ಐಪಿಎಲ್ 2023 ಟೂರ್ನಿಯಲ್ಲಿ ಡೆಲ್ಲಿ ಹಾಗೂ ಸನ್‌ರೈಸರ್ಸ್ ತಲಾ 7 ಪಂದ್ಯಗಳನ್ನು ಆಡಿದೆ. ಆದರೆ ಕೇವಲ 2 ಗೆಲುವು ಮಾತ್ರ ಕಂಡಿದೆ. ಇಂದು ಗೆಲ್ಲಲೇಬೇಕಾದ ಒತ್ತಡ ಎರಡೂ ತಂಡದಲ್ಲಿ. ಡೆಲ್ಲಿ ಮೈದಾನದಲ್ಲಿ ಟಾಸ್ ಗೆದ್ದವರೇ ಬಾಸ್ ಆಗ್ತಾರಾ?

ನವ​ದೆ​ಹ​ಲಿ(ಏ.29): 16ನೇ ಆವೃತ್ತಿ ಐಪಿ​ಎ​ಲ್‌​ನ ಅಂಕ​ಪ​ಟ್ಟಿ​ಯಲ್ಲಿ ಕೊನೆ 2 ಸ್ಥಾನ​ಗ​ಳ​ಲ್ಲಿ​ರುವ ತಂಡ​ಗ​ಳಾದ ಸನ್‌​ರೈ​ಸ​ರ್‍ಸ್ ಹೈದ​ರಾ​ಬಾದ್‌ ಹಾಗೂ ಡೆಲ್ಲಿ ಕ್ಯಾಪಿ​ಟಲ್ಸ್‌ ಕೇವಲ 6 ದಿನ​ಗಳ ಅಂತ​ರ​ದಲ್ಲಿ ಶನಿ​ವಾರ ಮತ್ತೊಮ್ಮೆ ಮುಖಾ​ಮುಖಿ​ಯಾ​ಗ​ಲಿವೆ. ಏ.24ಕ್ಕೆ ನಡೆ​ದಿದ್ದ ಪಂದ್ಯ​ದಲ್ಲಿ ಡೆಲ್ಲಿ ತಂಡ ಹೈದ್ರಾ​ಬಾ​ದನ್ನು ಅದರ ತವ​ರಿ​ನಲ್ಲೇ ಮಣಿ​ಸಿತ್ತು. ಈಗ ತನ್ನ ತವ​ರಿಗೆ ಮರ​ಳಿ​ರುವ ಡೆಲ್ಲಿ ಹ್ಯಾಟ್ರಿಕ್‌ ಜಯದ ನಿರೀ​ಕ್ಷೆ​ಯ​ಲ್ಲಿದ್ದರೆ, ಹೈ​ದ್ರಾ​ಬಾ​ದ್‌ ಸತತ 4ನೇ ಸೋಲು ತಪ್ಪಿ​ಸಲು ಕಾಯು​ತ್ತಿದೆ. ಡೆಲ್ಲಿ ತವ​ರಿ​ನಲ್ಲಿ ಆಡಿದ ಎಲ್ಲಾ 3 ಪಂದ್ಯ ಸೋತಿ​ದ್ದು, ಮೊದಲ ಜಯಕ್ಕಾಗಿ ಹಪಹಪಿಸುತ್ತಿದೆ.

ತಲಾ 7 ಪಂದ್ಯ​ಗ​ಳಲ್ಲಿ ಬರೀ 2 ಪಂದ್ಯ ಗೆದ್ದಿ​ರುವ ಉಭಯ ತಂಡ​ಗ​ಳಿಗೂ ಇದು ನಿರ್ಣಾ​ಯಕ ಪಂದ್ಯ. ಉಳಿ​ದೆಲ್ಲಾ ಪಂದ್ಯ ಗೆಲ್ಲ​ಲೇ​ಬೇ​ಕಾದ ಒತ್ತ​ಡ​ದ​ಲ್ಲಿ​ದ್ದರೂ ಇತ್ತಂಡ​ಗಳೂ ಎಲ್ಲಾ ವಿಭಾ​ಗ​ದಲ್ಲೂ ಸಮ​ಸ್ಯೆ​ಗಳ ಸುಳಿ​ಯಲ್ಲೇ ನರ​ಳಾ​ಡು​ತ್ತಿವೆ. ಹೀಗಾಗಿ ಪಂದ್ಯ ಗೆಲ್ಲು​ವು​ದರ ಜೊತೆಗೆ ಉತ್ತಮ ತಂಡ ಸಂಯೋ​ಜ​ನೆ​ಯೊಂದಿದೆ ಟೂರ್ನಿಯ ದ್ವಿತೀ​ಯಾ​ರ್ಧಕ್ಕೆ ಪ್ರವೇ​ಶಿ​ಸಲು ಕಾಯು​ತ್ತಿವೆ.

