Asianet Suvarna News Asianet Suvarna News

IPL 2023 ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತಷ್ಟು ಬಲಿಷ್ಠ, ಹರಾಜಿನ ಬಳಿಕ ತಂಡ ಹೀಗಿದೆ!

ಐಪಿಎಲ್ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಅಳೆದು ತೂಗಿ ಆಟಗಾರರ ಖರೀದಿಸಿದೆ. ಇದೀಗ ಮತ್ತಷ್ಟುಬಲಿಷ್ಠಗೊಂಡಿರುವ ಹಾರ್ದಿಕ್ ಪಾಂಡ್ಯ ಸೈನ್ಯ ಸತತ 2ನೇ ಬಾರಿ ಪ್ರಶಸ್ತಿ ಗೆಲ್ಲುತ್ತಾ? ಇಲ್ಲಿದೆ ತಂಡದ ಸಂಪೂರ್ಣ ವಿವರ

IPL 2023 Champion Gujarat titans Full squad after Mini Auction balance hardik pandya team details ckm
Author
First Published Dec 23, 2022, 10:46 PM IST

ಕೊಚ್ಚಿ(ಡಿ.23): ಐಪಿಎಲ್ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಎಚ್ಚರಿಕೆಯಿಂದ ಆಟಗಾರರ ಖರೀದಿ ಮಾಡಿದೆ. ಮಿನಿ ಹರಾಜಿನ ಮೊದಲ ಬಿಡ್ಡಿಂಗ್‌ನಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಖರೀದಿಸಿ ತಂಡದ ಬ್ಯಾಟಿಂಗ್ ಬಲವನ್ನು ಬಲಿಷ್ಠ ಮಾಡಿಕೊಂಡಿತು. ಬಳಿಕ ತಂಡದ ಅವಶ್ಯಕತೆಗೆ ತಕ್ಕಂತೆ ಆಟಗಾರರನ್ನು ಆಯ್ಕೆ ಮಾಡಿಕೊಂಡು ಸಮತೋಲನ ಕಾಪಾಡಿಕೊಂಡಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಇದೀಗ ಮತ್ತೆ ಕಿರೀಟ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಕಾರಣ ಹರಾಜಿನ ಬಳಿಕ ಗುಜರಾತ್ ಟೈಟಾನ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ.

ಐಪಿಎಲ್ ಮನಿ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಖರೀದಿಸಿದ ಆಟಗಾರರ ವಿವರ:
ಶಿವಂ ಮಾವಿ: 6 ಕೋಟಿ ರೂಪಾಯಿ
ಜೋಶುವಾ ಲಿಟ್ಲ್: 4.4 ಕೋಟಿ ರೂಪಾಯಿ
ಕೇನ್ ವಿಲಿಯಮ್ಸನ್: 2 ಕೋಟಿ ರೂಪಾಯಿ
ಕೆಎಸ್ ಭರತ್: 1.2 ಕೋಟಿ ರೂಪಾಯಿ
ಮೋಹಿತ್ ಶರ್ಮಾ: 50 ಲಕ್ಷ ರೂಪಾಯಿ
ಒಡೆನ್ ಸ್ಮಿತ್:  50 ಲಕ್ಷ ರೂಪಾಯಿ
ಉರ್ವಿಲ್ ಪಟೇಲ್: 20 ಲಕ್ಷ ರೂಪಾಯಿ

IPL Auction 2023 ನಾಮಕಾವಾಸ್ತೆಗೆ ಬಿಡ್ಡಿಂಗ್ ಮಾಡಿ ತೆಪ್ಪಗೆ ಕೂತ ಆರ್‌ಸಿಬಿ ಫುಲ್ ಟ್ರೋಲ್!

ಈ ಬಾರಿಯ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ 7 ಕ್ರಿಕೆಟಿಗರ ಖರೀದಿಸಿತು. ಇದಲ್ಲಿ ಶಿವಂ ಮಾವಿ, ಕೆಎಸ್ ಭರತ್, ಮೋಹಿತ್ ಶರ್ಮಾ ಹಾಗೂ ಉರ್ವಿಲ್ ಪಟೇಲ್ ಭಾರತೀಯ ಆಟಗಾರರಾಗಿದ್ದರೆ ಜೋಶುವಾ ಲಿಟ್ಲ್,  ಕೇನ್ ವಿಲಿಯಮ್ಸನ್, ಒಡೆನ್ ಸ್ಮಿತ್ ವಿದೇಶಿ ಆಟಗಾರರಾಗಿದ್ದಾರೆ.

ಗುಜರಾತ್ ಟೈಟಾನ್ಸ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿ
ಹಾರ್ದಿಕ್ ಪಾಂಡ್ಯ(ನಾಯಕ, ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಾಹ, ಮಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ಟಿವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಂಗ್ವಾನ್, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹಮ್ಮದ್

IPL Auction ಫ್ರಾಂಚೈಸಿಗಳ ನಿರಾಸಕ್ತಿ ನಡುವೆ 2.4 ಕೋಟಿಗೆ ಸೇಲ್ ಆದ ಕನ್ನಡಿಗ ಮನೀಶ್ ಪಾಂಡೆ!

ಕಳೆದ ಬಾರಿ ಐಪಿಎಲ್ ಟೂರ್ನಿಗೆ ಕಾಲಿಟ್ಟ ಗುಜರಾತ್ ಟೈಟಾನ್ಸ್, ಮೊದಲ ಪ್ರಯತ್ನದಲ್ಲೇ ಟ್ರೋಫಿ ಗೆದ್ದುಕೊಂಡಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಅದ್ಭುತ ಪ್ರದರ್ಶನದ ಮೂಲಕ ಚಾಂಪಿಯ್ ಪಟ್ಟ ಅಲಂರಿಸಿತು. ಇದೀಗ ಅತ್ಯುತ್ತಮ ಆಟಗಾರರ ಖರೀದಿ ಮೂಲಕ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಕೋಚ್ ಆಶಿಶ್ ನೆಹ್ರಾ ಮಾರ್ಗದರ್ಶನದಲ್ಲಿ ಗುಜರಾತ್ ಟೈಟಾನ್ಸ್ ಕಳೆದ ಆವೃತ್ತಿಯಲ್ಲಿ ಎದುರಿಸಿದ ಸಮಸ್ಸೆಗಳಿಗೆ ಈ ಹರಾಜಿನಲ್ಲಿ ಉತ್ತರ ಕಂಡುಕೊಳ್ಳುವ ಯತ್ನ ನಡೆಸಿದೆ. ಪಾಂಡ್ಯ ನಾಯಕತ್ವ, ನೆಹ್ರಾ ಮಾರ್ಗದರ್ಶನ ಜೊತೆಗೆ ಸಹ ಆಟಗಾರರ ಪ್ರದರ್ಶನ ಕಳೆದ ಬಾರಿ ಗುಜರಾತ್ ತಂಡದ ಕೈಹಿಡಿದಿತ್ತು. 

Follow Us:
Download App:
  • android
  • ios