* ಪಂಜಾಬ್ ಕಿಂಗ್ಸ್‌ ತಂಡವನ್ನು ಕಾಡುತ್ತಿದ್ದಾರೆ ರಾಹುಲ್ ತೆವಾಟಿಯಾ* ಕನ್ನಡಿಗ ಅನಿಲ್ ಕುಂಬ್ಳೆ ಬೆನ್ನಿಗೆ ಬಿದ್ದಿದ್ದಾನೆ ತೆವಾಟಿಯಾ* ಕುಂಬ್ಳೆ ಹುಡುಗರನ್ನ ಕಾಡೋದು ನಿಲ್ಲಿಸಿಲ್ಲ ಎಡಗೈ ಬ್ಯಾಟರ್‌

ಬೆಂಗಳೂರು(ಏ.10): ಮುಯೂರ ಸಿಂಹಾಸನವನ್ನ ನಿರ್ಮಿಸಿ ರಾಜ್ಯಭಾರ ಮಾಡಿದ ರಾಜ ವಿಕ್ರಮಾದಿತ್ಯನಿಗೆ ಬೇತಾಳ ಹೇಗೆಲ್ಲಾ ಕಾಡಿತ್ತು ಅನ್ನೋದು ಎಲ್ಲರಿಗೂ ಗೊತ್ತು. ರಾಜ ಎಲ್ಲಿಗೆ ಹೋದ್ರು, ಏನೇ ಮಾಡಿದ್ರೂ ಬೇತಾಳ ಮಾತ್ರ ರಾಜನ ಬೆನ್ನ ಹಿಂದೆಯೇ ಇರುತ್ತಿತ್ತು. ಬಿಟ್ಟು ಬಿಡದೆ ಕಾಡುತ್ತಿತ್ತು. ಈಗ ಐಪಿಎಲ್​ನಲ್ಲಿ ಒಬ್ಬ ಆಟಗಾರ ಕನ್ನಡಿಗ ಅನಿಲ್ ಕುಂಬ್ಳೆ (Anil Kumble) ಬೆನ್ನಿಗೆ ಬಿದ್ದಿದ್ದಾನೆ. ವಿಕ್ರಮಾದಿತ್ಯನಿಗೆ ಬೇತಾಳ ಹೇಗೆ ಕಾಡಿತೋ ಹಾಗೆ ಕುಂಬ್ಳೆಯನ್ನ ಈತ ಕಾಡ್ತಿದ್ದಾನೆ. ತಂಡದ ಬದಲಾದ್ರೂ ಕುಂಬ್ಳೆಯನ್ನ ಮತ್ತು ಕುಂಬ್ಳೆ ಹುಡುಗರನ್ನ ಕಾಡೋದು ನಿಲ್ಲಿಸಿಲ್ಲ. ಆ ಬೇತಾಳ ಬೇರೆ ಯಾರೂ ಅಲ್ಲ. ರಾಹುಲ್ ತೆವಾಟಿಯಾ.

ತಂಡ ಬದಲಿಸಿದ್ರೂ ಪಂಜಾಬ್ ಕಾಡೋದು ಬಿಡ್ತಿಲ್ಲ:

ಕರ್ನಾಟಕದ ಅನಿಲ್ ಕುಂಬ್ಳೆ ಪಂಜಾಬ್ ಕಿಂಗ್ಸ್ (Punjab Kings) ಕೋಚ್. ಅವರು ಕೋಚ್ ಆದ್ಮೇಲೆ ಪಂಜಾಬ್ ತಂಡವನ್ನ ಕನ್ನಡಿಗನೇ ಆದ ಕೆಎಲ್ ರಾಹುಲ್ (KL Rahul) ಮುನ್ನಡೆಸಿದ್ದರು. ಈ ಸಲ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ಪಂಜಾಬ್ ಟೀಮ್ ಲೀಡ್ ಮಾಡ್ತಿದ್ದಾರೆ. ಆದರೆ ಈ ಪಂಜಾಬ್​​​​​​​​​​​ ತಂಡವನ್ನ ರಾಹುಲ್ ತೆವಾಟಿಯಾ ಬಿಟ್ಟು ಬಿಡದೆ ಕಾಡೋಕೆ ಶುರು ಮಾಡಿದ್ದಾರೆ. ಅದು ಯಾವ ಮಟ್ಟಕ್ಕೆ ಅಂದ್ರೆ ಪಂಜಾಬ್ ಕೈಯಲ್ಲಿದ್ದ ಗೆಲುವನ್ನ ಕಸಿದುಕೊಳ್ತಿದ್ದಾರೆ.

