Asianet Suvarna News Asianet Suvarna News

IPL 2022 ಪಾಟಿದಾರ್ ಸೆಂಚುರಿಯಿಂದ ಅಬ್ಬರಿಸಿದ ಆರ್‌ಸಿಬಿ, ಲಖನೌಗೆ ಬೃಹತ್ ಟಾರ್ಗೆಟ್!

  • ಚೊಚ್ಚಲ ಶತಕ ಸಿಡಿಸಿದ ರಜತ್ ಪಾಟಿದಾರ್
  • ಲಖನೌ ಹಾಗೂ ಆರ್‌ಸಿಬಿ ನಡುವಿನ ಎಲಿಮಿನೇಟರ್ ಪಂದ್ಯ
  • ಲಖನೌಗೆ 208 ರನ್ ಟಾರ್ಗೆಟ್ ನೀಡಿದ ಆರ್‌ಸಿಬಿ
IPL 2022 Rajat Patidar hits maiden century in Lucknow Super Giants vs Royal Challengers Bangalore Eliminator ckm
Author
Bengaluru, First Published May 25, 2022, 9:46 PM IST

ಕೋಲ್ಕತಾ(ಮೇ.25): ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ದಾಖಲೆ ನಿರ್ಮಾಣವಾಗಿದೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಅಬ್ಬರಿಸಿದ ಆರ್‌ಸಿಬಿ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ನೆರವಿನಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ವಿಕೆಟ್ ನಷ್ಟಕ್ಕೆ 207 ರನ್ ಸಿಡಿಸಿದೆ. 

ಲಖನೌ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಇದರಿಂದ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಕುಸಿತದ ತಂಡಕ್ಕೆ ರಜತ್ ಪಾಟಿದಾರ್ ಆಸರೆಯಾದರು.  ಐಪಿಎಲ್ ಪ್ಲೇ ಆಫ್ ಪಂದ್ಯಗಳಲ್ಲಿ ಗರಿಷ್ಠ ರನ್ ಸಿಡಿಸಿದ ಅನ್‌ಕ್ಯಾಪ್ ಪ್ಲೇಯರ್ ಅನ್ನೋ ಹೆಗ್ಗಳಿಕೆಗೆ ರಜತ್ ಪಾಟಿದಾರ್ ಪಾತ್ರರಾಗಿದ್ದಾರೆ.

ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ  ಗರಿಷ್ಠ ರನ್ ಸಿಡಿಸಿದ ಅನ್‌ಕ್ಯಾಪ್ ಪ್ಲೇಯರ್
101 ರನ್, ರಜತ್ ಪಾಟಿದಾರ್ (RCB vs LSG) 2022
94 ರನ್, ಮನೀಶ್ ಪಾಂಡೆ( KKR vs PBKS) 2014
89 ರನ್ ಮನ್ವಿಂದರ್ ಬಿಸ್ಲಾ( KKR vs CSK) 2012

ಐಪಿಎಲ್ ನಾಕೌಟ್ ಪಂದ್ಯದಲ್ಲಿ ಸೆಂಚುರಿ ಸಾಧನೆ 
122  ರನ್ ವಿರೇಂದ್ರ ಸೆಹ್ವಾಗ್ (PBKS v CSK) 2014 (2ನೇ ಕ್ವಾಲಿಫೈಯರ್)
117* ರನ್ ಶೇನ್ ವ್ಯಾಟ್ಸನ್( CSK v SRH) 2018 ( (ಫೈನಲ್)
115* ವೃದ್ಧಿಮಾನ್ ಸಾಹ ( PBKS v KKR( 2014 (ಫೈನಲ್)
113 ಮುರಳಿ ವಿಜಯ್ (CSK v DC( 2012 (2ನೇ ಕ್ವಾಲಿಫೈಯರ್)
101* ರಜತ್ ಪಾಟಿದಾರ್( RCB vs LSG( 2022 (ಎಲಿಮಿನೇಟರ್)

ಐಪಿಎಲ್ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿದ ಅನ್‌ಕ್ಯಾಪ್ ಪ್ಲೇಯರ್ಸ್
120* ರನ್,  ಪೌಲ್ ವಾಲ್ತಟಿ ( ಪಂಜಾಬ್ vs ಚೆನ್ನೈ) 2011
114* ರನ್, ಮನೀಶ್ ಪಾಂಡೆ( ಆರ್‌ಸಿಬಿ vs ಡೆಕ್ಕನ್) 2009
101* ರನ್, ದೇವದತ್ ಪಡಿಕ್ಕಲ್(ಆರ್‌ಸಿಬಿ vs ರಾಜಸ್ಥಾನ) 2021
101* ರನ್  ರಜತ್ ಪಾಟಿದಾರ್ ( ಆರ್‌ಸಿಬಿ vs ಲಖನೌ) 2022

ಮಳೆಯಿಂದ ಪಂದ್ಯ ವಿಳಂಭಗೊಂಡಿತು. ಇತ್ತ ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್‌ಸಿಬಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ಫಾಫ್ ಡುಪ್ಲೆಸಿಸ್ ಡಕೌಟ್ ಆದರು. ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ಹೋರಾಟದಿಂದ ಆರ್‌ಸಿಬಿ ಚೇತರಿಸಿಕೊಂಡಿತು. 

ಕೊಹ್ಲಿ ಹಾಗೂ ಪಾಟೀದಾರ್ ಜೋಡಿ 66 ರನ್‌ ಜೊತೆಯಾಟ ನೀಡಿತು. ಆದರೆ ಕೊಹ್ಲಿ 25 ರನ್ ಸಿಡಿಸಿ ಔಟಾದರುಯ. ಆದರೆ ರಜತ್ ಪಾಟಿದಾರ್ ಹೋರಾಟ ಮುಂದುವರಿಸಿದರು. ಅಬ್ಬರಿಸಿದ ಪಾಟಿದಾರ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.

ಪಾಟಿದಾರ್ ಹೋರಾಟ ಮುಂದುವರಿಸಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್ 9 ರನ್ ಸಿಡಿಸಿ ಔಟಾದರು. ಮಹಿಪಾಲ್ ಲೋಮ್ರೊರ್ 14 ರನ್ ಸಿಡಿಸಿ ಔಟಾದರು. ಆದರೆ ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ಆರ್‌ಸಿಬಿ ತಂಡಕ್ಕೆ ನೆರವಾಯಿತು.

ಪಾಟಿದಾರ್ ಆಕರ್ಷಕ ಸೆಂಚುರಿ ಸಿಡಿಸಿ ದಾಖಳೆ ಬರೆದರು. ಇತ್ತ ದಿನೇಶ್ ಕಾರ್ತಿಕ್ ಕೂಡ ಉತ್ತಮ ಹೋರಾಟ ನೀಡಿದರು. ಪಾಟಿದಾರ್ ಅಜೇಯ 112 ರನ್ ಸಿಡಿಸಿದರೆ, ಕಾರ್ತಿಕ್ ಅಜೇಯ 37 ರನ್ ಸಿಡಿಸಿದರು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ವಿಕೆಟ್ ನಷ್ಟಕ್ಕೆ 207 ರನ್ ಸಿಡಿಸಿತು.
 

Follow Us:
Download App:
  • android
  • ios