯ​ಗ​ಳನ್ನು ಗೆದ್ದರೆ 19 ಅಂಕ​ಗ​ಳಾ​ಗ​ಲಿದ್ದು, ಪ್ಲೇ-ಆಫ್‌​ಗೇ​ರ​ಲಿದೆ. ಆದರೆ ಡೆಲ್ಲಿ 10ಪಂದ್ಯ​ಗ​ಳಲ್ಲಿ 8 ಅಂಕ​ಗ​ಳಿಸಿ ಕೊನೆ ಸ್ಥಾನ​ದಲ್ಲೇ ಬಾಕಿ​ಯಾ​ಗಿದ್ದು, ಈ ಪಂದ್ಯ​ದಲ್ಲಿ ಗೆದ್ದ​ರಷ್ಟೇ ರೇಸ್‌​ನಲ್ಲಿ ಉಳಿ​ಯ​ಲಿ​ದೆ.

ಡೆಲ್ಲಿ ಕಳೆದ ಪಂದ್ಯ​ದಲ್ಲಿ ಆರ್‌​ಸಿಬಿ ವಿರುದ್ಧ ಭರ್ಜರಿ ಗೆಲು​ವಿನ ಆತ್ಮ​ವಿ​ಶ್ವಾ​ಸ​ದ​ಲ್ಲಿ​ದ್ದರೂ ಚೆನ್ನೈನ ಪಿಚ್‌​ನಲ್ಲಿ ತಂಡಕ್ಕೆ ಸವಾಲು ಎದು​ರಾ​ಗ​ಬ​ಹುದು. ರವೀಂದ್ರ ಜಡೇಜಾ, ಮೋಯಿನ್ ಅಲಿ, ಮಹೀಶ್ ತೀಕ್ಷಣ ಅವ​ರ​ನ್ನೊ​ಳ​ಗೊಂಡ ಸ್ಪಿನ್‌ ಪಡೆ​ಯನ್ನು ಡೆಲ್ಲಿಯ ಬ್ಯಾಟ​ರ್‌​ಗ​ಳು ಹೇಗೆ ಎದು​ರಿ​ಸ​ಲಿ​ದ್ದಾರೆ ಎಂಬ ಕುತೂ​ಹ​ಲ​ವಿದೆ. ಮತ್ತೊಂದೆಡೆ ಸ್ಫೋಟಕ ಬ್ಯಾಟ​ರ್‌​ಗಳ ದಂಡನ್ನೇ ಹೊಂದಿ​ರುವ ಚೆನ್ನೈ, ತವ​ರಿನ ಅಂಗ​ಳ​ದಲ್ಲಿ ಮತ್ತೊಮ್ಮೆ ಅಬ್ಬ​ರಿ​ಸುವ ಕಾತ​ರ​ದ​ಲ್ಲಿ​ದ್ದಾರೆ.

IPL 2023 ಬೃಹತ್ ಮೊತ್ತ ಸಿಡಿಸಿದರೂ ಆರ್‌ಸಿಬಿಗೆ ಸೋಲು, ಪ್ಲೇ ಆಫ್‌ಗೆ ಇದೆಯಾ ಅವಕಾಶ?

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಒಟ್ಟು 27 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್‌ ಸ್ಪಷ್ಟ ಮೇಲುಗೈ ಸಾಧಿಸಿದೆ. 27 ಪಂದ್ಯಗಳ ಪೈಕಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 17 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 10 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್‌ವೇ, ಋತುರಾಜ್ ಗಾಯಕ್ವಾಡ್‌, ಮೋಯಿನ್ ಅಲಿ, ಅಜಿಂಕ್ಯ ರಹಾನೆ, ಶಿವಂ ದುಬೆ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎ​ಸ್‌.ಧೋನಿ(ನಾಯಕ), ದೀಪಕ್ ಚಹರ್‌, ಮತೀಶ್ ಪತಿ​ರನ, ತುಷಾರ್ ದೇಶ​ಪಾಂಡೆ, ಮಹೀಶ್ ತೀಕ್ಷ​ಣ.

ಡೆಲ್ಲಿ ಕ್ಯಾಪಿಟಲ್ಸ್‌: ಡೇವಿಡ್ ವಾರ್ನರ್‌(ನಾಯಕ), ಫಿಲ್ ಸಾಲ್ಟ್‌, ಮನೀಶ್‌ ಪಾಂಡೆ, ರಿಲೇ ರೊಸ್ಸೌ, ಪ್ರಿಯಂ ಗರ್ಗ್‌, ಅಕ್ಷರ್‌ ಪಟೇಲ್, ರಿಪಲ್‌ ಪಟೇಲ್, ಅಮನ್‌ ಖಾನ್‌, ಕುಲ್ದೀಪ್‌ ಯಾದವ್‌, ಏನ್ರಿಚ್ ನೋಕಿಯಾ, ಇಶಾಂತ್‌ ಶರ್ಮಾ, ಖಲೀ​ಲ್‌ ಅಹಮ್ಮದ್.

ಪಂದ್ಯ: ಸಂಜೆ 7.30ರಿಂದ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ಚೆಪಾಕ್‌ ಕ್ರೀಡಾಂಗಣದ ಪಿಚ್‌ ಈ ಬಾರಿ ದೊಡ್ಡ ಹಾಗೂ ಸಣ್ಣ ಮೊತ್ತದ ಪಂದ್ಯ​ಗ​ಳಿಗೆ ಸಾಕ್ಷಿ​ಯಾ​ಗಿ​ದೆ. ಕೆಲ​ವೊಮ್ಮೆ ಸ್ಪಿನ್ನ​ರ್‌​ಗ​ಳಿಗೆ ಹೆಚ್ಚಿನ ನೆರವು ನೀಡಿ​ದರೂ ಬ್ಯಾಟ​ರ್‌​ಗಳು ಅಬ್ಬ​ರಿ​ಸಿದ ಉದಾ​ಹ​ರ​ಣೆಯೇ ಹೆಚ್ಚು. ಕಳೆದ 3 ಪಂದ್ಯ​ದಲ್ಲೂ ಚೇಸಿಂಗ್‌ ಮಾಡಿದ ತಂಡ ಗೆಲುವು ಸಾಧಿ​ಸಿದೆ.