IPL 2023: ಬರೋಬ್ಬರಿ 458 ರನ್‌ ದಾಖಲಾದ ಪಂದ್ಯದಲ್ಲಿ ಲಕ್ನೋ ಸೂಪರ್‌ ವಿನ್‌!

ಡೆಲ್ಲಿ ಮೈದಾನದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆಮಾಡಿಕೊಳ್ಳಲು ಬಯಸುತ್ತಾರೆ. ಡೆಲ್ಲಿ ಹಾಗೂ ಐ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೇಸಿಂಗ್ ತಂಡಗಳು ಹೆಚ್ಚಿನ ಯಶಸ್ಸು ಕಂಡಿದೆ. ಡೆಲ್ಲಿಯಲ್ಲಿ ಮಳೆಯ ಕಾರ್ಮೋಡವೂ ಇದೆ. ಕೋಟ್ಲಾ ಪ್ರದೇಶದಲ್ಲಿ ಸದ್ಯ ಮಳೆಯ ಸೂಚನೆ ಇಲ್ಲ. ಆದರೆ ವಕ್ಕರಿಸಿದರೂ ಆಚ್ಚರಿ ಇಲ್ಲ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಹಾಗೂ ರೈಸರ್ಸ್ ತಂಡ ಅದೆಷ್ಟೆ ಹೋರಾಟ ನೀಡಿದರೂ ಗಲುವು ಮಾತ್ರ ಸಿಗುತ್ತಿಲ್ಲ. ಇಂದಿನ ಸೋತವರ ಹೋರಾಟದಲ್ಲಿ ಯಾರಿಗೆ ಗೆಲುವು ಅನ್ನೋ ಕುತೂಹಲ ಇದೀಗ ಹೆಚ್ಚಾಗಿದೆ. ಉಭಯ ತಂಡಗಳು ಸಮಬಲದ ಹೋರಾಟ ನೀಡಿದೆ. 

ಮುಖಾ​ಮುಖಿ: 22
ಹೈದ್ರಾ​ಬಾ​ದ್‌: 11
ಡೆಲ್ಲಿ: 11

ಸಂಭವನೀಯ ಆಟಗಾರರ ಪಟ್ಟಿ
ಹೈದ್ರಾ​ಬಾ​ದ್‌: ಮಯಾಂಕ್‌, ಬ್ರೂಕ್‌, ತ್ರಿಪಾಠಿ, ಮಾರ್ಕ್ರಮ್‌(ನಾಯಕ), ಅಭಿ​ಷೇಕ್‌, ಕ್ಲಾಸೆನ್‌, ಯಾನ್ಸೆನ್‌, ಸಮದ್‌, ಮಾರ್ಕಂಡೆ, ಭುವಿ, ನಟರಾಜನ್‌, ಉಮ್ರಾ​ನ್‌.

Royal Challengers Bangalore: ಲಕ್ನೋ ಅಬ್ಬರದ ನಡುವೆ 'ಓನ್ಲಿ ಆರ್‌ಸಿಬಿ' ಟ್ವಿಟರ್‌ನಲ್ಲಿ ಫುಲ್‌ ಟ್ರೆಂಡ್‌!

ಡೆಲ್ಲಿ: ವಾರ್ನರ್‌(ನಾಯಕ), ಪೃಥ್ವಿ ಶಾ, ಸಾಲ್ಟ್‌, ಮಾಷ್‌ರ್‍, ಮನೀಶ್‌, ಸರ್ಫ​ರಾಜ್‌, ಅಕ್ಷರ್‌ ಪಟೇ​ಲ್‌, ಲಲಿತ್‌, ಅಮಾನ್‌, ನೋಕಿಯಾ, ಕುಲ್ದೀಪ್‌, ಇಶಾಂತ್‌ ಶರ್ಮಾ.

ಪಂದ್ಯ: ಸಂಜೆ 7.30ಕ್ಕೆ 

ಪಿಚ್‌ ರಿಪೋರ್ಚ್‌
ಅರುಣ್‌ ಜೇಟ್ಲಿ ಕ್ರೀಡಾಂಗ​ಣ ಸ್ಪರ್ಧಾತ್ಮಕ ಕ್ರಿಕೆ​ಟ್‌ಗೆ ಹೆಸ​ರು​ವಾಸಿ. ದೊಡ್ಡ ಮೊತ್ತ ದಾಖ​ಲಾ​ಗುವ ಸಾಧ್ಯತೆ ಕಡಿಮೆ. ಇಲ್ಲಿ ನಡೆದ ಮೂರು ಪಂದ್ಯ​ಗ​ಳಲ್ಲೂ ಚೇಸಿಂಗ್‌ ಮಾಡಿದ ತಂಡ ಜಯ​ಗ​ಳಿ​ಸಿದೆ. 180+ ರನ್‌ ಗಳಿ​ಸಿ​ದ​ರಷ್ಟೇ ರಕ್ಷಿ​ಸಿ​ಕೊ​ಳ್ಳ​ಬ​ಹುದು.