Asianet Suvarna News Asianet Suvarna News

IPL Auction 2023 ನಾಮಕಾವಾಸ್ತೆಗೆ ಬಿಡ್ಡಿಂಗ್ ಮಾಡಿ ತೆಪ್ಪಗೆ ಕೂತ ಆರ್‌ಸಿಬಿ ಫುಲ್ ಟ್ರೋಲ್!

ಐಪಿಎಲ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ದು ಮಾಡುತ್ತಿಲ್ಲ. ಕನ್ನಡಿಗರ ಖರೀದಿ ಮಾಡದ ಸುಮ್ಮನೆ ಕೂತ ಆರ್‌ಸಿಬಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇಷ್ಟೇ ಅಲ್ಲ ಇಬ್ಬರು ಆಟಗಾರರನ್ನು ಖರೀದಿಸಿ ತೆಪ್ಪಗೆ ಕುಳಿತಿರುವ ಆರ್‌ಸಿಬಿ ಫುಲ್ ಟ್ರೋಲ್ ಆಗಿದೆ.

IPL Auction 2023 netizens trolls royal challengers bengaluru after poor show in players bidding ckm
Author
First Published Dec 23, 2022, 6:04 PM IST

ಕೊಚ್ಚಿ(ಡಿ.23): ಐಪಿಎಲ್ ಮಿನಿ ಹರಾಜಿನಲ್ಲಿ ಫ್ರಾಂಚೈಸಿಗಳು ಬಲಿಷ್ಠ ತಂಡ ಕಟ್ಟಲು ಎಲ್ಲಾ ಪ್ರಯತ್ನ ಮಾಡುತ್ತಿದೆ. ಉತ್ತಮ ಆಟಗಾರರನ್ನು ಖರೀದಿ ಮಾಡುವ ಮೂಲಕ ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ಪ್ರತಿಭಾನ್ವಿತ ಆಟಗಾರರ ಬಿಡ್ಡಿಂಗ್ ಆರಂಭಗೊಂಡ ಕೂಡಲೇ ಫ್ರಾಂಚೈಸಿಗಳು ಮುಗಿ ಬೀಳುತ್ತಿದೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹುಡುಕಿದರೂ ಸಿಗುತ್ತಿಲ್ಲ. ಬಹತೇಕ ತಂಡಗಳು ಖರೀದಿ ಸಾಧ್ಯವಾಗದಿದ್ದರೆ ಕನಿಷ್ಠ ಪ್ರಯತ್ನವನ್ನಾದರೂ ಮಾಡಿದೆ. ಆದರ ಆರ್‌ಸಿಬಿ ಮಾತ್ರ ತೆಪ್ಪಗೆ ಮೂಲೆಯಲ್ಲಿ ಕುಳಿತು ಇತರರ ಬಿಡ್ಡಿಂಗ್ ನೋಡಿದೆ. ಕೊನೆಗೆ ನಾಮಕವಾಸ್ತೆಗೆ ಇಬ್ಬರು ಆಟಗಾರರನ್ನು ಖರೀದಿಸಿ ಸುಮ್ಮನಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಫುಲ್ ಟ್ರೋಲ್ ಆಗುತ್ತಿದೆ. 

ಆರ್‌ಸಿಬಿ ಇದುವರೆಗೆ ಇಬ್ಬರು ಆಟಗಾರರನ್ನು ಖರೀದಿಸಿದೆ. 1.90 ಕೋಟಿ ರೂಪಾಯಿ ನೀಡಿ ಇಂಗ್ಲೆಂಡ್ ಎಡಗೈ ವೇಗಿ ರೀಸ್ ಟಾಪ್ಲೆ ಖರೀದಿಸಿದೆ. ಇನ್ನು 20 ಲಕ್ಷ ರೂಪಾಯಿ ಮೂಲ ಬೆಲೆಗೆ ಅನ್ ಕ್ಯಾಪ್ ಪ್ಲೇಯರ್ ಹಿಮಾಂಶು ಶರ್ಮಾ ಅವರನ್ನು ಆರ್‌ಸಿಬಿ ಖರೀದಿಸಿದೆ. ಇದಾದ ಬಲಿಕ ಇಂಗ್ಲೆಂಡ್ ಬ್ಯಾಟ್ಸ್‌ಮನ್ ವಿಲ್ ಜ್ಯಾಕ್ಸ್‌ಗೆ 3.20 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ.

IPL 2023 Mini Auction Live Updates: ಕನ್ನಡಿಗರನ್ನು ಖರೀದಿಸಲು ಐಪಿಎಲ್ ಫ್ರಾಂಚೈಸಿಗಳು ನಿರಾಸಕ್ತಿ.

ಹಲವು ಚಿತ್ರಗಳ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲೂ ವಿಶೇಷವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಆಡಿರುವ ಹೇಳಿಕೆ ವಿಡಿಯೋ ಬಾರಿ ವೈರಲ್ ಆಗಿದೆ. ನಾನು ಬಡವ, ನನ್ನ ಹತ್ರ ದುಡ್ಡಿಲ್ಲ ಅನ್ನೋ ವಿಡಿಯೋ ಆರ್‌ಸಿಬಿಯ ಸದ್ಯದ ಪರಿಸ್ಥಿತಿಗೆ ತಕ್ಕಂತಿದೆ.

 

 

2023ರ ಮಿನಿ ಹರಾಜಿನಲ್ಲಿ ಈವರೆಗೆ ಆರ್‌ಸಿಬಿ ಖರೀದಿಸಿದ ಆಟಗಾರರ ವಿವರ
ವಿಲ್ ಜಾಕ್ಸ್, 3.2 ಕೋಟಿ ರೂಪಾಯಿ
ರೀಸ್ ಟಾಪ್ಲೆ, 1.90 ಕೋಟಿ ರೂಪಾಯಿ
ಹಿಮಾಂಶು ಶರ್ಮಾ, 20 ಲಕ್ಷ ರೂಪಾಯಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖ್ಯವಾಗಿ ಆರಂಬಿಕ ಬ್ಯಾಟ್ಸ್‌ಮನ್, ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್ ಅವಶ್ಯಕತೆ ಇದೆ. ಆದರೆ ಪ್ರಮುಖ ಪ್ಲೇಯರ್ ಆಗಿ ಎಡಗೈ ವೇಗಿ ಖರೀದಿಸಿದೆ. ಕೊನೆಯ ಹಂತದಲ್ಲಿ ವಿಲ್ ಜ್ಯಾಕ್ಸ್ ಖರೀದಿಸಿ ತಂಡದ ಸಮತೋಲನಕ್ಕೆ ತಯಾರಿ ಮಾಡಿಕೊಂಡಿದೆ.

 

 

ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಆಟಗಾರರ ಪೈಕಿ ಜಮ್ಮು-ಕಾಶ್ಮೀರ ಕ್ರಿಕೆಟ್‌ ಸಂಸ್ಥೆಯ 21 ಆಟಗಾರರು ಇದ್ದಾರೆ. ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ 16 ಆಟಗಾರರು ಅದೃಷ್ಟಪರೀಕ್ಷೆ ನಡೆಸಲಿದ್ದಾರೆ. ತಮಿಳುನಾಡು, ಉತ್ತರಪ್ರದೇಶ, ದೆಹಲಿ ಕ್ರಿಕೆಟ್‌ ಸಂಸ್ಥೆಗಳೂ ತಲಾ 16 ಆಟಗಾರರ ಹೆಸರು ನೋಂದಾಯಿಸಿವೆ. 

 

Follow Us:
Download App:
  • android
  • ios