Asianet Suvarna News Asianet Suvarna News

IPL 2022: ಸನ್‌ರೈಸರ್ಸ್‌ ಸವಾಲು ಗೆಲ್ಲುತ್ತಾ ರಾಜಸ್ಥಾನ ರಾಯಲ್ಸ್‌..?

* 15ನೇ ಆವೃತ್ತಿಯಲ್ಲಿ ತಮ್ಮ ಅಭಿಯಾನ ಆರಂಭಿಸಲು ರೆಡಿಯಾದ ರಾಜಸ್ಥಾನ ರಾಯಲ್ಸ್- ಸನ್‌ರೈಸರ್ಸ್‌ ಹೈದರಾಬಾದ್

* ಬಲಿಷ್ಠ ರಾಜಸ್ಥಾನ ರಾಯಲ್ಸ್‌ಗೆ ಟಕ್ಕರ್‌ ನೀಡುತ್ತಾ ಕೇನ್ ವಿಲಿಯಮ್ಸನ್ ಪಡೆ

* ಗೆಲುವಿನ ಖಾತೆ ತೆರೆಯಲು ಸಜ್ಜಾದ ;ಉಭಯ ತಂಡಗಳು

IPL 2022 Sunrisers Hyderabad take on Rajasthan Royals in Pune kvn
Author
Bengaluru, First Published Mar 29, 2022, 9:04 AM IST | Last Updated Mar 29, 2022, 9:04 AM IST

ಪುಣೆ(ಮಾ.29): 15ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2022) ಶುಭಾರಂಭದ ನಿರೀಕ್ಷೆಯಲ್ಲಿರುವ ಮಾಜಿ ಚಾಂಪಿಯನ್‌ ಸನ್‌ರೈಸ​ರ್ಸ್‌ ಹೈದರಾಬಾದ್‌ (Sunrisers Hyderabad) ತಂಡ, ಸೋಮವಾರ ರಾಜಸ್ಥಾನ ರಾಯಲ್ಸ್‌ (Rajasthan Royals) ಸವಾಲನ್ನು ಎದುರಿಸಲಿದೆ. ಕಳೆದ ಆವೃತ್ತಿಯಲ್ಲಿ ಸನ್‌ರೈಸ​ರ್ಸ್‌ ಕೇವಲ 3 ಪಂದ್ಯ ಗೆದ್ದಿದ್ದರೆ, ರಾಜಸ್ಥಾನ 5ರಲ್ಲಿ ಮಾತ್ರ ಜಯಿಸಿತ್ತು. ಅಂಕಪಟ್ಟಿಯಲ್ಲಿ ಕೊನೆಯ 2 ಸ್ಥಾನಗಳನ್ನು ಹಂಚಿಕೊಂಡಿದ್ದ ಉಭಯ ತಂಡಗಳು ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿವೆ.

