* ಬೌಲಿಂಗ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸುತ್ತಿದ್ದಾರೆ ಪ್ಯಾಟ್ ಕಮಿನ್ಸ್* ಪ್ಯಾಟ್ ಕಮಿನ್ಸ್ ಸದ್ಯ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಬೌಲರ್* ಕೆಕೆಆರ್ ಪರ ದುಬಾರಿ ಬೌಲಿಂಗ್ ಮಾಡುತ್ತಿರುವ ಕಮಿನ್ಸ್
ಮುಂಬೈ(ಏ.21): ಇಂಟರ್ ನ್ಯಾಷನಲ್ ಕ್ರಿಕೆಟಿಗೂ IPLಗೂ ಸಂಬಂಧವಿಲ್ಲ ಕಂಡ್ರಿ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡೋದೆ ಬೇರೆ IPLನಲ್ಲಿ ಆಡೋದೆ ಬೇರೆ. ಈ ಎರಡು ಕಡೆ ಕ್ಲಿಕ್ ಆಗಿರೋರು ಕೆಲವೇ ಕೆಲ ಮಂದಿ ಮಾತ್ರ. ಉಳಿದವರು ಅಲ್ಲಿ ಕ್ಲಿಕ್ ಆದ್ರೆ ಇಲ್ಲಿ ಆಗಲ್ಲ, ಇಲ್ಲಿ ಕ್ಲಿಕ್ ಆದ್ರೆ ಅಲ್ಲಿ ಆಗಲ್ಲ ಅನ್ನೋ ಸ್ಥಿತಿಯಲ್ಲಿದ್ದಾರೆ. ಹಾಗಾಗಿನೇ IPL ಪರ್ಫಾಮೆನ್ಸ್ ನೋಡಿಕೊಂಡು ನ್ಯಾಷನಲ್ ಟೀಮ್ಗೆ ಆಟಗಾರರನ್ನ ಸೆಲೆಕ್ಟ್ ಮಾಡೋದು ತೀರ ಕಮ್ಮಿ. IPLನಲ್ಲಿ ಉತ್ತಮ ಪ್ರದರ್ಶನ ನೀಡಿ ನ್ಯಾಷನಲ್ ಟೀಮ್ಗೆ ಸೆಲೆಕ್ಟ್ ಆದ್ರೂ ಅವರು ಹೆಚ್ಚು ದಿನ ಟೀಮ್ನಲ್ಲಿರೋಲ್ಲ.
ಈ ಸಲದ IPLನಲ್ಲಿ ರನ್ ಹೊಳೆಯೇ ಹರಿಯುತ್ತಿದೆ. ಬೌಲರ್ಗಳ ಮಾರಣ ಹೋಮ ಮಾಡಲಾಗ್ತಿದೆ. ಶ್ರೇಷ್ಠಾತಿಶ್ರೇಷ್ಠ ಬೌಲರ್ಗಳನ್ನ ಬ್ಯಾಟರ್ಗಳು ಬೆಂಡೆತ್ತುತ್ತಿದ್ದಾರೆ. ಕ್ರಿಕೆಟ್ ಜಗತ್ತಿನ ದಿ ಬೆಸ್ಟ್ ಬೌಲರ್ಗಳನ್ನೂ ಬ್ಯಾಟ್ಸ್ಮನ್ಗಳು ಬಿಡುತ್ತಿಲ್ಲ. ಇಲ್ಲೊಬ್ಬ ಟೆಸ್ಟ್ ಕ್ರಿಕೆಟ್ನಲ್ಲಿ ನಂಬರ್ ವನ್ ಬೌಲರ್ ಇದ್ದಾನೆ. ಆದ್ರೂ IPLನಲ್ಲಿ ಇನ್ನಿಲ್ಲದಂತೆ ಕಾಡಿದ್ದಾರೆ ಬ್ಯಾಟರ್ಗಳು. ಆತನೇ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins).
