* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹೊಸ ಟೀಂ ಇಂಡಿಯಾ ನಾಯಕನ ಉಗಮ* ರೋಹಿತ್ ಬಳಿಕ ನಾಯಕನಾಗುವ ರೇಸ್‌ನಲ್ಲಿದ್ದಾರೆ ಟೀಂ ಇಂಡಿಯಾದ ಮೂವರು ಆಟಗಾರರು* ಕನ್ನಡಿಗ ಕೆ.ಎಲ್. ರಾಹುಲ್ ಮೇಲೆ ಹೆಚ್ಚಿನ ನಿರೀಕ್ಷೆ
ಬೆಂಗಳೂರು(ಮಾ.29): IPLನಲ್ಲಿ ಕೇವಲ ಯುವ ಆಟಗಾರರ ಉಗಮವಷ್ಟೇಯಲ್ಲ, ಇಲ್ಲಿ ನಾಯಕರ ಉಗಮವೂ ಆಗುತ್ತೆ. ಶೇನ್ ವಾರ್ನ್ ಮತ್ತು ಅನಿಲ್ ಕುಂಬ್ಳೆ ಅವರು ದಿಗ್ಗಜ ಆಟಗಾರರು ಮಾತ್ರವಲ್ಲ, ಅವರು ಸಹ ಉತ್ತಮ ನಾಯಕರು ಅನ್ನೋದನ್ನ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದ್ದು ಇದೇ IPL. ಅಷ್ಟೇಕೆ, ಟೀಂ ಇಂಡಿಯಾ ನಾಯಕನಾಗುವುದಕ್ಕೂ ಮುಂಚೆ ರೋಹಿತ್ ಶರ್ಮಾ (Rohit Sharma) ದಿ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡಿದ್ದು ಐಪಿಎಲ್ನಲ್ಲೇ. ಮುಂಬೈ ಇಂಡಿಯನ್ಸ್ಗೆ(Mumbai Indians) 5 ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ನಂತರವೇ ರೋಹಿತ್ ನಾಯಕತ್ವ ವಿಶ್ವ ಕ್ರಿಕೆಟ್ಗೆ ಗೊತ್ತಾಗಿದ್ದು. ಅವರು ಭಾರತ ಮೂರು ಮಾದರಿ ತಂಡದ ನಾಯಕನಾಗಿದ್ದು.
ಈ ಸಲದ IPLನಲ್ಲಿ ಒಟ್ಟು 10 ತಂಡಗಳು ಕಣದಲ್ಲಿವೆ. ಎರಡು ತಂಡಗಳಿಗೆ ಫಾರಿನ್ ಪ್ಲೇಯರ್ಸ್ ಕ್ಯಾಪ್ಟನ್ಗಳಾಗಿದ್ದರೆ, ಉಳಿದ 8 ತಂಡಗಳಿಗೆ ಭಾರತೀಯ ಆಟಗಾರರೇ ನಾಯಕರು. ಅದರಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ (Team India) ನಾಯಕ ಕೂಡ. ರೋಹಿತ್ ನಂತರ ಟೀಂ ಇಂಡಿಯಾ ಕ್ಯಾಪ್ಟನ್ ಆಗಲು ಉಳಿದ 7 IPL ನಾಯಕರು ರೇಸ್‌ನಲ್ಲಿದ್ದಾರೆ. ತಮ್ಮ ತಮ್ಮ ತಂಡಗಳಿಗೆ IPL ಟ್ರೋಫಿ ಗೆಲ್ಲಿಸಿಕೊಟ್ಟು ದಿ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಳ್ಳಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ.
