* ರೋಮನ್ ಪೊವೆಲ್ ಬೆಂಕಿಯಲ್ಲಿ ಅರಳಿದ ಹೂ* ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಂಚಿನ ಪ್ರದರ್ಶನ ತೋರುತ್ತಿರುವ ಬ್ಯಾಟರ್* ಬಡತನ ಮೆಟ್ಟಿನಿಂತು ತಾಯಿ ಆಸೆ ಪೂರೈಸಿದ ರೋಮನ್ ಪೊವೆಲ್
ಬೆಂಗಳೂರು(ಏ.30): ತಾಯಿಯ ಈ ಒಂದು ಮಾತಿನಿಂದ ಸ್ಫೂರ್ತಿಗೊಂಡ ರಾಕಿ ಬಾಯ್, ಇಡೀ ಕೆಜಿಎಫ್ ಅನ್ನ ತನ್ನ ಕೈವಶಮಾಡಿಕೊಳ್ಳಲು ಹಾತೊರಿತಾನೆ. ಅಂತೆಯೇ ಇಲ್ಲೊಬ್ಬ, ತಾಯಿ ಕೊಟ್ಟ ಆ ಒಂದು ಭಾಷೆಯನ್ನ ಈಡೇರಿಸಲು ಬ್ಯಾಟ್ ಹಿಡಿದು ಕ್ರಿಕೆಟ್ ಅಂಗಳಕ್ಕೆ ಧುಮುಕ್ತಾನೆ. ಇದ್ರಲ್ಲಿ ಸಂಪೂರ್ಣ ಸಕ್ಸಸ್ ಕಾಣದಿದ್ರೂ ಹೆತ್ತ ತಾಯಿಯ ಮಾತನ್ನ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸ್ತಿದ್ದಾನೆ. ನಿಜಕ್ಕೂ ಈತ ತಾಯಿಗೆ ತಕ್ಕ ಮಗ. ಆತನೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಫೋಟಕ ಬ್ಯಾಟರ್ ರೋಮನ್ ಪೊವೆಲ್.
ರೊಮನ್ ಪೊವೆಲ್ (Rovman Powell), ವೆಸ್ಟ್ ವಿಂಡೀಸ್ನ ಸ್ಫೋಟಕ ದಾಂಡಿಗ. ದೊಡ್ಡ ಹೊಡೆತಗಳಿಗೆ ಎತ್ತಿದ ಕೈ. 2016ರಲ್ಲಿ ವೃತ್ತಿ ಜೀವನ ಆರಂಭಿಸಿದ್ರೂ ಹೆಚ್ಚು ಮನ್ನಣೆ ಗಳಿಸಿರಲಿಲ್ಲ. ಆರು ವರ್ಷಗಳಲ್ಲಿ ಆಗೊಂದು, ಈಗೊಂದು ಚಾನ್ಸ್ ಗಿಟ್ಟಿಸಿಕೊಂಡ್ರು. ಆದ್ರೆ ಈ ಬಾರಿಯ ಸಿಪಿಎಲ್ ಅವರ ಲೈಫ್ ಬದಲಿಸ್ತು. ಇಲ್ಲಿ ತೋರಿದ ಗಮನಾರ್ಹ ಆಟದಿಂದ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಪರ ಕಣಕ್ಕಿಳಿದ್ರು. ಸಿಕ್ಕ ಕೆಲವೇ ಚಾನ್ಸ್ನಲ್ಲಿ ಸ್ಪೋಟಕ ಆಟವಾಡಿ, ಟಾಕ್ ಆಫ್ ಟೌನ್ ಆಗಿದ್ದಾರೆ. ದೈತ್ಯ ಪೊವೆಲ್, ರಸೆಲ್ರಂತೆ ಎಂಟರ್ಟೈನ್ ಕ್ರಿಕೆಟರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕೆಕೆಆರ್ ವಿರುದ್ಧ ಬಿರುಸಿನ 33 ರನ್ ಗಳಿಸಿ ಅದನ್ನು ಪ್ರೂವ್ ಮಾಡಿದ್ರು. ಹೀಗೆ ದೊಡ್ಡ ಸಿಕ್ಸರ್ಗಳಿಂದಲೇ ಪ್ರೇಕ್ಷಕರನ್ನ ಹುಚ್ಚೆದ್ದು ಕುಣಿಯುವಂತೆ ಮಾಡ್ತಿರೋ ಪೊವೆಲ್ ನಿಜಕ್ಕೂ ಬೆಂಕಿಯಲ್ಲಿ ಅರಳಿದ ಹೂವು. ಆದರೆ ಇವರ ಸಿಕ್ಸರ್-ಬೌಂಡ್ರಿಯಂತೆ ಬದುಕು ಮನಮೋಹಕವಾಗಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಮುಳ್ಳಿನ ಹಾದಿ.
