ಶಿಸ್ತಿನ ಬೌಲಿಂಗ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಕಟ್ಟಿಹಾಕಲು ಯಶಸ್ವಿಯಾಗಿದೆ. ಆರಂಭಿಕ ಆಟಗಾರ ಜೋಸ್ ಬಟ್ಲರ್ ಅರ್ಧಶತಕದ ಸಾಹಸದಿಂದ ರಾಜಸ್ಥಾನ 175 ರನ್ ಪೇರಿಸಿದೆ.
ಚೆನ್ನೈ (ಏ.12): ಸ್ಪಿನ್ ಸ್ನೇಹಿ ಚೆನ್ನೈ ಪಿಚ್‌ನಲ್ಲಿ ಸ್ಪಿನ್ನರ್‌ಗಳನ್ನ ಗುರಿಯಾಗಿಸಿಕೊಂಡು ರಾಜಸ್ಥಾನ ರಾಯಲ್ಸ್ ನಡೆಸಿದ ಬ್ಯಾಟಿಂಗ್ ಸಾಹಸದಿಂದ ತಂಡ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸವಾಲಿನ ಮೊತ್ತ ಕಲೆಹಾಕಿದೆ. ಅಗ್ರ ಕ್ರಮಾಂಕದಲ್ಲಿ ಅನುಭವಿ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ದೇವದತ್ ಪಡಿಕ್ಕಲ್, ರವಿಚಂದ್ರನ್ ಅಶ್ವಿನ್ ಮತ್ತು ಶಿಮ್ರೋನ್ ಹೆಟ್ಮೆಯರ್ ಅವರ ಅಮೂಲ್ಯ ಕಾಣಿಕೆಯಿಂದ ತಂಡ ಸವಾಲಿನ ಮೊತ್ತ ಪೇರಿಸಲು ಯಶಸ್ವಿಯಾಗಿದೆ. ಎಂಎ ಚಿದಂಬರಂ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡದ ಪರವಾಗಿ ಜೋಸ್ ಬಟ್ಲರ್ (52ರನ್, 36 ಎಸೆತ, 1 ಬೌಂಡರಿ, 3 ಸಿಕ್ಸರ್) ಅರ್ಧಶತಕ ಹಾಗೂ ಕೊನೆ ಹಂತದಲ್ಲಿ ಹೆಟ್ಮೆಯರ್ (30ರನ್, 18 ಎಸೆತ, 2 ಬೌಂಡರಿ, 2 ಸಿಕ್ಸರ್) ಸಾಹಸದಿಂದಾಗಿ 8 ವಿಕೆಟ್‌ಗೆ 175 ರನ್ ಕಲೆಹಾಕಿತು.
ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಎದುರಿಸಿದ 8 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 10 ರನ್ ಬಾರಿಸಿದ್ದ ಯಶಸ್ವಿ ಜೈಸ್ವಾಲ್, ತುಷಾರ್ ದೇಶಪಾಂಡೆಗೆ ವಿಕಟ್ ನೀಡಿದಾಗ ತಂಡ 11 ರನ್ ಬಾರಿಸಿತ್ತು. ಈ ಹಂತದಲ್ಲಿ ಬಟ್ಲರ್‌ಗೆ ಜೊತೆಯಾದ ಕನ್ನಡಿಗ ದೇವದತ್ ಪಡಿಕ್ಕಲ್ (38ರನ್, 26 ಎಸೆತ, 5 ಬೌಂಡರಿ) 2ನೇ ವಿಕೆಟ್‌ಗೆ ಅಮೂಲ್ಯ 77 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ದರು.
IPL 2023 ಹೊಸ ಮೈಲಿಗಲ್ಲು ನಿರ್ಮಿಸಲು ಸಜ್ಜಾದ ಎಂಎಸ್ ಧೋನಿ, ಕ್ರೀಡಾಂಗಣದತ್ತ ಅಭಿಮಾನಿಗಳ ಆಗಮನ!
ಈ ಹಂತದಲ್ಲಿ ದಾಳಿಗಿಳಿದ ರವೀಂದ್ರ ಜಡೇಜಾ, ಪಡಿಕ್ಕಲ್ ವಿಕೆಟ್ ಉರುಳಿಸಿದರೆ, ವಿಕೆಟ್ ಕೀಪರ್ ಹಾಗೂ ನಾಯಕ ಸಂಜು ಸ್ಯಾಮ್ಸನರ್ 2 ಎಸೆತಗಳನ್ನು ಎದುರಿಸಿ ಖಾತೆಯೇ ತೆರೆಯದೆ ನಿರ್ಗಮಿಸಿದರು.