ಕ್ಯಾಪ್ಟನ್ಸಿ ರೇಸ್ನಿಂದ 7ರಲ್ಲಿ ನಾಲ್ವರು ಹೊರಬಿದ್ದಿದ್ದೇಕೆ..?:
7 ಭಾರತೀಯ ಆಟಗಾರರು IPLನಲ್ಲಿ ನಾಯಕರಾಗಿದ್ದರೂ ಭವಿಷ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಆಗೋ ಸಾಮರ್ಥ್ಯ ಇರೋದು ಮೂವರಿಗೆ ಮಾತ್ರ. ಉಳಿದ ನಾಲ್ವರು IPLನಲ್ಲಿ ಎಷ್ಟೇ ಉತ್ತಮ ಪ್ರದರ್ಶನ ನೀಡಿದ್ರೂ ಆಟಗಾರರಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬಹುದೇ ಹೊರತು, ನಾಯಕರಾಗಲು ಸಾಧ್ಯವಿಲ್ಲ. ಸಿಎಸ್ಕೆ ಕ್ಯಾಪ್ಟನ್ ರವೀಂದ್ರ ಜಡೇಜಾ (Ravindra Jadeja) ವಯಸ್ಸು 30 ಪ್ಲಸ್ ಆಗಿರೋದ್ರಿಂದ ಟೀಂ ಇಂಡಿಯಾ ಕಪ್ತಾನ ಆಗೋ ರೇಸ್ನಿಂದ ಹೊರಬಿದ್ದಿದ್ದಾರೆ. ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ಸ್ಗೆ (Sanju Samson) ಟೀಂ ಇಂಡಿಯಾದಲ್ಲೇ ಖಾಯಂ ಸ್ಥಾನವಿಲ್ಲ. ಮಯಾಂಕ್ ಅಗರ್ವಾಲ್ (Mayank Agarwal) ಟೆಸ್ಟ್ ಟೀಂನಲ್ಲಿ ಮಾತ್ರ ಸ್ಥಾನ. ಇನ್ನು ಹಾರ್ದಿಕ್ ಪಾಂಡ್ಯಗೆ ಟೀಂ ಇಂಡಿಯಾದಲ್ಲೇ ಸ್ಥಾನವಿಲ್ಲ. ಹಾಗಾಗಿ ಈ ನಾಲ್ವರು IPL ಕಪ್ ಗೆದ್ದರೂ ಭವಿಷ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಆಗೋದು ತುಂಬಾನೇ ಕಷ್ಟ.
IPL 2022: ತಮ್ಮನ್ನು ರೀಟೈನ್ ಮಾಡಿಕೊಳ್ತೇವೆ ಎಂದು ಒಂದು ಮಾತು ಆರ್‌ಸಿಬಿ ಹೇಳಲಿಲ್ಲ..!
ಕನ್ನಡಿಗ ರಾಹುಲ್ಗೆ ಮಹತ್ವದ ಐಪಿಎಲ್:
ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾ ಚುಕ್ಕಾಣಿ ಹಿಡಯೋ ರೇಸ್ನಲ್ಲಿ ಮುಂಚೂಣಿಯಲ್ಲಿರೋದು ಕನ್ನಡಿಗ ಕೆಎಲ್ ರಾಹುಲ್ (KL Rahul). ಈ ಸಲ ಲಖನೌ ಸೂಪರ್ ಜೈಂಟ್ಸ್ ತಂಡವನ್ನ ಲೀಡ್ ಮಾಡ್ತಿರೋ ರಾಹುಲ್, ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡೋ ಜೊತೆ ತಂಡವನ್ನೂ ಚಾಂಪಿಯನ್ ಮಾಡೋ ಒತ್ತಡದಲ್ಲಿದ್ದಾರೆ. ಸೌತ್ ಆಫ್ರಿಕಾದಲ್ಲಿ ಒಂದು ಟೆಸ್ಟ್, ಮೂರು ಒನ್ಡೇ ಮ್ಯಾಚ್ಗಳನ್ನ ಲೀಡ್ ಮಾಡಿದ್ದ ರಾಹುಲ್, ಎಲ್ಲಾ ಪಂದ್ಯಗಳನ್ನೂ ಸೋತಿದ್ದಾರೆ. ನಾನೊಬ್ಬ ಉತ್ತಮ ಓಪನರ್ ಜೊತೆ ಉತ್ತಮ ನಾಯಕ ಅನ್ನೋದನ್ನ ಈ IPLನಲ್ಲಿ ಪ್ರೂವ್ ಮಾಡಬೇಕಿದೆ. ಆಗ ಮಾತ್ರ ಭವಿಷ್ಯದಲ್ಲಿ ಟೀಂ ಇಂಡಿಯಾ ಕಪ್ತಾನ ಆಗೋಕೆ ಸಾಧ್ಯ.
