IPL 2022 ಕೊನೆಗೂ ವಿನ್ನಿಂಗ್ ಟ್ರ್ಯಾಕ್‌ಗೆ ಮರಳಿದ ಕೆಕೆಆರ್, ರಾಜಸ್ಥಾನ ವಿರುದ್ಧ 7 ವಿಕೆಟ್ ಗೆಲುವು
- ರಾಜಸ್ಥಾನ ರಾಯಲ್ಸ್ ವಿರುದ್ದ 7 ವಿಕೆಟ್ ಗೆಲುವು
- 153 ರನ್ ಚೇಸ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್
- ಸತತ ಸೋಲಿನಿಂದ ಹೊರಬಂದ ಶ್ರೇಯಸ್ ಅಯ್ಯರ್ ಪಡೆ
ಮುಂಬೈ(ಮೇ.02): ನಿತೀಶ್ ರಾಣಾ, ರಿಂಕು ಸಿಂಗ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ಗೆಲುವಿನ ನಗೆ ಬೀರಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಕೆಕೆಆರ್, ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿದೆ.
ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟಿಂಗ್ ಲೈನ್‌ಅಪ್‌ಗೆ 153 ರನ್ ಟಾರ್ಗೆಟ್ ಸವಾಲಿನ ಟಾರ್ಗೆಟ್ ಅಲ್ಲ. ಆದರೆ ವಾಂಖೆಡೆ ಪಿಚ್, ರಾಜಸ್ಥಾನ ಬೌಲಿಂಗ್ ದಾಳಿ ಎದುರು ಕೆಕೆಆರ್ ರನ್ ಗಳಿಸಲು ತಡಕಾಡಿತು. ಆರಂಭದಲ್ಲೇ ಆ್ಯರೋನ್ ಫಿಂಚ್ ವಿಕೆಟ್ ಪತನಗೊಂಡಿತು. ಫಿಂಚ್ ಕೇವಲ 4 ರನ್ ಸಿಡಿಸಿ ಔಟಾದರು.
ಬಾಬಾ ಅಪರಾಜಿತ್ 16 ಎಸೆತದಲ್ಲಿ 15 ರನ್ ಸಿಡಿಸಿ ಔಟಾದರು. ಕೆಕಆರ್ ತಂಡ 32 ರನ್‌ಗೆ 2 ವಿಕೆಟ್ ಪತನಗೊಂಡಿತು. ಶ್ರೇಯಸ್ ಅಯ್ಯರ್ 32 ರನ್ ಸಿಡಿಸಿ ಔಟಾದರು. ಇತ್ತ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಹೋರಾಟದಿಂದ ಕೆಕೆಆರ್ ಗೆಲುವಿನ ಹಾದಿ ಸುಮಗಗೊಂಡಿತು.
CSK playoffs scenarios: 6 ಪಂದ್ಯ ಸೋತಿರುವ CSKಗೆ ಈಗಲೂ ಇದೆ ಪ್ಲೇ ಆಫ್‌ಗೇರುವ ಅವಕಾಶ..!
ನಿತೀಶ್ ರಾಣಾ ಅಜೇಯ 47 ರನ್ ಸಿಡಿಸಿದರೆ, ರಿಂಕು ಸಿಂಗ್ ಅಜೇಯ 42 ರನ್ ಸಿಡಿಸಿದು. ಈ ಮೂಲಕ ಕೋಲ್ಕತಾನ ೈಟ್ ರೈಡರ್ಸ್ 19.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.
ರಾಜಸ್ಥಾನ ವಿರುದ್ಧ ಕೆಕೆಆರ್ ಜಯಭೇರಿ
15ನೇ ಆವೃತ್ತಿ ಐಪಿಎಲ್‌ನಲ್ಲಿ ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಸೋಮವಾರ ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿದ ತಂಡ, ಆವೃತ್ತಿಯಲ್ಲಿ 4ನೇ ಜಯ ದಾಖಲಿಸಿ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತು. ರಾಜಸ್ಥಾನ ಸತತ 2ನೇ ಸೋಲುಂಡಿತು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ, ಸಂಜು ಸ್ಯಾಮ್ಸನ್(55) ಹೋರಾಟದ ಅರ್ಧಶತಕದ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ಗೆ 152 ರನ್ ಕಲೆ ಹಾಕಿತು. ಸಾಧಾರಣ ಗುರಿ ಬೆನ್ನತ್ತಿದ ಕೋಲ್ಕತಾ 19.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ನಿತೀಶ್ ರಾಣಾ(48), ರಿಂಕು ಸಿಂಗ್(42) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಳೆದ ಪಂದ್ಯದ ವರೆಗೆ ಕೆಕೆಆರ್ ಸೋಲಿನಲ್ಲಿ ಮುಳುಗಿತ್ತು. ಡೆಲ್ಲಿ ವಿರುದ್ಧವೂ ಕೆಕೆಆರ್ ಮುಗ್ಗರಿಸಿ ಸತತ 5ನೇ ಸೋಲು ಕಂಡಿತ್ತು. ಮೊದಲ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಉತ್ತಮ ಆರಂಭ ಪಡೆದಿದ್ದ ಕೋಲ್ಕತಾ ನೈಟ್ರೈಡರ್ಸ್ ಅದೃಷ್ಟಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಬಳಿಕ ಬದಲಾಗಿತ್ತು. ಆ ಬಳಿಕ ಸತತ 4 ಪಂದ್ಯಗಳಲ್ಲಿ ಸೋತಿದ್ದ ಕೆಕೆಆರ್, ಡೆಲ್ಲಿ ವಿರುದ್ಧ ಗುರುವಾರ ನಡೆದ ಈ ಆವೃತ್ತಿಯ 2ನೇ ಮುಖಾಮುಖಿಯಲ್ಲೂ ಪರಾಭವಗೊಂಡು ಸತತ 5ನೇ ಸೋಲು ದಾಖಲಿಸಿದೆ. ಇದರೊಂದಿಗೆ ಕೆಕೆಆರ್‌ಗೆ ಪ್ಲೇ-ಆಫ್ ಹಾದಿ ಕಠಿಣಗೊಂಡಿದೆ.