2020ರಲ್ಲಿ ಒಂದೇ ಓವರ್​​ನಲ್ಲಿ 5 ಸಿಕ್ಸ್​: 2022ರಲ್ಲಿ ಸತತ 2 ಸಿಕ್ಸ್ 

2020ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ರಾಹುಲ್​ ತೆವಾಟಿಯಾ, ಪಂಜಾಬ್ ಕಿಂಗ್ಸ್ ವಿರುದ್ಧ 31 ಬಾಲ್​ನಲ್ಲಿ 7 ಸಿಕ್ಸ್ ಸಹಿತ 53 ರನ್ ಬಾರಿಸಿದ್ದರು. ರಾಯಲ್ಸ್ 224 ರನ್ ಚೇಸ್ ಮಾಡಿ ಗೆದ್ದಿತ್ತು. ತೆವಾಟಿಯಾ ಒಂದೇ ಓವರ್​ನಲ್ಲಿ ಐದು ಸಿಕ್ಸ್ ಸಿಡಿಸಿ, ಪಂಜಾಬ್ ಕೈಯಿಂದ ಗೆಲುವನ್ನ ಕಸಿದುಕೊಂಡಿದ್ದರು. ಈ ಸಲ ರಾಹುಲ್ ತೆವಾಟಿಯಾ, ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡರೂ, ಪಂಜಾಬ್ ಕಿಂಗ್ಸ್ ತಂಡವನ್ನ ಕಾಡೋದನ್ನ ನಿಲ್ಲಿಸಿಲ್ಲ. ಮೊನ್ನೆ ಪಂಜಾಬ್ ವಿರುದ್ಧ ಕೊನೆ ಎರಡು ಬಾಲ್​ನಲ್ಲಿ ಲಕ್ನೋ ಗೆಲುವಿಗೆ 12 ರನ್ ಬೇಕಿತ್ತು. ಒಡೆಯನ್ ಸ್ಮಿತ್​​​​​ಗೆ ಸತತ ಎರಡು ಸಿಕ್ಸ್ ಸಿಡಿಸಿ ಲಕ್ನೋ ತಂಡವನ್ನ ರೋಚಕವಾಗಿ ಗೆಲ್ಲಿಸಿದ್ರು ತೆವಾಟಿಯಾ. ಪುಣೆಯಲ್ಲಿದ್ದಾಗ ಧೋನಿ ಇದೇ ಪಂಜಾಬ್ ವಿರುದ್ಧ ಸತತ ಎರಡು ಸಿಕ್ಸ್ ಸಿಡಿಸಿ ಗೆಲ್ಲಿಸಿದ್ದರು. ಆ ದಾಖಲೆಯನ್ನ ತೆವಾಟಿಯಾ ಸರಿಗಟ್ಟಿದ್ದಾರೆ.

ಪಂಜಾಬ್ ಕಿಂಗ್ಸ್​ ವಿರುದ್ಧ ಕೊನೆ 10 ಬಾಲ್, 8 ಸಿಕ್ಸ್:

ಮೊನ್ನೆಯ ಪಂದ್ಯ ಸೇರಿದಂತೆ ಪಂಜಾಬ್ ಕಿಂಗ್ಸ್ ವಿರುದ್ಧ ಚೇಸಿಂಗ್ ವೇಳೆ ರಾಹುಲ್ ಕೊನೆ 10 ಬಾಲ್​ನಲ್ಲಿ 8 ಸಿಕ್ಸರ್​ ಸಿಡಿಸಿದ್ದಾರೆ. ಜೊತೆಗೆ ಎರಡು ಪಂದ್ಯವನ್ನ ಪಂಜಾಬ್ ಕೈಯಿಂದ ಕಿತ್ತುಕೊಂಡಿದ್ದಾರೆ. ರಾಜಸ್ಥಾನದಿಂದ ಲಕ್ನೋಗೆ ಹೋದ್ರೂ ಪಂಜಾಬ್ ರಾಜರನ್ನ ಕಾಡೋದನ್ನ ನಿಲ್ಲಿಸಿಲ್ಲ. ಅದಕ್ಕೆ ನಾವ್ ಮೊದಲೇ ಹೇಳಿದ್ದು ಅನಿಲ್ ಕುಂಬ್ಳೆ ಬೆನ್ನಿಗೆ ಬಿದ್ದ ಬೇತಾಳ ಅಂತ.

IPL 2022: ಸಿಕ್ಸರ್ ಬಾರಿಸಿನೇ ಐಪಿಎಲ್‌ ಮ್ಯಾಚ್​ ಗೆದ್ದ 4 ತಂಡಗಳಿವು..!