ಎರಡೂ ತಂಡಗಳು ಹಳೆಯ ನಾಯಕರೊಂದಿಗೇ ಕಣಕ್ಕಿಳಿಯಲಿದೆ. ರಾಜಸ್ಥಾನವನ್ನು ಸಂಜು ಸ್ಯಾಮ್ಸನ್‌ (Sanju Samson) ಮುನ್ನಡೆಸಲಿದ್ದು, ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ (Kane Williamson) ಹೈದರಾಬಾದ್‌ ತಂಡದ ನಾಯಕತ್ವ ವಹಿಸಲಿದ್ದಾರೆ. 2019ರಲ್ಲಿ ಮಂಕಡಿಂಗ್‌ ವಿವಾದದಲ್ಲಿ ಸುದ್ದಿಯಾಗಿದ್ದ ಟಿ20 ತಜ್ಞ ಜೋಸ್‌ ಬಟ್ಲರ್‌ (Jos Buttler) ಹಾಗೂ ಆರ್‌.ಅಶ್ವಿನ್‌ (Ravichandran Ashwin) ಈ ಬಾರಿ ರಾಜಸ್ಥಾನ ಪರ ಒಟ್ಟಿಗೆ ಆಡಲಿದ್ದಾರೆ. ಬಟ್ಲರ್‌ ಜೊತೆ ಕರ್ನಾಟಕ ಬ್ಯಾಟರ್‌ ದೇವದತ್ತ ಪಡಿಕ್ಕಲ್‌ (Devdutt Padikkal) ರಾಜಸ್ಥಾನದ ಆರಂಭಿಕನಾಗಿ ಕಣಕ್ಕಿಳಿಯಬಹುದು. ಯಶಸ್ವಿ ಜೈಸ್ವಾಲ್‌ 3ನೇ ಕ್ರಮಾಂಕದಲ್ಲಿ ಆಡಬಹುದು. ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ಸನ್‌ ಜೊತೆ ಸ್ಫೋಟಕ ಬ್ಯಾಟರ್‌ಗಳಾದ ಶಿಮ್ರೊನ್‌ ಹೆಟ್ಮೇಯರ್‌, ರಾಸ್ಸಿ ವ್ಯಾನ್‌ ಡೆರ್‌ ಡುಸ್ಸೆನ್‌ ತಂಡದ ಬ್ಯಾಟಿಂಗ್‌ ಶಕ್ತಿ ಎನಿಸಿಕೊಂಡಿದ್ದಾರೆ.

ನ್ಯೂಜಿಲೆಂಡ್ ಮೂಲದ ಆಲ್ರೌಂಡರ್ ಜೇಮ್ಸ್ ನೀಶಮ್‌, ರಿಯಾನ್‌ ಪರಾಗ್‌ ಆಲ್ರೌಂಡರ್‌ಗಳ ಹೊಣೆಯನ್ನು ನಿಭಾಯಿಸಲಿದ್ದಾರೆ. ರವಿಚಂದ್ರನ್ ಅಶ್ವಿನ್‌, ಯಜುವೇಂದ್ರ ಚಹಲ್‌ ತಂಡದ ಬೌಲಿಂಗ್‌ ಬೆನ್ನೆಲುಬಾಗಿದ್ದು, ಸ್ಪಿನ್‌ ಅಸ್ತ್ರ ಬಳಸಲು ಎದುರು ನೋಡುತ್ತಿದ್ದಾರೆ. ತಂಡದ ವೇಗದ ಬೌಲಿಂಗ್‌ ವಿಭಾಗವೂ ಬಲಿಷ್ಠವಾಗಿ ತೋರುತ್ತಿದ್ದು, ಟ್ರೆಂಟ್‌ ಬೌಲ್ಟ್‌ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ತಂಡಕ್ಕೆ ಬಲ ತುಂಬಲಿದ್ದಾರೆ.

IPL 2022 ಟಿವಾಟಿಯಾ ಅಬ್ಬರ, ಲಖನೌ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲುವು!

