ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲೂ ಮಿಂಚಿನ ದಾಳಿ ಸನ್‌ರೈಸರ್ಸ್ ತಂಡಕ್ಕೆ ಸೋಲಿನ ಶಾಕ್ ನೀಡಿದ ರಾಜಸ್ಥಾನ ರಾಜಸ್ಥಾನ ರಾಯಲ್ಸ್ ತಂಡಕ್ಕೆ 61 ರನ್ ಗೆಲುವು

ಪುಣೆ(ಮಾ.29): ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ 210 ರನ್ ಸಿಡಿಸಿದರೆ, ಬೌಲಿಂಗ್‌ನಲ್ಲಿ ಮಾರಕ ದಾಳಿ ಸಂಘಟಿಸಿದ ರಾಜಜಸ್ಥಾನ ರಾಯಲ್ಸ್ ಎದುರಾಳಿ ಸನ್‌ರೈಸರ್ಸ್ ತಂಡದ ವಿರುದ್ಧ 61 ರನ್ ಗೆಲುವು ದಾಖಲಿಸಿದೆ. 211 ರನ್ ಚೇಸ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ ನಷ್ಟಕ್ಕೆ 149 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.

ಬೌಲಿಂಗ್‌ನಲ್ಲಿ 210 ರನ್ ಬಿಟ್ಟುಕೊಟ್ಟ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ವೇಳೆ ಬೃಹತ್ ಮೊತ್ತ ನೋಡಿಯೆ ಬೆಚ್ಚಿ ಬಿದ್ದಿತ್ತು. ನಾಯಕ ಕೇನ್ ವಿಲಿಯಮ್ಸ್ ಹಾಗೂ ಅಭಿಶೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರಿಸವು ಬದಲು ಆಘಾತ ನೀಡಿದರು. ಸನ್‌ರೈಸರ್ಸ್ 3 ರನ್‌ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಪತನಗೊಂಡಿತು. ನಾಯಕ ಕೇನ್ ವಿಲಿಯಮ್ಸನ್ 2ರನ್ ಸಿಡಿಸಿ ಔಟಾದರು.

ಆರಂಭದಲ್ಲೇ ಕನ್ನಡಿಗ ಪ್ರಸಿದ್ಧ್ ಕೃಷ್ಣ ಮಾರಕ ದಾಳಿ ಆರಂಭಿಸಿದ್ದರು. ವಿಲಿಯಮ್ಸನ್ ವಿಕೆಟ್ ಕಬಳಿಸಿದ ಬೆನ್ನಲ್ಲೇ ರಾಹುಲ್ ತ್ರಿಪಾಠಿಯನ್ನು ಪೆವಿಲಿಯನ್‌ಗೆ ಕಳುಹಿಸಿದರು. ತ್ರಿಪಾಠಿ ಡಕೌಟ್‌ ಆದರು. ಇನ್ನು ಟ್ರೆಂಟ್ ಬೋಲ್ಟ್ ದಾಳಿಗೆ ನಿಕೋಲಸ್ ಪೂರನ್ ಜಾಗ ಕಾಲಿ ಮಾಡಿದರ. ಪೂರನ್ ಕೂಡ ಶೂನ್ಯ ಸುತ್ತಿದರು.

IPL 2022 ಆರ್‌ಸಿಬಿ ತಂಡಕ್ಕಿದೆ 205 ರನ್‌ಗಳ ಫೋಬಿಯಾ..!

9ರನ್ ಸಿಡಿಸಿದ ಸನ್‌ರೈಸರ್ಸ್ ಹೈದರಾಬಾದ್ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ್ಯಡಿನ್ ಮಕ್ರಮ್ ದಿಟ್ಟ ಹೋರಾಟ ನೀಡಿದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ಅದ್ಬುಲ್ ಸಮಾದ್ 4 ರನ್ ಸಿಡಿಸಿ ಔಟಾದರು. ರೋಮಿಯೋ ಶೆಫರ್ಡ್ ಹಾಗೂ ವಾಶಿಂಗ್ಟನ್ ಸುಂದರ್ ಹೋರಾಟವೂ ಸಾಕಾಗಲಿಲ್ಲ.

ಶೆಫರ್ಡ್ 18 ಎಸೆತದಲ್ಲಿ 24 ರನ್ ಸಿಡಿಸಿ ಔಟಾದರು. ವಾಶಿಂಗ್ಟನ್ ಸುಂದರ್ 14 ಎಸೆತದಲ್ಲಿ 5 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 40 ರನ್ ಸಿಡಿಸಿದರು. ಇತ್ತ ಆ್ಯಡಿನ್ ಹೋರಾಟ ಮುಂದುವರಿಸಿದರು. ಅಂತಿಮ ಹಂತದಲ್ಲಿನ ಹೋರಾಟದಿಂದ ಸನ್‌ರೈಸರ್ಸ್ ಹೈದರಾಬಾದ್ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಯಿತು.

