Asianet Suvarna News Asianet Suvarna News

IPL 2022 ಬೇರ್ ಸ್ಟೋ, ಲಿವಿಂಗ್ ಸ್ಟೋನ್ ಬೆಂಕಿ ಬ್ಯಾಟಿಂಗ್

ಜಾನಿ ಬೇರ್ ಸ್ಟೋ ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ ಆಡಿದ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ 2022ಅಲ್ಲಿ ಆರ್ ಸಿಬಿ ತಂಡದ ಗೆಲುವಿಗೆ ಬೃಹತ್ ಸವಾಲನ್ನು ನಿಗದಿ ಮಾಡಿದೆ.
 

IPL 2022 RCB vs PBKS  Jonny Bairstow Liam Livingstone scores Stunning Fifty  Punjab Kings Post Big Total vs Royal Challengers Bangalore san
Author
Bengaluru, First Published May 13, 2022, 9:24 PM IST

ಮುಂಬೈ (ಮೇ.13): ಜಾನಿ ಬೇರ್ ಸ್ಟೋ (Jonny Bairstow) ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ ( Liam Livingstone) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ (Punjab Kings)ಐಪಿಎಲ್ 2022ರ (IPL 2022) ತನ್ನ 12ನೇ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆಹಾಕಿದೆ. ಓವರ್ ಗ ತಲಾ 10 ರಂತೆ ರನ್ ಬಾರಿಸಿದ ಪಂಜಾಬ್ ಕಿಂಗ್ಸ್ (PBKS) ತಂಡ ಆರ್ ಸಿಬಿ (Royal Challengers Bangalore) ತಂಡದ ಗೆಲುವಿಗೆ 210 ರನ್ ಗುರಿ ನೀಡಿದೆ.

ಬ್ಯಾಟಿಂಗ್ ಸ್ನೇಹಿ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ (RCB) ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಿರೀಕ್ಷೆಯಂತೆ ಅಬ್ಬರದ ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ಜಾನಿ ಬೇರ್ ಸ್ಟೋ (66 ರನ್, 29 ಎಸೆತ, 4 ಬೌಂಡರಿ, 7 ಸಿಕ್ಸರ್) ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ (70 ರನ್, 42 ಎಎಸೆತ, 5 ಬೌಂಡರಿ, 4 ಸಿಕ್ಸರ್ ) ಸ್ಪೋಟಕ ಅರ್ಧಶತಕದ ನೆರವಿನಿಂದ 9 ವಿಕೆಟ್ ಗೆ 209 ರನ್ ಬಾರಿಸಿತು.

ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಮೊದಲ ವಿಕೆಟ್ ಗೆ ಶಿಖರ್ ಧವನ್ ಹಾಗೂ ಜಾನಿ ಬೇರ್ ಸ್ಟೋ ಸ್ಪೋಟಕ ಆರಂಭ ನೀಡಿದರು. ಕೇವಲ 30 ಎಸೆತಗಳಲ್ಲಿ ಈ ಜೋಡಿ 60 ರನ್ ಕಲೆಹಾಕುವ ಮೂಲಕ ದೊಡ್ಡ ಮೊತ್ತಕ್ಕೆ ವೇದಿಕೆ ನಿರ್ಮಿಸಿತ್ತು. ನಾಲ್ಕು ಓವರ್ ಗಳಲ್ಲೇ ಅರ್ಧಶತಕದ ಗಡಿ ದಾಟಿದ್ದ ಈ ಜೋಡಿಯನ್ನು 5ನೇ ಓವರ್ ನ ಕೊನೇ ಎಸೆತದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಬೇರ್ಪಡಿಸಿದರು. 15 ಎಸೆತಗಳಲ್ಲಿ 21 ರನ್ ಬಾರಿಸಿದ್ದ ಧವನ್, ಮ್ಯಾಕ್ಸ್ ವೆಲ್ ಗೆ ಬೌಲ್ಟ್ ಆಗಿ ನಿರ್ಗಮಿಸಿದಾಗ ಪಂಜಾಬ್ ತಂಡ 60 ರನ್ ಸಿಡಿಸಿತ್ತು.

