ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಇಂದಿನ ಪಂದ್ಯದಲ್ಲಿ ನಾಯಕ ಧೋನಿ ಹೊಸ ಮೈಲಿಗಲ್ಲು ನಿರ್ಮಿಸಲಿದ್ದಾರೆ. ಈ ವಿಶೇಷ ಸಾಧನೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕ್ರೀಡಾಂಗಣದತ್ತ ಧಾವಿಸುತ್ತಿದ್ದಾರೆ. ಅಷ್ಟಕ್ಕೂ ಧೋನಿ ನಿರ್ಮಿಸಲಿರುವ ಮೈಲಿಗಲ್ಲು ಏನು? 

ಚೆನ್ನೈ(ಏ.12): ಐಪಿಎಲ್ ಟೂರ್ನಿಯಲ್ಲಿಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಹೋರಾಟ. ಈ ಪಂದ್ಯ ಧೋನಿ ಪಾಲಿಗೆ ವಿಶೇಷವಾಗಿದೆ. ಕಾರಣ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಧೋನಿಗೆ 200ನೇ ಪಂದ್ಯ. ಧೋನಿ ಐಪಿಎಲ್ ಟೂರ್ನಿಯಲ್ಲಿ 237 ಪಂದ್ಯ ಆಡಿದ್ದಾರೆ. ಇದರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ಪರವಾಗಿ ಆಡಿದ್ದಾರೆ. ಸಿಎಸ್‌ಕೆ ತಂಡವನ್ನು ಇಂದು 200ನೇ ಬಾರಿ ಮುನ್ನಡೆಸುತ್ತಿದ್ದಾರೆ. ಇದೀಗ ಅಭಿಮಾನಿಗಳು ಕ್ರೀಡಾಂಗಣದತ್ತ ಧಾವಿಸುತ್ತಿದ್ದಾರೆ. ಚೆನ್ನೈ ಚಿಪಾಕ್ ಕ್ರೀಡಾಂಗಣದಲ್ಲಿ ಈ ರೋಚಕ ಪಂದ್ಯ ನಡೆಯಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ 2010, 2011, 2018 ಹಾಗೂ 2021ರಲ್ಲಿ ಸಿಎಸ್‌ಕೆ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ 213 ಪಂದ್ಯಗಲ್ಲಿ ಧೋನಿ ನಾಯಕನಾಗಿ ಕಣಕ್ಕಿಳಿದಿದ್ದಾರೆ. ಇದರಲ್ಲಿ 125 ಪಂದ್ಯದಲ್ಲಿ ಧೋನಿ ಗೆಲುವು ದಾಖಲಿಸಿದ್ದಾರೆ. 87 ಪಂದ್ಯದಲ್ಲಿ ಸೋಲು ಅನುಭವಿಸಿದ್ದಾರೆ. ಇನ್ನೊಂದು ಪಂದ್ಯ ಫಲಿತಾಂಶ ಕಾಣದೆ ಅಂತ್ಯವಾಗಿದೆ. ಧೋನಿ ವಿನ್ನಿಂಗ್ ಪರ್ಸಂಟೇಜ್ 58.96 . ಸಿಎಸ್‌ಕೆ ನಾಯಕನಾಗಿ 199 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 120 ಪಂದ್ಯದಲ್ಲಿ ಗೆಲುವು ಸಾಧಿಸಿದರೆ, 78 ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಸಿಎಸ್‌ಕೆ ನಾಯಕನಾಗಿ ಗೆಲಿವಿನ ಶೇಕಡಾ 60.30 .

ಮುಂಬೈ ಮಣಿಸಿದ ಧೋನಿ ಪಡೆಗೆ ಶಾಕ್‌, ಕೆಲ ಪಂದ್ಯಗಳಿಗೆ ಸ್ಟಾರ್ ಆಟಗಾರರು ಅಲಭ್ಯ..!