ಇನ್ನು, ಹೈದರಾಬಾದ್‌ ಈ ಬಾರಿ ಡೇವಿಡ್‌ ವಾರ್ನರ್‌(David Warner), ರಶೀದ್‌ ಖಾನ್‌ (Rashid Khan) ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಆರಂಭಿಕರಾಗಿ ರಾಹುಲ್‌ ತ್ರಿಪಾಠಿ ಜೊತೆ ಅಭಿಷೇಕ್‌ ಶರ್ಮಾರನ್ನು ಆಡಿಸುವ ಸಾಧ್ಯತೆ ಇದ್ದು, ನಾಯಕ ವಿಲಿಯಮ್ಸನ್‌, ಏಡನ್‌ ಮಾರ್ಕ್ರಮ್‌ ತಂಡದ ಬ್ಯಾಟಿಂಗ್‌ ತಾರೆಯರೆನಿಸಿದ್ದಾರೆ. ಅಸ್ಥಿರ ಆಟಕ್ಕೆ ಹೆಸರುವಾಸಿಯಾಗಿರುವ ನಿಕೋಲಸ್‌ ಪೂರನ್‌ ಜವಾಬ್ದಾರಿ ಅರಿತು ಆಡಬೇಕಿದೆ. ಅಬ್ದುಲ್‌ ಸಮದ್‌ ಮತ್ತು ಟಿ20 ತಜ್ಞ ವಾಷಿಂಗ್ಟನ್‌ ಸುಂದರ್‌ ಆಲ್ರೌಂಡರ್‌ಗಳ ಹೊಣೆ ನಿಭಾಯಿಸಲಿದ್ದು, ಶ್ರೇಯಸ್‌ ಗೋಪಾಲ್‌ (Shreyas Gopal) ಅಥವಾ ಜೆ.ಸುಚಿತ್‌ ಸ್ಪಿನ್‌ ವಿಭಾಗವನ್ನು ಮುನ್ನಡೆಲಿದ್ದಾರೆ. ವೇಗದ ಬೌಲಿಂಗ್‌ ಜೊತೆ ಸ್ಫೋಟಕ ಬ್ಯಾಟಿಂಗ್‌ ಮಾಡಬಲ್ಲ ರೊಮಾರಿಯೋ ಶೆಫರ್ಡ್‌ ಕೂಡಾ ಸ್ಥಾನ ಗಿಟ್ಟಿಸುವ ತವಕದಲ್ಲಿದ್ದಾರೆ.

ತಂಡದಲ್ಲಿ ಅತ್ಯುತ್ತಮ ಭಾರತೀಯ ವೇಗಿಗಳಿದ್ದು, ಆಯ್ಕೆ ಗೊಂದಲ ಎದುರಾಗುವ ಸಾಧ್ಯತೆ ಇದೆ. ಅನುಭವಿ ಭುವನೇಶ್ವರ್‌ ಕುಮಾರ್‌ ಜೊತೆ ವೇಗದ ಬೌಲಿಂಗ್‌ಗೆ ಹೆಸರುವಾಸಿಯಾದ ಉಮ್ರಾನ್‌ ಮಲಿಕ್‌ ಮತ್ತು ಟಿ.ನಟರಾಜನ್‌ ತಂಡಕ್ಕೆ ಬಲ ತುಂಬಲಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ರಾಜಸ್ಥಾನ ರಾಯಲ್ಸ್: ಬಟ್ಲರ್‌, ಪಡಿಕ್ಕಲ್‌, ಜೈಸ್ವಾಲ್‌, ಸ್ಯಾಮ್ಸನ್‌(ನಾಯಕ), ಹೆಟ್ಮೇಯರ್‌/ಡುಸ್ಸೆನ್‌, ರಿಯಾನ್‌ ಪರಾಗ್‌, ನೀಶಮ್‌/ಕೌಲ್ಟರ್‌ ನೈಲ್‌, ಅಶ್ವಿನ್‌, ಬೌಲ್ಟ್‌, ಚಹಲ್‌, ಪ್ರಸಿದ್ಧ್ ಕೃಷ್ಣ

ಸನ್‌ರೈಸರ್ಸ್‌ ಹೈದರಾಬಾದ್‌: ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ‌, ಕೇನ್ ವಿಲಿಯಮ್ಸನ್‌, ಏಯ್ಡನ್ ಮಾರ್ಕ್ರಮ್‌, ನಿಕೋಲಸ್ ಪೂರನ್‌, ಅಬ್ದುಲ್ ಸಮದ್‌, ವಾಷಿಂಗ್ಟನ್ ಸುಂದರ್‌, ರೊಮಾರಿಯೋ ಶೆಫರ್ಡ್‌, ಉಮ್ರಾನ್ ಮಲಿಕ್‌, ಭುವನೇಶ್ವರ್ ಕುಮಾರ್‌, ಟಿ ನಟರಾಜನ್‌

ಸ್ಥಳ: ಪುಣೆ, ಎಂಸಿಎ ಕ್ರೀಡಾಂಗಣ 
ಪಂದ್ಯ: ಸಂಜೆ 7.30ಕ್ಕೆ,
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
 

Latest Videos
Follow Us:
Download App:
  • android
  • ios