ಆದರೆ, ಬೇರ್ ಸ್ಟೋ ಆಟಕ್ಕೆ ಮಿತಿ ಇರಲಿಲ್ಲ. ಮೊಹಮದ್ ಸಿರಾಜ್ ಎಸೆದ ಓವರ್ ನಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿದ ಬೇರ್ ಸ್ಟೋ ಕೇವಲ 21 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಇದರಿಂದಾಗಿ ಪವರ್ ಪ್ಲೇ ಮುಕ್ತಾಯಕ್ಕೆ ಪಂಜಾಬ್ ಕಿಂಗ್ಸ್ ತಂಡ 1 ವಿಕೆಟ್ ಗೆ 83 ರನ್ ಬಾರಿಸಿತ್ತು. ಇದು ಐಪಿಎಲ್ ನಲ್ಲಿ ಪವರ್ ಪ್ಲೇ ಅವಧಿಯಲ್ಲಿ 2ನೇ ಸರ್ವಶ್ರೇಷ್ಠ ಮೊತ್ತವಾಗಿದ್ದರೆ, ಬೇರ್ ಸ್ಟೋ ಅವರ 21 ಎಸೆತಗಳ ಅರ್ಧಶತಕ ಟಿ20ಯಲ್ಲಿ ಅವರ ವೇಗದ ಅರ್ಧಶತಕ ಎನಿಸಿದೆ. ಧವನ್ ಔಟಾದ ಬಳಿಕ ಬಂದ ಭಾನುಕಾ ರಾಜಪಕ್ಸೆ ಹೆಚ್ಚು ಹೊತ್ತು ನಿಲ್ಲಲಿಲ್ಲ ಕೇವಲ 3 ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು. 55 ಎಸೆತಗಳಲ್ಲಿ 102 ರನ್ ಬಾರಿಸಿದ್ದ ಔಏಳೆ ಶಾಬಾಜ್ ಅಹ್ಮದ್ ಎಸೆತದಲ್ಲಿ ಜಾನಿ ಬೇರ್ ಸ್ಟೋ ಔಟಾಗುವುದರೊಂದಿಗೆ ಅಬ್ಬರದ ಆಟಕ್ಕೆ ತೆರೆಬಿತ್ತು.

IPL 2022 ಟಾಸ್ ಗೆದ್ದ ಆರ್ ಸಿಬಿ ತಂಡ ಬೌಲಿಂಗ್ ಆಯ್ಕೆ

ಬೇರ್ ಸ್ಟೋ ಔಟಾದ ಬಳಿಕ ಆರ್ ಸಿಬಿ ಹಾಕಿದ, 9 10 ಮತ್ತು 11ನೇ ಓವರ್ ಗಳಿಂದ ಒಟ್ಟಾಗಿ 13 ರನ್ ಗಳು ಮಾತ್ರವೇ ಬಂದವು. ಆದರೆ, 12ನೇ ಓವರ್ ನಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ ಅಬ್ಬರದ ಆಟವಾಡಲು ಆರಂಭಿಸಿದರು. ಇದರಿಂದಾಗಿ 13 ಓವರ್ ಗಳ ಅಂತ್ಯಕ್ಕೆ ಪಂಜಾಬ್ ತಂಡ್ 130 ರನ್ ಬಾರಿಸಿತ್ತು. ಲಿವಿಂಗ್ ಸ್ಟೋನ್ ಗೆ ಇನ್ನೊಂದೆಡೆಯಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ.

IPL 2022: ಆರ್‌ಸಿಬಿ ತಂಡಕ್ಕೆ ಟಾಪ್‌ 2ಗೇರಲು ಇನ್ನೂ ಇದೆ ಅವಕಾಶ..! ಹೇಗೆ ಗೊತ್ತಾ..?

4ನೇ ವಿಕೆಟ್ ಗೆ ಲಿವಿಂಗ್ ಸ್ಟೋನ್ ಹಾಗೂ ಮಯಾಂಕ್ ಅಗರ್ವಾಲ್ 51 ರನ್ ಜೊತೆಯಾಟವಾಡಿದರು. ಇದರಲ್ಲಿ ಬಹುಪಾಲು ರನ್ ಗಳನ್ನು ಲಿವಿಂಗ್ ಸ್ಟೋನ್ ಬಾರಿಸಿದರು. 16 ಎಸೆತ ಆಡಿದ ಮಯಾಂಕ್ ಅಗರ್ವಾಲ್ 3 ಬೌಂಡರಿಗಳೊಂದಿಗೆ 19 ರನ್ ಬಾರಿಸಿ ಹರ್ಷಲ್ ಪಟೇಲ್ ಗೆ ವಿಕೆಟ್ ನೀಡಿದರು. ನಂತರ ಬಂದ ಜಿತೇಶ್ ಶರ್ಮ (9) ಹಾಗೂ ಹರ್ ಪ್ರೀತ್ ಬ್ರಾರ್ (7) ಕೂಡ ನಿರಾಸೆ ಮೂಡಿಸಿದ್ದರಿಂದ ತಂಡದ ಮೊತ್ತವನ್ನು ಹೆಚ್ಚಿನ ಜವಾಬ್ದಾರಿ ಲಿವಿಂಗ್ ಸ್ಟೋನ್ ಹೆಗಲ ಮೇಲಿತ್ತು.

Follow Us:
Download App:
  • android
  • ios