* ಎಬಿ ಡಿವಿಲಿಯರ್ಸ್ ರೀತಿ ಕೊಹ್ಲಿ ಸಿಕ್ಕಿದ್ದಾರೆ ಮತ್ತೊಬ್ಬ ಫ್ರೆಂಡ್* ಫಾಫ್ ಡು ಪ್ಲೆಸಿಸ್-ಎಬಿಡಿ ಇಬ್ಬರೂ ಬಾಲ್ಯದ ಗೆಳೆಯರು* ಕಿಂಗ್ ಕೊಹ್ಲಿಗೆ ಮತ್ತಷ್ಟು ಹತ್ತಿರವಾದ ಫಾಫ್ ಡು ಪ್ಲೆಸಿಸ್
ಬೆಂಗಳೂರು(ಏ.06): ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League). ಇದು ಸ್ನೇಹತ್ವ ಬೆಸೆಯುವ ಬೆಸುಗೆ. ಆಟಗಾರರು ಬದ್ಧವೈರಿಗಳಾಗಿದ್ದರೂ ಐಪಿಎಲ್ ಆಡ್ತಿದ್ದಾರೆ ಅಂದ್ರೆ ಕ್ಲೋಸ್ ಫ್ರೆಂಡ್ಸ್ ಆಗಿಬಿಡ್ತಾರೆ. ಅದರಲ್ಲೂ ಒಂದೇ ತಂಡದಲ್ಲಿ ಇದ್ದಾರೆ ಅಂದ್ರೆ ಮುಗೀತು. ದೇಶ, ಭಾಷೆ ಎಲ್ಲಾ ಗಡಿಯನ್ನೂ ದಾಟಿಬಿಡುತ್ತೆ ಫ್ರೆಂಡ್ಶಿಪ್. RCB ಟೀಮ್ನಲ್ಲಿ ಬೆಸ್ಟ್ ಫ್ರೆಂಡ್ಸ್ ಇದ್ದಾರೆ. ಆ ಮೂವರ ಫ್ರೆಂಡ್ಶಿಪ್ ತೀರ ವಿಭಿನ್ನ. ಸ್ನೇಹಕ್ಕೂ ಸೈ, ಸಮರಕ್ಕೂ ಜೈ ಅನ್ನೋ ಸ್ನೇಹಿತರು ಇವರು.
ಚೈಲ್ಡ್ವುಡ್ ಫ್ರೆಂಡ್ಸ್ಗೆ ಕೊಹ್ಲಿ ಕ್ಲೋಸ್ ಫ್ರೆಂಡ್:
RCB ಮಾಜಿ ಆಟಗಾರ ಕಮ್ ಮೆಂಟರ್ ಎಬಿ ಡಿವಿಲಿಯರ್ಸ್ ಮತ್ತು RCB ನಾಯಕ ಫಾಪ್ ಡು ಪ್ಲೆಸಿಸ್ (Faf du Plessis), ಸೌತ್ ಆಫ್ರಿಕಾದಲ್ಲಿ ಚೈಲ್ಡ್ ವುಡ್ ಫ್ರೆಂಡ್ಸ್. ಚಿಕ್ಕ ವಯಸ್ಸಿನಿಂದಲೇ ಇಬ್ಬರು ದೋಸ್ತಿಗಳಾಗಿದ್ದು, ಜೊತೆ ಜೊತೆಯಲ್ಲಿ ಕ್ರಿಕೆಟ್ ಸೇರಿದಂತೆ ಅನೇಕ ಕ್ರೀಡೆಗಳನ್ನ ಆಡಿದ್ದಾರೆ. ಎಬಿಡಿ ಬೇಗ ಆಫ್ರಿಕಾ ಟೀಮ್ಗೆ ಸೆಲೆಕ್ಟ್ ಆದ್ರು. ಫಾಫ್ ಸ್ವಲ್ಪ ಲೇಟಾಗಿ ಆಫ್ರಿಕಾ ಟೀಮ್ಗೆ ಎಂಟ್ರಿಕೊಟ್ರು ಅನ್ನೋದನ್ನ ಬಿಟ್ಟರೆ, ಈ ಇಬ್ಬರ ದೋಸ್ತಿ ಮಾತ್ರ ಗಟ್ಟಿಯಾಗಿಯೇ ಇದೆ.
