* ಐಪಿಎಲ್‌ನಲ್ಲಿ ಸಾಲು ಸಾಲು ಸೋಲು ಕಂಡಿರುವ ಮುಂಬೈ ಇಂಡಿಯನ್ಸ್* ಮೆಗಾ ಹರಾಜಿನಲ್ಲಿ ಆಟಗಾರರ ಆಯ್ಕೆ ವಿಚಾರದಲ್ಲಿ ಎಡವಿತಾ ಮುಂಬೈ ಇಂಡಿಯನ್ಸ್* ಟೂರ್ನಿಯಲ್ಲಿ ಸತತ 4ನೇ ಸೋಲು ಕಂಡ ರೋಹಿತ್ ಶರ್ಮಾ ಪಡೆ

ಮುಂಬೈ(ಏ.13): ಮುಂಬೈ ಇಂಡಿಯನ್ಸ್​​ (Mumbai Indians). ಐಪಿಎಲ್​​​ ಲೋಕದ ಭೀಷ್ಮ. 5 ಬಾರಿ ಟ್ರೋಫಿ ವಿಜೇತ ತಂಡ. 2013ರಿಂದ ಮುಂಬೈ ತಂಡ ಪಾರಮ್ಯ ಮೆರೆಯುತ್ತಿದೆ. ಇಂತಹ ಸಕ್ಸಸ್​ಫುಲ್​ ತಂಡಕ್ಕೆ ಈ ಬಾರಿ ಬ್ಯಾಡ್‌​​ಲಕ್​ ವಕ್ಕರಿಸಿದೆ. ಗೆಲುವು ಅನ್ನೋದು ಅಂಬಾನಿ ಬ್ರಿಗೇಡಿಯನ್ಸ್​ಗೆ ಮರೀಚಿಕೆಯಾಗಿದೆ. ಆಡಿದ 4 ಪಂದ್ಯದಲ್ಲಿ ಮುಗ್ಗರಿಸಿ, ದಯನೀಯ ವೈಫಲ್ಯ ಕಂಡಿದೆ. ತಂಡದ ಕಳಪೆ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿಗಳು ವ್ಯಕ್ತವಾಗ್ತಿವೆ. ಹೀಗೆ ಸೋಲಿನ ಪ್ರಪಾತಕ್ಕೆ ಸಿಲುಕಿರೋ, ರೋಹಿತ್ ಶರ್ಮಾ (Rohit Sharma)​ ಪಡೆ ಇಂದು ಪಂಜಾಬ್​ ಕಿಂಗ್ಸ್​ (Punjab Kings) ತಂಡವನ್ನ ಎದುರಿಸಲು ಸಜ್ಜಾಗಿದೆ. 

ಅಂದಹಾಗೇ, ಪ್ರಸಕ್ತ ಐಪಿಎಲ್​​ನಲ್ಲಿ ಸತತ 4 ಮ್ಯಾಚ್​​ ಕೈಚೆಲ್ಲಿರಬಹುದು. ಆದ್ರೆ ಇಂತಹ ವರ್ಸ್ಟ್ ಆರಂಭ ಮುಂಬೈ ಇಂಡಿಯನ್ಸ್​ ಪಾಲಿಗೆ ಹೊಸದೇನೂ ಅಲ್ಲ. ಯಾಕಂದ್ರೆ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ಮುಂಬೈ ಇಂತಹ ಸರಣಿ ಸೋಲುಗಳನ್ನ ಕಂಡಿದೆ. ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಮೆಗಾ ಹರಾಜು (IPL Mega Auction) ನಡೆದಾಗಲೆಲ್ಲಾ ಇಂತಹ ವೈಫಲ್ಯ ಅನುಭವಿಸಿದೆ. 2008ರ ಮೊದಲ ಹರಾಜು ಬಳಿಕ ಮುಂಬೈಗೆ ಸತತ ಸೋಲು: 2008ರಲ್ಲಿ ಮೊದಲ ಬಾರಿಗೆ ಐಪಿಎಲ್​​ ಮೆಗಾ ಹರಾಜು ಪ್ರಕ್ರಿಯ ನಡೆದಿತ್ತು. ಆ ಸಲ ಮುಂಬೈ ಸತತ ನಾಲ್ಕು ಪಂದ್ಯಗಳಲ್ಲಿ ಮುಗ್ಗರಿಸಿತ್ತು. ಬಳಿಕ ಚೇತರಿಸಿಕೊಂಡ್ರು ಸೀಸನ್​​ನಲ್ಲಿ 7 ಗೆಲುವು ಪಡೆದು, ಲೀಗ್​​ ಹಂತದಲ್ಲೇ ಹೊರಬಿದ್ದಿತ್ತು.

2014-2018ರಲ್ಲೂ ಅದೇ ರಾಗ ಅದೇ ಹಾಡು: 