ಪೊವೆಲ್ ಬಡತನ ಮೆಟ್ಟಿ ನಿಂತಿದ್ದೇ ರೋಚಕ:
ಹೌದು, ಪೊವೆಲ್ ಕಡುಬಡತನದ ಬೇಗೆಯಲ್ಲಿ ಬೆಳೆದು ಬಂದ ಕ್ರಿಕೆಟರ್.1993 ರಲ್ಲಿ ಸಣ್ಣ ಸಮುದಾಯದಲ್ಲಿ ಜನಿಸಿದ ಈ ದೈತ್ಯ ಬ್ಯಾಟರ್ ಎಂದೂ ಖುಷಿ ಕಂಡವರಲ್ಲ. ಸಾಲು-ಸಾಲು ಪ್ರಾಬ್ಲಮ್ಸ್ ಕುಟುಂಬವನ್ನು ಕಂಗೆಡಿಸಿತ್ತು. ಬಿರುಕು ಬಿಟ್ಟ ಮನೆಯಲ್ಲಿ ವಾಸವಿದ್ರು. ಬೇಗನೆ ತಂದೆ ಕಳೆದುಕೊಂಡ ಪೊವೆಲ್ ಮೇಲೆ ಚಿಕ್ಕಂದಿನಲ್ಲೇ ಜವಾಬ್ದಾರಿ ಬೆನ್ನೇರಿತು. ಇದರಿಂದ ಅಕ್ಷರಶಃ ರೋಸಿ ಹೋದ ವಿಂಡೀಸ್ ಕ್ರಿಕೆಟರ್ ಬಡತನವನ್ನ ಮೆಟ್ಟಿ ನಿಲ್ಲಲು ತಾಯಿಗೆ ಭಾಷೆ ಕೊಟ್ಟ. ಆ ಮಾತನ್ನ ಉಳಿಸಿಕೊಳ್ಳೋದಕ್ಕಾಗಿ ಸೆಕೆಂಡರಿಗೆ ಸ್ಕೂಲ್ ಬಿಟ್ಟು, ಚೆಂಡು ದಾಂಡಿನಾಟಕ್ಕೆ ಧುಮುಕಿದ.
ಸ್ವಿಗ್ಗಿ ಕೊಳ್ಳುವಂತೆ ಎಲನ್ ಮಸ್ಕ್‌ಗೆ ಸಲಹೆ ನೀಡಿದ ಶುಭ್‌ಮನ್ ಗಿಲ್‌ಗೆ ನೆಟ್ಟಿಗರ ಕ್ಲಾಸ್
ಹೀಗೆ ತಾಯಿಗೆ ಕೊಟ್ಟ ಮಾತನ್ನ ಈಡೇರಿಸಲು ಪಣ ತೊಟ್ಟ ಪೊವೆಲ್ ಕೊನೆಗೂ ಯಶಸ್ವಿಯಾದ್ರು. ಕಾಲಕ್ರಮೇಣ ಕ್ರಿಕೆಟ್ನಲ್ಲಿ ನೇಮ್ ಆಂಡ್ ಫೇಮ್ ಗಳಿಸಿದ್ರು. ಕಡು ಬಡತನ ಪೊವೆಲ್ ಛಲದ ಮುಂದೆ ಮಾಯಾಯ್ತು. ಈಗ ಪೊವೆಲ್ ಬರೀ ಪ್ರೇಕ್ಷಕರ ದಿಲ್ ಗೆದ್ದ ಆಟಗಾರ ಮಾತ್ರವಲ್ಲ, ಬಡತನವನ್ನೇ ಮೆಟ್ಟಿನಿಂತ ರಿಯಲ್ ಛಲಗಾರ.
ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ಈ ದೈತ್ಯ ಕ್ರಿಕೆಟಿಗ
ಸವಾಲುಗಳನ್ನ ಮೆಟ್ಟಿನಿಂತ ಈ ದೈತ್ಯ ಕ್ರಿಕೆಟಿಗ ನಿಜಕ್ಕೂ ಯುವ ಆಟಗಾರರಿಗೆ ಸ್ಫೂರ್ತಿ. ಬಡತನ ಶಾಪವಲ್ಲ. ಛಲ ಹಾಗೂ ಕಠಿಣ ಪರಿಶ್ರಮವೊಂದಿದ್ದರೆ ಎಂತಹ ಸವಾಲುಗಳನ್ನ ಮೆಟ್ಟಿ ನಿಲ್ಲಬಹುದು ಅನ್ನೋದನ್ನ ಡೆಡ್ಲಿ ಹಿಟ್ಟರ್ ತೋರಿಸಿಕೊಟ್ಟಿದ್ದಾರೆ. ಪೊವೆಲ್ ರ ಸ್ಪೂರ್ತಿದಾಯಕ ಜೀವನ ಯಂಗ್ಸ್ಟರ್ಸ್ಗೆ ಮಾದರಿಯಾಗಲಿ. ತಾಯಿಗೆ ಕೊಟ್ಟ ಮಾತನ್ನ ಉಳಿಸಿಕೊಂಡ ಈ ತಾಯಿಯ ತಕ್ಕ ಮಗ ಕ್ರಿಕೆಟ್ನಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ, ಪ್ರೇಕ್ಷಕರನ್ನ ರಂಜಿಸಲಿ.
