IPL 2022 ಮತ್ತೆ ಸೋಲಿನ ಕಹಿ, ಕೆಕೆಆರ್ ಮುಂದೆ ಮಂಕಾದ ಮುಂಬೈ!

  • ಸತತ 2 ಗೆಲುವು ದಾಖಲಿಸಿ ಸಂಭ್ರಮಿಸಿದ್ದ ಮುಂಬೈಗೆ ಮತ್ತೆ ಸೋಲು
  • ಮುಂಬೈ ವಿರುದ್ಧ ಕೆಕೆಆರ್‌ಗೆ 52 ರನ್ ಗೆಲುವು
  • ಮುಂಬೈ ಇಂಡಿಯನ್ಸ್‌ಗೆ 9ನೇ ಸೋಲು
IPL 2022 Pat Cummins helps Kolkata Knight Riders to beat Mumbai Indians by 52 runs ckm

ಮುಂಬೈ(ಮೇ.09): ಸೋಲುಗಳಿಂದ ಹೊರಬಂದ ಮುಂಬೈ ಇಂಡಿಯನ್ಸ್ ತಂಡದ ಹಣೆಬರಹ ಬದಲಾಗಲಿಲ್ಲ. ಸತತ 2 ಗೆಲುವಿನ ಮೂಲಕ ಮುಂಬೈ ಅಭಿಮಾನಿಗಳ ಕಣ್ಣೀರು ಒರೆಸಲು ಯತ್ನಿಸಿದ್ದ ಮುಂಬೈ ಇಂಡಿಯನ್ಸ್ ಮತ್ತೆ ಮುಗ್ಗರಿಸಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಸೋಲಿಗೆ ಶರಣಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಬ್ಬರಿಸಿದ ಕೆಕೆಆರ್ 52 ರನ್ ಗೆಲುವು ದಾಖಲಿಸಿದೆ.

166 ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ರೋಹಿತ್ ಶರ್ಮಾ ಕೇವಲ 2 ರನ್ ಸಿಡಿಸಿ ಔಟಾದರು. ಇತ್ತ ತಿಲಕ್ ವರ್ಮಾ 6 ರನ್ ಸಿಡಿಸಿ ನಿರ್ಗಮಿಸಿದರು. 32 ರನ್‌ಗೆ ಮುಂಬೈ ಇಂಡಿಯನ್ಸ್ 2 ವಿಕೆಟ್ ಪತನಗೊಂಡಿತು.

IPL 2022: ಹಸರಂಗ ಮ್ಯಾಜಿಕ್‌, ಸನ್‌ರೈಸರ್ಸ್‌ ಬಗ್ಗುಬಡಿದ ಆರ್‌ಸಿಬಿ..!

ಇಶಾನ್ ಕಿಶನ್ ಹೋರಾಟದಿಂದ ಮುಂಬೈ ಇಂಡಿಯನ್ಸ್ ಚೇತರಿಸಿಕೊಂಡಿತು. ಆದರೆ ರಮನದೀಪ್ ಸಿಂಗ್ ಹಾಗೂ ಟಿಮ್ ಡೇವಿಡ್ ಅಬ್ಬರಿಸಲಿಲ್ಲ. ರಮನದೀಪ್ 12 ರನ್ ಗಳಿಸಿ ನಿರ್ಗಮಿಸಿದರು. ಟಿಮ್ ಡೇವಿಡ್ 13 ರನ್ ಸಿಡಿಸಿ ಔಟಾದರು. ಕೀರನ್ ಪೋಲಾರ್ಡ್ ಕೇವಲ 15 ರನ್ ಸಿಡಿಸಿ ಮತ್ತೆ ನಿರಾಸೆ ಮೂಡಿಸಿದರು.

ಡೇನಿಯಲ್ ಸ್ಯಾಮ್ಸ್, ಮರುಗನ್ ಅಶ್ವಿನ್ ಬ್ಯಾಟ್‌ನಿಂದ ರನ್ ಹರಿದು ಬರಲಿಲ್ಲ. ಕುಮಾರ್ ಕಾರ್ತಿಕೇಯ ಹಾಗೂ ಜಸ್ಪ್ರೀತ್ ಬುಮ್ರಾ ರನೌಟ್‌ಗೆ ಬಲಿಯಾದರು. ಪರಿಣಾಮ 17.3 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ 113 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಕೆಕೆಆರ್ 52 ರನ್ ಗೆಲುವು ದಾಖಿಸಿತು.

