Asianet Suvarna News Asianet Suvarna News

IPL 2022: ಪೃಥ್ವಿ ಶಾಗೆ ಟೈಫಾಯ್ಡ್‌ ಜ್ವರ, ಟೂರ್ನಿಯಿಂದಲೇ ಔಟ್..?

* ಪ್ಲೇ ಆಫ್‌ ಹೊಸ್ತಿಲಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತ

* ಸ್ಪೋಟಕ ಆರಂಭಿಕ ಬ್ಯಾಟರ್‌ ಪೃಥ್ವಿ ಶಾ ಮುಂದಿನ ಕೆಲ ಪಂದ್ಯಗಳಿಗೆ ಅಲಭ್ಯ

* ಪೃಥ್ವಿ ಶಾಗೆ ಟೈಫಾಯ್ಡ್‌ ಜ್ವರ ಬಂದಿದೆ ಎಂದು ತಂಡದ ನಾಯಕ ರಿಷಭ್‌ ಪಂತ್‌ ಮಾಹಿತಿ

IPL 2022 Prithvi Shaw unlikely to be available for Delhi Capitals last two league games Says Shane Watson kvn
Author
Bengaluru, First Published May 14, 2022, 8:44 AM IST

ಮುಂಬೈ(ಮೇ.14): ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ಲೇ ಆಫ್‌ (Indian Premier League Play offs) ಪ್ರವೇಶಿಸಲು ಸಾಕಷ್ಟು ಪರಿಶ್ರಮ ಪಡುತ್ತಿದೆ. ಇದೆಲ್ಲದರ ಹೊರತಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ತಾರಾ ಆರಂಭಿಕ ಬ್ಯಾಟರ್‌ ಪೃಥ್ವಿ ಶಾ (Prithvi Shaw) ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಈ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಶೇನ್ ವಾಟ್ಸನ್ (Shane Watson) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಒಳ್ಳೆಯ ಬೆಳವಣಿಗೆಯಲ್ಲ. ಪೃಥ್ವಿ ಶಾ ಅವರಿಗೆ ಏನಾಗಿದೆ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಕಳೆದೆರಡು ವಾರಗಳಿಂದ ಅವರು ಜ್ವರದಿಂದ ಬಳಲುತ್ತಿದ್ದರು. ಸಾಕಷ್ಟು ಬಳಲಿದಂತೆ ಕಂಡು ಬಂದಿರುವ ಪೃಥ್ವಿ ಶಾ ಮುಂದಿನ ಕೆಲ ಪಂದ್ಯಗಳಿಗೆ ಅವರು ಆಯ್ಕೆಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಶೇನ್ ವಾಟ್ಸನ್‌ ಗ್ರೇಡ್‌ ಕ್ರಿಕೆಟರ್ಸ್‌ ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಪೃಥ್ವಿ ಶಾ ಕೌಶಲ್ಯಯುತ ಅದ್ಭುತ ಬ್ಯಾಟರ್‌, ಆತ ಜಗತ್ತಿನ ದಿಗ್ಗಜ ಬೌಲರ್‌ಗಳನ್ನು ಅನಾಯಾಸವಾಗಿ ದಂಡಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಈಗವರು ತಂಡದ ಆಯ್ಕೆಗೆ ಅಲಭ್ಯರಾಗಿದ್ದು ನಮ್ಮ ಪಾಲಿಗೆ ದೊಡ್ಡ ನಷ್ಟ. ಆದರೆ ಅವರು ಆದಷ್ಟು ಬೇಗ ಗುಣಮುಖರಾಗುವ ವಿಶ್ವಾಸವಿದೆ. ಎಷ್ಟೇ ಗುಣಮುಖರಾದರೂ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮುಂದಿನ ಎರಡು ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಶೇನ್ ವಾಟ್ಸನ್ ಹೇಳಿದ್ದಾರೆ. 

IPL 2022: ಪೃಥ್ವಿ ಶಾಗೆ ಜ್ವರ, ಖಾಸಗಿ ಆಸ್ಪತ್ರೆಗೆ ದಾಖಲು

ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟರ್‌ ಪೃಥ್ವಿ ಶಾಗೆ ಟೈಫಾಯ್ಡ್‌ ಜ್ವರ ಬಂದಿದೆ ಎಂದು ತಂಡದ ನಾಯಕ ರಿಷಭ್‌ ಪಂತ್‌ (Rishabh Pant) ಮಾಹಿತಿ ನೀಡಿದ್ದರು. ಬುಧವಾರ ರಾಜಸ್ಥಾನ ರಾಯಲ್ಸ್(Rajasthan Royals) ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಅವರು, ‘ಪೃಥ್ವಿಯನ್ನು ನಾವು ತುಂಬಾ ಮಿಸ್‌ ಮಾಡುತ್ತಿದ್ದೇವೆ. ಆದರೆ ನಮಗೆ ಏನೂ ಮಾಡಲು ಆಗುವುದಿಲ್ಲ. ಅವರಿಗೆ ಟೈಫಾಯ್ಡ್‌ ಅಥವಾ ಅಂತದ್ದೇ ಜ್ವರ ಬಂದಿದ್ದಾಗಿ ವೈದ್ಯರು ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ. ಕಳೆದ ಭಾನುವಾರ ತೀವ್ರ ಜ್ವರ ಕಾಣಿಸಿಕೊಂಡ ಕಾರಣ ಪೃಥ್ವಿ ಶಾರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಷ್ಟಕ್ಕೂ ಪೃಥ್ವಿ ಶಾ ಅವರಿಗೆ ಏನಾಗಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪೃಥ್ವಿ ಶಾ ಇದುವರೆಗೂ 9 ಪಂದ್ಯಗಳನ್ನಾಡಿದ್ದು, 259 ರನ್ ಸಿಡಿಸಿದ್ದಾರೆ. ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್‌ (David Warner) ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಿಕರಾಗಿ ಕಣಕ್ಕಿಳಿದು ಉತ್ತಮ ಆರಂಭ ಒದಗಿಸಿಕೊಟ್ಟರೆ, ಡೆಲ್ಲಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಗಮವಾಗುತ್ತಿತ್ತು. ಆದರೆ ಪೃಥ್ವಿ ಅಲಭ್ಯತೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕಾಡುವ ಸಾಧ್ಯತೆಯಿದೆ.

ಸದ್ಯ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 12 ಪಂದ್ಯಗಳನ್ನಾಡಿ ತಲಾ 6 ಗೆಲುವು ಹಾಗೂ ಸೋಲುಗಳೊಂದಿಗೆ 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಡೆಲ್ಲಿ ಗೆಲುವು ಸಾಧಿಸಿದರೆ, ಪ್ಲೇ ಆಫ್‌ ಹಾದಿ ಸುಗಮವಾಗಲಿದೆ.

Follow Us:
Download App:
  • android
  • ios