* ಐಪಿಎಲ್‌ನಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ಇಬ್ಬರು ದಿಗ್ಗಜ ಕ್ರಿಕೆಟಿಗರು* ಐಪಿಎಲ್‌ ಆರಂಭಿಕ ಪಂದ್ಯಗಳಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಫೇಲ್* ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ ಹಿಟ್‌ ಮ್ಯಾನ್‌, ಕಿಂಗ್‌ ಕೊಹ್ಲಿ

ಬೆಂಗಳೂರು(ಏ.21): ಹೇಳಿ ಕೇಳಿ ಐಪಿಎಲ್ ಅಂದ್ರೆ ರನ್​ ಹೊಳೆ ಹರಿಯುವ ಟೂರ್ನಿ. ಇಲ್ಲಿ ಬೌಲರ್ಸ್​ ಪಾರಮ್ಯ ಕಮ್ಮಿ. ಬ್ಯಾಟರ್​​ಗಳ ದರ್ಬಾರ್​ ಸದಾ ಜೋರು. ಅದಕ್ಕೆ ಈ ಸಲದ ಐಪಿಎಲ್ ಕೂಡ ಹೊರತಾಗಿಲ್ಲ. ಬೌಲರ್ಸ್​ಗಿಂತ ಹೆಚ್ಚಾಗಿ ಬ್ಯಾಟರ್​​ಗಳ ಸಿಕ್ಸರ್​​​-ಬೌಂಡರಿ ಸದ್ದುನೇ ಹೆಚ್ಚು ಕೇಳಿಸ್ತಿದೆ. ವಿದೇಶಿ ಪ್ಲೇಯರ್ಸ್​ ಜೊತೆ ದೇಶಿ ಯುವ ಕ್ರಿಕೆಟರ್ಸ್​ ಪ್ರಬಲ ಪೈಪೋಟಿಗೆ ಇಳಿದಿದ್ದಾರೆ. ಆದರೆ ಯಾರು ಈ ಸಲ ಕಲರ್​ಫುಲ್​ ಟೂರ್ನಿಯಲ್ಲಿ ರನ್​ ಭರಾಟೆ ನಡೆಸ್ತಾರೆ ಅಂದುಕೊಂಡಿದ್ರೋ ಅವರೆಲ್ಲಾ ಸೈಲೆಂಟಾಗಿದ್ದಾರೆ. ಆ ಪೈಕಿ ಟೀಂ​ ಇಂಡಿಯಾ (Team India) ಹಾಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಮಾಜಿ ಕ್ಯಾಪ್ಟನ್​ ವಿರಾಟ್ ಕೊಹ್ಲಿ (Virat Kohli) ಮುಂಚೂಣಿಯಲ್ಲಿದ್ದಾರೆ.

ಹೌದು, ವಿರಾಟ್ ಕೊಹ್ಲಿ ಹಾಗೂ ರೋಹಿತ್​​ ಶರ್ಮಾ (Rohit Sharma) ಪ್ರಸಕ್ತ ಐಪಿಎಲ್​​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡ್ತಿಲ್ಲ. ಇವರ ಮೇಲಿದ್ದ ನಿರೀಕ್ಷೆಗಳೆಲ್ಲವೂ ಹುಸಿಯಾಗಿವೆ. ರೋಹಿತ್​ ನಾಯಕನ ಜೊತೆ ಬ್ಯಾಟಿಂಗ್​​ನಲ್ಲಿ ದಯನೀಯ ವೈಫಲ್ಯ ಅನುಭವಿಸ್ತಿದ್ದಾರೆ. ಇನ್ನು ಕೊಹ್ಲಿ ಆರ್​ಸಿಬಿ ಕ್ಯಾಪ್ಟನ್ಸಿ ತೊರೆದ ಬಳಿಕ ರನ್​ ಗುಡ್ಡೆ ಹಾಕುವಲ್ಲಿ ಫೇಲಾಗಿದ್ದಾರೆ. ಕೆಂಪಂಗಿ ಸೈನ್ಯ ಉತ್ತಮ ಪ್ರದರ್ಶನ ಹೊರತಾಗಿಯೂ ಕೊಹ್ಲಿ ಬ್ಯಾಡ್​ಫಾರ್ಮ್​ ತಂಡವನ್ನ ಚಿಂತಿಗೀಡು ಮಾಡಿದೆ.

