ಸತತ ಸೋಲಿನಿಂದ ಕಂಗೆಟ್ಟಿರುವ ಡೆಲ್ಲಿ ಹಾಗೂ ಮುಂಬೈ ಇಂಡಿಯನ್ಸ್ ಇದೀಗ ಮೊದಲ ಗೆಲುವಿಗೆ ಹಾತೊರೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ದೆಹಲಿ(ಏ.11): ಡೆಲ್ಲಿ ಕ್ಯಾಪಿಟಲ್ಸ್ ಸತತ 3 ಸೋಲು, ಮುಂಬೈ ಇಂಡಿಯನ್ಸ್ ಸತತ 2 ಸೋಲು. ಐಪಿಎಲ್ 2023 ಟೂರ್ನಿ ಆರಂಭಗೊಂಡು 15 ಪಂದ್ಯಗಳು ನಡೆದಿದೆ. ಆದರೆ ಇದುವರೆಗೂ ಡೆಲ್ಲಿ ಹಾಗೂ ಮುಂಬೈ ಗೆಲುವಿನ ಸಿಹಿ ಕಂಡಿಲ್ಲ. ಇಂದು ಈ ಎರಡು ತಂಡಗಳ ಮುಖಾಮುಖಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಸ್ಟಬ್ಸ್ ಬದಲು ರಿಲೆ ಮೆರಿಡಿತ್ ತಂಡ ಸೇರಿಕೊಂಡಿದ್ದಾರೆ. ಡೆಲ್ಲಿ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಖಲೀಲ್ ಅಹಮ್ಮದ್ ಬದಲು ಯಶ್ ಯದಾಳ್ ತಂಡ ಸೇರಿಕೊಂಡರೆ, ರಿಲೆ ರೂಸೊ ಬದಲು ಮುಸ್ತಾಫಿಜುರ್ ರಹಮಾನ್ ತಂಡ ಸೇರಿಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಅಡಿರುವ ಮೂರೂ ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇತ್ತ ಮುಂಬೈ ಇಂಡಿಯನ್ಸ್ 9ನೇ ಸ್ಥಾನದಲ್ಲಿದೆ. ಅಂಕಪಟ್ಟಿಯ ಕೊನೆಯ ಎರಡು ಸ್ಥಾನದಲ್ಲಿರುವ ಡೆಲ್ಲಿ ಹಾಗೂ ಮುಂಬೈ ಹೋರಾಟಕ್ಕೆ ಸಜ್ಜಾಗಿದೆ. ಡೆಲ್ಲಿ ತನ್ನ ಮೊದಲ ಪಂದ್ಯವನ್ನು ಲಖನೌ ಸೂಪರ್ ಜೈಂಟ್ಸ್ ವಿರುದ್ಧ 50 ರನ್‌ಗಳಿಂದ ಸೋಲು ಕಂಡಿತ್ತು. ದ್ವಿತೀಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ದ ಗೆಲುವಿನ ವಿಶ್ವಾಸದಲ್ಲಿ ಕಣಕ್ಕಿಳಿದಿತ್ತು. ಆದರೆ ಗುಜರಾತ್ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಇತ್ತ ಮೂರನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ ಮುಗ್ಗರಿಸಿತ್ತು. ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತೀವ್ರ ಟೀಕೆಗೆ ಗುರಿಯಾಗಿದೆ. ಇತ್ತ ವಾರ್ನರ್ ನಾಯಕತ್ವವನ್ನು ಟೀಕಿಸಲಾಗುತ್ತಿದೆ.
ಹೆಲ್ಮೆಟ್ ಎಸೆದು ಅನುಚಿತವಾಗಿ ವರ್ತಿಸಿದ ಆವೇಶ್ ಖಾನ್‌ಗೆ ವಾರ್ನಿಂಗ್..! ಫಾಫ್ ಡು ಪ್ಲೆಸಿಸ್‌ಗೂ ಶಾಕ್
ಮುಂಬೈ ಇಂಡಿಯನ್ಸ್ ಸತತ 2 ಸೋಲು ಕಂಡಿದೆ. ಆದರೆ ಪ್ರತಿ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಆರಂಭಿಕ ಪಂದ್ಯ ಕೈಚೆಲ್ಲಿ ಬಳಿಕ ಎಲ್ಲಾ ಪಂದ್ಯ ಗೆದ್ದು ಟ್ರೋಫಿ ಗೆದ್ದ ಉದಾಹರಣೆ ಇದೆ. ಮುಂಬೈ ಇಂಡಿಯನ್ಸ್ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಿ ಸೋತಿತ್ತು. ದ್ವಿತೀಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಆಡಿತ್ತು. ಈ ಪಂದ್ಯದಲ್ಲಿ ಮುಂಬೈ ಸೋಲಿನ ಕಹಿ ಅನುಭವಿಸಿತ್ತು.
ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ: ಕೊನೆಗೂ ನಿಟ್ಟುಸಿರು ಬಿಟ್ಟ ಆರೋಪಿ
ಅಂಕಪಟ್ಟಿ
ಐಪಿಎಲ್ 2023 ಅಂಕಪಟ್ಟಿಯಲ್ಲಿ ಲಖನೌ ಸೂಪರ್ ಜೈಂಟ್ಸ್ 4ರಲ್ಲಿ 3 ಪಂದ್ಯ ಗೆದ್ದ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ ಆಡಿದ 3 ಪಂದ್ಯದಲ್ಲಿ 2ರಲ್ಲಿ ಗೆಲುವು ದಾಖಲಿಸಿ 2ನೇ ಸ್ಥಾನ ಅಲಂಕರಿಸಿದೆ. ಇತ್ತ ಕೋಲ್ಕತಾ ನೈಟ್ ರೈಡರ್ಸ್ ಕೂಡ 3ರಲ್ಲಿ 2 ಗೆಲುವು ಕಂಡಿದೆ. ಈ ಮೂಲಕ 3ನೇ ಸ್ಥಾನ ಅಲಂಕರಿಸಿದೆ. 2 ಪಂದ್ಯ ಗೆದ್ದು 4 ಅಂಕಗಳಿಸಿರುವ ಗುಜರಾತ್ ಟೈಟಾನ್ಸ್ 4ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ 3ರಲ್ಲಿ 2 ಗೆಲುವು ದಾಖಲಿಸಿ 5ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 2 ಗೆಲುವಿನೊಂದಿಗೆ 6ನೇ ಸ್ಥಾದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಗೆಲುವು ಸಾಧಿಸಿ, ಬಳಿಕ 2 ಪಂದ್ಯದಲ್ಲಿ ಮುಗ್ಗರಿಸಿತು. ಈ ಮೂಲಕ 7ನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ 3 ಪಂದ್ಯದಲ್ಲಿ 1 ಗೆಲುವು ಸಾಧಿಸಿ 8ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ಆಡಿದ 2 ಪಂದ್ಯ ಸೋತು 9ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 3 ಪಂದ್ಯದಲ್ಲಿ ಮೂರರಲ್ಲೂ ಸೋಲು ಕಂಡು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
