ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ಮೂಲಕ 3ನೇ ಸ್ಥಾನ ಅಲಂಕರಿಸಿದೆ. ಇದೀಗ ಅಗ್ರಸ್ಥಾನಕ್ಕೇರಲು ಹವಣಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್, ಕೆಕೆಆರ್ ವಿರುದ್ಧ ಹೋರಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕೆಕೆಆರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಕೋಲ್ಕತಾ(ಏ.23): ಐಪಿಎಲ್ ಟೂರ್ನಿ ಇದೀಗ ಮಹತ್ವದ ಘಟ್ಟ ತಲುಪಿದೆ. ಇದೀಗ ಪ್ರತಿ ಪಂದ್ಯವೂ ಮುಖ್ಯವಾಗುತ್ತಿದೆ. ಇಂದು ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಲಿಟ್ಟನ್ ಬದಲು ವೀಸ್ ತಂಡ ಸೇರಿಕೊಂಡಿದ್ದಾರೆ. ಮನ್ದೀಪ್ ಬದಲು ಜಗದೀಶನ್ ತಂಡ ಸೇರಿಕೊಂಡಿದ್ದಾರೆ. 

ಕೋಲ್ಕತಾ ನೈಟ್ ರೈಡರ್ಸ್ ಪ್ಲೇಯಿಂಗ್ 11
ಎನ್ ಜಗದೀಶನ್, ಜೇಸನ್ ರಾಯ್, ನಿತೀಶ್ ರಾಣ(ನಾಯಕ), ಆ್ಯಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಡೇವಿಡ್ ವೀಸೆ, ಕುಲ್ವಂತ್ ಖೆಜ್ರೋಲಿಯಾ, ಸೂಯಶ್ ಶರ್ಮಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ

IPL 2023 ಏಪ್ರಿಲ್ 23 ಕೊಹ್ಲಿಗೆ ಅನ್‌ಲಕ್ಕಿ, ಈ ದಿನ ಶೂನ್ಯಕ್ಕೆ ಔಟಾಗಿದ್ದೇ ಹೆಚ್ಚು!

ಸಿಎಸ್‌ಕೆ ಪ್ಲೇಯಿಂಗ್ 11
ರುತುರಾತ್ ಗಾಯಕ್ವಾಡ್, ಡೇವೋನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಆಲಿ, ಅಂಬಾಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂ.ಎಸ್.ಧೋನಿ(ನಾಯಕ), ಮತೀಶಾ ಪಥಿರಾನಾ, ತುಷಾರ್ ದೇಶಪಾಂಡೆ, ಮಹೀಶಾ ತೀಕ್ಷಾನಾ 

ಚೆನ್ನೈ ಸೂಪರ್ ಕಿಂಗ್ಸ್ ಆಡಿದ 6 ಪಂದ್ಯದಲ್ಲಿ 4ರಲ್ಲಿ ಗೆಲುವು ಹಾಗೂ 2ರಲ್ಲಿ ಸೋಲು ಕಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ವಿರುದ್ಧ ಮುಗ್ಗರಿಸಿತ್ತು. ಬಳಿಕ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 12 ರನ್ ಗೆಲುವು ದಾಖಲಿಸಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಗೆಲುವು ದಾಖಲಿಸಿ ಸತತ 2ನೇ ಗೆಲುವು ಕಂಡಿತ್ತು. ಆದರೆ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲು ಕಂಡಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ 8 ರನ್ ಗೆಲುವು ಕಂಡ ಸಿಎಸ್‌ಕೆ, ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ 7 ವಿಕೆಟ್ ಗೆಲುವು ದಾಖಲಿಸಿದೆ.

ಕ್ರಿಕೆಟ್‌ ಬದುಕಿನ ಕೊನೆ ಹಂತದಲ್ಲಿದ್ದೇನೆ: ನಿವೃತ್ತಿಯ ಸುಳಿವು ಕೊಟ್ರಾ ಧೋನಿ?

ಕೋಲ್ಕತಾ ನೈಟ್ ರೈಡರ್ಸ್ ಆಡಿದ 6 ಪಂದ್ಯದಲ್ಲಿ 2 ಗೆಲುವು ದಾಖಲಿಸಿದ್ದರೆ, 4 ಪಂದ್ಯದಲ್ಲಿ ಸೋಲು ಕಂಡಿದೆ. ಕಳೆದ 3 ಪಂದ್ಯದಲ್ಲಿ ಕೋಲ್ಕತಾ ಸೋಲಿಗೆ ಗುರಿಯಾಗಿದೆ. ಫಾರ್ಮ್ ಕಳೆದುಕೊಂಡಿರುವ ಕೆಕೆಆರ್ ಇದೀಗ ಗೆಲುವಿಗಾಗಿ ಹೋರಾಟ ನಡೆಸಲಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲುಂಡ ಕೆಕೆಆರ್, ಬಳಿಕ ಎರಡು ಪಂದ್ಯದಲ್ಲಿ ಗೆಲುವಿನ ನಗೆ ಬೀರಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ವಿರುದ್ದ ಗೆಲುವು ದಾಖಲಿಸಿತ್ತು. ಆದರೆ ಬಳಿಕ ಸತತ ಸೋಲಿಗೆ ಗುರಿಯಾಗಿದೆ. ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸೋಲು ಕಂಡಿದೆ.

ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಮಹತ್ವದ ಪಂದ್ಯ ಕೇವಲ 2 ಗೆಲುವು ಕಂಡಿರುವ ಕೆಕೆಆರ್ ಪ್ರತಿ ಪಂದ್ಯದಲ್ಲೂ ಗೆಲುವಿನ ಲಯ ಕಂಡುಕೊಳ್ಳಬೇಕಿದೆ. ಹೀಗಾಗಿ ಇಂದು ಚೆನ್ನೈ ವಿರುದ್ಧ ಜಿದ್ದಾಜಿದ್ದಿನ ಹೋರಾಟ ನೀಡಲಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಗೆಲುವಿನ ಲಯದಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದೆ.