* ಐಪಿಎಲ್‌ನಲ್ಲಿ ಅತಿವೇಗವಾಗಿ ಸಾವಿರ ರನ್ ಪೂರೈಸಿ ಹೊಸ ದಾಖಲೆ ಬರೆದ ಗಾಯಕ್ವಾಡ್* ಸಚಿನ್ ತೆಂಡುಲ್ಕರ್ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡ ಗಾಯಕ್ವಾಡ್* 31 ಇನಿಂಗ್ಸ್‌ಗಳಲ್ಲಿ 1,000 ರನ್ ಪೂರೈಸಿದ ಋತುರಾಜ್ ಗಾಯಕ್ವಾಡ್
ಪುಣೆ(ಮೇ.02): ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಋುತುರಾಜ್ ಗಾಯಕ್ವಾಡ್ (Ruturaj Gaikwad) ಐಪಿಎಲ್‌ನಲ್ಲಿ ಕೇವಲ 31 ಇನ್ನಿಂಗ್ಸ್‌ಗಳಲ್ಲಿ 1,000 ರನ್ ಪೂರ್ತಿಗೊಳಿಸಿದ್ದು, ವೇಗದ ಸಾವಿರ ರನ್ ಗಳಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಭಾನುವಾರ ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ವಿರುದ್ಧ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ತಲುಪಿದರು. ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್‌ನ ಸಚಿನ್ ತೆಂಡುಲ್ಕರ್ (Sachin Tendulkar) 31 ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ್ದರು. ಸುರೇಶ್ ರೈನಾ(34), ರಿಷಬ್ ಪಂತ್(35) ನಂತರದ ಸ್ಥಾನಗಳಲ್ಲಿದ್ದಾರೆ.
ಇನ್ನು ಪಂದ್ಯದಲ್ಲಿ ಋುತುರಾಜ್ ಗಾಯಕ್ವಾಡ್ - ಡೆವೋನ್ ಕಾನ್‌ವೇ ಮೊದಲ ವಿಕೆಟ್‌ಗೆ 182 ರನ್ ಜೊತೆಯಾಟವಾಡಿದ್ದು, ಮೊದಲ ವಿಕೆಟ್‌ಗೆ 4ನೇ ಗರಿಷ್ಠ ಜೊತೆಯಾಟ ಎನಿಸಿಕೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಡೇವಿಡ್ ವಾರ್ನರ್ - ಜಾನಿ ಬೇರ್‌ಸ್ಟೋವ್ 2017ರಲ್ಲಿ ಮೊದಲ ವಿಕೆಟ್‌ಗೆ 185 ರನ್ ಜೊತೆಯಾಟವಾಡಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ 99 ರನ್ ಬಾರಿಸಿದರಾದರೂ ಕೇವಲ ಒಂದು ರನ್ ಅಂತರದಲ್ಲಿ ಶತಕ ಬಾರಿಸುವ ಅವಕಾಶವನ್ನು ಕೈಚೆಲ್ಲಿದರು.
ಈ ಐಪಿಎಲ್‌ನ ಅತಿ ವೇಗದ ಬೌಲ್ ಮಾಡಿದ ಉಮ್ರಾನ್
ಮುಂಬೈ: ಸನ್‌ರೈಸರ್ಸ್ ಹೈದರಾಬಾದ್‌ನ ವೇಗಿ ಉಮ್ರಾನ್ ಮಲಿಕ್ 15ನೇ ಆವೃತ್ತಿಯ ಐಪಿಎಲ್‌ನ ಅತೀ ವೇಗದ ಎಸೆತ ಬೌಲ್ ಮಾಡಿದ್ದಾರೆ. ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ 10ನೇ ಓವರಲ್ಲಿ ಗಂಟೆಗೆ 154.0 ವೇಗದಲ್ಲಿ ಬೌಲ್ ಮಾಡಿ ಗಮನ ಸೆಳೆದರು.
IPL 2022 ನಾಯಕತ್ವ ಬದಲಾದ ಬೆನ್ನಲ್ಲೇ ತೆರೆಯಿತು ಗೆಲುವಿನ ಬಾಗಿಲು, SRH ಮಣಿಸಿದ ಧೋನಿ ಪಡೆ!
ಇದಕ್ಕೂ ಮೊದಲು ಗುಜರಾತ್ ಟೈಟಾನ್ಸ್‌ನ ಲಾಕಿ ಫಗ್ರ್ಯೂಸನ್ ಚೆನ್ನೈ ವಿರುದ್ಧವೇ ಗಂಟೆಗೆ 153.9 ವೇಗದಲ್ಲಿ ಬೌಲ್ ಮಾಡಿದ್ದು ಅತೀ ವೇಗದ ಎಸೆತವಾಗಿತ್ತು. ರಾಜಸ್ಥಾನ ರಾಯಲ್ಸ್ ಪರ ಆಸ್ಪ್ರೇಲಿಯಾದ ವೇಗಿ ಶಾನ್ ಟೇಟ್ ಗಂಟೆಗೆ 157.71ರ ವೇಗದಲ್ಲಿ ಬೌಲ್ ಮಾಡಿದ್ದು ಐಪಿಎಲ್ ಇತಿಹಾಸದಲ್ಲಿ ಅತೀ ವೇಗದ ಎಸೆತ ಎಂಬ ದಾಖಲೆ ಬರೆದಿದೆ.
ಪೃಥ್ವಿ ಶಾಗೆ ದಂಡ
ಮುಂಬೈ: ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ಐಪಿಎಲ್ ನಿಯಮ ಉಲ್ಲಂಘಿಸಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬ್ಯಾಟರ್ ಪೃಥ್ವಿ ಶಾಗೆ ಐಪಿಎಲ್ ಆಡಳಿತ ಮಂಡಳಿ ಛೀಮಾರಿ ಹಾಕಿದ್ದಲ್ಲದೇ, ಪಂದ್ಯದ ಸಂಭಾವನೆಯ ಶೇ.25ರಷ್ಟುದಂಡ ವಿಧಿಸಲಾಗಿದೆ. ಇದನ್ನು ಐಪಿಎಲ್ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.
ರಾಜಸ್ಥಾನ ತಂಡದಲ್ಲಿ ಖ್ಯಾತ ಅಮೆರಿಕ ಅಥ್ಲೀಟ್‌ಗಳ ಹೂಡಿಕೆ
ಮುಂಬೈ: ಐಪಿಎಲ್‌ನ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಅಮೆರಿಕನ್ ಫುಟ್ಬಾಲ್ ತಾರೆಗಳಾದ ಲ್ಯಾರಿ ಫಿಟ್ಜೆರಾಲ್ಡ್, ಕೆಲ್ವಿನ್ ಬೀಚಮ್ ಹಾಗೂ 2 ಬಾರಿ ಒಲಿಂಪಿಕ್ ಚಿನ್ನ ವಿಜೇತ ಬಾಸ್ಕೆಟ್‌ಬಾಲ್ ತಾರೆ ಕ್ರಿಸ್ ಪೌಲ್ ಹೂಡಿಕೆ ಮಾಡಿದ್ದಾರೆ. ಈ ಬಗ್ಗೆ ಭಾನುವಾರ ಪ್ರಕಟಣೆ ಹೊರಡಿಸಿದ ರಾಜಸ್ಥಾನ,‘ತಂಡದಲ್ಲಿ ಅಮೆರಿಕದ ಮೂವರು ಎಲೈಟ್ ಅಥ್ಲೀಟ್‌ಗಳಾದ ಲ್ಯಾರಿ, ಕೆಲ್ವಿನ್ ಹಾಗೂ ಪೌಲ್ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ’ ಎಂದಿದೆ. ಮಹಾರಾಷ್ಟ್ರ ಮೂಲದ ಉದ್ಯಮಿ ಮನೋಜ್ ಬಾದಲೆ ಅವರು ತಂಡದ ಮಾಲಕತ್ವ ಹೊಂದಿದ್ದಾರೆ.