2011ರಲ್ಲಿ ಎಬಿ ಡಿವಿಲಿಯರ್ಸ್ (AB de Villiers) RCB ಟೀಮ್ ಸೇರಿಕೊಂಡ್ರು. ಅಲ್ಲಿಂದ ವಿರಾಟ್ ಕೊಹ್ಲಿ ಮತ್ತು ಎಬಿಡಿ ಕ್ಲೋಸ್ ಫ್ರೆಂಡ್ಸ್. ಮೈದಾನದ ಹೊರಗೆ ಸ್ನೇಹಕ್ಕೂ ಸೈ, ಮೈದಾನದಲ್ಲಿ ಜೊತೆಯಾಗಿ ಸಮರಕ್ಕೂ ಜೈ ಅಂದ ದಿನಗಳು ಸಾಕಷ್ಟಿವೆ. ಈ ಇಬ್ಬರ ಫ್ರೆಂಡ್ಶಿಪ್ ಹೇಗಿದೆ ಅಂದರೆ ಎಂದಿಗೂ ಒಬ್ಬರನೊಬ್ಬರು ಬಿಟ್ಟುಕೊಡೋದಿಲ್ಲ. ಡಿವಿಲಿಯರ್ಸ್ RCB ಬಿಟ್ಟರೂ RCB ಮಾತ್ರ ಡಿವಿಲಿಯರ್ಸ್ ಬಿಡಲ್ಲ. ಹಾಗಾಗಿಯೇ ಎಬಿಡಿಯನ್ನ ಕರೆದುಕೊಂಡು ಬಂದು ಮೆಂಟರ್ ಮಾಡಿದೆ. ಆ ಮಟ್ಟಕ್ಕಿದೆ ಕೊಹ್ಲಿ-ಎಬಿಡಿ ಫ್ರೆಂಡ್ಶಿಪ್.
IPL 2022 'ಆರ್‌ಸಿಬಿ ಐ ಯಾಮ್ ಸಾರಿ' ಎಂದುಬಿಟ್ರಾ ಯುಜುವೇಂದ್ರ ಚಹಲ್..!
ಈ ಸಲದ ಬಿಡ್ನಲ್ಲಿ ಡು ಪ್ಲೆಸಿಸ್ ಅವರನ್ನ RCB ಖರೀದಿಸಿ, ನಾಯಕನ್ನಾಗಿಯೂ ಮಾಡಿದೆ. ಎಬಿಡಿ ಆಟಗಾರನಾಗಿ RCB ಬಿಟ್ಟ ಮೇಲೆ ಕೊಹ್ಲಿ ಏಕಾಂಗಿಯಾಗಿದ್ದರು. ಡುಪ್ಲೆಸಿಸ್ ಸೇರಿಕೊಂಡ ನಂತರ ಈ ಇಬ್ಬರು ಕ್ಲೋಸ್ ಫ್ರೆಂಡ್ಸ್ ಆಗಿದ್ದಾರೆ. ಹೌದು, ಆಫ್ರಿಕಾದಲ್ಲಿ ಎಬಿಡಿ-ಫಾಫ್ ಕ್ಲೋಸ್ ಫ್ರೆಂಡ್ಸ್ ಆದ್ರೆ, ಭಾರತದಲ್ಲಿ ಈ ಇಬ್ಬರಿಗೆ ಕೊಹ್ಲಿಯೇ ಕ್ಲೋಸ್ ಫ್ರೆಂಡ್ಸ್. ಡು ಪ್ಲೆಸಿಸ್-ಕೊಹ್ಲಿ ಫ್ರೆಂಡ್ಶಿಪ್ ಬೇಗ ಬೆಳೆಯಲು ಎಬಿಡಿನೇ ಕಾರಣ.
ಫಾರಿನ್ ಪ್ಲೇಯರ್ಸ್ ಕೊಹ್ಲಿಗೆ ಕ್ಲೋಸ್ ಫ್ರೆಂಡ್ಸ್ ಆಗ್ತಿರೋದ್ಯಾಕೆ..?:
ಕೇವಲ ಎಬಿಡಿ ಮತ್ತು ಡು ಪ್ಲೆಸಿಸ್ ಮಾತ್ರ ವಿರಾಟ್ ಕೊಹ್ಲಿಗೆ ಫ್ರೆಂಡ್ಸ್ ಆಗಿಲ್ಲ. ಆರ್‌ಸಿಬಿ ಪರ ಆಡಿದ್ದ ರಾಸ್ ಟೇಲರ್ (Ross Taylor), ಡೇನಿಯಲ್ ವೆಟ್ಟೋರಿ ಮತ್ತು ಕ್ರಿಸ್ ಗೇಲ್ (Chris Gayle) ಮತ್ತು ಸದ್ಯ ಆಡುತ್ತಿರುವ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಸಹ ಕೊಹ್ಲಿಗೆ ಕ್ಲೋಸ್ ಫ್ರೆಂಡ್ಸ್. ಕೊಹ್ಲಿಯ ಮನಮೋಹಕ ಬ್ಯಾಟಿಂಗ್ಗೆ ಈ ವಿದೇಶಿ ಆಟಗಾರರು ಮನ ಸೋತಿದ್ದಾರೆ. ಹಾಗಾಗಿಯೇ ಕಿಂಗ್ ಕೊಹ್ಲಿಗೆ ಬೇಗ ಫ್ರೆಂಡ್ಸ್ ಆಗ್ತಾರೆ. ಕೆಲ ಆಟಗಾರರು ಆರ್‌ಸಿಬಿ ಬಿಟ್ಟು ಹೋದರು ಕೊಹ್ಲಿ ಜೊತೆಗಿನ ಫ್ರೆಂಡ್ಶಿಪ್ ಬ್ರೇಕ್ ಮಾಡಿಕೊಂಡಿಲ್ಲ. ದಟ್ ಈಸ್ ವಿರಾಟ್ ಕೊಹ್ಲಿ.