19.83 ಎವರೇಜ್​​ನಲ್ಲಿ 119 ರನ್​ ಬಾರಿಸಿದ ಕೊಹ್ಲಿ: 

ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ತಕ್ಕಂತೆ ಐಪಿಎಲ್​​ನಲ್ಲಿ ವಿರಾಟ ರೂಪ ತಾಳ್ತಿದ್ರು. ಆದ್ರೆ ಈ ಬಾರಿ ಯಾಕೋ ಕೊಹ್ಲಿ ಬ್ಯಾಟ್ ಸೌಂಡ್​​​ ಮಾಡ್ತಿಲ್ಲ. ಸೀಸನ್​​ವೊಂದರಲ್ಲೇ 4 ಶತಕ ಸಿಡಿಸಿದ ಹಿರಿಮೆಗಾರ ಈಗ ಒಂದೊಂದು ರನ್​​ ಗಳಿಸೋಕು ತಿಣುಕಾಡ್ತಿದ್ದಾರೆ. ಅರ್ಧಶತಕ, ಶತಕ ಅನ್ನೋದು ಇವರಿಗೆ ಮರೆತು ಹೋಗಿದೆ. ಪ್ರಸಕ್ತ ಐಪಿಎಲ್​​ನಲ್ಲಿ 7 ಪಂದ್ಯಗಳನ್ನಾಡಿರೋ ವಿರಾಟ್ ಕೊಹ್ಲಿ 19.83 ರ ಎವರೇಜ್​ನಲ್ಲಿ ಬರೀ 119 ರನ್​ ಕಲೆ ಹಾಕಿದ್ದಾರೆ. 48 ಈವರೆಗಿನ ಬೆಸ್ಟ್ ಸ್ಕೋರ್ ಆಗಿದೆ.

IPL 2022: ಅಳಿವು, ಉಳಿವಿಗಾಗಿ ಮುಂಬೈ vs ಚೆನ್ನೈ ಫೈಟ್..!

19.0 ರ ಎವರೇಜ್​​ನಲ್ಲಿ ರೋಹಿತ್​ 114 ರನ್​: ಇನ್ನು ರೋಹಿತ್​ ಶರ್ಮಾ ಕೂಡ ಮಂಕಾಗಿದ್ದಾರೆ. ನಾಯಕನ ಜೊತೆ ಫಾರ್ಮ್​ ಕೂಡ ಕಳೆದುಕೊಂಡಿದ್ದಾರೆ. ಬಿಗ್ ಇನ್ನಿಂಗ್ಸ್​​​​ ಮೂಡಿ ಬಂದಿಲ್ಲ. ಬೌಲರ್ಸ್​ಗಳಿಗೆ ಸಿಲ್ಲಿಯಾಗಿ ವಿಕೆಟ್​ ಒಪ್ಪಿಸ್ತಿದ್ದಾರೆ. ಇಂದು ಚೆನ್ನೈ ವಿರುದ್ಧ ಪಂದ್ಯ ನಡೆಯಲಿದ್ದು, ಲಯಕ್ಕೆ ಮರಳಲು ಎದುರು ನೋಡ್ತಿದ್ದಾರೆ. ಈವರೆಗೆ ಒಟ್ಟು 6 ಪಂದ್ಯ ಆಡಿರುವ ರೋಹಿತ್ ಶರ್ಮಾ 19.00ರ ಎವರೇಜ್​ನಲ್ಲಿ 114 ರನ್ ಗಳಿಸಿದ್ದಾರೆ. 41 ಬೆಸ್ಟ್​ ಸ್ಕೋರ್ ಆಗಿದೆ. ಸೆಂಚುರಿ, ಹಾಫ್​​​ಸೆಂಚುರಿ ಈವರೆಗೆ ಮೂಡಿ ಬಂದಿಲ್ಲ. 

ಟಿ20 ವಿಶ್ವಕಪ್ ಮುನ್ನ ಫಾರ್ಮ್​ ಕಂಡುಕೊಳ್ತಾರಾ ಕೊಹ್ಲಿ-ರೋಹಿತ್​​..?: 

ಐಪಿಎಲ್​​ನಲ್ಲಿ ರೋಹಿತ್​ ಹಾಗೂ ಕೊಹ್ಲಿ ಕಳಪೆ ಆಟ ಟೀಮ್​ ಇಂಡಿಯಾಗೆ ಟೆನ್ಷನ್​ ತಂದೊಡ್ಡಿದೆ. ಯಾಕಂದ್ರೆ ಈ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. 2013ರ ಬಳಿಕ ಟೀಮ್​ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಆ ಕನಸು ಬಾರಿ ನನಸಾಗಬೇಕಾದ್ರೆ ಕೊಹ್ಲಿ ಹಾಗೂ ರೋಹಿತ್​ರಂತ ಲೆಜೆಂಡ್​ ಕ್ರಿಕೆಟರ್ಸ್​ ಫಾರ್ಮ್​ಗೆ ಮರಳೋದು ಅತಿ ಅಗತ್ಯ. ಉಳಿದಿರೋ ಶಾರ್ಟ್​ ಟೈಮ್​​ನಲ್ಲಿ ಇಬ್ಬರು ಬ್ಯಾಡ್​ಫಾರ್ಮ್​ ಮೆಟ್ಟಿನಿಂತು, ಚುಟುಕು ಮಹಾಸಮರದ ವೇಳೆಗೆ ರನ್​ ಗುಡ್ಡೆ ಹಾಕ್ತಾರಾ ಅನ್ನೋದನ್ನ ಕಾದು ನೋಡಬೇಕು.