ಸೋಲಿನ ಅಂತರ ಕಡಿಮೆ ಮಾಡಲು ಹೋರಾಟ ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ
ಮುಂಬೈ(ಮೇ.17): ಐಪಿಎಲ್ ಟೂರ್ನಿಯ 65ನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಮಯಾಂಕ್ ಮಾರ್ಕಂಡೆ ಹಾಗೂ ಸಂಜಯ್ ಯಾದವ್ ತಂಡ ಸೇರಿಕೊಂಡಿದ್ದಾರೆ. ಇತ್ತ ಹೈದರಾಬಾದ್ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದೆ. ಪ್ರಿಯಂ ಗರ್ಗ್ ಹಾಗೂ ಪಝಲ್ ಪಾರೂಖಿ ತಂಡ ಸೇರಿಕೊಂಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಅಭಿಷೇಕ್ ಶರ್್ಮಾ, ಪ್ರಿಯಂ ಗರ್ಗ್, ಕೇನ್ ವಿಲಿಯಮ್ಸನ್(ನಾಯಕ), ರಾಹುಲ್ ತ್ರಿಪಾಠಿ, ಆ್ಯಡಿನ್ ಮಕ್ರಮ್, ನಿಕೋಲ್ ಪೂರನ್, ವಾಶಿಂಗ್ಟನ್ ಸುಂದರ್, ಭವನೇಶ್ವರ್ ಕುಮಾರ್, ಫಜಲ್ ಫೂರೂಖಿ, ಉಮ್ರಾನ್ ಮಿಲಿಕ್, ಟಿ ನಟರಾಜನ್
IPL 2022 : ಹಾಲ್ ಆಫ್ ಫೇಮ್ ಪರಿಚಯಿಸಿದ ಆರ್ ಸಿಬಿ, ಗೌರವ ಪಡೆದ ಮೊದಲಿಗರಾದ ಕ್ರಿಸ್ ಗೇಲ್, ಎಬಿಡಿ!
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ಇಶನ್ ಕಿಶನ್, ರೋಹಿತ್ ಶರ್ಮಾ(ನಾಯಕ), ಡ್ಯಾನಿಯಲ್ ಸ್ಯಾಮ್ಸ್, ತಿಲಕ್ ವರ್ಮಾ, ರಮನ್‌ದೀಪ್ ಸಿಂಗ್, ತ್ರಿಸ್ಟನ್ ಸ್ಟಬ್ಸ್, ಟಿಮ್ ಡೇವಿಡ್, ಸಂಜಯ್ ಯಾದವ್, ಜಸ್ಪ್ರೀತ್ ಬುಮ್ರಾ, ರಿಲೆ ಮೆರಿಡಿತ್, ಮಯಾಂಕ್ ಮಾರ್ಕಂಡೆ
ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ಬಾಗಿಲು ಬಹುತೇಕ ಮುಚ್ಚಿದೆ. ಇನ್ನುಳಿದ ಎರಡೂ ಪಂದ್ಯದಲ್ಲಿ ಹೈದರಾಬಾದ್ ಗೆದ್ದರೂ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿಸಬೇಕಾಗಿದೆ. ಕೆಕೆಆರ್, ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪಂದ್ಯಗಳನ್ನು ಸೋಲಬೇಕು. ಹೀಗಾಗದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಹಂತಕ್ಕೇರುವ ಕೊನೆಯ ಅವಕಾಶವೊಂದಿದೆ. ಆದರೆ ಇದು ಬಹುತೇಕ ಅಸಾಧ್ಯ.
ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮುಗ್ಗರಿಸಿ ಪ್ಲೇ ಆಫ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ವರ್ಚುವಲ್ ನಾಕೌಟ್ ಎನಿಸಿಕೊಂಡಿದ್ದ ಪಂಜಾಬ್ ಕಿಂಗ್‌್ಸ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 17 ರನ್ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ-ಆಫ್‌ಗೆ ಮತ್ತಷ್ಟುಹತ್ತಿರವಾಗಿದೆ. 7ನೇ ಗೆಲುವಿನೊಂದಿಗೆ 14 ಅಂಕ ಸಂಪಾದಿಸಿದ ತಂಡ ಅಂಕಪಟ್ಟಿಯಲ್ಲಿ ಆರ್‌ಸಿಬಿಯನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿತು. 13 ಪಂದ್ಯಗಳಲ್ಲಿ 7ನೇ ಸೋಲುಂಡ ಪಂಜಾಬ್, ತನ್ನ ಕೊನೆಯ ಪಂದ್ಯ ಗೆದ್ದು, ಉಳಿದ ಫಲಿತಾಂಶಗಳು ತನ್ನ ಪರವಾಗಿ ಬಂದರಷ್ಟೇ ಪ್ಲೇ-ಆಫ್‌ಗೇರಲಿದೆ.
IPL 2022 ಪಂಜಾಬ್ ಮಣಿಸಿದ ಡೆಲ್ಲಿ, ಪ್ಲೇ ಆಫ್ ರೇಸ್ ಮತ್ತಷ್ಟು ರೋಚಕ!
ಮೊದಲು ಬ್ಯಾಟ್ ಮಾಡಿದ ಡೆಲ್ಲಿ 7 ವಿಕೆಟ್‌ಗೆ 159 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ 9 ವಿಕೆಟ್‌ಗೆ 142 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಉತ್ತಮ ಆರಂಭ ಪಡೆದ ಹೊರತಾಗಿಯೂ ಬೇರ್‌ಸ್ಟೋವ್(38) ನಿರ್ಗಮನದ ಬಳಿಕ ತಂಡ ದಿಢೀರ್ ಕುಸಿತ ಕಂಡಿತು. 53 ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದ ತಂಡ, 55ಕ್ಕೆ 4 ವಿಕೆಟ್ ಕಳೆದುಕೊಂಡಿತು. ಜಿತೇಶ್ ಶರ್ಮಾ(34 ಎಸೆತಗಳಲ್ಲಿ 44), ರಾಹುಲ್ ಚಹರ್(25) ಹೋರಾಟ ಗೆಲುವು ತಂದುಕೊಡಲಿಲ್ಲ.ಮಾಷ್‌ರ್ ಫಿಫ್ಟಿ: ಮೊದಲ ಎಸೆತದಲ್ಲೇ ವಾರ್ನರ್ ವಿಕೆಟ್ ಕಳೆದಕೊಂಡರೂ ಡೆಲ್ಲಿ ಎದೆಗುಂದಲಿಲ್ಲ. ಸರ್ಫರಾಜ್ ಖಾನ್ 16 ಎಸೆತಗಳಲ್ಲಿ 32, ಲಲಿತ್ ಯಾದವ್ 24 ರನ್ ಗಳಿಸಿ ಆಸರೆಯಾದರೆ, ಮಿಚೆಲ್ ಮಾಷ್‌ರ್(48 ಎಸೆತಗಳಲ್ಲಿ 63) ಸತತ 2ನೇ ಅರ್ಧಶತಕ ಬಾರಿಸಿದರು.