ಮುಂಬೈ: ಮಾರ್ಚ್​ 26ಕ್ಕೆ ಆರಂಭಗೊಂಡ ಐಪಿಎಲ್ ನಲ್ಲಿ 17 ಪಂದ್ಯಗಳು ಮುಗಿದಿವೆ. ಮೊದಲ ವಾರಕ್ಕಿಂತ ಎರಡನೇ ವಾರದ ಪಂದ್ಯಗಳು ಸಖತ್ ಥ್ರಿಲ್ಲಿಂಗ್​ ​​​​​​​ನೀಡ್ತಿವೆ. ಅದ್ರಲ್ಲೂ ಈ ವಾರದಲ್ಲಿ ಮಂಗಳವಾರದಿಂದ ಶುಕ್ರವಾರದವರೆಗೆ ನಡೆದ ನಾಲ್ಕು ಪಂದ್ಯಗಳು ಸಿಕ್ಸ್​​​ನೊಂದಿಗೆ ಜಯಗಳಿಸಿವೆ. ಈ ಮ್ಯಾಚಸ್​​ ನೋಡುಗರಿಗೆ ಭರ್ಜರಿ ಭರಪೂರ ಮನರಂಜನೆ ನೀಡಿವೆ. 

ಸಿಕ್ಸ್ ಬಾರಿಸಿ ಆರ್​ಸಿಬಿಗೆ ಗೆಲುವು ತಂದುಕೊಟ್ಟ ಹರ್ಷಲ್: ಏಪ್ರಿಲ್ 5ರಂದು ನಡೆದ ಆರ್​ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವಿನ ಪಂದ್ಯ ಸಾಕಷ್ಟು ರೋಚಕವಾಗಿತ್ತು. ಡುಪ್ಲೆಸಿಸ್ ಪಡೆ 170 ರನ್ ಗುರಿ ಬೆನ್ನಟ್ಟಿದ್ದಾಗ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹರ್ಷಲ್ ಪಟೇಲ್,​ ಸಿಕ್ಸ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ರು.

ಕಮಿನ್ಸ್ ​ಸಿಕ್ಸ್ ಮೋಡಿ.. ಕೆಕೆಆರ್​ಗೆ ಪ್ರಚಂಡ ಜಯ: ಈ ಪಂದ್ಯವಂತೂ ಅಭಿಮಾನಿಗಳ ಕಣ್ಣುಂಚಿನಲ್ಲಿ ಇನ್ನೂ ಹಾಗೇ ಉಳಿದಿದೆ. ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯದಲ್ಲಿ ಪ್ಯಾಟ್​​ ಕಮಿನ್ಸ್ ವೀರಾವೇಶ ತೋರಿದ್ರು. ಶರವೇಗದ ಅರ್ಧಶತಕದ ಜೊತೆ ಸಿಕ್ಸ್​ ಸಿಡಿಸಿ ಕೆಕೆಆರ್​​​​​ಗೆ ಪ್ರಚಂಡ ಗೆಲುವಿಗೆ ಕಾರಣರಾಗಿದ್ರು. 14 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಐಪಿಎಲ್‌ನಲ್ಲಿ ಕೆ.ಎಲ್‌ ರಾಹುಲ್‌ ಜತೆ ಅತಿವೇಗದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಆಯುಶ್ ಬದೋನಿ ವಿನ್ನಿಂಗ್​ ಸಿಕ್ಸ್​​​.. ಡೆಲ್ಲಿಗೆ ಶಾಕ್​​: ಇನ್ನು 15ನೇ ಐಪಿಎಲ್​​​​ನ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಲಕ್ನೋ ತಂಡಗಳು ಮುಖಾಮುಖಿಯಾಗಿದ್ವು. ಭಾರಿ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಯಂಗ್​​​​​​​​​ ಟೈಗರ್​​ ಆಯುಶ್​ ಬದೋನಿ ಸಿಕ್ಸ್​​​ನೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ರು.

ಕೊನೆ ಎಸೆತದಲ್ಲಿ ಸಿಕ್ಸ್​ ಸಿಡಿಸಿ ಪಂಜಾಬ್​​ಗೆ​ ವಿಲನ್ ಆದ ತೆವಾಟಿಯಾ: ಪಂಜಾಬ್​​​-ಗುಜರಾತ್ ನಡುವಿನ ಪಂದ್ಯ ಕೊನೆ ಎಸೆತದವರೆಗೂ ಸಾಗಿತ್ತು. ಪಂಜಾಬ್​ ಗೆಲ್ಲಲು ಕೊನೆ ಎಸೆತದಲ್ಲಿ 6 ರನ್​​​ ಬೇಕಿತ್ತು. ಸ್ಟ್ರೈಕ್​ನಲ್ಲಿದ್ದ ಆಲ್​ರೌಂಡರ್ ರಾಹುಲ್​ ತೆವಾಟಿಯಾ ಚೆಂಡನ್ನ ಸಿಕ್ಸರ್​ಗಟ್ಟಿ ವಿನ್ನಿಂಗ್ ಹೀರೋ ಅನ್ನಿಸಿಕೊಂಡಿದ್ರು.