Asianet Suvarna News Asianet Suvarna News

ಉಮ್ರಾನ್ ಮಲಿಕ್ ಪ್ರಬುದ್ಧರಾಗಲು ಮತ್ತಷ್ಟು ಸಮಯ ಬೇಕು ಎಂದ ಟೀಂ ಇಂಡಿಯಾ ವೇಗಿ..!

* ಮಾರಕ ದಾಳಿ ಮೂಲಕ ಗಮನ ಸೆಳೆದಿರುವ ಉಮ್ರಾನ್ ಮಲಿಕ್

* ಐಪಿಎಲ್ ಟೂರ್ನಿಯಲ್ಲಿ 157 ಕಿಲೋ ಮೀಟರ್‌ ವೇಗದಲ್ಲಿ ಬೌಲಿಂಗ್‌ ಮಾಡಿರುವ ಉಮ್ರಾನ್ ಮಲಿಕ್

* 11 ಪಂದ್ಯಗಳಿಂದ ಉಮ್ರಾನ್ ಮಲಿಕ್ 15 ಬಲಿ ಪಡೆದಿರುವ ಉಮ್ರಾನ್ ಮಲಿಕ್

IPL 2022 Umran Malik has the pace but will take a little more time to get mature Says Mohammed Shami kvn
Author
Bengaluru, First Published May 14, 2022, 2:26 PM IST

ಮುಂಬೈ(ಮೇ.14): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಅತಿವೇಗದ ಬೌಲಿಂಗ್ ಮೂಲಕ ಗಮನ ಸೆಳೆದಿರುವ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ವೇಗಿ ಉಮ್ರಾನ್ ಮಲಿಕ್ (Umran Malik) ಕುರಿತಂತೆ ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ (Mohammed Shami) ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜಮ್ಮು-ಕಾಶ್ಮೀರ ಮೂಲದ ಯುವ ವೇಗಿ ಉಮ್ರಾನ್ ಮಲಿಕ್, ಈಗಾಗಲೇ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 157 ಕಿಲೋ ಮೀಟರ್‌ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಸೆಳೆದಿದ್ದು, ಉಮ್ರಾನ್ ಮಲಿಕ್ ಪರಿಪಕ್ವವಾಗಲು ಮತ್ತಷ್ಟು ಸಮಯ ಬೇಕು ಎಂದು ಶಮಿ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್‌ (IPL) ಇತಿಹಾಸದಲ್ಲಿ ಅತಿವೇಗದ ಬೌಲಿಂಗ್ ದಾಖಲೆ ಆಸ್ಟ್ರೇಲಿಯಾ ಮೂಲದ ಶಾನ್ ಟೈಟ್ ಹೆಸರಿನಲ್ಲಿದೆ. ಐಪಿಎಲ್‌ನಲ್ಲಿ ಶಾನ್ ಟೈಟ್ 157.3 ಕಿಲೋ ಮೀಟರ್‌ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಇದೀಗ ಉಮ್ರಾನ್ ಮಲಿಕ್ 157 ಕಿಲೋ ಮೀಟರ್‌ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಉಮ್ರಾನ್ ಮಲಿಕ್ ಕೇವಲ ವೇಗದ ಬೌಲಿಂಗ್ ಮಾತ್ರವಲ್ಲದೇ ಕರಾರುವಕ್ಕಾದ ಯಾರ್ಕರ್‌ ಮೂಲಕವೂ ಎದುರಾಳಿ ಬ್ಯಾಟರ್‌ಗಳನ್ನು ತಬ್ಬಿಬ್ಬುಗೊಳಿಸಿದ್ದಾರೆ. ಈಗಾಗಲೇ ಐಪಿಎಲ್‌ ಪಂದ್ಯವೊಂದರಲ್ಲಿ ಉಮ್ರಾನ್ ಮಲಿಕ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದುವರೆಗೂ 11 ಪಂದ್ಯಗಳಿಂದ ಉಮ್ರಾನ್ ಮಲಿಕ್ 15 ಬಲಿ ಪಡೆದಿದ್ದಾರೆ. 22 ವರ್ಷದ ಉಮ್ರಾನ್ ಮಲಿಕ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದು, ಸದ್ಯದಲ್ಲಿಯೇ ಟೀಂ ಇಂಡಿಯಾಗೆ ಎಂಟ್ರಿಕೊಡುವ ನಿರೀಕ್ಷೆಯಲ್ಲಿದ್ದಾರೆ.