ಜಡೇಜಾ, ಅಲಿ, ತೀಕ್ಷಣ, ಸ್ಯಾಂಟ್ನರ್‌ ವರ್ಸಸ್‌ ಅಶ್ವಿನ್‌, ಚಹಲ್‌, ಎಂ.ಅಶ್ವಿನ್‌. ಬುಧವಾರ ಚೆನ್ನೈ ಹಾಗೂ ರಾಜಸ್ಥಾನ ನಡುವಿನ ಪಂದ್ಯ ಗುಣಮಟ್ಟದ ಸ್ಪಿನ್ನರ್‌ಗಳ ನಡುವಿನ ಕಾದಾಟಕ್ಕೆ ಸಾಕ್ಷಿಯಾಗಲಿದೆ. ‘ಸ್ಪಿನ್‌’ ಪರೀಕ್ಷೆ ಗೆಲ್ಲುವ ತಂಡ ಪಂದ್ಯ ಗೆಲ್ಲಬಹುದು ಎಂದೇ ಈ ವಿಶ್ಲೇಷಿಸಲಾಗುತ್ತಿದೆ. ಒಂದು ಕಡೆ ಜೈಸ್ವಾಲ್‌, ಬಟ್ಲರ್‌, ಸ್ಯಾಮ್ಸನ್‌, ಹೆಟ್ಮೇಯರ್‌ರಂತಹ ಸ್ಫೋಟಕ ಬ್ಯಾಟರ್‌ಗಳಿದ್ದಾರೆ. ಇನ್ನೊಂದೆಡೆ ಗಾಯಕ್ವಾಡ್‌, ಕಾನ್‌ವೇ, ರಹಾನೆ, ರಾಯುಡು, ಧೋನಿ. ಚೆಪಾಕ್‌ನ ನಿಧಾನಗತಿಯ, ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುವ ತಂಡ ಯಾವುದು ಎನ್ನುವ ಕುತೂಹಲ ಅಭಿಮಾನಿಗಳದ್ದು. ತಂಡಗಳ ‘ಇಂಪ್ಯಾಕ್ಟ್ ಆಟಗಾರ’ ಬಳಕೆಯೂ ನಿರ್ಣಾಯಕವಾಗಬಹುದು. ಎರಡೂ ತಂಡಗಳು ತಲಾ 2 ಪಂದ್ಯ ಗೆದ್ದಿದ್ದು, ಮತ್ತೆರಡು ಅಂಕಗಳ ಮೇಲೆ ಕಣ್ಣಿಟ್ಟಿವೆ. ಚೆನ್ನೈಗೆ ಸ್ಟೋಕ್ಸ್‌, ಚಹರ್‌ರ ಅನುಪಸ್ಥಿತಿ ಕಾಡಲಿದೆಯೇ ಎನ್ನುವ ಪ್ರಶ್ನೆಗೂ ಉತ್ತರ ಸಿಗಬಹುದು.

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಕಾನ್‌ವೇ, ಗಾಯಕ್ವಾಡ್‌, ರಹಾನೆ, ಅಲಿ, ದುಬೆ, ಜಡೇಜಾ, ಧೋನಿ(ನಾಯಕ), ಸ್ಯಾಂಟ್ನ​ರ್‌, ದೇಶ​ಪಾಂಡೆ, ಹಂಗಾ​ರ್‌​ಗೇ​ಕರ್‌, ಮಗಾ​ಲ/ತೀಕ್ಷಣ.

ರಾಜ​ಸ್ಥಾ​ನ: ಜೈಸ್ವಾಲ್‌, ಬಟ್ಲರ್‌, ಸ್ಯಾಮ್ಸನ್‌ ​(​ನಾ​ಯ​ಕ), ಹೆಟ್ಮೇ​ಯರ್‌, ರಿಯಾನ್‌, ಧೃವ್‌ ಜೊರೆಲ್‌, ಹೋಲ್ಡರ್‌, ಅಶ್ವಿನ್‌, ಬೌಲ್ಟ್‌, ಸಂದೀ​ಪ್‌, ಚಹ​ಲ್‌.