Asianet Suvarna News Asianet Suvarna News

IPL 2022 ರಾಜಸ್ಥಾನ ರಾಯಲ್ಸ್ ವಿರುದ್ಧ ಮುಗ್ಗರಿಸಿದ ಲಖನೌ ಸೂಪರ್ ಜೈಂಟ್ಸ್

  • ರಾಜಸ್ಥಾನ ರಾಯಲ್ಸ್ ತಂಡಕ್ಕೆ ರನ್ ಗೆಲುವು
  • ವಾಂಖೆಡೆ ಕ್ರೀಡಾಂಗಣದಲ್ಲಿ ಚೇಸಿಂಗ್ ಮಾಡಿ ಸೋತ ಲಖನೌ
  • ಸಂಜು ಸ್ಯಾಮ್ಸನ್ ಪಡೆಗೆ ಒಲಿದ ಜಯ
IPL 2022 Yuzvendra Chahal help Rajasthan Royals to beat Lucknow Super Giants by 3 runs ckm
Author
Bengaluru, First Published Apr 10, 2022, 11:42 PM IST | Last Updated Apr 10, 2022, 11:42 PM IST

ಮುಂಬೈ(ಏ.10): ಯಜುವೇಂದ್ರ ಚಹಾಲ್ ಸ್ಪಿನ್ ಮೋಡಿ, ಟ್ರೆಂಟ್ ಬೋಲ್ಡ್ ವೇಗದ ದಾಳಿಗೆ ಲಖನೌ ಸೂಪರ್ ಜೈಂಟ್ಸ್ ತಂಡ ರಾಜಸ್ಥಾನ ರಾಯಲ್ಸ್ ನೀಡಿದ 166 ರನ್ ಟಾರ್ಗೆಟ್ ಚೇಸ್ ಮಾಡಲು ವಿಫಲವಾಗಿದೆ. ಸ್ಪೋಟಕ ಬ್ಯಾಟ್ಸ್‌ಮನ್ ಹೊಂದಿರುವ ಲಖನೌ ಸೋಲಿಗೆ ಶರಣಾಗಿದೆ. ವಾಂಖೆಡೆಯಲ್ಲಿ ಚೇಸಿಂಗ್ ತಂಡಕ್ಕೆ ಹೆಚ್ಚಿನ ಗೆಲುವಿನ ಸಾಧ್ಯತೆ ಅನ್ನೋ ಲೆಕ್ಕಾಚಾರವನ್ನು ರಾಜಸ್ಥಾನ ಉಲ್ಟಾ ಮಾಡಿದೆ.

ಟಾರ್ಗೆಟ್ 166 ರನ್. ಆದರೆ  0,0,8 ಇದು ರಾಜಸ್ಥಾನ ರಾಯಲ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ತಂಡದ ಟಾಪ್ ಬ್ಯಾಟ್ಸ್‌ಮನ್ ಸ್ಕೋರ್.  ಕೆಎಲ್ ರಾಹುಲ್ ಡಕೌಟ್,  ಕೆ ಗೌತಮ್ ಡಕೌಟ್,ಜೇಸನ್  ಹೋಲ್ಡರ್ 8 ರನ್ ಸಿಡಿಸಿ ನಿರ್ಗಮಿಸಿದರು. 14 ರನ್ ಗಳಿಸುವಷ್ಟರಲ್ಲೇ  ಲಖನೌ ಸೂಪರ್ ಜೈಂಟ್ಸ್ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ರಾಜಸ್ಛಾನ ರಾಯಲ್ಸ್ ಆರಂಭಿಕ ಹಂತದಲ್ಲಿ ಬಹುಬೇಗನೆ ವಿಕೆಟ್ ಕಳೆದುಕೊಂಡಿತ್ತು. ಆದರೆ ಅಂತಿಮ ಹಂತದಲ್ಲಿನ ಜೊತೆಯಾಟದಿಂದ ಉತ್ತಮ ಮೊತ್ತ ಪೇರಿಸಿತು. ಇತ್ತ ಆರಂಭಿಕ ಕ್ವಿಂಟನ್ ಡಿಕಾಕ್ ಹೋರಾಟ ನೀಡಿದರು. ದೀಪಕ್ ಹೂಡ ಹಾಗೂ ಡಿಕಾಕ್ ಹೋರಾಟದಿಂದ ಲಖನೌ ಕೊಂಚ ಚೇತರಿಸಿಕೊಂಡಿತು. ಆದರೆ ಹೂಡ 25 ರನ್ ಸಿಡಿಸಿ ಔಟಾದರು. 

