* ಆರ್‌ಸಿಬಿ ಎದುರಿನ ಪಂದ್ಯದ ವೇಳೆ ವಿವಾದಾತ್ಮಕ ತೀರ್ಪಿಗೆ ಬಲಿಯಾದ ಮ್ಯಾಥ್ಯೂ ವೇಡ್* ಅಂಪೈರ್ ತೀರ್ಪಿನ ಮೇಲೆ ಅಸಮಾಧಾನ ಹೊರಹಾಕಲು ಹೋಗಿ ಛೀಮಾರಿ ಹಾಕಿಸಿಕೊಂಡ ವೇಡ್* ಅಶಿಸ್ತು ವರ್ತನೆ ತೋರಿದ ಆಸೀಸ್ ಪ್ಲೇಯರ್​ಗೆ ಮ್ಯಾಚ್ ರೆಫ್ರಿ ಖಡಕ್ ಎಚ್ಚರಿಕೆ

ಮುಂಬೈ(ಮೇ.21): ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಆರ್​ಸಿಬಿ, ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ಪಾಯಿಂಟ್ ಟೇಬಲ್​ನಲ್ಲಿ ಟಾಪ್​ನಲ್ಲಿರುವ ಗುಜರಾತ್​ ಟೈಟಾನ್ಸ್‌ಗೆ (Gujarat Titans) ಈ ಸೋಲಿನಿಂದ ಏನೂ ಸಮಸ್ಯೆಯಾಗಿಲ್ಲ. ಆದರೆ ಸಮಸ್ಯೆಯಾಗಿರೋದು ಗುಜರಾತ್ ಟೈಟಾನ್ಸ್‌ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಮ್ಯಾಥ್ಯೂ ವೇಡ್​ಗೆ (Matthew Wade). ಹೌದು, ಈ ಪಂದ್ಯದ ವೇಳೆ ಅಶಿಸ್ತು ವರ್ತನೆ ತೋರಿದ ಆಸೀಸ್ ಪ್ಲೇಯರ್​ಗೆ ಮ್ಯಾಚ್ ರೆಫ್ರಿ, ಎಚ್ಚರಿಕೆ ನೀಡಿ ಛೀಮಾರಿ ಹಾಕಿದ್ದಾರೆ.

ಡ್ರೆಸ್ಸಿಂಗ್​ ರೂಮ್​ನಲ್ಲಿ ಬ್ಯಾಟ್​ ಪೀಸ್ ಪೀಸ್:

ಮುಂಬೈನಲ್ಲಿ ನಡೆದ ಆರ್​ಸಿಬಿ (RCB) ವಿರುದ್ಧ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೈಟಾನ್ಸ್, ಬೇಗ ಶುಭ್‌​ಮನ್ ಗಿಲ್ ವಿಕೆಟ್ ಕಳೆದುಕೊಂಡಿತು. ನಂಬರ್ 3 ಸ್ಲಾಟ್​ನಲ್ಲಿ ಬ್ಯಾಟಿಂಗಿಳಿದ ಮ್ಯಾಥ್ಯೂ ವೇಡ್, 2 ಬೌಂಡ್ರಿ, ಒಂದು ಸಿಕ್ಸ್ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ರು. ಆದ್ರೆ ಗ್ಲೆನ್ ಮ್ಯಾಕ್ಸ್​ವೆಲ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದು ಔಟಾದ್ರು. ಆಗ ವೇಡ್, ಡಿಆರ್​ಎಸ್ ಮೋರೆ ಹೋದರು. ಆದರೆ ಥರ್ಡ್​ ಅಂಪೈರ್ ಸಹ ಔಟ್ ಎಂದು ತೀರ್ಪು ನೀಡಿದ್ರು. ಚೆಂಡು ಪ್ಯಾಡ್​​​​ಗೆ ಬಡಿಯುವ ಮುನ್ನ ಬ್ಯಾಟ್​ಗೆ ತಾಗಿತ್ತು ಅನ್ನೋದು ವೇಡ್ ಅವರ ಮನಸ್ಥಿತಿ ಆಗಿತ್ತು. ಈ ಬೇಸರದಲ್ಲೇ ಅವರು ಪೆವಿಲಿಯನ್​​ಗೆ ಹೆಜ್ಜೆ ಹಾಕಿದ್ರು.

ವೇಡ್​​​​​​​​​​ ಸಮಾಧಾನ ಮಾಡಿದ ಕಿಂಗ್ ಕೊಹ್ಲಿ:

ವಿವಾದಾತ್ಮಕ ತೀರ್ಪಿಗೆ ಬಲಿಯಾದ ಮ್ಯಾಥ್ಯೂ ವೇಡ್, ತಲೆ ಅಲ್ಲಾಡಿಕೊಂಡೇ ಬೇಸರದಲ್ಲಿ ಪೆವಿಲಿಯನ್​ಗೆ ಹೆಜ್ಜೆ ಹಾಕಿದ್ರು. ನಾಟೌಟ್ ಅನ್ನ ಔಟ್ ನೀಡಿದ್ರು ಅನ್ನೋ ಬೇಸರ ಅವರಲ್ಲಿತ್ತು. ಪೆವಿಲಿಯನ್​ಗೆ ಹೋಗ್ತಿದ್ದ ವೇಡ್​ಗೆ ಕಿಂಗ್ ಕೊಹ್ಲಿ ಸಮಾಧಾನ ಸಹ ಮಾಡಿದ್ರು. ಆದ್ರೆ ಡ್ರೆಸ್ಸಿಂಗ್ ರೂಮ್ ವರೆಗೆ ಸೈಲೆಂಟಾಗಿ ಹೋದ ಮ್ಯಾಥ್ಯೂ ವೇಡ್​​, ಅಲ್ಲಿ ವೈಲೆಂಟ್ ಆದ್ರು. ಡ್ರೆಸಿಂಗ್ ರೂಮ್​​ಗೆ ಎಂಟ್ರಿ ಆಗುತ್ತಿದಂತೆ ಹೆಲ್ಮೆಟ್ ಬಿಸಾಕಿದ ವೇಡ್, ಬ್ಯಾಟನ್ನ ಬಡಿದು ಮುರಿದು ಹಾಕಿದ್ರು. ಆ ಹೆಲ್ಮೆಟ್​ ಮತ್ತು ಬ್ಯಾಟ್ ಮತ್ತೆ ಬಳಸಲು ಬರೋದಿಲ್ಲ ಬಿಡಿ. ವೇಡ್ ಇಷ್ಟು ಸಿಟ್ಟಾಗಲು ಕಾರಣ ಅವರು, 8 ಪಂದ್ಯ ಆಡಿದ್ರೂ ಒಂದೂ ಅರ್ಧಶತಕ ಬಾರಿಸಿಲ್ಲ.

IPL 2022 ತಾಹಿರ್ ದಾಖಲೆ ಸರಿಗಟ್ಟಿದ ಚಹಲ್, ಇತಿಹಾಸ ನಿರ್ಮಿಸಲು ಯುಜಿಗೆ ಬೇಕಿದೆ ಇನ್ನೊಂದು ವಿಕೆಟ್‌

ಇಷ್ಟಕ್ಕೆ ಸುಮ್ಮನಾಗದ ವೇಡ್, ಸ್ಟೇಡಿಯಂನ ಬಿಗ್ ಸ್ಕ್ರೀನ್ ಮತ್ತು ಟಿವಿಯಲ್ಲಿ ಬರೋ ರಿಪ್ಲೇ ನೋಡಿ ಕುಪಿತಗೊಂಡರು. ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿ (Virat Kohli) ಮತ್ತು ಮ್ಯಾಕ್ಸ್​ವೆಲ್ ಇಬ್ಬರೂ ವೇಡ್ ಅವರನ್ನ ಸಮಾಧಾನ ಮಾಡಿದ್ರು. ಪಂದ್ಯದ ನಂತರ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದಕ್ಕಾಗಿ ವೇಡ್​ಗೆ ಎಚ್ಚರಿಕೆ ನೀಡಿ ಛೀಮಾರಿ ಹಾಕಿದ್ರು ಮ್ಯಾಚ್ ರೆಫ್ರಿ.

ಉರಿಯುವ ಬೆಂಕಿಗೆ ತುಪ್ಪ ಸುರಿದ ಪಾಂಡ್ಯ:

ನಾಟೌಟ್ ಅನ್ನ ಔಟ್​ ಕೊಟ್ಟಿದ್ದಾರೆ ಅನ್ನೋ ಬೇಸರದಲ್ಲಿದ್ದ ವೇಡ್​ಗೆ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮತ್ತಷ್ಟು ಬೇಸರ ಮಾಡಿದ್ದಾರೆ. ಬ್ಯಾಟ್‌ಗೆ ಚೆಂಡು ತಾಗಿರುವುದು ಅಲ್ಟ್ರಾ ಎಡ್ಜ್‌ನಲ್ಲಿ ಸ್ವಲ್ಪ ಕಂಡಿತ್ತು ಎಂದು ನಾನು ಭಾವಿಸುತ್ತೇನೆ. ಆದರೆ, ದೊಡ್ಡ ಪರದೆಯಲ್ಲಿ ಇದು ಸರಿಯಾಗಿ ಕಂಡಿರಲಿಲ್ಲ. ಇದು ನಮ್ಮ ತಪ್ಪಲ್ಲ. ಇಂಥಾ ವಿಷಯದಲ್ಲಿ ತಂತ್ರಜ್ಞಾನ ಸಹಾಯ ಮಾಡಿಲ್ಲವಾದರೆ, ಯಾರು ನೆರವಾಗಲಿದ್ದಾರೆಂದು ತನಗೆ ತಿಳಿಯುತ್ತಿಲ್ಲ ಎಂದು ಹೇಳೋ ಮೂಲಕ ಪಾಂಡ್ಯ, ಉರಿಯುವ ಬೆಂಕಿಗೆ ತುಪ್ಪ ಸುರಿದು ಮತ್ತಷ್ಟು ವಿವಾದ ಸೃಷ್ಟಿಸಿದ್ದಾರೆ.