ಮುಂಬೈ ವಿರುದ್ಧದ ಗೆಲುವಿನಿಂದ ಕೆಕೆಆರ್ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಿಗಿದಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ಹಿಂದಿಕ್ಕಿದ ಕೆಕೆಆರ್ ಇದೀಗ 7ನೇ ಸ್ಥಾನ ಅಲಂಕರಿಸಿದೆ. ಆದರೆ ಮುಂಬೈ ಇಂಡಿಯನ್ಸೇ ಕೇವಲ 2 ಗೆಲುವಿನೊಂದಿಗೆ 10ನೇ ಸ್ಥಾನದಲ್ಲಿದೆ. 

RCB ಫ್ಯಾನ್ ಫಾಲೋವರ್ಸ್ ಹೆಚ್ಚಾಗಲು ಕಾರಣವೇನು ಗೊತ್ತಾ..?

 ದಾಖಲೆಯ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 15ನೇ ಆವೃತ್ತಿ ಐಪಿಎಲ್‌ನಲ್ಲಿ 9ನೇ ಸೋಲು ಕಂಡಿದೆ. ಆರಂಭಿಕ 8 ಪಂದ್ಯಗಳಲ್ಲಿ ಸೋತು ಬಳಿಕ 2 ಪಂದ್ಯ ಗೆದ್ದಿದ್ದ ತಂಡ ಸೋಮವಾರ ಕೋಲ್ಕತಾ ವಿರುದ್ಧ 52 ರನ್‌ಗಳಿಂದ ಪರಾಭವಗೊಂಡಿತು. ಈಗಾಗಲೇ ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿರುವ ಮುಂಬೈ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಉಳಿದರೆ, ಪ್ಲೇ-ಆಫ್‌ನಿಂದ ಬಹುತೇಕ ಹೊರಬಿದ್ದಿರುವ ಕೋಲ್ಕತಾ 5ನೇ ಗೆಲುವಿನೊಂದಿಗೆ 8ನೇ ಸ್ಥಾನಕ್ಕೇರಿತು.

ಕೆಕೆಆರ್ ಇನಿಂಗ್ಸ್:
ಕೋಲ್ಕತಾ ನೈಟ್ ರೈಡರ್ಸ್ ಪರ ವೆಂಕಟೇಶ್ ಅಯ್ಯರ್,ನಿತೀಶ್ ರಾಣಾ, ರಿಂಕು ಸಿಂಗ್ ಹಾಗೂ ನಿತೀಶ್ ರಾಣಾ ಉತ್ತಮ ಪ್ರದರ್ಶನ ನೀಡಿದರು. ಇದರಿಂದ 9 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿತು. ವೆಂಕಟೇಶ್ ಅಯ್ಯರ್ 43 ರನ್ ಸಿಡಿಸಿ ಔಟಾದರು. ಅಜಿಂಕ್ಯ ರಹಾನೆ 25 ರನ್ ಕಾಣಿಕೆ ನೀಡಿದರು. ನಿತೀಶ್ ರಾಣಾ 43 ರನ್ ಸಿಡಿಸಿದರು. ಶ್ರೇಯಸ್ ಅಯ್ಯರ್, ಆ್ಯಂಡ್ರೆ ರಸೆಲ್ ಅಬ್ಬರಿಸಲಿಲ್ಲ. ಶೆಲ್ಡಾನ್ ಜಾಕ್ಸನ್ 5 ರನ್ ಸಿಡಿಸಿ ನಿರ್ಗಮಿಸಿದರು. ರಿಂಕು ಸಿಂಗ್ ಅಜೇಯ 23 ರನ್ ಸಿಡಿಸಿದರು. ಪ್ಯಾಟ್ ಕಮಿನ್ಸ್, ಸುನಿಲ್ ನರೈನ್, ಟಿಮ್ ಸೌಥಿ ಹಾಗೂ ವರುಣ್ ಚಕ್ರವರ್ತಿ ಅಬ್ಬರಿಸಿಲ್ಲ.

Latest Videos
Follow Us:
Download App:
  • android
  • ios