ಪ್ರತಿ ಪಂದ್ಯದಲ್ಲಿ ಅಬ್ಬರಿಸಿದ ಆಯುಷ್ ಬದೋನಿ ಕೇವಲ 5 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಆಸರೆಯಾಗಿದ್ದ ಡಿಕಾಕ್ ವಿಕೆಟ್ ಪತನಗೊಂಡಿತು. ಡಿಕಾಕ್ 32 ಎಸೆತದಲ್ಲಿ 39 ರನ್ ಸಿಡಿಸಿ ಔಟಾದರು. ಇತ್ತ ಕ್ರುನಾಲ್ ಪಾಂಡ್ಯ 22 ರನ್ ಕಾಣಿಕೆ ನೀಡಿದರು.

ಲಖನೌ ಸೂಪರ್ ಜೈಂಟ್ಸ್ ಗೆಲುವಿಗೆ ಅಂತಿಮ 18 ಎಸೆತದಲ್ಲಿ 49 ರನ್ ಅವಶ್ಯಕತೆ ಇತ್ತು. ಮಾರ್ಕಸ್ ಸ್ಟೊಯ್ನಿಸ್ ಹಾಗೂ ದುಷ್ಮಂತ ಚಮೀರಾ ಮೇಲೆ ಹೆಚ್ಚಿನ ಒತ್ತಡ ಬಿದ್ದಿತು. ಚಮೀರಾ 13 ರನ್ ಸಿಡಿಸಿ ಔಟಾದರು. ಸ್ಟೋಯ್ನಿಸ್ ಅಬ್ಬರಿಂದ ಲಖನೌ ಗೆಲುವಿಗೆ ಅಂತಿಮ 6 ಎಸೆತದಲ್ಲಿ 15 ರನ್ ಬೇಕಿತ್ತು. ಸ್ಟೋಯ್ನಿಸ್ 17 ಎಸೆತದಲ್ಲಿ ಅಜೇಯ 38 ರನ್ ಸಿಡಿಸಿದರು. ಈ ಮೂಲಕ ಲಖನೌ 8 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು. ಈ ಮೂಲಕ ಸೋಲಿಗೆ ಶರಣಾಯಿತು. ರಾಜಸ್ಥಾನ ರಾಯಲ್ಸ್ 3 ವಿಕೆಟ್ ಗೆಲುವು ದಾಖಲಿಸಿತು.

ರಾಜಸ್ಥಾನ ರಾಯಲ್ಸ್ ಇನ್ನಿಂಗ್ಸ್
ಆರಂಭದಲ್ಲಿ ಆಘಾತ ಅನುಭವಿಸಿದ ರಾಜಸ್ಥಾನ ರಾಯಲ್ಸ್ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ 6 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅಬ್ಬರಿಸಲಿಲ್ಲ. ಜೋಸ್ ಬಟ್ಲರ್ 13 ರನ್ ಸಿಡಿಸಿ ಔಟಾದರು.ನಾಯಕ ಸಂಜು ಸ್ಯಾಮ್ಸನ್ ಕೇವಲ 13 ರನ್ ಸಿಡಿಸಿ ಔಟಾದರು. ವ್ಯಾಂಡರ್ ಡುಸೆನ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು. 

ದೇವದತ್ ಪಡಿಕ್ಕಲ್ 29 ಎಸೆತದಲ್ಲಿ 29 ರನ್ ಸಿಡಿಸಿ ಔಟಾದರು. 67 ರನ್‌ಗೆ 4 ವಿಕೆಟ್ ಕಳೆದುಕೊಂಡು ರಾಜಸ್ಥಾನ ರಾಯಲ್ಸ್‌ಗೆ ಶಿಮ್ರೊನ್ ಹೆಟ್ಮೆಯರ್ ಸ್ಪೋಟಕ ಬ್ಯಾಟಿಂಗ್  ನೆರವಾಯಿತು. ಆರ್ ಅಶ್ವಿನ್ ಉತ್ತಮ ಸಾಥ್ ನೀಡಿದರು. ಶಿಮ್ರೊನ್ ಹೆಟ್ಮೆಯರ್ 36 ಎಸೆತದಲ್ಲಿ 1 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದರು. ಹೆಟ್ಮೆಯರ್ ಅಜೇಯ 59 ರನ್ ಸಿಡಿಸಿದರು. ಆರ್ ಅಶ್ವಿನ್ 28 ರನ್ ಕಾಣಿಕೆ ನೀಡಿದರು. 

Latest Videos
Follow Us:
Download App:
  • android
  • ios