* ಐಪಿಎಲ್ ಜನಪ್ರಿಯತೆಯ ವಿಚಾರದಲ್ಲಿ ಇಳಿಮುಖ* ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಐಪಿಎಲ್ ಕೊಂಚ ಸಪ್ಪೆ* ಐಪಿಎಲ್ ಜನಪ್ರಿಯತೆ ಕುಸಿಯಲು ಇವೆ ಹಲವು ಕಾರಣಗಳು
ಮುಂಬೈ(ಏ.13): ಪ್ರಸಕ್ತ ಐಪಿಎಲ್ ಟೂರ್ನಿ (Indian Premier League) ನೋಡುಗರಿಗೆ ಸಖತ್ ಮಜಾ ಕೊಡ್ತಿದೆ. ವಾರಗಳು ಉರುಳಿದಂತೆ ಪಂದ್ಯದ ಕ್ರೇಜ್ ಕೂಡ ಹೆಚ್ಚಿದೆ. ಇಷ್ಟಾದ್ರು ವಿಶ್ವದ ನಂ.1 ಟಿ20 ಟೂರ್ನಿ ತನ್ನ ಖದರ್ ಕಳೆದುಕೊಳ್ತಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ಜಾಹೀರಾತು ಶೇಕಡ 29ರಷ್ಟು ಕಮ್ಮಿಯಾದ ಬೆನ್ನಲ್ಲೇ, ವೀಕ್ಷಕರ ಸಂಖ್ಯೆನೂ ಕುಗ್ಗಿದೆ. ಹೌದು, ಬಾರ್ಕ್ ಬಿಡುಗಡೆ ಮಾಡಿರೋ ಐಪಿಎಲ್ ಮೊದಲ ವಾರದ ವೀಕ್ಷಕರ ಸಂಖ್ಯೆಯಲ್ಲಿ ಶೇಕಡ 33ರಷ್ಟು ಕಮ್ಮಿಯಾಗಿದೆ. ಅಂದ್ರೆ ಕಳೆದ ಬಾರಿಗೆ ಹೋಲಿಸಿದ್ರೆ ಶೇಕಡ 14ರಷ್ಟು ಐಪಿಎಲ್ ವೀಕ್ಷಿಸೋರ ಸಂಖ್ಯೆಯಲ್ಲಿ ದಿಢೀರ್ ಇಳಿಕೆಯಾಗಿದೆ.
ಈ ಬಾರಿ ಲಾಕ್ಡೌನ್ ಇಲ್ಲ:
ಐಪಿಎಲ್ (IPL) ವೀಕ್ಷಕರ ಸಂಖ್ಯೆ ಕಮ್ಮಿಯಾಗಲು ಮೊದಲ ಕಾರಣವೇ ಇದು. ಕಳೆದೆರಡು ಐಪಿಎಲ್ ಆವೃತ್ತಿ ವೇಳೆ ದೇಶದಲ್ಲಿ ಕೊರೊನಾ ಹಾವಳಿ ಇತ್ತು. ಇದರ ತಡೆಗಾಗಿ ಲಾಕ್ಡೌನ್ ಜಾರಿಮಾಡಲಾಗಿತ್ತು. ಆಗ ಜನರು ಮನೆಬಿಟ್ಟು ಹೊರಗೆ ಬರುವ ಹಾಗಿರ್ಲಿಲ್ಲ. ಟಿವಿ ಮುಂದೆ ಕೂತು ಕಾಲ ಕಳೆಯುವ ಪರಿಸ್ಥಿತಿ ಎದುರಾಗಿತ್ತು. ಆದ್ರೆ ಈ ಬಾರಿ ಲಾಕ್ಡೌನ್ ಇಲ್ಲ. ಪ್ರತಿನಿತ್ಯದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಟಿವಿ ಮುಂದೆ ಕುಳಿತು ಐಪಿಎಲ್ ನೋಡುಗರ ಸಂಖ್ಯೆ ಕಮ್ಮಿಯಾಗಿದೇ.