ರಾಹುಲ್ ಹಿಂದಿಕುತ್ತಾರಾ ರಿಷಬ್ ಪಂತ್..?
ರಾಹುಲ್ ನಂತರ ರಿಷಭ್ ಪಂತ್ (Rishabh Pant) ಟೀಂ ಇಂಡಿಯಾ ಕ್ಯಾಪ್ಟನ್ ಆಗೋ ರೇಸ್‌ನಲ್ಲಿದ್ದಾರೆ. ಕಳೆದ ವರ್ಷದ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದರು. ಈ ವರ್ಷವೂ ಅದೇ ಪ್ರದರ್ಶನವನ್ನ ಡೆಲ್ಲಿ ನೀಡಿದ್ರೆ ಆ ಶ್ರೇಯ, ಪಂತ್ಗೆ ಸಲ್ಲಬೇಕು. ಡೆಲ್ಲಿ ತಂಡವನ್ನೂ ಉತ್ತಮವಾಗಿ ಲೀಡ್ ಮಾಡಿ, ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡಿದ್ರೆ ಆಗ ರಿಷಭ್ ಪಂತ್ ಬಿಸಿಸಿಐ ಗಮನ ಸೆಳೆಯಬಹುದು.
ರಾಹುಲ್-ಪಂತ್ಗೆ ಟಕ್ಕರ್ ಕೊಡಲು ಶ್ರೇಯಸ್ ಸ್ಕೆಚ್
ರಾಹುಲ್-ರಿಷಭ್ ಅವರಂತೆ ಶ್ರೇಯಸ್ ಅಯ್ಯರ್ (Shreyas Iyer) ಕೂಡ ಮೂರು ಮಾದರಿ ಟೀಂ ಇಂಡಿಯಾದಲ್ಲಿ ಸ್ಥಾನವಿದೆ. ರಾಹುಲ್-ಪಂತ್ ಟೀಂ ಇಂಡಿಯಾ ವೈಸ್ ಕ್ಯಾಪ್ಟನ್ ಆಗಿದ್ದವರು. ಆದರೆ ಶ್ರೇಯಸ್ ಕೇಲ ಪ್ಲೇಯರ್. ಆದರೆ ಡೊಮೆಸ್ಟಿಕ್ನಲ್ಲಿ ಮುಂಬೈ ಮತ್ತು IPLನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಸಲ ಕೆಕೆಆರ್ ತಂಡವನ್ನ ಲೀಡ್ ಮಾಡುತ್ತಿದ್ದು, ಮೊದಲ ಪಂದ್ಯವನ್ನ ಗೆಲ್ಲಿಸಿಕೊಟ್ಟಿದ್ದಾರೆ. ರಾಹುಲ್ ಹಾಗೂ ಪಂತ್ಗೆ ಹೋಲಿಸಿದ್ರೆ ನಾಯಕತ್ವದಲ್ಲಿ ಶ್ರೇಯಸ್ ಬೆಟರ್. ಅದ್ಭುತ ಬ್ಯಾಟ್ಸ್ಮನ್. ಈ ಸಲ IPL ಟ್ರೋಫಿ ಹಿಡಿದ್ರೆ, ಶ್ರೇಯಸ್ ಟೀಂ ಇಂಡಿಯಾ ಕ್ಯಾಪ್ಟನ್ ರೇಸ್ನಲ್ಲಿ ರಾಹುಲ್-ಪಂತ್ ಅವರನ್ನ ಹಿಂದಿಕ್ಕಿದ್ರೂ ಆಶ್ಚರ್ಯಪಡಬೇಕಿಲ್ಲ.
