Asianet Suvarna News Asianet Suvarna News

Rinku Singh ಸಿಲಿಂಡರ್ ಸೆಲ್ಲರ್​ ಮಗ ಇಂದು IPLನ​ ಸೆನ್ಷೆಷನಲ್​ ಸ್ಟಾರ್​..!

* ರಾಜಸ್ಥಾನ ರಾಯಲ್ಸ್ ಎದುರಿನ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ರಿಂಕು ಸಿಂಗ್

* ಕೆಕೆಆರ್‌ ಸತತ ಆರನೇ ಸೋಲಿನಿಂದ ಬಚಾವ್ ಮಾಡಿದ ರಿಂಕು ಸಿಂಗ್

* ರಿಂಕು ಸಿಂಗ್ ಬೆಂಕಿಯಲ್ಲಿ ಅರಳಿದ ಹೂ

IPL 2022 Rinku Singh Cricket journey All you need to know kvn
Author
Bengaluru, First Published May 4, 2022, 6:33 PM IST

ಮುಂಬೈ(ಮೇ.04) : ವಯಸ್ಸು 24, ಹೆಸರು ರಿಂಕು ಸಿಂಗ್ (Rinku Singh)​​. ಎಲ್ಲವೂ ಅಂದುಕೊಂಡಿದ್ದೇ ಆಗಿದ್ರೆ ಈ ಹೆಸರು ಈಗಾಗ್ಲೇ ಕ್ರಿಕೆಟ್​ ಲೋಕದಲ್ಲಿ ಪ್ರಜ್ವಲಿಸಬೇಕಿತ್ತು. ಆದ್ರೆ ಅವಕಾಶಗಳ ಕೊರತೆ, ಆ ಸುವರ್ಣ ಅವಕಾಶವನ್ನ ಕಿತ್ತುಕೊಳ್ತು. ಲೇಟಾದ್ರು ಲೇಟೆಸ್ಟ್​ ಆಗಿ ಅಲಿಘರ್​​​ ಪುತ್ತರ್ ಐಪಿಎಲ್​​​ನಲ್ಲಿ ಛಾಪು ಮೂಡಿಸಿದ್ದಾರೆ. ಜಸ್ಟ್​​​ ಒಂದೇ ಒಂದು ಪಂದ್ಯದಿಂದ ರಿಂಕು ಫೇಮಸ್ ಆಗಿದ್ದಾರೆ.

ಹೌದು, ರಾಜಸ್ಥಾನ ರಾಯಲ್ಸ್(Rajasthan Royals) ವಿರುದ್ಧ ಪಂದ್ಯದಲ್ಲಿ ದಿಟ್ಟ ಪ್ರದರ್ಶನದಿಂದ ರಿಂಕು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅಂತಹ ಕ್ರೆಡಿಟ್ ಈತನಿಗೆ ಸಲ್ಲಲೇಬೇಕು ಬಿಡಿ. ಯಾಕಂದ್ರೆ ರಿಂಕು ಅನ್ನೋ ಲೆಫ್ಟಿ ಬ್ಯಾಟರ್​ ಕೆಚ್ಚೆದೆಯ ಹೋರಾಟ ನೀಡದಿದ್ದಿದ್ರೆ ಕೆಕೆಆರ್​​ ಸತತ 6ನೇ ಸೋಲು ಕಾಣಬೇಕಿತ್ತು. ಅಂತಹ ಪರಿಸ್ಥಿತಿ ತಂಡಕ್ಕೆ ಬಂದೊದಗಿತ್ತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಂಕು ಮ್ಯಾಜಿಕ್ ಸೃಷ್ಟಿಸಿದ್ರು. ಬರೀ 23 ಎಸೆತಗಳಲ್ಲಿ ಸ್ಪೋಟಕ 42 ರನ್​​ ಗಳಿಸಿ ತಂಡವನ್ನ ಸೋಲಿನಿಂದ ಪಾರು ಮಾಡಿ, ಗೆಲುವಿನ ಟ್ರ್ಯಾಕ್​​​ಗೆ ಮರಳಿಸಿದ್ರು.

ಪಂದ್ಯದ ಬಳಿಕ ರಿಂಕು ನಿರ್ಭೀತಿ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತವಾಯ್ತು. ಟ್ರೆಂಟ್​​​ ಬೌಲ್ಟ್​​​​​, ಪ್ರಸಿದ್ಧ್​​​​ ಕೃಷ್ಣ  ಹಾಗೂ ಚಹಲ್​ರಂತ ಶ್ರೇಷ್ಠ ಬೌಲರ್​​ಗಳನ್ನ ದಂಡಿಸಿದ್ದು ನೋಡುಗರಿಗೆ ಸಖತ್​ ಮಜಾ ಕೊಟ್ಟಿತ್ತು. ಇಂತಹ ಡೇರಿಂಗ್​ ಬ್ಯಾಟರ್​​​ ರಿಂಕು ಸಿಂಗ್​​ ಯಾರು ? ಇವರ ಹಿನ್ನಲೆ ಏನು ಅನ್ನೋದರ ಬಗ್ಗೆ ಎಲ್ಲರೂ ಚರ್ಚೆ ಮಾಡ್ತಿದ್ದಾರೆ. ನಾವೀಗ ಈ ಎಂಟೆದೆ ಬಂಟನ ಆ ಮನಮಿಡಿಯುವ ಕಹಾನಿಯನ್ನ ತೆರೆದಿಡ್ತೀವಿ ನೋಡಿ.