2008ರ ಮೊದಲ ಆಕ್ಷನ್​​​​​​ ಮಾತ್ರವಲ್ಲ, 2014 ಹಾಗೂ 2018ರ ಮೆಗಾ ಹರಾಜಿನ ನಂತರ ಹೀನಾಯ ಸೋಲಿನತ್ತ ಮುಖಮಾಡಿತ್ತು. 2014ರಲ್ಲಿ ಹರಾಜಿನ ನಂತರ ಹೊಸ ತಂಡದೊಂದಿಗೆ ಕಣಕ್ಕಿಳಿದು ಸತತ 5 ಪಂದ್ಯಗಳಲ್ಲಿ ಸೋತಿತ್ತು. ಪರಾಜಯದ ಹೊರತಾಗಿಯೂ ಪ್ಲೇಆಫ್​​​ ಪ್ರವೇಶಿಸಿ ಎಲಿಮಿನೇಟರ್​​​​​​​​ನಲ್ಲಿ ಸೋಲು ಕಂಡಿತ್ತು. ಇನ್ನು 2018ರ ಮೆಗಾ ಹರಾಜು ಬಳಿಕ ಕಳಪೆ ಪ್ರದರ್ಶನ ರಿಪೀಟ್ ಆಗಿತ್ತು. ಹ್ಯಾಟ್ರಿಕ್ ಸೋಲುಂಡು ಪ್ಲೇ ಆಫ್​​ ತಲುಪುವಲ್ಲಿ ಫೇಲಾಗಿತ್ತು. ಈಗ 2022ರ ಸರದಿ. ಮೆಗಾ ಹರಾಜಿನ ಬಳಿಕ ಹೊಸ ತಂಡದೊಂದಿಗೆ ಅಖಾಡಕ್ಕೆ ಧುಮುಕಿದ ಮುಂಬೈ ಆರಂಭಿಕ ನಾಲ್ಕು ಪಂದ್ಯಗಳನ್ನ ಸೋತು ಸುಣ್ಣವಾಗಿದೆ.

ಮೆಗಾ ಹರಾಜು ಮುಂಬೈ ವೈಫಲ್ಯಕ್ಕೆ ಹೇಗೆ ಕಾರಣ..? 

ನಾವು ಇಷ್ಟೆಲ್ಲಾ ಹೇಳಿದ ಮೇಲೆ ನಿಮ್ಮಲ್ಲಿ ಈ ಪ್ರಶ್ನೆ ಹುಟ್ಟೋದು ಕಾಮನ್​​. ಅದೇನಂದ್ರೆ ಮೆಗಾ ಹರಾಜು ಮುಂಬೈ ಇಂಡಿಯನ್ಸ್​ ವೈಫಲ್ಯತೆಗೆ ಹೇಗೆ ಕಾರಣ ಅನ್ನೋದು. ಆನ್ಸರ್ ಸಿಂಪಲ್​​. ಹರಾಜು ನಡೆದಾಗಲೆಲ್ಲಾ ಪ್ಲೇಯರ್ಸ್​ ತಂಡ ತೊರೆಯುತ್ತಾರೆ. ಹೊಸ ಪ್ಲೇಯರ್ಸ್​ ತಂಡ ಸೇರಿಕೊಳ್ಳುತ್ತಾರೆ. ಇದು ತಂಡದ ಬ್ಯಾಲೆನ್ಸ್ ಮೇಲೆ ಪರಿಣಾಮ ಬೀರುತ್ತೆ. ಆಡುವ ಹನ್ನೊಂದರ ಬಳಗದ ಆಯ್ಕೆಯಲ್ಲಿ ಸಾಕಷ್ಟು ಲೋಪ ದೋಷವಾಗುತ್ತೆ. ಮುಂಬೈಗೆ ಆಗಿದ್ದು ಇದೇ. ಹರಾಜಿನ ನಂತರದ ವರ್ಷ ಮುಂಬೈ ಎಲ್ಲಾ ಮಿಸ್ಟೇಕ್ಸ್ ಸರಿಪಡಿಸಿಕೊಂಡು ಕಣಕ್ಕಿಳಿದಿದೆ. ಚಾಂಪಿಯನ್ ಆಗಿಯೂ ಹೊರಹೊಮ್ಮಿದೆ.

IPL 2022: ವಿಶ್ವದ ನಂ.1 ಟಿ20 ಲೀಗ್​ ಜನಪ್ರಿಯತೆ ಕಳೆದುಕೊಳ್ತಾ..?

ಪಂಜಾಬ್​​ ಮಣಿಸಿ ಗೆಲುವಿನ ಹಳಿಗೆ ಮರಳುತ್ತಾ ಮುಂಬೈ..? 

ಮೆಗಾ ಹರಾಜಿನ ಇತಿಹಾಸ ಅದೇನೆ ಇದ್ದರೂ ಅದನ್ನ ಸುಳ್ಳಾಗಿಸುವ ತಾಕತ್ತು ಮುಂಬೈ ತಂಡಕ್ಕಿದೆ. ಇಂದು ಅದಕ್ಕೆ ಒಳ್ಳೆಯ ಅವಕಾಶವಿದೆ. ಸತತ ಸೋಲಿನ ಕಂಗೆಟ್ಟಿರೋ ಮುಂಬೈ, ಪಂಜಾಬ್​​​ ಕಿಂಗ್ಸ್ ಸವಾರಿಗೆ ಸಜ್ಜಾಗಿದೆ. ಮಯಾಂಕ್ ಪಡೆ ಎರಡು ಗೆಲುವು ಕಂಡಿದ್ದು, ಮುಂಬೈಗೆ ಹೋಲಿಸಿದ್ರೆ ಸ್ಟ್ರಾಂಗ್ ಆಗಿದೆ. ತಂಡದಲ್ಲಿ ಬಿಗ್​ ಹಿಟ್ಟರ್ಸ್​ ದಂಡಿದೆ. ಹಾಗಂತ ಮುಂಬೈ ಏನೂ ಕಮ್ಮಿ ಇಲ್ಲ. ಹಿಂದಿನ ಮಿಸ್ಟೇಕ್ಸ್ ತಿದ್ದಿಕೊಂಡು ಕಣಕ್ಕಿಳಿದ್ರೆ ಗೆಲುವಿನ ಟ್ರ್ಯಾಕ್​ಗೆ ಮರಳಲು ಉತ್ತಮ ಅವಕಾಶವಿದೆ.