ಪ್ಲೇ ಆಫ್ ಪ್ರವೇಶಕ್ಕೆ ನಡೆಯುತ್ತಿದೆ ಮೆಘಾ ಹೋರಾಟ ಮುಂಬೈ ವಿರುದ್ದ ಬ್ಯಾಟಿಂಗ್‌ನಲ್ಲಿ ಮಂಕಾದ ಡೆಲ್ಲಿ 159 ರನ್ ಸಿಡಿಸಿದ ಡೆಲ್ಲಿ ಕ್ಯಾಪಿಟಲ್ಸ್, ಚೇಸ್ ಮಾಡುತ್ತಾ ಮುಂಬೈ?

ಮುಂಬೈ(ಮೇ.21): ಡೆಲ್ಲಿ ಕ್ಯಾಪಿಟಲ್ಸ್ ತಂಡದ ಒಂದೊಂದೆ ವಿಕೆಟ್ ಪತನ, ಆರ್‌ಸಿಬಿ ಪಾಳಯದಲ್ಲಿ ಸಂಭ್ರಮ ಇಮ್ಮಡಿ ಮಾಡುತ್ತಿತ್ತು. ಮುಂಬೈ ಇಂಡಿಯನ್ಸ್ ಬೌಲಿಂಗ್ ದಾಳಿಯನ್ನು ಇಷ್ಟು ಸಂತಸ ಪಟ್ಟಿದ್ದು ಇದೇ ಮೊದಲು. ಆದರೆ ಡೆಲ್ಲಿ ಸಿಡಿಸಿದ ಮೊತ್ತ ನೋಡಿ ಆರ್‌ಸಿಬಿ ಪಾಳಯದಲ್ಲಿ ಆತಂಕ ಛಾಯೆ ಮೂಡುತ್ತಿದೆ. ಈ ತ್ರಿಕೋನ ಸ್ಪರ್ಧೆ ಏರ್ಪಟ್ಟ ಮಹತ್ವದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 159 ರನ್ ಸಿಡಿಸಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭದಲ್ಲೇ ಮುಂಬೈ ಇಂಡಿಯನ್ಸ್ ಶಾಕ್ ನೀಡಿತು. ಡೇವಿಡ್ ವಾರ್ನರ್ ಕೇವಲ 5 ರನ್ ಸಿಡಿಸಿ ಔಟಾದರು. ಇದು ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿತು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಶ್ ಡಕೌಟ್ ಆದರು.

IPL 2022 ಗೇಮ್​​ ಇಸ್​​​ ನಾಟ್ ಓವರ್​​​​, ಫಿಕ್ಚರ್​​​ ಅಭಿ ಬಾಕಿ ಹೈ..!

ಕಮ್‌ಬ್ಯಾಕ್ ಮಾಡಿದ ಪೃಥ್ವಿ ಶಾ ಕೂಡ ಅಬ್ಬರಿಸಲಿಲ್ಲ. 24 ರನ್ ಸಿಡಿಸಿ ಶಾ ಔಟಾದರು. ನಾಯಕ ರಿಷಬ್ ಪಂತ್ ಹೋರಾಟ ನೀಡಿದರು. ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಮುಂಬೈ ಇಂಡಿಯನ್ಸ್ ದಾಳಿಗೆ ಡೆಲ್ಲಿ ಅಬ್ಬರಿಸಲು ವಿಫಲವಾಯಿತು. ಸರ್ಫರಾಜ್ ಖಾನ್ 10 ರನ್ ಸಿಡಿಸಿ ಔಟಾದರು.

50 ರನ್‌ಗಳಗೆ 4 ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತೀವ್ರ ಸಂಕಷ್ಟಕ್ಕೆ ಸಿಲುಕಿತು. ರಿಷಬ್ ಪಂತ್ 39 ರನ್ ಸಿಡಿಸಿ ಔಟಾದರು. ಪಂತ್ ಹಾಗೂ ರೋವ್ಮನ್ ಪೊವೆಲ್ ಜೊತೆಯಾಟ ಡೆಲ್ಲಿ ತಂಡವನ್ನು ಸುಧಾರಿಸಿತು. ಪಂತ್ ಬಳಿಕ ಪೊವೆಲ್ ಕೊಂಚ ಅಬ್ಬರಿಸಿದರು. ಆದರೆ ಪೊವೆಲ್ 43 ರನ್ ಸಿಡಿಸಿ ಔಟಾದರು. 

ಅಂತಿಮ ಹಂತದಲ್ಲಿ ಅಕ್ಸರ್ ಪಟೇಲ್ ಹಾಗೂ ಶಾರ್ದೂಲ್ ಠಾಕೂರ್ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಠಾಕೂರ್ 4 ರನ್ ಸಿಡಿಸಿ ಔಟಾದರು. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಡೆಲ್ಲಿ ತಂಡ 150ರ ಗಡಿ ದಾಟಿತು. ಅಕ್ಸರ್ ಪಟೇಲ್ ಅಜೇಯ 19 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿತು. 

ಡ್ರೆಸ್ಸಿಂಗ್ ರೂಂ​ನಲ್ಲಿ ಮ್ಯಾಥ್ಯೂ ವೇಡ್ ದಾಂಧಲೆ, ಬಿಸಿ ಮುಟ್ಟಿಸಿದ ರೆಫ್ರಿ..!

160 ರನ್ ಟಾರ್ಗೆಟ್ ಪಡೆದಿರುವ ಮುಂಬೈ ಇಂಡಿಯನ್ಸ್ ಚೇಸಿಂಗ್ ಮಾಡುವ ಆತ್ಮವಿಶ್ವಾಸದಲ್ಲಿದೆ. ಆರ್‌ಸಿಬಿ ಪ್ಲೇ ಆಫ್ ಹಂತಕ್ಕೇರಲು ಇಂದು ಮುಂಬೈ ಇಂಡಿಯನ್ಸ್ ಗೆಲ್ಲಬೇಕು. 160 ರನ್ ಚೇಸ್ ಮಾಡಲು ವಿಫಲವಾದರೆ, ಡೆಲ್ಲಿ ನೇರವಾಗಿ ಪ್ಲೇ ಆಫ್ ಹಂತಕ್ಕೆ ಎಂಟ್ರಿ ಪಡೆಯಲಿದೆ. ಈಗಾಗಲೇ 3 ಸ್ಥಾನಗಳು ಭರ್ತಿಯಾಗಿದೆ. ಇರುವ ಒಂದು ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಿದೆ.ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುವ ಮೂಲಕ ಪ್ಲೇ ಆಫ್ ಪ್ರವೇಶ ಪೆಡದರೆ, ರಾಜಸ್ಥಾನ ರಾಯಲ್ಸ್ 2ನೇ ಸ್ಥಾನದಲ್ಲಿದೆ. ಇನ್ನು ಲಖನೌ ಸೂಪರ್ ಜೈಂಟ್ಸ್ ತಂಡ ಮೂರನೇ ಸ್ಥಾನದಲ್ಲಿದೆ. ಈ ಮೂಲಕ ಪ್ಲೇ ಆಫ್ ಹಂತದಲ್ಲಿ ಆರಂಭಿಕ 3 ಸ್ಥಾನಗಳು ಭರ್ತಿಯಾಗಿದೆ. 4ನೇ ಸ್ಥಾನಕ್ಕೆ ಡೆಲ್ಲಿ ಹಾಗೂ ಆರ್‌ಸಿಬಿ ನಡುವೆ ಪೈಪೋಟಿ ಜೋರಾಗಿದೆ.