IPL 2022 ನಾಯಕತ್ವ ಬದಲಾದ ಬೆನ್ನಲ್ಲೇ ತೆರೆಯಿತು ಗೆಲುವಿನ ಬಾಗಿಲು, SRH ಮಣಿಸಿದ ಧೋನಿ ಪಡೆ!
ಕಳೆದ ಪಂದ್ಯದಲ್ಲಿ ನೋಬಾಲ್ ವಿವಾದಕ್ಕೆ ಸಿಲುಕಿ ಹಿನ್ನಡೆ ಅನುಭವಿಸಿದ್ದ ಡೆಲ್ಲಿ, 4 ವಿಕೆಟ್ ರೋಚಕ ಗೆಲುವು ಸಾಧಿಸಿ ಜಯದ ಹಳಿಗೆ ಮರಳಿದ್ದು ಇದೇ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ.
ಮೊದಲು ಬ್ಯಾಟ್ ಮಾಡಿದ ಕೆಕೆಆರ್, ಕುಲ್ದೀಪ್ ಯಾದವ್‌ರ ಸ್ಪಿನ್ ಜಾದೂ ಮುಂದೆ ಮಂಕಾಯಿತು. ಶ್ರೇಯಸ್ ಅಯ್ಯರ್, ನಿತೀಶ್ ರಾಣಾ ಹೋರಾಟದಿಂದ 20 ಓವರಲ್ಲಿ 9 ವಿಕೆಟ್‌ಗೆ 146 ರನ್ ಕಲೆಹಾಕಿತು. ಸಾಧಾರಣ ಗುರಿಯನ್ನು ಬೆನ್ನತ್ತುವುದು ಡೆಲ್ಲಿಗೆ ಸುಲಭವಾಗಲಿಲ್ಲ. ಆದರೆ ಡೇವಿಡ್ ವಾರ್ನರ್‌ರ ಹೋರಾಟದ 42 ರನ್, ಲಲಿತ್ ಯಾದವ್‌ರ 22 ರನ್ ಕೊಡುಗೆ ತಂಡ ಸೋಲಿನತ್ತ ಮುಖ ಮಾಡುವುದನ್ನು ತಪ್ಪಿಸಿತು. ರೋವ್ಮನ್ ಪೋವೆಲ್(16 ಎಸೆತದಲ್ಲಿ ಔಟಾಗದೆ 33 ರನ್, 3 ಸಿಕ್ಸರ್) ಸ್ಫೋಟಕ ಆಟ, ಅಕ್ಷರ್ ಪಟೇಲ್(24)ರ ಉಪಯುಕ್ತ ಕೊಡುಗೆ ಒಂದು ಓವರ್ ಬಾಕಿ ಇರುವಂತೆ ತಂಡವನ್ನು ಜಯದ ಹೊಸ್ತಿಲು ತಲುಪಿಸಿತು.
ಕೆಟ್ಟಆರಂಭ: ಕೆಕೆಆರ್ ಪವರ್-ಪ್ಲೇನಲ್ಲಿ 2 ವಿಕೆಟ್ ಕಳೆದುಕೊಂಡು ಕೇವಲ 29 ರನ್ ಗಳಿಸಿತು. ಮೊದಲ 6 ಓವರಲ್ಲಿ ತಂಡ ಗಳಿಸಿದ್ದು ಕೇವಲ 1 ಬೌಂಡರಿ. 10 ಓವರ್‌ಗೆ 56 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್, ಇನ್ನಿಂಗ್‌್ಸನ ಮೊದಲ ಸಿಕ್ಸರ್ ಬಾರಿಸಿದ್ದು 13ನೇ ಓವರಲ್ಲಿ. ಶ್ರೇಯಸ್ 42 ರನ್ ಗಳಿಸಿದರೆ, ನಿತೀಶ್ ರಾಣಾ 34 ಎಸೆತದಲ್ಲಿ 3 ಬೌಂಡರಿ, 4 ಸಿಕ್ಸರ್‌ನೊಂದಿಗೆ 57 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. 3 ಓವರಲ್ಲಿ ಕೇವಲ 14 ರನ್‌ಗೆ ಕುಲ್ದೀಪ್ 4 ವಿಕೆಟ್ ಕಿತ್ತರು.