ತಂದೆ ಸಿಲಿಂಡರ್​ ಡಿಸ್ಟ್ರಿಬ್ಯೂಟರ್​​, ಅಣ್ಣ ರಿಕ್ಷಾ ಡ್ರೈವರ್​​:

1997ರಲ್ಲಿ ಉತ್ತಪ್ರದೇಶದಲ್ಲಿ ಅಲಿಘರ್​​ನಲ್ಲಿ ಜನಿಸಿದ ರಿಂಕು ಸಿಂಗ್​​​, ಕಡು ಬಡತನದಲ್ಲಿ ಬೆಳೆದವರು. ರಿಂಕು ತಂದೆ ಸಿಲಿಂಡರ್​ ಡಿಸ್ಟ್ರಿಬ್ಯೂಟರ್​​. ಮನೆಮನೆಗೆ ತೆರಳಿ ಎಲ್​​ಪಿಜಿ ಸಿಲಿಂಡರ್​​​ಗಳನ್ನ ಹಂಚಿಕೆ ಮಾಡ್ತಾರೆ. ಇನ್ನು ಅಣ್ಣ ಸಾಮಾನ್ಯ ಆಟೋ ಡ್ರೈವರ್​​​. ಇಬ್ಬರ ದುಡಿಮೆಯಿಂದಲೇ ಮನೆ ಸಾಗಬೇಕಿತ್ತು. ಇಂತಹ ಬಡತನದ ಬೇಗುದಿಯಲ್ಲಿ ರಿಂಕು ಕ್ರಿಕೆಟರ್ ಆಗೋದು ನನಸಾಗದ ಮಾತಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ನಿರ್ವಹಣೆಗಾಗಿ ರಿಂಕು ಕೂಡ ಕಸ ಗುಡಿಸುವ ಹಾಗೂ ಕೋಚಿಂಗ್ ಸೆಂಟರ್​​ ಒರೆಸುವ ಕೆಲಸಕ್ಕೆ ಸೇರಿಕೊಂಡರು. ಆದ್ರೆ ದೊಡ್ಡ ಕ್ರಿಕೆಟರ್ ಆಗಬೇಕು ಅನ್ನೋ ಕನಸು ಹೊತ್ತಿದ್ದ ಲೆಫ್ಟಿ ಬ್ಯಾಟರ್​ ಕೆಲಸವನ್ನ ಬಿಟ್ಟು, ಆಟದ ಕಡೆ ಗಮನ ಕೊಟ್ರು.

Rinku Singh: ಕಳೆದ 5 ವರ್ಷಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆ ಎಂದ ಕೆಕೆಆರ್ ಆಟಗಾರ..!

ಅಪ್ಪನಿಂದ ಏಟು ತಿಂದ್ರೂ ಕ್ರಿಕೆಟ್​​ ಬಿಡದ ಲೆಫ್ಟಿಮ್ಯಾನ್​​:

ಹೌದು, ರಿಂಕು ಕೆಲಸ ಬಿಟ್ಟು ಕ್ರಿಕೆಟರ್ ಆಗ್ತೀನಿ ಅಂದಾಗ ಅವರ ತಂದೆಯಿಂದ ಅನೇಕ ಸಲ ಏಟು ತಿಂದಿದ್ರು. ಮಗ ಕ್ರಿಕೆಟ್​ ಆಡೋದನ್ನ ಆರಂಭದಿಂದಲೇ ವಿರೋಧಿಸಿದ್ರು. ಆದ್ರೆ ಸಾಧಿಸುವ ಛಲತೊಟ್ಟ ರಿಂಕುಗೆ ಕೋಚ್​​ ಹಾಗೂ ಫ್ರೆಂಡ್ಸ್ ನಿಂದ ಸಹಾಯ ದೊರೆಕಿತು. ಅಂಡರ್​​​-16 ಹಾಗೂ ಕಾಲೇಜು ಮಟ್ಟದಲ್ಲಿ ಉತ್ತಮ ಆಟವಾಡಿ ರಣಜಿ ಟ್ರೋಫಿಗೆ ಸೆಲೆಕ್ಟ್ ಆದ್ರು. ಡೊಮೆಸ್ಟಿಕ್​ ಅದ್ಭುತ ಪ್ರದರ್ಶನ ತೋರಿ 2017ರಲ್ಲಿ ಐಪಿಎಲ್​ಗೆ ಎಂಟ್ರಿ ಕೊಟ್ರು. ಆದ್ರೆ 4 ವರ್ಷ ಸರಿಯಾಗಿ ಚಾನ್ಸ್ ಸಿಗದೇ ಬೆಂಚ್​​ಗೆ ಸೀಮಿತವಾದ್ರು. ಈ ಸಲ ಕೆಕೆಆರ್​​ 55 ಲಕ್ಷ ರೂಪಾಯಿಗೆ ರಿಂಕುರನ್ನ ಕೊಂಡುಕೊಳ್ತು. ಆಡಿದ 3 ಪಂದ್ಯಗಳಲ್ಲಿ ಜಬರ್ದಸ್ತ್​​ ಆಟದ ಮೂಲಕ ಹಲ್​ಚಲ್ ಎಬ್ಬಿಸಿದ್ದಾರೆ. ಇಂತಹ ಮತ್ತಷ್ಟು ಸೂಪರ್​ ಇನ್ನಿಂಗ್ಸ್​ ಛಲದಂಕ ರಿಂಕು ಸಿಂಗ್​ರಿಂದ ಮೂಡಿ ಬರಲಿ.


 

Follow Us:
Download App:
  • android
  • ios