ಗುಜರಾತ್ ಟೈಟಾನ್ಸ್ ರಾಜಸ್ಥಾನ ವಿರುದ್ಧ ದಿಟ್ಟ ಹೋರಾಟ ಸಂಜು ಸ್ಯಾಮ್ಸನ್ ಹಾಗೂ ಜೋಸ್ ಬಟ್ಲರ್ ಹೋರಾಟ 184 ರನ್ ಸಿಡಿಸಿದ ರಾಜಸ್ಥಾನ ರಾಯಲ್ಸ್

ಕೋಲ್ಕತಾ(ಮೇ.24): ಜೋಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್ ಹೋರಾಟದಿಂದ ಗುಜರಾತ್ ಟೈಟಾನ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 188 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ಥಾನ ರಾಯಲ್ಸ್ 11 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ 3 ರನ್ ಸಿಡಿಸಿ ಔಟಾದರು. ದಿಢೀರ್ ವಿಕೆಟ್ ಪತನದಿಂದ ಆತಂಕಕ್ಕೆ ಒಳಗಾಗಿದ್ದ ತಂಡಕ್ಕೆ ನಾಯಕ ಸಂಜು ಸ್ಯಾಮ್ಸನ್ ಆಸರೆಯಾದರು. ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ ತಂಡಕ್ಕೆ ಚೇತರಿಕೆ ನೀಡಿದರು.

ಬೆಂಗಳೂರು ನನ್ನ ಎರಡನೇ ತವರು: ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಎಬಿ ಡಿವಿಲಿಯರ್ಸ್‌..!

ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸ್ಯಾಮ್ಸನ್ 26 ಎಸೆತದಲ್ಲಿ 47 ರನ್ ಸಿಡಿಸಿ ಔಟಾದರು. ದೇದತ್ ಪಡಿಕ್ಕಲ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಜೋಸ್ ಬಟ್ಲರ್ ರಾಜಸ್ಥಾನ ರಾಯಲ್ಸ್ ತಂಡದ ರನ್ ವೇಗ ಹೆಚ್ಚಿಸಿದರು.

ಬಟ್ಲರ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಪಡಿಕ್ಕಲ್ 20 ಎಸೆತದಲ್ಲಿ 28 ರನ್ ಸಿಡಿಸಿ ಔಟಾದರು. ಬಟ್ಲರ್ ಅಬ್ಬರಿಸಿದರು. ಪರಿಣಾಮ ಅಲ್ಪಮೊತ್ತದ ಭೀತಿಯಲ್ಲಿದ್ದ ರಾಜಸ್ಥಾನ ರಾಯಲ್ಸ್ ಉತ್ತಮ ಮೊತ್ತ ಪೇರಿಸಿತು. ಇತ್ತ ಶಿಮ್ರೋನ್ ಹೆಟ್ಮೆಯರ್ 4 ರನ್ ಸಿಡಿಸಿ ಔಟಾದರು. ರಿಯಾನ್ ಪರಾಗ್ 4 ರನ್ ಸಿಡಿಸಿ ರನೌಟ್ ಆದರು

ಜೋಸ್ ಬಟ್ಲರ್ 56 ಎಸೆತದಲ್ಲಿ 88 ರನ್ ಸಿಡಿಸಿ ರನೌಟ್ ಆದರು. ಆರ್ ಅಶ್ವಿನ್ ಅಜೇಯ 2 ರನ್ ಸಿಡಿಸಿದರು.ಈ ಮೂಲಕ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ 188 ರನ್ ಸಿಡಿಸಿತು. 

ರಿಷಭ್‌ ಪಂತ್‌ಗೆ 1.63 ಕೋಟಿ ರುಪಾಯಿ ವಂಚಿಸಿದ ಹರ್ಯಾಣ ಕ್ರಿಕೆಟಿಗ!

ಪ್ಲೇ ಆಫ್ ಪಂದ್ಯ
ಪ್ಲೇ ಆಫ್ ಸುತ್ತಿನ ಹೋರಾಟ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದೊಂದಿಗೆ ಆರಂಭಗೊಂಡಿದೆ. ಇಂದಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡಕ್ಕೆ ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ. ನಾಳೆ(ಮೇ.25) ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡ 2ನೇ ಕ್ವಾಲಿಫೈಯರ್ ಆಡಲಿದೆ. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ.

ಫೈನಲ್‌ಗೆ ಮೀಸಲು ದಿನ
ಮೇ 29ಕ್ಕೆ ನಿಗದಿಯಾಗಿರುವ ಫೈನಲ್‌ ಪಂದ್ಯ ರಾತ್ರಿ 8ಕ್ಕೆ ಆರಂಭಗೊಳ್ಳುವ ಕಾರಣ ಮಳೆಯಿಂದ ತಡವಾದರೆ ಓವರ್‌ ಕಡಿತವಿಲ್ಲದೆ ಪಂದ್ಯ ಆರಂಭಿಸಲು ರಾತ್ರಿ 10.10ರ ವರೆಗೂ ಅವಕಾಶವಿರಲಿದೆ. 5 ಓವರ್‌ ಪಂದ್ಯ ನಡೆಸಲು ಮಧ್ಯರಾತ್ರಿ 12.26ರ ವರೆಗೂ ಕಾಲಾವಕಾಶವಿರಲಿದ್ದು, ಮೇ 30 ಅನ್ನು ಮೀಸಲು ದಿನವಾಗಿಡಲಾಗಿದೆ. ಮೊದಲ ದಿನ ಪಂದ್ಯ ಅರ್ಧ ನಡೆದಿದ್ದರೆ, ಮೀಸಲು ದಿನದಂದು ಪಂದ್ಯ ಮುಂದುವರಿಯಲಿದೆ. ಕೇವಲ ಟಾಸ್‌ ಅಷ್ಟೇ ಆಗಿ ಪಂದ್ಯ ನಡೆಯದಿದ್ದರೆ, 2ನೇ ದಿನ ಹೊಸದಾಗಿ ಟಾಸ್‌ ಹಾಕಲಾಗುತ್ತದೆ. ಒಂದು ವೇಳೆ ಮೊದಲ ಇನ್ನಿಂಗ್‌್ಸ ಮುಗಿದು, 2ನೇ ಇನ್ನಿಂಗ್‌್ಸನಲ್ಲಿ 5 ಓವರ್‌ ಪೂರ್ಣಗೊಂಡ ಬಳಿಕ ಮಳೆ ಸುರಿದರೆ, ಡಕ್ವತ್‌ರ್‍ ಲೂಯಿಸ್‌ ನಿಯಮವನ್ನು ಅಳವಡಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಮೀಸಲು ದಿನದಂದು ಕೇವಲ ಸೂಪರ್‌ ಓವರ್‌ನಿಂದಲೂ ಫಲಿತಾಂಶ ನಿರ್ಧರಿಸಬಹುದಾಗಿದೆ. ಫೈನಲ್‌ನಲ್ಲಿ ಸೂಪರ್‌ ಓವರ್‌ ಆರಂಭಿಸಲು ಮಧ್ಯರಾತ್ರಿ 1.20ರ ವರೆಗೂ ಅವಕಾಶವಿರಲಿದೆ.