ಇದೀಗ ಟೀಂ ಇಂಡಿಯಾ (Team India) ಅನುಭವಿ ವೇಗಿ ಮೊಹಮ್ಮದ್ ಶಮಿ, ಯುವ ವೇಗಿ ಉಮ್ರಾನ್ ಮಲಿಕ್ ಬಗ್ಗೆ ಮೆಚ್ಚುಗೆಯೆ ಮಾತುಗಳನ್ನಾಡಿದ್ದಾರೆ. ವೇಗಿಗಳಾದವರು ದೀರ್ಘಕಾಲದವರೆಗೆ ಮುನ್ನಡೆಯಬೇಕಾದರೆ ತಮ್ಮ ನಿಖರವಾಗಿ ಬೌಲಿಂಗ್ ಮಾಡಬೇಕು. ಸಮಯ ಕಳೆದಂತೆ ಲೈನ್ ಅಂಡ್ ಲೆಂಥ್ ಮೇಲೆ ಗಮನ ಹರಿಸಿದರೆ ಉತ್ತಮ ಬೌಲರ್‌ ಆಗಿ ಹೊರಹೊಮ್ಮಬಹುದು ಎಂದು ಶಮಿ ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಶಮಿ 12 ಪಂದ್ಯಗಳನ್ನಾಡಿ 16 ವಿಕೆಟ್ ಕಬಳಿಸಿದ್ದಾರೆ.

IPL 2022: ಸನ್‌ರೈಸರ್ಸ್‌‌, ಕೆಕೆಆರ್‌ಗಿಂದು ಮಾಡು ಇಲ್ಲವೇ ಮಡಿ ಪಂದ್ಯ..!

ಉಮ್ರಾನ್ ಮಲಿಕ್ ಬೌಲಿಂಗ್‌ನಲ್ಲಿ ಒಳ್ಳೆಯ ವೇಗವಿದೆ. ಆದರೆ ವೈಯುಕ್ತಿಕವಾಗಿ ನನ್ನ ಅಭಿಪ್ರಾಯವನ್ನು ಹೇಳುವುದಾದರೇ, ನಾನು ವೇಗದ ದೊಡ್ಡ ಅಭಿಮಾನಿಯಲ್ಲ. ನೀವು 140+ ವೇಗದಲ್ಲಿ ಸ್ವಿಂಗ್‌ ಬೌಲಿಂಗ್‌ ಮಾಡಿದರೂ ಸಾಕು ಬ್ಯಾಟರ್‌ಗಳನ್ನು ತಬ್ಬಿಬ್ಬು ಮಾಡಲು. ಉಮ್ರಾನ್ ಮಲಿಕ್ ಬಳಿ ಒಳ್ಳೆಯ ವೇಗವಿದೆ, ಒಂದಷ್ಟು ಸಮಯದ ಬಳಿಕ ಅವರು ಪ್ರಬುದ್ಧ ಬೌಲರ್‌ ಆಗಿ ಬೆಳೆಯಲಿದ್ದಾರೆ. ವೇಗದ ಬೌಲರ್‌ಗಳು ತಮ್ಮ ನಿಖರತೆಯತ್ತ ಕೂಡಾ ಗಮನ ನೀಡಬೇಕು ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇನ್ನುಳಿದ ಮೂರು ಸ್ಥಾನಗಳಿಗಾಗಿ ಉಳಿದ ತಂಡಗಳು ಸೆಣಸಾಟ ನಡೆಸುತ್ತಿವೆ. ಗುಜರಾತ್ ಟೈಟಾನ್ಸ್ ತಂಡವು ಪ್ಲೇ ಆಫ್‌ಗೇರುವಲ್ಲಿ ವೇಗಿ ಮೊಹಮ್ಮದ್ ಶಮಿ ಕೂಡಾ ತನ್ನದೇ ಆದ ಪಾತ್ರವನ್ನು ವಹಿಸಿದ್ದಾರೆ.

Follow Us:
Download App:
  • android
  • ios