Asianet Suvarna News Asianet Suvarna News

IPL 2022: ಎರಡು ಹೊಸ ತಂಡ ಸೇರ್ಪಡೆ; ಲಖನೌ ತಂಡಕ್ಕೆ ಹೊಸ ಹೆಸರಿಟ್ಟ ಯೋಗಿ...!

* 2022ರ ಐಪಿಎಲ್‌ ಟೂರ್ನಿಯಲ್ಲಿ ಹೊಸ ತಂಡಗಳ ಸೇರ್ಪಡೆ

* ಲಖನೌ ಹಾಗೂ ಅಹಮದಾಬಾದ್ ತಂಡಗಳು ಸೇರ್ಪಡೆ

* 7090 ಕೋಟಿ ರುಪಾಯಿ ನೀಡಿ ಲಖನೌ ತಂಡ ಖರೀದಿಸಿದ RPGS ಗ್ರೂಪ್

 

IPL 2022 Netizens went After Crazy after RPSG group and CVC Capitals win bids kvn
Author
Bengaluru, First Published Oct 25, 2021, 9:00 PM IST

ಬೆಂಗಳೂರು(ಅ.25): ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ಗೆ (IPL 2022) ಅಹಮದಾಬಾದ್ ಹಾಗೂ ಲಖನೌ ತಂಡಗಳು ಸೇರ್ಪಡೆಯಾಗುವುದರೊಂದಿಗೆ ಹಲವು ಕುತೂಹಲಗಳಿಗೆ ತೆರೆ ಬಿದ್ದಿದೆ. ಇದೇ ವೇಳೆ ತುಂಬಾ ತಡವಾಗಿ ಹೊಸ ತಂಡಗಳ ಘೋಷಣೆಯಾಗಿದ್ದಕ್ಕೆ ಹಾಗೂ ಲಖನೌ ತಂಡ ಸೇರ್ಪಡೆಯಾಗಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಮೀಮ್ಸ್‌ಗಳು ವೈರಲ್ ಆಗಲಾರಂಭಿಸಿವೆ.

ಹೌದು, 2022ನೇ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ತಂಡಗಳನ್ನು ಖರೀದಿಸಲು ಅದಾನಿ ಗ್ರೂಪ್ (Adani Group), ಮ್ಯಾಂಚೆಸ್ಟರ್ ಯುನೈಟೆಡ್ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳು ಸಾಕಷ್ಟು ಪೈಪೋಟಿ ನಡೆಸಲಿವೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಪ್ರತಿ ತಂಡಗಳನ್ನು ಖರೀದಿಸಲು ಫ್ರಾಂಚೈಸಿಗಳಿಗೆ ಬಿಸಿಸಿಐ 2,000 ಕೋಟಿ ರುಪಾಯಿ ಮೂಲ ಬೆಲೆ ನಿಗದಿ ಪಡಿಸಲಾಗಿತ್ತು. ಆದರೆ ಅಂತಿಮ ಬಿಡ್ಡಿಂಗ್‌ನಲ್ಲಿ ಮೂಲಬೆಲೆಗಿಂತ ಮೂರು ಪಟ್ಟು ಅಧಿಕ ಹಣ ನೀಡಿ ತಂಡವನ್ನು ಖರೀದಿಸುವಲ್ಲಿ RPGS ಗ್ರೂಪ್‌ ಯಶಸ್ವಿಯಾಗಿದೆ. RPGS ಗ್ರೂಪ್‌ 7090 ಕೋಟಿ ರುಪಾಯಿ ನೀಡಿ ಲಖನೌ ತಂಡವನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಇನ್ನು CVC Capitals ಗ್ರೂಪ್‌ 5166 ಕೋಟಿ ರುಪಾಯಿ ನೀಡಿ ಅಹಮದಾಬಾದ್‌ ತಂಡವನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. 

IPLಗೆ ಅಹಮ್ಮದಾಬಾದ್, ಲಕ್ನೌ ಹೊಸ 2 ತಂಡ; ಬಿಡ್ಡಿಂಗ್ ಗೆದ್ದ RPSG ಹಾಗೂ CVC ಕ್ಯಾಪಿಟಲ್!