95 ಎಸೆತ.. 190 ರನ್.. 4 ವಿಕೆಟ್.. ಎಕಾನಮಿ 12..:
ಆಸ್ಟ್ರೇಲಿಯಾದ ಫಾಸ್ಟ್ ಬೌಲರ್ ಪ್ಯಾಟ್ ಕಮ್ಮಿನ್ಸ್ ಟೆಸ್ಟ್ ಕ್ರಿಕೆಟ್ನಲ್ಲಿ ನಂಬರ್ ವನ್ ಬೌಲರ್. ಟೆಸ್ಟ್ ಬೌಲರ್ಸ್ ಶ್ರೇಯಾನಲ್ಲಿ ಅಗ್ರಸ್ಥಾನದಲ್ಲಿರುವ ಕಮ್ಮಿನ್ಸ್ ಈ ಸಲದ IPLನಲ್ಲಿ ಕೆಕೆಆರ್ ಪರ ಆಡುತ್ತಿದ್ದಾರೆ. ಕಮ್ಮಿನ್ಸ್ ಈ ಸಲದ ಆಡಿದ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಜಸ್ಟ್ 15 ಬಾಲ್ನಲ್ಲಿ 56 ರನ್ ಸಿಡಿಸಿ ಕೆಕೆಆರ್ ತಂಡವನ್ನ ಗೆಲ್ಲಿಸಿದ್ದರು.
IPLನಲ್ಲಿ ಟೀಂ ಇಂಡಿಯಾ ಇಬ್ಬರು ದಿಗ್ಗಜರಿಂದ ಪ್ಲಾಫ್ ಶೋ..!
ಅದೇ ಕೊನೆ. ಅಲ್ಲಿಂದ ಅವರಿಗೆ ಶನಿ ಕಾಟ ಶುರುವಾಗಿದೆ. ಈ ಸೀಸನ್ನಲ್ಲಿ 4 ಪಂದ್ಯಗಳನ್ನಾಡಿರುವ ಪ್ಯಾಟ್ ಕಮ್ಮಿನ್ಸ್ 15.5 ಓವರ್ ಅಂದ್ರೆ 95 ಎಸೆತಗಳನ್ನ ಎಸೆದಿದ್ದಾರೆ. ಬಿಟ್ಟುಕೊಟ್ಟಿರೋದು ಬರೋಬ್ಬರಿ 190 ರನ್. ಅಂದ್ರೆ 12 ಎಕಾನಮಿಯಲ್ಲಿ ರನ್ ನೀಡಿ, ಈ ಸೀಸನ್ IPLನಲ್ಲಿ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಪ್ರತಿ ಪಂದ್ಯದಲ್ಲೂ 40ಕ್ಕೂ ಅಧಿಕ ರನ್ ನೀಡಿದ್ದಾರೆ. ಅದಕ್ಕೆ ನಾವ್ ಮೊದಲೇ ಹೇಳಿದ್ದು. ಇಂಟರ್ ನ್ಯಾಷನಲ್ನಲ್ಲಿ ಕ್ಲಿಕ್ ಆದವರು ಐಪಿಎಲ್ನಲ್ಲಿ ಕ್ಲಿಕ್ ಆಗಲ್ಲ. ಐಪಿಎಲ್ನಲ್ಲಿ ಕ್ಲಿಕ್ ಆದವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕ್ಲಿಕ್ ಆಗಲ್ಲ ಅಂತ. ಈಗ ಕಮ್ಮಿನ್ಸ್ ಅವರನ್ನ ಮುಂದಿನ ಪಂದ್ಯಗಳಲ್ಲಿ ಆಡಿಸಬೇಕಾ ಅನ್ನೋ ಪ್ರಶ್ನೆ ಎದ್ದಿದೆ. ಕಮ್ಮಿನ್ಸ್ಗೂ ಮುಂಚೆ ಎರಡು ಪಂದ್ಯ ಆಡಿದ್ದ ಟಿಮ್ ಸೌಥ್, 5 ವಿಕೆಟ್ ಪಡೆದಿದ್ದರು. ಹಾಗಾಗಿ ಮುಂದಿನ ಪಂದ್ಯದಲ್ಲಿ ಕಮ್ಮಿನ್ಸ್ ಬದಲು ಸೌಥಿ ಆಡೋ ಎಲ್ಲಾ ಚಾನ್ಸಸ್ ಇದೆ.