ಸ್ಟಾರ್ ಕ್ರಿಕೆಟಿಗರ ಅಲಭ್ಯತೆ:
ಇನ್ನು ಈ ಬಾರಿ ಸ್ಟಾರ್ ಪ್ಲೇಯರ್ಸ್ ಇಲ್ಲದಿರೋದು ವೀಕ್ಷಕರ ಸಂಖ್ಯೆ ಕುಸಿತಕ್ಕೆ ಕಾರಣವಾಗಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಅಭಿಮಾನಿಗಳ ಆರಾಧ್ಯ ದೈವ ಎಬಿ ಡಿಲಿಯರ್ಸ್ (Ab de Villiers) ಐಪಿಎಲ್ಗೆ ಗುಡ್ಬೈ ಹೇಳಿದ್ರು. ಎಬಿಡಿ ಇಲ್ಲದೇ ಐಪಿಎಲ್ ನೋಡಲು ಕೆಲವರು ಹಿಂದೇಕು ಹಾಕಿದ್ಧಾರೆ. ಇವರ ಜೊತೆ ಸ್ಪೋಟಕ ದಾಂಡಿಗ ಕ್ರಿಸ್ ಗೇಲ್ (Chris Gayle) ಕೂಡ ಹಿಂದೆ ಸರಿದ್ರು. ಪವರ್ ಹಿಟ್ಟರ್ ಸುರೇಶ್ ರೈನಾ (Suresh Raina) ಆಡಲು ರೆಡಿ ಇದ್ರೂ ಅನ್ಸೋಲ್ಡ್ ಆಗಿ ಹೊರಬಿದ್ರು. ಈ ತ್ರಿಮೂರ್ತಿ ಎಂಟರ್ಟ್ರೈನರ್ಸ್ಗಳಿಲ್ಲದ ಐಪಿಎಲ್ ಟೂರ್ನಿ ಮಂಕಾಗಿದೆ.
ಬಲಿಷ್ಠ ತಂಡಗಳ ಕಳಪೆ ಆಟ.. ಮಂಕಾದ ಸ್ಟಾರ್ ಪ್ಲೇಯರ್ಸ್:
ಇನ್ನು ಬಲಿಷ್ಠ ತಂಡಗಳು ಈ ಸಲದ ಸೀಸನ್ನಲ್ಲಿ ಕಳಪೆ ಆಟವಾಡ್ತಿವೆ. ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ಹಾಗೂ 4 ಬಾರಿ ಟ್ರೋಫಿ ವಿನ್ನರ್ ಚೆನ್ನೈ ಆಡಿದ ಮೊದಲ ನಾಲ್ಕು ಪಂದ್ಯಗಳಲ್ಲಿ ಮುಗ್ಗರಿಸಿ ಬೇಸರ ಮೂಡಿಸಿದ್ವು. ಎರಡು ಫ್ರಾಂಚೈಸಿ, ಐಪಿಎಲ್ನಲ್ಲಿ ಮೋಸ್ಟ್ ಪ್ಯಾನ್ ಬೇಸ್ ಹೊಂದಿವೆ. ಇದರ ಜೊತೆ ಸ್ಟಾರ್ ಪ್ಲೇಯರ್ಸ್ ನಿರೀಕ್ಷಿತ ಪ್ರದರ್ಶನ ನೀಡ್ತಿಲ್ಲ. ಇವರ ಕಳಪೆ ಆಟ ವೀಕ್ಷಕರನ್ನ ಸೆಳೆಯುವಲ್ಲಿ ಫೇಲಾಗಿದೆ.
RCB vs CSK: ಆರ್‌ಸಿಬಿ ಸೋಲಿಗೆ ಫಾಫ್, ಕೊಹ್ಲಿ ಮೇಲೆ ತಿರುಗಿಬಿದ್ದ ಫ್ಯಾನ್ಸ್..!
ಮೆಗಾ ಆಕ್ಷನ್ನಿಂದ ಬೇರ್ಪಟ್ಟ ಪ್ಲೇಯರ್ಸ್:
ಈ ಬಾರಿ ಮೆಗಾ ಆಕ್ಷನ್ ಜೊತೆ ಎರಡು ಹೊಸ ಫ್ರಾಂಚೈಸಿಗಳು ಎಂಟ್ರಿ ಕೊಟ್ಟಿವೆ ನಿಜ. ಇದು ವೀಕ್ಷಕರ ಕುಸಿತಕ್ಕೆ ಕಾರಣವಾಗಿದೆ. ಯಾಕಂದ್ರೆ ಆಕ್ಷನ್ಗೂ ಮುನ್ನ ಅಭಿಮಾನಿಗಳಿಗೆ ಅವರದ್ದೇ ತಂಡದಲ್ಲಿ ಕೆಲ ಫೇವರಿಟ್ ಆಟಗಾರರಿದ್ರು. ಈ ಬಾರಿ ಅವರು ಬೇರ್ಪಟ್ಟರು. ಉದಾಹರಣೆಗೆ ಮುಂಬೈ ತಂಡದ ಪಾಂಡ್ಯ ಬ್ರದರ್ಸ್, ಹೈದ್ರಾಬಾದ್ನ ರಶೀದ್ ಖಾನ್ (Rashid Khan) ಹಾಗೂ ಡೇವಿಡ್ ವಾರ್ನರ್ (David Warner) ಬೇರೆ ಬೇರೆ ತಂಡ ಸೇರಿಕೊಂಡ್ರು. ಫೈನಲಿ ಈ ಎಲ್ಲ ರೀಸನ್ಸ್ ಈ ಬಾರಿ ಐಪಿಎಲ್ ವೀವರ್ಶಿಪ್ ಕುಸಿಯಲು ಕಾರಣವಾಗಿದೆ.