IPL 2022 ಟಿವಾಟಿಯಾ ಅಬ್ಬರ, ಲಖನೌ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲುವು!

ಆ್ಯಡಿನ್ ಅಜೇಯ ರನ್ ಸಿಡಿಸಿದರೆ, ಭುವನೇಶ್ವರ್ ಕುಮಾರ್ ಅಜೇಯ ರನ್ ಸಿಡಿಸಿದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 149 ರನ್ ಸಿಡಿಸಿತು. ರಾಜಸ್ಥಾನ ರಾಯಲ್ಸ್ 61 ರನ್ ಗೆಲುವು ಕಂಡಿತು.

ಐಪಿಎಲ್ 2022 ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಅತ್ಯುತ್ತಮ ಆರಂಭ ಪಡೆದಿದೆ. ಯುವ ಹಾಗೂ ಸ್ಪೋಟಕ ಆಟಗಾರರನ್ನು ಹೊಂದಿರುವ ರಾಜಸ್ಥಾನ ರಾಯಲ್ಸ್ ಇದೀಗ ಬಲಿಷ್ಠ ತಂಡಗಳಿಗೆ ಕಠಿಣ ಸವಾಲು ನೀಡುವ ಎಲ್ಲಾ ಸೂಚನೆ ನೀಡಿದೆ. ಆದರೆ ಸ್ಟಾರ್ ಆಟಗಾರರನ್ನು ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ಆರಂಭದಲ್ಲಿ ಎಡವಿದೆ.

ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 6 ವಿಕೆಟ್‌ಗೆ ಬರೋಬ್ಬರಿ 210 ರನ್‌ ಕಲೆ ಹಾಕಿತು. ಬೃಹತ್‌ ಮೊತ್ತದ ಎದುರು ಕಂಗಾಲಾದ ಸನ್‌ರೈಸ​ರ್‍ಸ್ 7 ವಿಕೆಟ್‌ಗೆ 149 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡಕ್ಕೆ ಏಡನ್‌ ಮಾರ್ಕ್ರಮ್‌(ಔಟಾಗದೆ 57), ವಾಷಿಂಗ್ಟನ್‌ ಸುಂದರ್‌(14 ಎಸೆತದಲ್ಲಿ 40) ಅಬ್ಬರದ ಬ್ಯಾಟಿಂಗ್‌ ಮೂಲಕ ನೆರವಾದರೂ ಗೆಲ್ಲಲು ಸಾಧ್ಯವಾಗಲಿಲ್ಲ.

ಇದಕ್ಕೂ ಮೊದಲು ರಾಯಲ್ಸ್‌ ಪರ 100ನೇ ಪಂದ್ಯವಾಡಿದ ಸ್ಯಾಮ್ಸನ್‌, ಕೇವಲ 27 ಎಸೆತಗಳಲ್ಲಿ 55 ರನ್‌ ಸಿಡಿಸಿದರು. ಇದರಲ್ಲಿ 3 ಬೌಂಡರಿ, 5 ಆಕರ್ಷಕ ಸಿಕ್ಸರ್‌ ಕೂಡಾ ಒಳಗೊಂಡಿತ್ತು. ಇತರೆ ಬ್ಯಾಟರ್‌ಗಳೂ ಅಬ್ಬರಿಸಿದ್ದರಿಂದ ತಂಡ 200 ರನ್‌ ಗಡಿ ದಾಟಿತು. ಜೋಸ್‌ ಬಟ್ಲರ್‌(35), ಯಶಸ್ವಿ ಜೈಸ್ವಾಲ್‌(20) ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ಕಳೆದ ಬಾರಿ ಆರ್‌ಸಿಬಿಯಲ್ಲಿ ಮಿಂಚಿದ್ದ ಕನ್ನಡಿಗ ದೇವದತ್ತ ಪಡಿಕ್ಕಲ್‌ ಈ ಬಾರಿಯೂ ಉತ್ತಮ ಲಯ ಮುಂದುವರಿಸುವ ಸೂಚನೆ ನೀಡಿದ್ದಾರೆ. ಪಂದ್ಯದಲ್ಲಿ ಅವರು 29 ಎಸೆತಗಳಲ್ಲಿ 41 ರನ್‌ ಸಿಡಿಸಿದರು. ಶಿಮ್ರೋನ್‌ ಹೆಟ್ಮೇಯರ್‌ ಕೇವಲ 13 ಎಸೆತಗಳನ್ನು ಎದುರಿಸಿ 2 ಬೌಂಡರಿ, 2 ಸಿಕ್ಸರ್‌ ಒಳಗೊಂಡಂತೆ 32 ರನ್‌ ಬಾರಿಸಿದರು.