ರಣಬೀರ್ ಕಪೂರ್-ದೀಪಿಕಾ ಪಡುಕೋಣೆ ದಂಪತಿ ಸೇರಿದಂತೆ ಒಟ್ಟು 10 ಪಾರ್ಟಿಗಳು ಐಪಿಎಲ್‌ ತಂಡಗಳನ್ನು ಖರೀದಿಸಲು ಆಸಕ್ತಿ ತೋರಿದ್ದವು. ಆದರೆ ಸಂಜೀವ್ ಗೋಯೆಂಕಾ ಗ್ರೂಪ್ ಹಾಗೂ ಸಿವಿಸಿ ಕ್ಯಾಪಿಟಲ್ಸ್‌ ಗ್ರೂಪ್‌ ಮಾಡಿದಷ್ಟು ಹೆಚ್ಚು ಮೊತ್ತದ ಬಿಡ್‌ ಉಳಿದವರು ಮಾಡಿರಲಿಲ್ಲ. ಈ ಎರಡು ಗ್ರೂಪ್‌ನವರು ಕ್ರಮವಾಗಿ ಲಖನೌ ಹಾಗೂ ಅಹಮದಬಾದ್ ತವರನ್ನಾಗಿ ಸ್ವೀಕರಿಸಿದ್ದರೂ, ತಂಡದ ಹೆಸರನ್ನು ಅಧಿಕೃತವಾಗಿ ಘೋಷಿಸಿಲ್ಲ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1,32 ಲಕ್ಷ ಮಂದಿ ಪ್ರೇಕ್ಷಕರು ಪಂದ್ಯ ವೀಕ್ಷಿಸಬಹುದಾಗಿದೆ. ಇನ್ನು ಲಖನೌದ ಏಕಾನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ 50 ಸಾವಿರ ಮಂದಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

IPL Bidding : ಇಂದು 2 ಹೊಸ ಐಪಿಎಲ್ ತಂಡಗಳಿಗೆ ಬಿಡ್ಡಿಂಗ್..!

ಇನ್ನು ಅಕ್ಟೋಬರ್ 25ರಂದು ಹೊಸ ತಂಡಗಳ ಹೆಸರು ಘೋಷಣೆಯಾಗಲಿದೆ ಎಂದು ಈ ಮೊದಲೇ ಬಿಸಿಸಿಐ ಖಚಿತಪಡಿಸಿತ್ತು. ಹೀಗಾಗಿ ಐಪಿಎಲ್‌-ಕ್ರಿಕೆಟ್ ಅಭಿಯಾನಿಗಳು ತಂಡಗಳ ಹೆಸರು ಯಾವಾಗ ಘೋಷಣೆಯಾಗಲಿದೆ. ಯಾರು ತಂಡವನ್ನು ಖರೀದಿಸಬಹುದು ಎಂದು ಚಾತಕಪಕ್ಷಿಯಂತೆ ಕಾದು ಕುಳಿತಿದ್ದರು. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳು ವೈರಲ್ ಆಗಿವೆ. ಇನ್ನು  RPGS ಗ್ರೂಪ್‌ ಲಖನೌ ತಂಡವನ್ನು ಖರೀದಿಸುತ್ತಿದ್ದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫೋಟೋ ಬಳಸಿ, ಇಂದಿನಿಂದ ನಿಮ್ಮ ತಂಡದ ಹೆಸರು.. ಎಂದು ಫೋನ್‌ ಕರೆ ಮಾಡುತ್ತಿರುವಂತೆ ಮೀಮ್ಸ್‌ ಮಾಡಲಾಗಿದೆ. ಯೋಗಿ ಆದಿತ್ಯನಾಥ್ ತಮ್ಮ ರಾಜ್ಯದಲ್ಲಿ ಅಲಹಾಬಾದ್ ಸೇರಿದಂತೆ ಹಲವು ಹೆಸರುಗಳನ್ನು ಬದಲಿಸಿ ಗಮನ ಸೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ...

Follow Us:
Download App:
  • android
  • ios